ಐರ್ಲೆಂಡ್ ಪ್ರಧಾನ ಮಂತ್ರಿ ಘನತೆವೆತ್ತ ಡಾ. ಲಿಯೊ ವರದ್ಕರ್ ಅವರೊಂದಿಗೆ ಇಂದು ದೂರವಾಣಿ ಮೂಲಕ ಮಾತನಾಡಿದ ಪ್ರಧಾನ ಮಂತ್ರಿಗಳು ಕೋವಿಡ್–19 ಬಿಕ್ಕಟ್ಟು ಮತ್ತು ಅದನ್ನು ತಡೆಗಟ್ಟಲು ಉಭಯ ದೇಶಗಳು ಕೈಗೊಂಡಂತಹ ಕ್ರಮಗಳು ಮತ್ತು ಆರೋಗ್ಯ ನಿಯಂತ್ರಣ ಹಾಗೂ ಆರ್ಥಿಕ ಪರಿಣಾಮಗಳ ಕುರಿತು ಚರ್ಚಿಸಿದರು.
ಐರ್ಲೆಂಡ್ ನಲ್ಲಿ ಸೋಂಕಿನ ವಿರುದ್ಧದ ಹೋರಾಟದಲ್ಲಿ ಭಾರತೀಯ ಮೂಲದ ವೈದ್ಯರು ಮತ್ತು ಸುಶ್ರೂರಕರು ವಹಿಸುತ್ತಿರುವ ಪಾತ್ರವನ್ನು ಪ್ರಧಾನ ಮಂತ್ರಿ ವರದ್ಕರ್ ಶ್ಲಾಘಿಸಿದರು. ಐರ್ಲೆಂಡ್ ನಲ್ಲಿ ವಾಸವಿರುವ ಭಾರತೀಯ ನಾಗರಿಕರ ಕುರಿತು ತೋರುತ್ತಿರುವ ಕಾಳಜಿ ಮತ್ತು ಸಹಕಾರಕ್ಕೆ ಪ್ರಧಾನ ಮಂತ್ರಿ ವರದ್ಕರ್ ಅವರಿಗೆ ಪ್ರಧಾನ ಮಂತ್ರಿ ಧನ್ಯವಾದ ತಿಳಿಸಿದರು ಹಾಗೂ ಭಾರತದಲ್ಲಿರುವ ಐರಿಶ್ ನಾಗರಿಕರಿಗೆ ಇದೇ ರೀತಿ ಅನುಕೂಲ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.
ಸಾಂಕ್ರಾಮಿಕ ರೋಗದ ವಿರುದ್ಧ ಜಾಗತಿಕ ಹೋರಾಟಕ್ಕೆ ಕೊಡುಗೆಯಾಗಿ ನೀಡಲು ಭಾರತ ಮತ್ತು ಐರ್ಲೆಂಡ್ ಔಷಧಿ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಹಂಚಿಕೊಳ್ಳಲು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ. ಕೋವಿಡ್ ನಂತರದ ಅವಧಿಯಲ್ಲಿ ಐರ್ಲೆಂಡ್ ಮತ್ತು ಯೂರೋಪಿನ ಒಕ್ಕೂಟದೊಂದಿಗೆ ಭಾರತದ ಸಹಕಾರವನ್ನು ಬಲಪಡಿಸುವ ಸಾಮರ್ಥ್ಯದ ಬಗ್ಗೆಯೂ ಚರ್ಚಿಸಿದರು.
ಈ ಬಿಕ್ಕಟ್ಟಿನಿಂದ ಉದ್ಭವಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಉಭಯ ನಾಯಕರು ಸಂಪರ್ಕದಲ್ಲಿದ್ದು ಸಮಾಲೋಚಿಸಲು ಒಪ್ಪಿದ್ದಾರೆ.
Discussed COVID-19 pandemic with Ireland’s PM, Mr. @LeoVaradkar. India and Ireland share similar approaches on many global issues. We will work together to further strengthen our partnership in health, science & technology, to jointly address challenges of the post-COVID world.
— Narendra Modi (@narendramodi) April 22, 2020