ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಡಿಸೆಂಬರ್ 19ರಂದು ಗೋವಾಕ್ಕೆ ಭೇಟಿ ನೀಡಲಿದ್ದು, ಮಧ್ಯಾಹ್ನ 3 ಗಂಟೆಗೆ ಗೋವಾದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ಗೋವಾ ವಿಮೋಚನಾ ದಿನಾಚರಣೆಯ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ‘ಆಪರೇಷನ್ ವಿಜಯ್’ ನ ಯೋಧರನ್ನು ಪ್ರಧಾನ ಮಂತ್ರಿ ಅವರು ಸನ್ಮಾನಿಸಲಿದ್ದಾರೆ. ಗೋವಾವನ್ನು ಪೋರ್ಚುಗೀಸ್ ಆಳ್ವಿಕೆಯಿಂದ ವಿಮೋಚನೆಗೊಳಿಸಿದ ಭಾರತೀಯ ಸಶಸ್ತ್ರ ಪಡೆಗಳು ಕೈಗೊಂಡ ‘ಆಪರೇಷನ್ ವಿಜಯ್‘ ಯಶಸ್ಸನ್ನು ಸ್ಮರಿಸಲು ಪ್ರತಿ ವರ್ಷ ಡಿಸೆಂಬರ್ 19 ರಂದು ಗೋವಾ ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ.
ನವೀಕರಿಸಿದ ಫೋರ್ಟ್ ಅಗುಡಾ ಕಾರಾಗೃಹ ಮ್ಯೂಸಿಯಂ, ಗೋವಾ ವೈದ್ಯಕೀಯ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಬ್ಲಾಕ್, ನೂತನ ದಕ್ಷಿಣ ಗೋವಾ ಜಿಲ್ಲಾ ಆಸ್ಪತ್ರೆ, ಮೋಪಾ ವಿಮಾನ ನಿಲ್ದಾಣದಲ್ಲಿ ನಾಗರಿಕ ಕೌಶಲ್ಯ ಅಭಿವೃದ್ಧಿ ಕೇಂದ್ರ ಮತ್ತು ದಬೋಲಿಮ್–ನವೇಲಿಮ್, ಮರ್ಗೋವ್‌ನಲ್ಲಿ ಅನಿಲ ಅಳವಡಿಕೆ ಉಪ ಕೇಂದ್ರ ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಅವರು ಉದ್ಘಾಟಿಸಲಿದ್ದಾರೆ. ಅವರು ಗೋವಾದಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಟ್ರಸ್ಟ್‌ನ ಭಾರತ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ ಕಾನೂನು ಶಿಕ್ಷಣ ಮತ್ತು ಸಂಶೋಧನೆಗೆ ಅಡಿಪಾಯ ಹಾಕಲಿದ್ದಾರೆ.
ವೈದ್ಯಕೀಯ ಮೂಲಸೌಕರ್ಯವನ್ನು ಸುಧಾರಿಸಲು ಮತ್ತು ದೇಶದಾದ್ಯಂತ ಉನ್ನತ ದರ್ಜೆಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಪ್ರಧಾನ ಮಂತ್ರಿ ಅವರ ನಿರಂತರ ಪ್ರಯತ್ನದ ಈ ದೃಷ್ಟಿಕೋನಕ್ಕೆ ಅನುಗುಣವಾಗಿ, ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಬ್ಲಾಕ್ ಅನ್ನು ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ 380 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಗೋವಾ ರಾಜ್ಯದ ಏಕೈಕ ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, ಉನ್ನತ ಮಟ್ಟದ ಸೂಪರ್ ಸ್ಪೆಷಾಲಿಟಿ ಸೇವೆಗಳನ್ನು ಒದಗಿಸುತ್ತದೆ. ಇದು ಆಂಜಿಯೋಪ್ಲ್ಯಾಸ್ಟಿ, ಬೈಪಾಸ್ ಸರ್ಜರಿ, ಲಿವರ್ ಟ್ರಾನ್ಸ್‌ಪ್ಲಾಂಟ್, ಮೂತ್ರಪಿಂಡ ಕಸಿ, ಡಯಾಲಿಸಿಸ್ ಮುಂತಾದ ವಿಶೇಷ ಸೇವೆಗಳನ್ನು ಒದಗಿಸುತ್ತದೆ. ಸೂಪರ್ ಸ್ಪೆಷಾಲಿಟಿ ಬ್ಲಾಕ್‌ನಲ್ಲಿ PM-CARES ಅಡಿಯಲ್ಲಿ ಸ್ಥಾಪಿಸಲಾದ 1000 LPM PSA ಪ್ಲಾಂಟ್ ಕೂಡ ಇರುತ್ತದೆ.
