ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಬುಡಕಟ್ಟು ಬಹುಸಂಖ್ಯಾತ ಗ್ರಾಮಗಳು ಮತ್ತು ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಬುಡಕಟ್ಟು ಕುಟುಂಬಗಳಿಗೆ ಸಂಪೂರ್ಣತೆಯನ್ನು ಸಾಧಿಸುವ ಮೂಲಕ ಬುಡಕಟ್ಟು ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಒಟ್ಟು ರೂ 79,156 ಕೋಟಿ (ಕೇಂದ್ರ ಪಾಲು: ರೂ 56,333 ಕೋಟಿ ಮತ್ತು ರಾಜ್ಯದ ಪಾಲು: ರೂ 22,823 ಕೋಟಿ) ಮೊತ್ತದ ಪ್ರಧಾನ ಮಂತ್ರಿ ಜನಜಾತಿಯ ಉನ್ನತ್ ಗ್ರಾಮ ಅಭಿಯಾನಕ್ಕೆ ಅನುಮೋದನೆ ನೀಡಿದೆ.
2024-25 ರ ಬಜೆಟ್ ಭಾಷಣದಲ್ಲಿ ಮಾಡಿದ ಘೋಷಣೆಯ ಪ್ರಕಾರ, ಇದು ಸುಮಾರು 63,000 ಹಳ್ಳಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು 5 ಕೋಟಿಗೂ ಹೆಚ್ಚು ಬುಡಕಟ್ಟು ಜನರಿಗೆ ಪ್ರಯೋಜನ ಕಲ್ಪಿಸುತ್ತದೆ. ಇದು 549 ಜಿಲ್ಲೆಗಳು ಮತ್ತು 30 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಲ್ಲಾ ಬುಡಕಟ್ಟು ಪ್ರಾಬಲ್ಯದ ಹಳ್ಳಿಗಳಿರುವ 2,740 ತಾಲ್ಲೂಕುಗಳನ್ನು ಒಳಗೊಂಡಿರುತ್ತದೆ.
2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ ಪರಿಶಿಷ್ಟ ಪಂಗಡಗಳ ಜನಸಂಖ್ಯೆ 10.45 ಕೋಟಿ ಮತ್ತು ದೇಶದಾದ್ಯಂತ ದೂರದ ಮತ್ತು ದುರ್ಗಮ ಪ್ರದೇಶಗಳಲ್ಲಿ ವಾಸಿಸುವ 705 ಕ್ಕೂ ಹೆಚ್ಚು ಬುಡಕಟ್ಟು ಸಮುದಾಯಗಳಿವೆ. ಪ್ರಧಾನ ಮಂತ್ರಿ ಬುಡಕಟ್ಟು ಉನ್ನತ್ ಗ್ರಾಮ ಅಭಿಯಾನವು ಭಾರತ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಸಾಮಾಜಿಕ ಮೂಲಸೌಕರ್ಯ, ಆರೋಗ್ಯ, ಶಿಕ್ಷಣ, ಜೀವನೋಪಾಯದಲ್ಲಿನ ನಿರ್ಣಾಯಕ ಅಂತರವನ್ನು ನಿವಾರಿಸುವ ಗುರಿಯನ್ನು ಹೊಂದಿದೆ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಪ್ರಧಾನಮಂತ್ರಿ ಜನ್ಮನ್ (ಪ್ರಧಾನಮಂತ್ರಿ ಬುಡಕಟ್ಟು ನ್ಯಾಯ ಮಹಾ ಅಭಿಯಾನ) ಕಲಿಕೆ ಮತ್ತು ಯಶಸ್ಸನ್ನು ಆಧಾರದ ಮೇಲೆ ಬುಡಕಟ್ಟು ಪ್ರದೇಶಗಳು ಮತ್ತು ಸಮುದಾಯಗಳ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ.
