Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ


 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನಕ್ಕೆ (ಪಿಎಂ ಜನ್‌ ಮನ್)‌  ಒಟ್ಟು ರೂ.24,104 ಕೋಟಿಯ (ಕೇಂದ್ರ ಪಾಲು: ರೂ.15,336 ಕೋಟಿ ಮತ್ತು ರಾಜ್ಯದ ಪಾಲು: ರೂ.8,768 ಕೋಟಿ) ಅನುಮೋದನೆ ನೀಡಿದೆ. ಇದನ್ನು  9 ಸಚಿವಾಲಯಗಳ ಮೂಲಕ 11 ನಿರ್ಣಾಯಕ ಮಧ್ಯಸ್ಥಿಕೆಗಳ ಮೇಲೆ ಕೇಂದ್ರೀಕರಿಸಲು ಮಾಡಲಾಗಿದೆ. ಪ್ರಧಾನಮಂತ್ರಿಯವರು ಜನಜಾತಿಯ ಗೌರವ ದಿವಸದಂದು ಕುಂತಿಯಿಂದ ಈ ಅಭಿಯಾನವನ್ನು ಘೋಷಿಸಿದರು.

2023-24 ರ ಬಜೆಟ್ ಭಾಷಣದಲ್ಲಿ ಘೋಷಿಸಿದಂತೆ, “ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪುಗಳ (ಪಿವಿಟಿಜಿ ) ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು, ಅಭಿವೃದ್ಧಿ ಮಿಷನ್‌ ನ ಪ್ರಧಾನ ಮಂತ್ರಿ ಪಿವಿಟಿಜಿಗೆ ಚಾಲನೆ ನೀಡಲಾಗುವುದು. ಇದು ಸುರಕ್ಷಿತ ವಸತಿ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ, ಶಿಕ್ಷಣ, ಆರೋಗ್ಯ ಮತ್ತು ಪೋಷಣೆಗೆ ಸುಧಾರಿತ ಲಭ್ಯತೆ, ರಸ್ತೆ ಮತ್ತು ದೂರಸಂಪರ್ಕ ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳಂತಹ ಮೂಲಭೂತ ಸೌಲಭ್ಯಗಳನ್ನು ಪಿವಿಟಿಜಿ ಕುಟುಂಬಗಳು ಮತ್ತು ವಸತಿಗಳಿಗೆ ಒದಗಿಸುತ್ತದೆ. ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕ್ರಿಯಾ ಯೋಜನೆಯಡಿ (ಡಿಎಪಿಎಸ್‌ಟಿ) ಮುಂದಿನ ಮೂರು ವರ್ಷಗಳಲ್ಲಿ ಮಿಷನ್ ಅನ್ನು ಕಾರ್ಯಗತಗೊಳಿಸಲು ರೂ.15,000 ಕೋಟಿ ಲಭ್ಯವಾಗಲಿದೆ.

ಭಾರತವು 2011 ರ ಜನಗಣತಿಯ ಪ್ರಕಾರ 10.45 ಕೋಟಿ  ಪರಿಶಿಷ್ಟ ಪಂಗಡಕ್ಕೆ ಸೇರಿದ  ಜನಸಂಖ್ಯೆಯನ್ನು ಹೊಂದಿದೆ, ಅದರಲ್ಲಿ 18 ರಾಜ್ಯಗಳಲ್ಲಿ ನೆಲೆಗೊಂಡಿರುವ 75 ಸಮುದಾಯಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೇಂದ್ರಾಡಳಿತ ಪ್ರದೇಶವನ್ನು ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪುಗಳು (ಪಿವಿಟಿಜಿ) ಎಂದು ವರ್ಗೀಕರಿಸಲಾಗಿದೆ. ಈ ಗುಂಪಿಗೆ ಸೇರಿದವರು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಮಸ್ಯೆಗಳನ್ನು  ಎದುರಿಸುತ್ತಲೇ ಇರುತ್ತವೆ.

