Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ ರೈತರಿಗೊಂದು ಬಲವರ್ಧಕ: ಪ್ರಧಾನ ಮಂತ್ರಿ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ ಯನ್ನು ದೇಶದುದ್ದಗಲಕ್ಕೂ ರೈತರಿಗೆ ಒಂದು ಬಲವರ್ಧಕವೆಂದು ಕೊಂಡಾಡಿದ್ದಾರೆ .

ತಮ್ಮ ಟ್ವೀಟುಗಳ ಸರಣಿಯಲ್ಲಿ ಅವರು ತಮ್ಮ ಚಿಂತನೆಗಳನ್ನು ಈ ಸಂದರ್ಭದಲ್ಲಿ ಜನರೊಂದಿಗೆ ಹಂಚಿಕೊಂಡಿದ್ದಾರೆ.

“ರೈತ ಸಮುದಾಯದ ಸೋದರ-ಸೋದರಿಯರೇ, ನೀವುಗಳು ಲೋಹ್ಡಿ, ಪೊಂಗಲ್, ಬಿಹು ಇಂತಹ ಬೇರೆ ಬೇರೆ ಹಬ್ಬಗಳನ್ನು ಆಚರಿಸುತ್ತಿರುವಾಗ ನಿಮಗೆಲ್ಲ ಸರಕಾರದ ಕಡೆಯಿಂದ ಒಂದು ಉಡುಗೊರೆ – ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ”

“ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ ಇಷ್ಟರವರೆಗೆ ಇದ್ದ ಎಲ್ಲ ಯೋಜನೆಗಳಲ್ಲಿದ್ದ ವಿಶೇಷತೆಗಳನ್ನು ನಿಸ್ಸಂಶಯವಾಗಿ ಒಟ್ಟು ಸೇರಿಸುತ್ತದೆ. ಅಷ್ಟೇ ಅಲ್ಲ ಅವುಗಳಲ್ಲಿದ್ದ ಕೊರತೆಗಳನ್ನೂ ಪರಿಹರಿಸುತ್ತದೆ”

“ಇದುವರೆಗೆ ಕಂಡಿರದಷ್ಟು ಕಡಿಮೆ ಪ್ರೀಮಿಯಮ್ ದರ, ಮೊಬೈಲಿನಂತಹ ಸರಳ ತಂತ್ರಜ್ಞಾನ ಉಪಯೋಗಿಸಿ ನಷ್ಟದ ಶೀಘ್ರ ಲೆಕ್ಕಾಚಾರ, ನಿಶ್ಚಿತ ಸಮಯದಲ್ಲಿ ಪೂರ್ತಿಯಾಗಿ ಹಣ ಪಾವತಿ”

“ರೈತ ಸೋದರ-ಸೋದರಿಯರೇ, ಇನ್ನೂ ಹಲವು ಅಂಶಗಳ ಬಗ್ಗೆ ವಿಶೇಷ ಗಮನ ನೀಡಲಾಗಿದೆ. ಪ್ರಧಾನ ಮಂತ್ರಿಗಳ ಬೆಳೆ ವಿಮಾ ಯೋಜನೆಗೆ ಸೇರುವುದು ಸುಲಭ, ಲಾಭ ಪಡೆಯುವುದು ಸಲೀಸು. ತಾವೂ ಸೇರಿಕೊಳ್ಳಿ”

“ ಇದೊಂದು ಐತಿಹಾಸಿಕ ದಿನ, ರೈತರ ಕಲ್ಯಾಣಕ್ಕಾಗಿ ರೂಪಿಸಿದ ಪ್ರಧಾನ ಮಂತ್ರಿಗಳ ಬೆಳೆ ವಿಮಾ ಯೋಜನೆಯು ರೈತರ ಜೀವನದಲ್ಲಿ ಬಹಳ ದೊಡ್ಡ ಬದಲಾವಣೆಯನ್ನು ತರುತ್ತದೆ ಎಂಬುದು ನನ್ನ ವಿಶ್ವಾಸ”

“ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ: ಇದರಲ್ಲಿ ವಿಪತ್ತುಗಳ ಅರ್ಥವ್ಯಾಪ್ತಿಯನ್ನು ವಿಸ್ತರಿಸಲಾಗಿದೆ – ನೀರು ನಿಲ್ಲುವುದು, ಬೆಳೆ ಕಟಾವಿನ ನಂತರ ಆಗುವ ನಷ್ಟಗಳು ಇಂತಹವುಗಳನ್ನು ಸೇರಿಸಲಾಗಿದೆ.”

****