ಅಭಿಯಾನವು 25 ಮಧ್ಯಸ್ಥಿಕೆಗಳನ್ನು ಒಳಗೊಂಡಿದೆ, ಇವುಗಳನ್ನು 17 ಸಂಬಂಧಿತ ಸಚಿವಾಲಯಗಳು ಕಾರ್ಯಗತಗೊಳಿಸುತ್ತವೆ. ಪ್ರತಿ ಸಚಿವಾಲಯ/ಇಲಾಖೆಯು ಈ ಕೆಳಗಿನ ಗುರಿಗಳನ್ನು ಸಾಧಿಸಲು ಮುಂದಿನ 5 ವರ್ಷಗಳಲ್ಲಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಕ್ರಿಯಾ ಯೋಜನೆ (ಡಿ ಎ ಪಿ ಎಸ್ ಟಿ) ಅಡಿಯಲ್ಲಿ ಅವರಿಗೆ ನಿಗದಿಪಡಿಸಿದ ನಿಧಿಯ ಮೂಲಕ ಕಾಲಮಿತಿಯಲ್ಲಿ ಅದಕ್ಕೆ ಸಂಬಂಧಿಸಿದ ಯೋಜನೆಯನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ:
ಗುರಿ-I: ಮೂಲಸೌಕರ್ಯವನ್ನು ಸಕ್ರಿಯಗೊಳಿಸುವುದು:
(i) ಇತರ ಅರ್ಹತೆಗಳೊಂದಿಗೆ ಅರ್ಹ ಕುಟುಂಬಗಳಿಗೆ ಪಕ್ಕಾ ಮನೆ: ಅರ್ಹ ಪರಿಶಿಷ್ಟ ಪಂಗಡ ಕುಟುಂಬವು ಪಿಎಂಎವೈ (ಗ್ರಾಮೀಣ) ಅಡಿಯಲ್ಲಿ ನಲ್ಲಿ ನೀರು (ಜಲ್ ಜೀವನ್ ಮಿಷನ್) ಮತ್ತು ವಿದ್ಯುತ್ ಪೂರೈಕೆ (ಆರ್ ಡಿ ಎಸ್ ಎಸ್) ಲಭ್ಯತೆಯೊಂದಿಗೆ ಪಕ್ಕಾ ಮನೆ ಹೊಂದಿರಬೇಕು. ಅರ್ಹ ಪರಿಶಿಷ್ಟ ಪಂಗಡ ಕುಟುಂಬಗಳು ಆಯುಷ್ಮಾನ್ ಭಾರತ್ ಕಾರ್ಡ್ (ಪಿಎಂಜೆಎವೈ) ಗೆ ಸಹ ಪ್ರವೇಶವನ್ನು ಹೊಂದಿರಬೇಕು.
(ii) ಗ್ರಾಮ ಮೂಲಸೌಕರ್ಯವನ್ನು ಸುಧಾರಿಸುವುದು: ಪರಿಶಿಷ್ಟ ಪಂಗಡ ಬಹುಸಂಖ್ಯಾತ ಹಳ್ಳಿಗಳಿಗೆ (ಪಿ ಎಂ ಜಿ ಎಸ್ ವೈ) ಸರ್ವಋತು ರಸ್ತೆ ಸಂಪರ್ಕ, ಮೊಬೈಲ್ ಸಂಪರ್ಕ (ಭಾರತ್ ನೆಟ್) ಮತ್ತು ಇಂಟರ್ನೆಟ್ ಗೆ ಪ್ರವೇಶವನ್ನು ಒದಗಿಸುವುದು, ಆರೋಗ್ಯ, ಪೌಷ್ಟಿಕತೆ ಮತ್ತು ಶಿಕ್ಷಣವನ್ನು ಸುಧಾರಿಸಲು ಮೂಲಸೌಕರ್ಯ (ಎನ್ ಎಚ್ ಎಂ, ಸಮಗ್ರ ಶಿಕ್ಷಾ ಮತ್ತು ಪೋಷಣ) ವನ್ನು ವನ್ನು ಖಾತ್ರಿಪಡಿಸುವುದು.
ಗುರಿ-2: ಆರ್ಥಿಕ ಸಬಲೀಕರಣಕ್ಕೆ ಉತ್ತೇಜನ:
(iii) ಉದ್ಯಮಶೀಲತೆ ಮತ್ತು ಜೀವನೋಪಾಯವನ್ನು ಉತ್ತೇಜಿಸಲು ಕೌಶಲ್ಯ ಅಭಿವೃದ್ಧಿ (ಸ್ವಯಂ-ಉದ್ಯೋಗ) – ತರಬೇತಿಗೆ ಪ್ರವೇಶವನ್ನು ಒದಗಿಸುವುದು (ಸ್ಕಿಲ್ ಇಂಡಿಯಾ ಮಿಷನ್/ಜೆ ಎಸ್ ಎಸ್) ಮತ್ತು 10ನೇ/12ನೇ ತರಗತಿಯ ನಂತರ ಪರಿಶಿಸಷ್ಟ ಪಂಗಡಗಳ ಬಾಲಕ/ಬಾಲಕಿಯರು ಪ್ರತಿ ವರ್ಷ ದೀರ್ಘಾವಧಿಯ ಕೌಶಲ್ಯಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಇದಲ್ಲದೆ, ಎಫ್ ಆರ್ ಎ ಪಟ್ಟಾ ಹೊಂದಿರುವವರಿಗೆ ಬುಡಕಟ್ಟು ವಿವಿಧೋದ್ದೇಶ ಮಾರುಕಟ್ಟೆ ಕೇಂದ್ರ (ಟಿಎಂಎಂಸಿ), ಪ್ರವಾಸಿ ಹೋಮ್ ಸ್ಟೇಗಳು ಮತ್ತು ಕೃಷಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಬೆಂಬಲದ ಮೂಲಕ ಮಾರುಕಟ್ಟೆಯ ಬೆಂಬಲ.
