Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನ ಮಂತ್ರಿ ಅವರಿಂದ ಡಾ.ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕಕ್ಕೆ ಶಂಕುಸ್ಥಾಪನೆ: ಡಾ. ಅಂಬೇಡ್ಕರ್ ಸ್ಮಾರಕ ಉಪನ್ಯಾಸ

ಪ್ರಧಾನ ಮಂತ್ರಿ  ಅವರಿಂದ ಡಾ.ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕಕ್ಕೆ ಶಂಕುಸ್ಥಾಪನೆ: ಡಾ. ಅಂಬೇಡ್ಕರ್ ಸ್ಮಾರಕ ಉಪನ್ಯಾಸ


ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಡಾ. ಅಂಬೇಡ್ಕರ್ ಅವರು ಮಹಾಪರಿ ನಿರ್ವಾಣ ಹೊಂದಿದ ದಿಲ್ಲಿಯ ಆಲಿಪುರದ ನಿವೇಶನ ಸಂಖ್ಯೆ 26ರಲ್ಲಿ ನಿರ್ಮಾಣ ವಾಗಲಿರುವ ಡಾ. ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕಕ್ಕೆ ಮಾರ್ಚ್ 21,2017ರಂದು ಶಂಕುಸ್ಥಾಪನೆ ನೆರವೇರಿಸಿದರು.

ವಿಜ್ಞಾನ ಭವನದಲ್ಲಿ ಶಂಕುಸ್ಥಾಪನೆಯ ಫಲಕವನ್ನು ಅವರು ಅನಾವರಣಗೊಳಿಸಿದರು. ಬಳಿಕ 6ನೇ ಡಾ.ಅಂಬೇಡ್ಕರ್ ಸ್ಮಾರಕ ಉಪನ್ಯಾಸ ಮಾಡಿದ ಅವರು, ಕೇಂದ್ರ ಸರ್ಕಾರದ ಮೀಸಲು ನೀತಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ, ಸಮಾಜದ ದುರ್ಬಲ ವರ್ಗಗಳಿಗೆ ಪ್ರಸ್ತುತ ನೀಡುತ್ತಿರುವ ಸವಲತ್ತನ್ನು ಕಸಿಯುವ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಸಂಬಂಧ ಕೆಲವರು ಸುಳ್ಳು ಮತ್ತು ತಪ್ಪು ಮಾಹಿತಿ ಹಬ್ಬಿಸುತ್ತಿದ್ದು, ಅಂಥವರನ್ನು ಅವರು ಬಲವಾಗಿ ಖಂಡಿಸಿದರು. ಶ್ರೀ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗಲೂ ಇಂಥ ತಪ್ಪು ಮಾಹಿತಿಯನ್ನು ಹಬ್ಬಿಸಲಾಗಿತ್ತು ಎಂದು ಅವರು ಸ್ಮರಿಸಿಕೊಂಡರು.

ಡಾ. ಅಂಬೇಡ್ಕರ್ ಅವರ ಕಾಣಿಕೆಯನ್ನು ಸ್ಮರಿಸಿಕೊಂಡ ಅವರು, ಡಾ. ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕ ಕಟ್ಟಡವು ದಿಲ್ಲಿಯ ಮಾದರಿ ಕಟ್ಟಡಗಳಲ್ಲಿ ಒಂದಾಗಲಿದೆ. ಕಟ್ಟಡವನ್ನು ಬಾಬಾ ಸಾಹೇಬರ ಜನ್ಮ ದಿನವಾದ ಏಪ್ರಿಲ್ 14 ರಂದು 2018ರಲ್ಲಿ ತಾವೇ ಉದ್ಘಾಟಿಸುವುದಾಗಿ ಘೋಷಿಸಿದರು.