ನೂತನ ದಕ್ಷಿಣ ಗೋವಾ ಜಿಲ್ಲಾ ಆಸ್ಪತ್ರೆಯು ಸುಮಾರು 220 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. 33 ವಿಶೇಷತೆಗಳಲ್ಲಿ OPD ಸೇವೆಗಳು, ಇತ್ತೀಚಿನ ರೋಗನಿರ್ಣಯ ಮತ್ತು ಪ್ರಯೋಗಾಲಯ ಸೌಲಭ್ಯಗಳು ಮತ್ತು ಫಿಸಿಯೋಥೆರಪಿ, ಆಡಿಯೊಮೆಟ್ರಿ ಮುಂತಾದ ಸೇವೆಗಳು ಸೇರಿದಂತೆ ಆಧುನಿಕ ವೈದ್ಯಕೀಯ ಮೂಲಸೌಕರ್ಯಗಳು ಸೇರಿವೆ. ಆಸ್ಪತ್ರೆಯಲ್ಲಿ 500 ಆಮ್ಲಜನಕಯುಕ್ತ ಹಾಸಿಗೆಗಳಿವೆ, 5500 ಲೀಟರ್ LMO ಟ್ಯಾಂಕ್ ಮತ್ತು 600 lpm ನ 2 PSA ಸೇರವೆ.
ಸ್ವದೇಶ್ ದರ್ಶನ್ ಯೋಜನೆಯಡಿ ಅಗುಡಾ ಫೋರ್ಟ್ ಕಾರಾಗೃಹ ಮ್ಯೂಸಿಯಂ ಅನ್ನು ಪಾರಂಪರಿಕ ಪ್ರವಾಸೋದ್ಯಮ ತಾಣವಾಗಿ ಮರು–ಅಭಿವೃದ್ಧಿಪಡಿಸಲು ಸುಮಾರು 28 ಕೋಟಿ ರೂ. ವೆಚ್ಚ ಮಾಡಲಾಗಿದೆ. ಗೋವಾದ ವಿಮೋಚನೆಯ ಮೊದಲು, ಅಗುಡಾ ಕೋಟೆಯನ್ನು ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಲು ಮತ್ತು ಚಿತ್ರಹಿಂಸೆ ನೀಡಲು ಬಳಸಲಾಗುತ್ತಿತ್ತು. ಗೋವಾದ ವಿಮೋಚನೆಗಾಗಿ ಹೋರಾಡಿದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆ ಮತ್ತು ತ್ಯಾಗವನ್ನು ಮ್ಯೂಸಿಯಂ ಬಿಂಬಿಸುತ್ತದೆ ಮತ್ತು ಅವರಿಗೆ ಗೌರವಾನ್ವಿತವಾಗಿದೆ.
ಮುಂಬರುವ ಮೋಪಾ ವಿಮಾನ ನಿಲ್ದಾಣದಲ್ಲಿ ವಾಯುಯಾನ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಸುಮಾರು 8.5 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು 16 ವಿವಿಧ ಉದ್ಯೋಗ ಪ್ರೊಫೈಲ್‌ಗಳಲ್ಲಿ ತರಬೇತಿ ನೀಡುವ ಗುರಿಯನ್ನು ಹೊಂದಿದೆ. ತರಬೇತಿ ಪಡೆದವರು ಮೋಪಾ ವಿಮಾನ ನಿಲ್ದಾಣದ ಯೋಜನೆಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ, ಜೊತೆಗೆ ಭಾರತ ಮತ್ತು ವಿದೇಶಗಳಲ್ಲಿನ ಇತರ ವಿಮಾನ ನಿಲ್ದಾಣಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಭಾರತ ಸರ್ಕಾರದ ವಿದ್ಯುತ್ ಸಚಿವಾಲಯದ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯಡಿಯಲ್ಲಿ ದಾವೋರ್ಲಿಮ್–ನವೇಲಿಮ್, ಮಾರ್ಗಾವೊದಲ್ಲಿ ಅನಿಲ ಅಳವಡಿಕೆ ಉಪಕೇಂದ್ರವನ್ನು ಸುಮಾರು 16 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ದಾವೋರ್ಲಿಮ್, ನೆಸ್ಸೈ, ನವೆಲಿಮ್, ಅಕ್ವೆಮ್–ಬೈಕ್ಸೊ ಮತ್ತು ತೆಲೌಲಿಮ್ ಗ್ರಾಮಗಳಿಗೆ ಸ್ಥಿರವಾದ ವಿದ್ಯುತ್ ಪೂರೈಕೆಯನ್ನು ಒದಗಿಸುತ್ತದೆ.
ಗೋವಾವನ್ನು ಉನ್ನತ ಮತ್ತು ತಾಂತ್ರಿಕ ಶಿಕ್ಷಣದ ಕೇಂದ್ರವಾಗಿ ಪರಿವರ್ತಿಸಲು ಸರ್ಕಾರದ ಗಮನಕ್ಕೆ ಅನುಗುಣವಾಗಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಟ್ರಸ್ಟ್‌ನ ಭಾರತ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ ಕಾನೂನು ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು.