ಗುರಿ-3: ಉತ್ತಮ ಶಿಕ್ಷಣಕ್ಕೆ ಪ್ರವೇಶದ ಸಾರ್ವತ್ರಿಕೀಕರಣ:
(iv) ಶಿಕ್ಷಣ – ಶಾಲೆ ಮತ್ತು ಉನ್ನತ ಶಿಕ್ಷಣದಲ್ಲಿ ಜಿಇಆರ್ ಅನ್ನು ರಾಷ್ಟ್ರೀಯ ಮಟ್ಟಕ್ಕೆ ಹೆಚ್ಚಿಸುವುದು ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ (ಸಮಗ್ರ ಶಿಕ್ಷಾ ಅಭಿಯಾನ) ಜಿಲ್ಲೆ/ಬ್ಲಾಕ್ ಮಟ್ಟದಲ್ಲಿ ಶಾಲೆಗಳಲ್ಲಿ ಬುಡಕಟ್ಟು ವಸತಿ ನಿಲಯಗಳನ್ನು ಸ್ಥಾಪಿಸುವ ಮೂಲಕ ಗುಣಮಟ್ಟದ ಶಿಕ್ಷಣ ಕೈಗೆಟುಕುವಂತೆ ಮಾಡುವುದು.
ಗುರಿ-4: ಆರೋಗ್ಯಕರ ಜೀವನ ಮತ್ತು ಘನತೆಯ ವೃದ್ಧಾಪ್ಯ:
(v) ಆರೋಗ್ಯ – ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಗುಣಮಟ್ಟದ ಆರೋಗ್ಯ ಸೌಲಭ್ಯಗಳ ಉತ್ತಮ ಪ್ರವೇಶವನ್ನು ಖಾತರಿಪಡಿಸುವುದು, ಶಿಶು ಮರಣ ಪ್ರಮಾಣ, ತಾಯಂದಿರ ಮರಣ ದರದಲ್ಲಿ ರಾಷ್ಟ್ರೀಯ ಮಾನದಂಡಗಳನ್ನು ತಲುಪುವುದು ಮತ್ತು ಉಪ ಕೇಂದ್ರಗಳು ಬಯಲು ಪ್ರದೇಶಗಳಲ್ಲಿ 10 ಕಿಲೋಮೀಟರ್ ಗಿಂತ ಹೆಚ್ಚು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ 5 ಕಿಮೀಗಿಂತ ಹೆಚ್ಚು ದೂರವಿರುವ ಪ್ರದೇಶಗಳಲ್ಲಿ ಸಂಚಾರಿ ವೈದ್ಯಕೀಯ ಘಟಕಗಳ ಮೂಲಕ ಲಸಿಕಾ ವ್ಯಾಪ್ತಿಯನ್ನು ವಿಸ್ತರಿಸುವುದು (ರಾಷ್ಟ್ರೀಯ ಆರೋಗ್ಯ ಮಿಷನ್).
ಅಭಿಯಾನದ ಅಡಿಯಲ್ಲಿ ಒಳಗೊಂಡಿರುವ ಬುಡಕಟ್ಟು ಗ್ರಾಮಗಳನ್ನು ಪಿಎಂ ಗತಿ ಶಕ್ತಿ ಪೋರ್ಟಲ್‌ನಲ್ಲಿ ಮ್ಯಾಪ್ ಮಾಡಲಾಗುವುದು, ಅವುಗಳ ನಿರ್ದಿಷ್ಟ ಅಗತ್ಯಗಳನ್ನು ಸಂಬಂಧಿಸಿದ ಇಲಾಖೆಯು ಗುರುತಿಸುತ್ತದೆ. ಪ್ರಧಾನ ಮಂತ್ರಿ ಗತಿ ಶಕ್ತಿ ವೇದಿಕೆಯಲ್ಲಿ ಭೌತಿಕ ಮತ್ತು ಆರ್ಥಿಕ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ಉತ್ತಮ ಪ್ರದರ್ಶನ ನೀಡಿದ ಜಿಲ್ಲೆಗಳಿಗೆ ಬಹುಮಾನ ನೀಡಲಾಗುವುದು.
17 ಸಚಿವಾಲಯಗಳಿಗೆ ಸಂಬಂಧಿಸಿದಂತೆ ಅಭಿಯಾನದ ಗುರಿಗಳು ಕೆಳಕಂಡಂತಿವೆ:
|
ಗ್ರಾಮೀಣಾಭಿವೃದ್ಧಿ ಸಚಿವಾಲಯ |
ಪಕ್ಕಾ ಮನೆಗಳು- (ಪಿಎಂಜೆಎವೈ)- ಗ್ರಾಮೀಣ |
20 ಲಕ್ಷ ಮನೆಗಳು
|
ಸಂಪರ್ಕ ರಸ್ತೆ – (ಪಿಎಂ ಜಿ ಎಸ್ ವೈ) |
20 ಲಕ್ಷ ಮನೆಗಳು |
||
|
ಜಲ ಶಕ್ತಿ ಸಚಿವಾಲಯ |
ನೀರು ಸರಬರಾಜು-ಜಲ್ ಜೀವನ್ ಮಿಷನ್ (ಜೆಜೆಎಂ) |
|
|
ವಿದ್ಯುತ್ ಸಚಿವಾಲಯ |
ಮನೆ ವಿದ್ಯುದೀಕರಣ- [ಪುನರ್ನಿರ್ಮಿಸಲಾದ ವಿತರಣಾ ವಲಯ ಯೋಜನೆ (RDSS)] |
ಪ್ರತಿ ವಿದ್ಯುತ್ ಇಲ್ಲದ ಮನೆ ಮತ್ತು ಸಂಪರ್ಕವಿಲ್ಲದ ಸಾರ್ವಜನಿಕ ಸಂಸ್ಥೆ (~2.35 ಲಕ್ಷ) |
|
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ |
