Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಕಾರ ಬಲವರ್ಧನೆಗೆ ಭಾರತ ಮತ್ತು ಫಿನ್‌ಲ್ಯಾಂಡ್ ನಡುವಿನ ತಿಳುವಳಿಕೆ ಒಪ್ಪಂದಕ್ಕೆ ಸಂಪುಟ ಅನುಮೋದನೆ


ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸುವ ತಿಳುವಳಿಕೆ ಪತ್ರಕ್ಕೆ (ಎಂಒಯು) ಅನುಮೋದನೆ ನೀಡಿದೆ.

ಪ್ರಯೋಜನಗಳು:

ತಿಳುವಳಿಕೆ ಒಪ್ಪಂದದ ಪ್ರಮುಖ ಉದ್ದೇಶಗಳು

·        ಪ್ರವಾಸೋದ್ಯಮ ಕ್ಷೇತ್ರದಲ್ಲಿ ಯಶಸ್ವಿ ದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸಲು ಮತ್ತು ಪ್ರೋತ್ಸಾಹಿಸಲು ಸಹಕಾರಿ ಸಂಬಂಧದ  ಸ್ಥಾಪನೆ

·        ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಅಂಕಿ-ಅಂಶ, ಜ್ಞಾನ, ಪರಿಣತಿ ಇತ್ಯಾದಿ ಹಂಚಿಕೊಳ್ಳುವುದು

·        ಪ್ರವಾಸೋದ್ಯಮ ನೀತಿಯ ಯೋಜನೆ, ಅನುಷ್ಠಾನ ಮತ್ತು ಅಭಿವೃದ್ಧಿಯಲ್ಲಿ ನೀತಿಗಳು, ನಿಯಂತ್ರಣ ಮತ್ತು ಮಾನದಂಡಗಳನ್ನು ರೂಪಿಸುವಲ್ಲಿ ಅನುಭವಗಳನ್ನು ಹಂಚಿಕೊಳ್ಳುವುದು

·        ಭೇಟಿಗಳು, ಸಭೆಗಳು, ಕಾರ್ಯಾಗಾರಗಳು, ಸಹ-ರಚನಾ ಸಭೆಗಳು ಮತ್ತು ಸ್ಥಳ ಮೌಲ್ಯಮಾಪನಗಳ ಮೂಲಕ ಕಂಪನಿಗಳು ಮತ್ತು ಸಂಸ್ಥೆಗಳ ನಡುವೆ ಜಂಟಿ ಯೋಜನೆಗಳು, ಪ್ರಾಯೋಗಿಕಗಳು ಮತ್ತು ಸಹಭಾಗಿತ್ವದ ಗುರುತಿಸುವಿಕೆ ಮತ್ತು ವಿಸ್ತರಣೆಗೆ ಅನುಕೂಲ ಕಲ್ಪಿಸುವುದು

·        ಫಿನ್‌ಲ್ಯಾಂಡ್ ಮತ್ತು ಭಾರತದ ತಜ್ಞರಿಗೆ ಸಹಕಾರ ಕ್ಷೇತ್ರದಲ್ಲಿ ಕಾರ್ಯಾಗಾರಗಳು ಮತ್ತು ಅಧ್ಯಯನ ಭೇಟಿಗಳ ಮೂಲಕ ಉತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳುವುದು

·        ಬಹುಪಕ್ಷೀಯ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಯೋಜನೆಗಳ ಸಂದರ್ಭದಲ್ಲಿ ಪಾಲುದಾರಿಕೆಗಳ ಅಭಿವೃದ್ಧಿಯನ್ನು ಉತ್ತೇಜಿಸುವುದು, ಇದರಲ್ಲಿ ಭಾಗವಹಿಸುವ ಎರಡೂ ಕಡೆಯವರೂ ಸಾಮಾನ್ಯ ಆಸಕ್ತಿಗಳನ್ನು ಹೊಂದಿರುತ್ತಾರೆ

ಹಿನ್ನೆಲೆ:

1. ಭಾರತ ಮತ್ತು ಫಿನ್‌ಲ್ಯಾಂಡ್ ಬಲವಾದ ರಾಜತಾಂತ್ರಿಕ ಮತ್ತು ಸುದೀರ್ಘ ಆರ್ಥಿಕ ಸಂಬಂಧಗಳನ್ನು ಹೊಂದಿವೆ. ಪ್ರವಾಸೋದ್ಯಮದಲ್ಲಿ ಈಗಿರುವ ಸಂಬಂಧವನ್ನು ಬಲಪಡಿಸಲು ಮತ್ತು ಮತ್ತಷ್ಟು ಅಭಿವೃದ್ಧಿಪಡಿಸಲು ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ಮತ್ತು ಫಿನ್ಲೆಂಡ್ ಸರ್ಕಾರದ ಆರ್ಥಿಕ ವ್ಯವಹಾರ ಮತ್ತು ಉದ್ಯೋಗ ಸಚಿವಾಲಯಗಳ ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

2. ಭಾರತಕ್ಕೆ ಬರುವ ಪ್ರವಾಸಿಗರ ಮೂಲ ಮಾರುಕಟ್ಟೆಗಳಲ್ಲಿ ಫಿನ್‌ಲ್ಯಾಂಡ್ ಒಂದಾಗಿದೆ. 2018 ರಲ್ಲಿ 21,239 ಫೀನ್ನಿಷ್ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದರು. ಈ ಮೂಲ ಮಾರುಕಟ್ಟೆಯ ಆಗಮನವನ್ನು ಹೆಚ್ಚಿಸಲು ಫಿನ್‌ಲ್ಯಾಂಡ್‌ನೊಂದಿಗೆ ಜ್ಞಾಪಕ ಪತ್ರಕ್ಕೆ ಸಹಿ ಹಾಕುವುದು ಪ್ರಮುಖ ಪಾತ್ರ ವಹಿಸುತ್ತದೆ.