Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷರಾದ ಗೌರವಾನ್ವಿತ ಉರ್ಸುಲಾ ವೋನ್ ಡೆರ್ ಲೆಯಾನ್ ದೂರವಾಣಿ ಸಂವಾದ ನಡೆಸಿದರು


ಪ್ರಧಾನ ಮಂತ್ರಿ ಇಂದು ಯುರೋಪಿಯನ್ ಆಯೋಗದ ಅಧ್ಯಕ್ಷರಾದ ಗೌರವಾನ್ವಿತ ಉರ್ಸುಲಾ ವೋನ್ ಡೆರ್ ಲೆಯಾನ್ ಅವರ ಜೊತೆ ದೂರವಾಣಿ ಸಂಭಾಷಣೆ ನಡೆಸಿದರು. ಇಬ್ಬರು ನಾಯಕರೂ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಉಂಟಾಗಿರುವ ಜಾಗತಿಕ ಸ್ಥಿತಿಯ ಬಗ್ಗೆ ಚರ್ಚೆ ನಡೆಸಿದರು.

ಪ್ರಧಾನ ಮಂತ್ರಿ ಅವರು ಯುರೋಪಿಯನ್ ಒಕ್ಕೂಟದಲ್ಲಿ ಕೋವಿಡ್-19 ರಿಂದುಂಟಾಗಿರುವ ಜೀವ ಹಾನಿಯ ಬಗ್ಗೆ ತಮ್ಮ ಸಂತಾಪ ವ್ಯಕ್ತಪಡಿಸಿದರು. ಈ ಸಾಂಕ್ರಾಮಿಕ ಖಾಯಿಲೆಯ ವಿರುದ್ದ ಹೋರಾಡಲು ಎಲ್ಲಾ ದೇಶಗಳಲ್ಲಿ ಸಹಕಾರ ಮತ್ತು ಸಮನ್ವಯದ ಅಗತ್ಯವನ್ನು ಅವರು ಒತ್ತಿ ಹೇಳಿದರು. ಕೊರೋನಾ ವೈರಸ್ ಸೋಂಕು ತಡೆಗೆ ಭಾರತ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಪ್ರಧಾನ ಮಂತ್ರಿ ಅವರು ವಿವರಿಸಿದರು.

ಶ್ರೀಮತಿ ವೋನ್ ಡೆರ್ ಲೆಯಾನ್ ಅವರು ಭಾರತದಲ್ಲಿ ಪ್ರಧಾನ ಮಂತ್ರಿ ಅವರ ನಾಯಕತ್ವದಲ್ಲಿ ಸಾಕಷ್ಟು ಮುಂಚಿತವಾಗಿಯೇ ಕ್ರಮಗಳನ್ನು ಕೈಗೊಂಡಿರುವುದು ಈ ಖಾಯಿಲೆ ತೀವ್ರ ಗತಿಯಿಂದ ಹರಡುವುದನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿರುವುದನ್ನು ಪ್ರಸ್ತಾಪಿಸಿದರು. ಈ ಪರಿಸ್ಥಿತಿಯಲ್ಲಿ ಭಾರತದಲ್ಲಿರುವ ಯುರೋಪಿಯನ್ ನಾಗರಿಕರಿಗೆ ನೀಡಲಾದ ಸಹಾಯದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಔಷಧಿ ಸಹಿತ ಅವಶ್ಯಕ ಸಾಮಗ್ರಿಗಳ ನಿರಂತರ ಪೂರೈಕೆಯನ್ನು ನಿಭಾಯಿಸುವ ಮಹತ್ವವನ್ನು ಶ್ರೀಮತಿ ವೋನ್ ಡೆರ್ ಲೆಯಾನ್ ಅವರು ಒತ್ತಿ ಹೇಳಿದರಲ್ಲದೆ ಲಸಿಕೆ ಅಭಿವೃದ್ದಿಯ ನಿಟ್ಟಿನಲ್ಲಿ ಸಮನ್ವಯದ ಪ್ರಯತ್ನಗಳು ನಡೆಯಬೇಕಾದ ಅಗತ್ಯವನ್ನೂ ಪ್ರಸ್ತಾಪಿಸಿದರು.

ಜಿ-20 ಜಾಲದೊಳಗೆ ಸಾಧ್ಯ ಇರುವ ಸಹಕಾರದ ಬಗ್ಗೆ ಮತ್ತು ಈ ಹಿನ್ನೆಲೆಯಲ್ಲಿ ಮುಂದಿನ ವೀಡಿಯೋ ಕಾನ್ಫರೆನ್ಸ್ ಬಗ್ಗೆ ಇಬ್ಬರು ನಾಯಕರು ಚರ್ಚಿಸಿದರು.