ಆಫ್-ಗ್ರಿಡ್ ಸೌರ. ಹೊಸ ಸೌರಶಕ್ತಿ ಯೋಜನೆ |
(i) ಗ್ರಿಡ್ ಮೂಲಕ ಒಳಗೊಳ್ಳದ ಪ್ರತಿಯೊಂದು ವಿದ್ಯುತ್ ಇಲ್ಲದ ಮನೆ ಮತ್ತು ಸಾರ್ವಜನಿಕ ಸಂಸ್ಥೆಗಳು. |
|
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ |
ಸಂಚಾರಿ ವೈದ್ಯಕೀಯ ಘಟಕಗಳು- ರಾಷ್ಟ್ರೀಯ ಆರೋಗ್ಯ ಮಿಷನ್ |
1000 MMU ವರೆಗೆ
|
ಆಯುಷ್ಮಾನ್ ಕಾರ್ಡ್ – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂ ಜೆಎವೈ)-ಎನ್ ಎಚ್ ಎ |
ಅಭಿಯಾನದ ಅಡಿಯಲ್ಲಿ ಒಳಗೊಂಡಿರುವ ಪ್ರತಿ ಅರ್ಹ ಕುಟುಂಬ |
||
|
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ |
ಎಲ್ ಪಿ ಜಿ ಸಂಪರ್ಕ-(ಪ್ರಧಾನ ಮಂತ್ರಿ ಉಜ್ವಲ ಯೋಜನೆ) |
25 ಲಕ್ಷ ಕುಟುಂಬ (ಮೂಲ ಯೋಜನೆ ಮತ್ತು ಯೋಜನೆಯ ಮುಂದುವರಿಕೆಯ ಅಡಿಯಲ್ಲಿ ಗುರಿಗಳ ಅನುಮೋದನೆಗೆ ಒಳಪಟ್ಟಿರುತ್ತದೆ) |
|
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ |
ಅಂಗನವಾಡಿ ಕೇಂದ್ರಗಳ ಸ್ಥಾಪನೆ- ಪೋಷಣ ಅಭಿಯಾನ |
8000 (2000 ಹೊಸ ಸಕ್ಷಮ್ ಅಂಗನವಾಡಿ ಕೇಂದ್ರ) & 6000 ಸಕ್ಷಮ್ ಅಂಗನವಾಡಿ ಕೇಂದ್ರವಾಗಿ ಮೇಲ್ದರ್ಜೆಗೆ) |
|
ಶಿಕ್ಷಣ ಸಚಿವಾಲಯ |
ವಸತಿ ನಿಲಯಗಳ ನಿರ್ಮಾಣ-ಸಮಗ್ರ ಶಿಕ್ಷಾ ಅಭಿಯಾನ (ಎಸ್ ಎಸ್ ಎ) |
1000 ವಸತಿ ನಿಲಯಗಳು |
|
ಆಯುಷ್ ಸಚಿವಾಲಯ |
ಪೋಷಣ್ ವಾಟಿಕಾಗಳು- ರಾಷ್ಟ್ರೀಯ ಆಯುಷ್ ಮಿಷನ್ |
700 ಪೋಷಣ ವಾಟಿಕಾಗಳು |
|
ದೂರಸಂಪರ್ಕ ಇಲಾಖೆ |
ಯುನಿವರ್ಸಲ್ ಸರ್ವೀಸ್ ಆಬ್ಲಿಗೇಶನ್ ಫಂಡ್/ಭಾರತ್ ನೆಟ್ (DoT-MoC) |
5000 ಗ್ರಾಮಗಳು |
|
ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯ |
ಸ್ಕಿಲ್ ಇಂಡಿಯಾ ಮಿಷನ್ (ಅಸ್ತಿತ್ವದಲ್ಲಿರುವ ಯೋಜನೆಗಳು)/ಪ್ರಸ್ತಾಪ |
ಬುಡಕಟ್ಟು ಜಿಲ್ಲೆಗಳಲ್ಲಿ ಕೌಶಲ್ಯ ಕೇಂದ್ರ |
|
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ |
ಡಿಜಿಟಲ್ ಉಪಕ್ರಮಗಳು |
ಅನ್ವಯವಾಗುವಂತೆ |
|
ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ |
ಸುಸ್ಥಿರ ಕೃಷಿಗೆ ಉತ್ತೇಜನ – DoAFW ನ ಬಹು ಯೋಜನೆಗಳು |
ಎಫ್ ಆರ್ ಎ ಪಟ್ಟಾ ಹೊಂದಿರುವವರು (~2 ಲಕ್ಷ ಫಲಾನುಭವಿಗಳು) |
|
ಮೀನುಗಾರಿಕೆ ಇಲಾಖೆ
|
ಮೀನು ಕೃಷಿ ಬೆಂಬಲ-ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ)
|