ಗೋವಾವನ್ನು ಪೋರ್ಚುಗೀಸ್ ಆಳ್ವಿಕೆಯಿಂದ ಮುಕ್ತಗೊಳಿಸಿದ ಭಾರತೀಯ ಸಶಸ್ತ್ರ ಪಡೆಗಳ ಸ್ಮರಣಾರ್ಥವಾಗಿ ಪ್ರಧಾನಮಂತ್ರಿ ಅವರು ವಿಶೇಷ ಕವರ್ ಮತ್ತು ಸ್ಪೆಶಲ್ ಕ್ಯಾನ್ಸಲೇಷನ್ ಅನ್ನು ಸಹ ಬಿಡುಗಡೆ ಮಾಡಲಿದ್ದಾರೆ. ಇತಿಹಾಸದ ಈ ವಿಶೇಷ ಸಂಚಿಕೆಯನ್ನು ವಿಶೇಷ ಮುಖಪುಟದಲ್ಲಿ ತೋರಿಸಲಾಗಿದೆ, ಆದರೆ ಸ್ಪೆಶಲ್ ಕ್ಯಾನ್ಸಲೇಶನ್ ಭಾರತೀಯ ನೌಕಾ ನೌಕೆ ಗೋಮಾಂತಕ್‌ನಲ್ಲಿ ಯುದ್ಧ ಸ್ಮಾರಕವನ್ನು ಚಿತ್ರಿಸುತ್ತದೆ, ಇದನ್ನು ಏಳು ಯುವ ಧೀರ ನಾವಿಕರು ಮತ್ತು “ಆಪರೇಷನ್ ವಿಜಯ್” ನಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ಇತರ ಸಿಬ್ಬಂದಿಗಳ ನೆನಪಿಗಾಗಿ ನಿರ್ಮಿಸಲಾಗಿದೆ. ಗೋವಾ ವಿಮೋಚನಾ ಚಳವಳಿಯ ಹುತಾತ್ಮರ ಮಹಾನ್ ತ್ಯಾಗಕ್ಕೆ ನಮನ ಸಲ್ಲಿಸುವ ಹುತಾತ್ಮ ಸ್ಮಾರಕವನ್ನು ಪತ್ರಾದೇವಿಯಲ್ಲಿ ಬಿಂಬಿಸುವ ‘ಮೈ ಸ್ಟಾಂಪ್‘ ಅನ್ನು ಸಹ ಪ್ರಧಾನಿ ಬಿಡುಗಡೆ ಮಾಡಲಿದ್ದಾರೆ. ಗೋವಾ ವಿಮೋಚನಾ ಹೋರಾಟದ ವಿವಿಧ ಘಟನೆಗಳ ಚಿತ್ರಗಳ ಕೊಲಾಜ್ ಅನ್ನು ಬಿಂಬಿಸುವ ‘ಮೇಘದೂತ್ ಅಂಚೆ ಕಾರ್ಡ‘ ಅನ್ನು ಸಹ ಪ್ರಧಾನ ಮಂತ್ರಿಗೆ ನೀಡಲಾಗುವುದು.
ಪ್ರಧಾನಮಂತ್ರಿ ಅವರು, ಅತ್ಯುತ್ತಮ ಪಂಚಾಯತ್/ಪುರಸಭೆ, ಸ್ವಯಂಪೂರ್ಣ ಮಿತ್ರರು ಮತ್ತು ಸ್ವಯಂಪೂರ್ಣ ಗೋವಾ ಕಾರ್ಯಕ್ರಮದ ಫಲಾನುಭವಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ.
ಅವರ ಭೇಟಿಯ ಸಮಯದಲ್ಲಿ, ಮಧ್ಯಾಹ್ನ 2:15 ರ ಸುಮಾರಿಗೆ, ಪ್ರಧಾನಿ ಅವರು ಹುತಾತ್ಮರ ಸ್ಮಾರಕ, ಆಜಾದ್ ಮೈದಾನ, ಪಣಜಿಯಲ್ಲಿ ಪುಷ್ಪ ನಮನ ಸಲ್ಲಿಸಲಿದ್ದಾರೆ. ಮಧ್ಯಾಹ್ನ 2:30ರ ಸುಮಾರಿಗೆ ಅವರು ಪಣಜಿಯ ಮಿರಾಮಾರ್‌ನಲ್ಲಿ ಸೈಲ್ ಪರೇಡ್ ಮತ್ತು ಫ್ಲೈ ಪಾಸ್ಟ್‌ನಲ್ಲಿ ಭಾಗವಹಿಸಲಿದ್ದಾರೆ.
***
I look forward to being in Goa tomorrow to join the Goa Liberation Day celebrations. Multiple development works will also be inaugurated tomorrow which will positively transform the lives of Goa’s wonderful people. https://t.co/cRlDVZhGW5 pic.twitter.com/x2JpRwto1p
— Narendra Modi (@narendramodi) December 18, 2021