ಪ್ರಧಾನ ಮಂತ್ರಿ ಜನ್ ಧನ್ ಯೋಜನೆಗೆ ಏಳು ವರ್ಷ ತುಂಬಿರುವುದಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯನ್ನು ಸಫಲಗೊಳಿಸಲು ಶ್ರಮಿಸಿದ, ನಿರಂತರ ಪ್ರಯತ್ನಗಳನ್ನು ಹಾಕುತ್ತಾ ಬಂದಿರುವ ಎಲ್ಲರನ್ನೂ ಅವರು ಶ್ಲಾಘಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ನಾವಿಂದು #ಪಿಎಂಜನ್-ಧನ್ ಯೋಜನೆಯ ಏಳು ವರ್ಷಗಳ ಸಂಭ್ರಮಾಚರಣೆಯಲ್ಲಿದ್ದೇವೆ. ಪಿಎಂ ಜನ್ ಧನ್ ಯೋಜನೆಯು ಭಾರತದ ಅಭಿವೃದ್ಧಿ ಪಥವನ್ನು ಶಾಶ್ವತವಾಗಿ ಪರಿವರ್ತಿಸುವ ಉಪಕ್ರಮವಾಗಿದೆ. ಇದು ಅಸಂಖ್ಯಾತ ಭಾರತೀಯರಿಗೆ ಹಣಕಾಸು ಒದಗಿಸುವಿಕೆ, ಘನತೆಯ ಜೀವನ ಹಾಗೂ ಸಬಲೀಕರಣವನ್ನು ಖಾತ್ರಿಪಡಿಸಿದೆ. ಜನ್-ಧನ್ ಯೋಜನೆಯು ಮತ್ತಷ್ಟು ಪಾರದರ್ಶಕತೆಗೆ ಸಹಾಯಕವಾಗಿದೆ. #ಪಿಎಂಜನ್-ಧನ್ ಯೋಜನೆ ಸಫಲಗೊಳಿಸಲು ಶ್ರಮಿಸಿದ ಎಲ್ಲರ ಅವಿರತ ಪ್ರಯತ್ನವನ್ನು ನಾನು ಶ್ಲಾಘಿಸುತ್ತೇನೆ. ಭಾರತದ ಜನರು ಉತ್ತಮ ಗುಣಮಟ್ಟದ ಜೀವನ ನಡೆಸಲು ಎಲ್ಲರ ಪ್ರಯತ್ನಗಳೇ ಕಾರಣ” ಎಂದು ಪ್ರಧಾನ ಮಂತ್ರಿ ಶ್ಲಾಘಿಸಿದ್ದಾರೆ.
***
Today we mark seven years of #PMJanDhan, an initiative that has forever transformed India’s development trajectory. It has ensured financial inclusion and a life of dignity as well as empowerment for countless Indians. Jan Dhan Yojana has also helped further transparency.
— Narendra Modi (@narendramodi) August 28, 2021
I would like to applaud the untiring efforts of all those who have worked to make #PMJanDhan a success. Their efforts have ensured the people of India lead a better quality of life.
— Narendra Modi (@narendramodi) August 28, 2021