10,000 ಸಮುದಾಯ ಮತ್ತು 1,00,000 ವೈಯಕ್ತಿಕ ಫಲಾನುಭವಿಗಳು |
ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ |
ಜಾನುವಾರು ಸಾಕಣೆ- ರಾಷ್ಟ್ರೀಯ ಜಾನುವಾರು ಮಿಷನ್ |
8500 ವೈಯಕ್ತಿಕ/ಗುಂಪು ಫಲಾನುಭವಿಗಳು |
|
|
ಪಂಚಾಯತ್ ರಾಜ್ ಸಚಿವಾಲಯ |
ಸಾಮರ್ಥ್ಯ ನಿರ್ಮಾಣ-ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ (ಆರ್ ಜಿ ಎಸ್ ಎ) |
ಎಲ್ಲಾ ಗ್ರಾಮ ಸಭೆಗಳು ಮತ್ತು ಉಪ ವಿಭಾಗ, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಎಫ್ ಆರ್ ಎ ಯೊಂದಿಗೆ ವ್ಯವಹರಿಸುವ ಸಂಬಂಧಿತ ಅಧಿಕಾರಿಗಳು |
|
ಪ್ರವಾಸೋದ್ಯಮ ಸಚಿವಾಲಯ |
ಬುಡಕಟ್ಟು ಹೋಮ್ ಸ್ಟೇಗಳು-ಸ್ವದೇಶ್ ದರ್ಶನ |
1000 ಬುಡಕಟ್ಟು ಹೋಮ್ ಸ್ಟೇಗಳು ಪ್ರತಿ ಘಟಕಕ್ಕೆ ರೂ 5 ಲಕ್ಷದವರೆಗೆ (ಹೊಸ ನಿರ್ಮಾಣಕ್ಕಾಗಿ), ರೂ 3 ಲಕ್ಷದವರೆಗೆ (ನವೀಕರಣ) ಮತ್ತು ರೂ 5 ಲಕ್ಷದವರೆಗೆ ಗ್ರಾಮ ಸಮುದಾಯದ ಅಗತ್ಯತೆಗಾಗಿ. |
|
ಬುಡಕಟ್ಟು ವ್ಯವಹಾರಗಳ ಸಚಿವಾಲಯ |
ಪ್ರಧಾನ ಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆ (ಪಿಎಂಎಎಜಿವೈ) |
ಇತರ ಮಧ್ಯಸ್ಥಿಕೆಗಳನ್ನು ಸೇರಿಸುವ ಮೂಲಕ ಬುಡಕಟ್ಟು ಅಭಿವೃದ್ಧಿ / ಪಿಎಂಎಎಜಿವೈ ಗೆ ಎಸ್ ಸಿ ಎ ವ್ಯಾಪ್ತಿಯನ್ನು ಹೆಚ್ಚಿಸುವುದು |
100 ಬುಡಕಟ್ಟು ಬಹುಪಯೋಗಿ ಮಾರುಕಟ್ಟೆ ಕೇಂದ್ರಗಳು, ಆಶ್ರಮ ಶಾಲೆಗಳು, ಹಾಸ್ಟೆಲ್ ಗಳು, ಸರ್ಕಾರ/ರಾಜ್ಯ ಬುಡಕಟ್ಟು ವಸತಿ ಶಾಲೆಗಳ ಮೂಲಸೌಕರ್ಯಗಳನ್ನು ಸುಧಾರಿಸುವುದು, ವಂಶವಾಹಿ ರಕ್ತಹೀನತೆ ರೋಗ ಕೋಶ ಮತ್ತು ಕೌನ್ಸೆಲಿಂಗ್ ಬೆಂಬಲ, ಎಫ್ ಆರ್ ಎ ಮತ್ತು ಸಿ ಎಫ್ ಆರ್ ನಿರ್ವಹಣೆ ಮಧ್ಯಸ್ಥಿಕೆಗಳಿಗೆ ಬೆಂಬಲ, ಎಫ್ ಆರ್ ಎ ಕೋಶ ಸ್ಥಾಪನೆ ಮತ್ತು ಉನ್ನತ ಪ್ರದರ್ಶನ ನೀಡುವ ಬುಡಕಟ್ಟು ಜಿಲ್ಲೆಗಳಿಗೆ ಪ್ರೋತ್ಸಾಹದೊಂದಿಗೆ ಯೋಜನಾ ನಿರ್ವಹಣಾ ನಿಧಿಗಳು. |
ಕ್ರ.ಸಂ. | ಸಚಿವಾಲಯ | ಮಧ್ಯಸ್ಥಿಕೆ (ಯೋಜನೆ) | ಫಲಾನುಭವಿ/ ಮಧ್ಯಸ್ಥಿಕೆ ಅಂಕಿಸಂಖ್ಯೆ |
---|
ಬುಡಕಟ್ಟು ಪ್ರದೇಶಗಳ ನಿರ್ದಿಷ್ಟ ಅಗತ್ಯಗಳು ಮತ್ತು ಅವಶ್ಯಕತೆಗಳ ಆಧಾರದ ಮೇಲೆ ಮತ್ತು ರಾಜ್ಯಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಚರ್ಚಿಸಿದ ನಂತರ, ಅಭಿಯಾನವು ಜೀವನೋಪಾಯವನ್ನು ಉತ್ತೇಜಿಸಲು ಮತ್ತು ಆದಿವಾಸಿಗಳು ಮತ್ತು ಅರಣ್ಯಗಳಲ್ಲಿ ವಾಸಿಸುವ ಸಮುದಾಯಗಳಲ್ಲಿ ಆದಾಯವನ್ನು ಸೃಷ್ಟಿಸಲು ಕೆಲವು ನವೀನ ಯೋಜನೆಗಳನ್ನು ರೂಪಿಸಿದೆ.