PM-JANMAN – ಪಿಎಂ ಜನ್‌ ಮನ್‌ (ಕೇಂದ್ರ ವಲಯ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಒಳಗೊಂಡಿದೆ) ಬುಡಕಟ್ಟು ವ್ಯವಹಾರಗಳ ಸಚಿವಾಲಯ ಸೇರಿದಂತೆ 9 ಸಚಿವಾಲಯಗಳ ಮೂಲಕ 11 ನಿರ್ಣಾಯಕ ಮಧ್ಯಸ್ಥಿಕೆಗಳ ಮೇಲೆ ಈ ಮುಂದೆ ವಿವರಿಸಿದಂತೆ ಕೇಂದ್ರೀಕರಿಸುತ್ತವೆ:

 

1

ಪಕ್ಕಾ ಮನೆಗಳನ್ನು ಒದಗಿಸುವುದು

4.90 ಲಕ್ಷ

ರೂ. 2.39 ಲಕ್ಷ/ಮನೆ

2

ಸಂಪರ್ಕ ರಸ್ತೆಗಳು

8000 ಕಿಮೀ

ರೂ 1.00 ಕೋಟಿ/ಕಿಮೀ

 

3a

ಕೊಳವೆ ನೀರು ಸರಬರಾಜು

4.90 ಲಕ್ಷ    ಕುಟುಂಬಗಳು ಸೇರಿದಂತೆ ಎಲ್ಲಾ ಪಿವಿಟಿಜಿ ವಸತಿಗಳನ್ನು   ಮಿಷನ್ ಅಡಿಯಲ್ಲಿ ನಿರ್ಮಿಸಲಾಗುವುದು

 

ಯೋಜಿತ   ಮಾನದಂಡಗಳ ಪ್ರಕಾರ

3b

ಸಮುದಾಯ ನೀರು ಸರಬರಾಜು

20 ಕುಟುಂಬಗಳಿಗಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ 2500 ಗ್ರಾಮಗಳು/ ವಾಸಸ್ಥಾನಗಳು
 

ಯಥಾರ್ಥ ವೆಚ್ಚದ ಪ್ರಕಾರ

4

ಔಷಧದ ಸಮೇತ   ಸಂಚಾರಿ ವೈದ್ಯಕೀಯ ಘಟಕಗಳ  ವೆಚ್ಚ

 

1000 (10/ಜಿಲ್ಲೆ)

ಪ್ರತಿ ಘಟಕಕ್ಕೆ ರೂ.33.88.00 ಲಕ್ಷ

5a

ವಸತಿ ನಿಲಯಗಳ ನಿರ್ಮಾಣ

 

500

ರೂ 2.75 ಕೋಟಿ / ವಸತಿ ನಿಲಯ

5b

ವೃತ್ತಿಪರ ಶಿಕ್ಷಣ ಮತ್ತು ಕೌಶಲ್ಯ

60 ಮಹತ್ವಾಕಾಂಕ್ಷೆಯ ಪಿವಿಟಿಜಿ ಬ್ಲಾಕ್‌ಗಳು

 

ರೂ 50 ಲಕ್ಷ /ಬ್ಲಾಕ್

6

ಅಂಗನವಾಡಿ ಕೇಂದ್ರಗಳ ನಿರ್ಮಾಣ

2500

ರೂ 12 ಲಕ್ಷ  / ಕೇಂದ್ರ

7

ವಿವಿಧೋದ್ದೇಶ ಕೇಂದ್ರಗಳ ನಿರ್ಮಾಣ (MPC)

1000

ರೂ.60 ಲಕ್ಷ/ ಎಂಪಿಸಿ ಕೇಂದ್ರ.  ಪ್ರತಿ ಎಂಪಿಸಿ ಕೇಂದ್ರದಲ್ಲಿ ಎಎನ್‌ಎಂ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಅವಕಾಶ

8a

ಪ್ರತಿ ಕುಟುಂಬಗಳಿಗೆ ವಿದ್ಯುತ್‌

57000 ಕುಟುಂಬಗಳು

ರೂ 22,500/ ಕುಟುಂಬ

8b

0.3 ಕಿ.ವ್ಯಾ. ಸೌರ ಆಫ್-ಗ್ರಿಡ್ ಸಿಸ್ಟಮ್

100000 ಕುಟುಂಬಗಳು

ರೂ 50,000/ ಕುಟುಂಬ ಅಥವಾ ಯಥಾರ್ಥ ವೆಚ್ಚದ ಪ್ರಕಾರ

9

ಬೀದಿಗಳು ಮತ್ತು ವಿವಿಧೋದ್ದೇಶ ಕೇಂದ್ರಗಳಿಗೆ  ಸೌರ ದೀಪಗಳು

1500 ಘಟಕಗಳು

ರೂ 1,00,000/ ಯೂನಿಟ್

10

ವನ್ ಧನ್ ವಿಕಾಸ ಕೇಂದ್ರಗಳ (ವಿಡಿವಿಕೆ) ಸ್ಥಾಪನೆ

500

ರೂ 15 ಲಕ್ಷಗಳು/ ವಿಡಿವಿಕೆ

11

ಮೊಬೈಲ್ ಟವರ್‌ಗಳ ಸ್ಥಾಪನೆ

3000 ಹಳ್ಳಿಗಳು

ಯೋಜಿತ   ಮಾನದಂಡಗಳ ಪ್ರಕಾರ

ಕ್ರಮ
ಸಂಖ್ಯೆ
ಚಟುವಟಿಕೆ ಫಲಾನುಭವಿಗಳು / ಉದ್ದೇಶಗಳ ಸಂಖ್ಯೆ ವೆಚ್ಚದ ಮಾನದಂಡ

 

ಮೇಲೆ ತಿಳಿಸಲಾದ ಮಧ್ಯಸ್ಥಿಕೆಗಳನ್ನು ಹೊರತುಪಡಿಸಿ, ಇತರ ಸಚಿವಾಲಯಗಳ ಈ ಕೆಳಗಿನ ಕಾರ್ಯಗಳು  ಮಿಷನ್‌ನ ಭಾಗವಾಗಿರುತ್ತದೆ:

  1. ಆಯುಷ್ ಸಚಿವಾಲಯವು ಅಸ್ತಿತ್ವದಲ್ಲಿರುವ ಮಾನದಂಡಗಳ ಪ್ರಕಾರ ಆಯುಷ್ ಸ್ವಾಸ್ಥ್ಯ ಕೇಂದ್ರವನ್ನು ಸ್ಥಾಪಿಸುತ್ತದೆ ಮತ್ತು ಆಯುಷ್ ಸೌಲಭ್ಯಗಳನ್ನು ಸಂಚಾರಿ  ವೈದ್ಯಕೀಯ ಘಟಕಗಳ ಮೂಲಕ ಪಿವಿಟಿಜಿ   ವಸತಿಗಳಿಗೆ ವಿಸ್ತರಿಸಲಾಗುವುದು.
  1. ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯವು ಈ ಸಮುದಾಯಗಳ ಸೂಕ್ತ ಕೌಶಲ್ಯಗಳ ಪ್ರಕಾರ ಪಿವಿಟಿಜಿ   ವಸತಿಗಳು, ವಿವಿಧೋದ್ದೇಶ ಕೇಂದ್ರಗಳು ಮತ್ತು ವಸತಿ ನಿಲಯಗಳಲ್ಲಿ ಕೌಶಲ್ಯ ಮತ್ತು ವೃತ್ತಿಪರ ತರಬೇತಿಯನ್ನು ಸುಗಮಗೊಳಿಸುತ್ತದೆ.

****