ಬುಡಕಟ್ಟು ಹೋಮ್ ಸ್ಟೇ: ಬುಡಕಟ್ಟು ಪ್ರದೇಶಗಳ ಪ್ರವಾಸಿ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತು ಬುಡಕಟ್ಟು ಸಮುದಾಯಕ್ಕೆ ಪರ್ಯಾಯ ಜೀವನೋಪಾಯವನ್ನು ಒದಗಿಸಲು, ಪ್ರವಾಸೋದ್ಯಮ ಸಚಿವಾಲಯದ ಮೂಲಕ ಸ್ವದೇಶ್ ದರ್ಶನದ ಅಡಿಯಲ್ಲಿ 1000 ಹೋಂ ಸ್ಟೇಗಳನ್ನು ಉತ್ತೇಜಿಸಲಾಗುವುದು. ಪ್ರವಾಸಿ ಸಾಮರ್ಥ್ಯವನ್ನು ಹೊಂದಿರುವ ಗ್ರಾಮಗಳಲ್ಲಿ, ಬುಡಕಟ್ಟು ಕುಟುಂಬಗಳಿಗೆ ಮತ್ತು ಗ್ರಾಮಕ್ಕೆ ಒಂದು ಗ್ರಾಮದಲ್ಲಿ 5-10 ಹೋಂಸ್ಟೇಗಳನ್ನು ನಿರ್ಮಿಸಲು ಧನಸಹಾಯವನ್ನು ನೀಡಲಾಗುತ್ತದೆ. ಪ್ರತಿ ಕುಟುಂಬವು ಎರಡು ಹೊಸ ಕೊಠಡಿಗಳ ನಿರ್ಮಾಣಕ್ಕಾಗಿ ರೂ. 5.00 ಲಕ್ಷದವರೆಗೆ ಮತ್ತು ಅಸ್ತಿತ್ವದಲ್ಲಿರುವ ಕೊಠಡಿಗಳ ನವೀಕರಣಕ್ಕಾಗಿ ರೂ. 3.00 ಲಕ್ಷದವರೆಗೆ ಮತ್ತು ಗ್ರಾಮ ಸಮುದಾಯದ ಅಗತ್ಯಕ್ಕಾಗಿ 5 ಲಕ್ಷದವರೆಗೆ ಧನಸಹಾಯಕ್ಕೆ ಅರ್ಹವಾಗಿರುತ್ತದೆ.
ಸುಸ್ಥಿರ ಜೀವನೋಪಾಯ ಅರಣ್ಯ ಹಕ್ಕುದಾರರು (ಎಫ್ ಆರ್ ಎ): ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ 22 ಲಕ್ಷ ಎಫ್ ಆರ್ ಎ ಪಟ್ಟಾ ಹೊಂದಿರುವವರ ಬಗ್ಗೆ ಮಿಷನ್ ವಿಶೇಷ ಗಮನಹರಿಸಿದೆ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯ, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ, ಪಶುಸಂಗೋಪನಾ ಇಲಾಖೆ, ಮೀನುಗಾರಿಕೆ ಇಲಾಖೆ ಮತ್ತು ಪಂಚಾಯತ್ ರಾಜ್ ಸಚಿವಾಲಯಗಳೊಂದಿಗೆ ವಿವಿಧ ಯೋಜನೆಗಳ ಪ್ರಯೋಜನಗಳನ್ನು ಒಗ್ಗೂಡಿಸಲಾಗುತ್ತದೆ ಮತ್ತು ಒದಗಿಸಲಾಗುತ್ತದೆ. ಮಧ್ಯಸ್ಥಿಕೆಗಳು ಅರಣ್ಯ ಹಕ್ಕುಗಳನ್ನು ಗುರುತಿಸುವ ಮತ್ತು ಭದ್ರಪಡಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಗುರಿಯನ್ನು ಹೊಂದಿವೆ, ಅರಣ್ಯದ ನಿರ್ವಹಣೆ ಮತ್ತು ಸಂರಕ್ಷಣೆಗಾಗಿ ಬುಡಕಟ್ಟು ಸಮುದಾಯಗಳನ್ನು ಸಕ್ರಿಯಗೊಳಿಸುತ್ತವೆ ಮತ್ತು ಸರ್ಕಾರದ ಯೋಜನೆಯ ಬೆಂಬಲದ ಮೂಲಕ ಅವರಿಗೆ ಸುಸ್ಥಿರ ಜೀವನೋಪಾಯವನ್ನು ಒದಗಿಸುತ್ತವೆ. ಬಾಕಿ ಉಳಿದಿರುವ ಎಫ್ ಆರ್ ಎ ಕ್ಲೈಮ್ ಗಳನ್ನು ತ್ವರಿತಗೊಳಿಸಲಾಗಿದೆ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯ ಮತ್ತು ಪಂಚಾಯತ್ ರಾಜ್ ಸಚಿವಾಲಯವು ಬ್ಲಾಕ್, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಎಲ್ಲಾ ಭಾಗೀದಾರರು ಮತ್ತು ಅಧಿಕಾರಿಗಳಿಗೆ ತರಬೇತಿಯನ್ನು ನೀಡುತ್ತದೆ.
ಸರ್ಕಾರಿ ವಸತಿ ಶಾಲೆಗಳು ಮತ್ತು ವಸತಿನಿಲಯಗಳ ಮೂಲಸೌಕರ್ಯವನ್ನು ಸುಧಾರಿಸುವುದು: ಬುಡಕಟ್ಟು ವಸತಿ ಶಾಲೆಗಳು ಮತ್ತು ವಸತಿನಿಲಯಗಳು ದೂರದ ಬುಡಕಟ್ಟು ಪ್ರದೇಶಗಳನ್ನು ಗುರಿಯಾಗಿರಿಸಿಕೊಳ್ಳುತ್ತವೆ ಮತ್ತು ಸ್ಥಳೀಯ ಶೈಕ್ಷಣಿಕ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವ ಮತ್ತು ದಾಖಲಾತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ. ಆಶ್ರಮ ಶಾಲೆಗಳು/ಹಾಸ್ಟೆಲ್ ಗಳು/ಬುಡಕಟ್ಟು ಶಾಲೆಗಳು/ಸರಕಾರಿ ವಸತಿ ಶಾಲೆಗಳ ಮೂಲಸೌಕರ್ಯವನ್ನು ಪ್ರಧಾನಮಂತ್ರಿ-ಶ್ರೀ ಶಾಲೆಗಳ ರೀತಿಯಲ್ಲಿ ಉನ್ನತೀಕರಿಸುವ ಗುರಿಯನ್ನು ಅಭಿಯಾನ ಹೊಂದಿದೆ.
ವಂಶವಾಹಿ ರಕ್ತಹೀನತೆ ಕಾಯಿಲೆಯ ರೋಗನಿರ್ಣಯಕ್ಕೆ ಸುಧಾರಿತ ಸೌಲಭ್ಯಗಳು: ಪ್ರಸವಪೂರ್ವ ರೋಗನಿರ್ಣಯಕ್ಕೆ ವಿಶೇಷ ಒತ್ತು ನೀಡುವ ಮೂಲಕ ಕೈಗೆಟುಕುವ ಮತ್ತು ಪ್ರವೇಶಿಸಬಹುದಾದ ರೋಗನಿರ್ಣಯ ಮತ್ತು ಎಸ್ ಸಿ ಡಿ ನಿರ್ವಹಣಾ ಸೌಲಭ್ಯಗಳನ್ನು ಒದಗಿಸಲು ಮತ್ತು ಎಸ್ ಸಿ ಡಿ, ಯೊಂದಿಗೆ ಭವಿಷ್ಯದ ಜನನಗಳನ್ನು ತಡೆಗಟ್ಟುವ ಮೂಲಕ ರೋಗದ ಹರಡುವಿಕೆಯನ್ನು ಕಡಿಮೆ ಮಾಡಲು, ವಂಶವಾಹಿ ರಕ್ತಹೀನತೆ ರೋಗವು ಪ್ರಚಲಿತದಲ್ಲಿರುವ ಮತ್ತು ಈ ಕಾರ್ಯವಿಧಾನಗಳನ್ನು ನಡೆಸುವ ಪರಿಣತಿಯು ಲಭ್ಯವಿರುವ ರಾಜ್ಯಗಳಲ್ಲಿ AIIMS ಮತ್ತು ಪ್ರಧಾನ ಸಂಸ್ಥೆಗಳಲ್ಲಿ ಸೆಂಟರ್ ಆಫ್ ಕಾಂಪಿಟೆನ್ಸ್ (ಸಿಒಸಿ) ಸ್ಥಾಪಿಸಲಾಗುತ್ತದೆ. ಆರೋಗ್ಯ ಸಚಿವಾಲಯವು ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಪ್ರಸವಪೂರ್ವ ರೋಗನಿರ್ಣಯಕ್ಕಾಗಿ ಸೌಲಭ್ಯಗಳು, ತಂತ್ರಜ್ಞಾನ, ಸಿಬ್ಬಂದಿ ಮತ್ತು ಸಂಶೋಧನಾ ಸಾಮರ್ಥ್ಯಗಳೊಂದಿಗೆ ಸೆಂಟರ್ ಆಫ್ ಕಾಂಪಿಟೆನ್ಸ್ (ಸಿಒಸಿ) ಸಜ್ಜುಗೊಂಡಿರುತ್ತದೆ ಮತ್ತು 6 ಕೋಟಿ/ಸಿಒಸಿ ವೆಚ್ಚದಲ್ಲಿ ಪ್ರಸವಪೂರ್ವ ರೋಗನಿರ್ಣಯಕ್ಕಾಗಿ ಇತ್ತೀಚಿನ ಸೌಲಭ್ಯಗಳು, ತಂತ್ರಜ್ಞಾನ, ಸಿಬ್ಬಂದಿ ಮತ್ತು ಸಂಶೋಧನಾ ಸಾಮರ್ಥ್ಯಗಳನ್ನು ಹೊಂದಿರುತ್ತದೆ.
ಬುಡಕಟ್ಟು ವಿವಿಧೋದ್ದೇಶ ಮಾರುಕಟ್ಟೆ ಕೇಂದ್ರ: ಬುಡಕಟ್ಟು ಉತ್ಪನ್ನಗಳ ಪರಿಣಾಮಕಾರಿ ಮಾರುಕಟ್ಟೆ ಮತ್ತು ಮಾರುಕಟ್ಟೆ ಮೂಲಸೌಕರ್ಯ, ಜಾಗೃತಿ, ಬ್ರ್ಯಾಂಡಿಂಗ್, ಪ್ಯಾಕೇಜಿಂಗ್ ಮತ್ತು ಸಾರಿಗೆ ಸೌಲಭ್ಯಗಳನ್ನು ಸುಧಾರಿಸಲು ಬುಡಕಟ್ಟು ಉತ್ಪಾದಕರು ತಮ್ಮ ಉತ್ಪನ್ನಗಳಿಗೆ ಸರಿಯಾದ ಬೆಲೆಯನ್ನು ಪಡೆಯಲು ಮತ್ತು ಗ್ರಾಹಕರಿಗೆ ಅನುಕೂಲವಾಗುವಂತೆ 100 ಟಿಎಂಎಂಸಿಗಳನ್ನು ಸ್ಥಾಪಿಸಲಾಗುವುದು. ಆದಿವಾಸಿಗಳಿಂದ ನೇರವಾಗಿ ಸೂಕ್ತ ಬೆಲೆಗೆ ಬುಡಕಟ್ಟು ಉತ್ಪನ್ನಗಳನ್ನು ಖರೀದಿಸಲಾಗುವುದು. ಇದಲ್ಲದೆ, ಈ ಟಿಎಂಎಂಸಿಯನ್ನು ಒಟ್ಟುಗೂಡಿಸುವಿಕೆ ಮತ್ತು ಮೌಲ್ಯವರ್ಧನೆಯ ವೇದಿಕೆಯಾಗಿ ವಿನ್ಯಾಸಗೊಳಿಸಲಾಗುವುದು. ಕೊಯ್ಲಿನ ನಂತರದ ಮತ್ತು ಉತ್ಪಾದನೆಯ ನಂತರದ ನಷ್ಟಗಳನ್ನು ಕಡಿಮೆ ಮಾಡಲು ಮತ್ತು ಉತ್ಪನ್ನ ಮೌಲ್ಯವನ್ನು ಉಳಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.
ಪ್ರಧಾನ ಮಂತ್ರಿ ಬುಡಕಟ್ಟು ಆದಿವಾಸಿ ನ್ಯಾಯ ಮಹಾ ಅಭಿಯಾನದ (PM-JANMAN) ಕಲಿಕೆ ಮತ್ತು ಯಶಸ್ಸಿನ ಆಧಾರದ ಮೇಲೆ ಈ ಅಭಿಯಾನವನ್ನು ಯೋಜಿಸಲಾಗಿದೆ, ಇದನ್ನು ಗೌರವಾನ್ವಿತ ಪ್ರಧಾನ ಮಂತ್ರಿಯವರು 15 ನವೆಂಬರ್ 2023 ರಂದು ಬುಡಕಟ್ಟು ಹೆಮ್ಮೆಯ ದಿನದಂದು ಚಾಲನೆ ನೀಡಿದರು. ಪಿವಿಟಿಜಿ ಜನಸಂಖ್ಯೆಯನ್ನು ಕೇಂದ್ರೀಕರಿಸಿ ರೂ 24104 ಕೋಟಿ ಬಜೆಟ್ ನೊಂದಿಗೆ ಈ ಯೋಜನೆಯನ್ನು ಪ್ರಾರಂಭಿಸಲಾಯಿತು.
ಪ್ರಧಾನಮಂತ್ರಿ ಜನಜಾತಿಯ ಉನ್ನತ್ ಗ್ರಾಮವು ಸಹಕಾರಿ ಒಕ್ಕೂಟ ವ್ಯವಸ್ಥೆ, ಜನರ ಕಲ್ಯಾಣಕ್ಕಾಗಿ ಸಂಪೂರ್ಣ ಸರ್ಕಾರದ ವಿಧಾನಕ್ಕೆ ಒಂದು ಅನನ್ಯ ಉದಾಹರಣೆಯಾಗಿದೆ.
*****
देशभर के जनजातीय समुदायों के उत्थान और उनके सामाजिक एवं आर्थिक विकास के लिए हम कृतसंकल्प हैं। इसी दिशा में एक बड़ी पहल करते हुए हमने प्रधानमंत्री जनजातीय उन्नत ग्राम अभियान को मंजूरी दी है। इससे हमारे 5 करोड़ से ज्यादा आदिवासी भाई-बहनों को लाभ होगा।https://t.co/fRbLd1sobd
— Narendra Modi (@narendramodi) September 18, 2024