ಡಾ ಅಂಬೇಡ್ಕರ್ ಅವರ ಗೌರವಾರ್ಥ ಐದು ಸ್ಥಳಗಳನ್ನು “ಪಂಚ ತೀರ್ಥ” ಎಂದು ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರಧಾನಿ ವಿವರಿಸಿದರು. ಅಂಬೇಡ್ಕರ್ ಅವರ ಜನ್ಮಸ್ಥಳವಾದ ಮ್ಹೋ, ಇಂಗ್ಲೆಂಡ್ ನಲ್ಲಿ ಅವರು ವ್ಯಾಸಂಗ ಮಾಡುತ್ತಿದ್ದಾಗ ಉಳಿದುಕೊಂಡಿದ್ದ ಸ್ಥಳ, ನಾಗಪುರದಲ್ಲಿನ ದೀಕ್ಷಾಭೂಮಿ, ದಿಲ್ಲಿಯ ಮಹಾಪರಿನಿವರ್ಾಣ ಸ್ಥಳ ಮತ್ತು ಮುಂಬಯಿಯ ಚೈತನ್ಯ ಭೂಮಿ ಇದರಲ್ಲಿ ಸೇರಿದೆ. ಇದರ ಜೊತೆಗೆ, ಹೊಸ ದಿಲ್ಲಿಯ ಜನಪಥ್ನಲ್ಲಿ ಡಾ. ಅಂಬೇಡ್ಕರ್ ಪ್ರತಿಷ್ಠಾನಕ್ಕಾಗಿ ನಿರ್ಮಾಣ ವಾಗುತ್ತಿರುವ ಕಟ್ಟಡವನ್ನೂ ಅವರು ಉಲ್ಲೇಖಿಸಿದರು.

ರಾಷ್ಟ್ರಕ್ಕೆ ಡಾ.ಅಂಬೇಡ್ಕರ್ ಅವರ ಕೊಡುಗೆಯನ್ನು ವಿವರಿಸಿದ ಅವರು, ಸರ್ದಾರ್ ಪಟೇಲ್ ಅವರು ದೇಶವನ್ನು ರಾಜಕೀಯವಾಗಿ ಜೋಡಿಸಿದರೆ, ಸಂವಿಧಾನದ ಮೂಲಕ ಡಾ ಅಂಬೇಡ್ಕರ್ ಅವರು ಸಾಮಾಜಿಕವಾಗಿ ದೇಶವನ್ನು ಒಟ್ಟುಗೂಡಿಸಿದರು. ಅಂಥ ಆಲೋಚನೆಗೆ ತೀವ್ರ ರಾಜಕೀಯ ಪ್ರತಿರೋಧ ಇದ್ದ ಕಾಲದಲ್ಲೂ ಮಹಿಳೆಯರಿಗೆ ಸಮಾನ ಹಕ್ಕು ನೀಡಬೇಕೆಂದು ಅವರು ಪ್ರತಿಪಾದಿಸಿದರು. ಡಾ ಅಂಬೇಡ್ಕರ್ ಅವರ ಕೊಡುಗೆಗಳನ್ನು ದಲಿತರಿಗೆ ಮಾತ್ರ ಅಥವಾ ಭಾರತಕ್ಕೆ ಮಾತ್ರವೇ ಸೀಮಿತಗೊಳಿಸುವುದು ಅವರಿಗೆ ಮಾಡಿದ ಅನ್ಯಾಯವಾಗಲಿದೆ. ಡಾ. ಅಂಬೇಡ್ಕರ್ ಅವರು ಅನ್ಯಾಯಕ್ಕೆ ಒಳಗಾದ ಎಲ್ಲರ ಪರವಾಗಿ ಧ್ವನಿ ಎತ್ತಿದರು ಮತ್ತು ಅವರು ಅಮೆರಿಕದ ಮಾರ್ಟಿನ್ ಲೂಥರ್ ಕಿಂಗ್ ಅವರಂತೆ ಜಾಗತಿಕ ಘನತೆಯ ನಾಯಕ ಎಂದು ಪ್ರಧಾನಿ ಹೇಳಿದರು. ಡಾ. ಅಂಬೇಡ್ಕರ್ ಅವರು ದಲಿತ ಕಾರ್ಮಿಕರ ನಾಯಕರಷ್ಟೇ ಮಾತ್ರವಲ್ಲ, ಎಲ್ಲ ಕಾರ್ಮಿಕರ ಪಾಲಿನ ಪ್ರವಾದಿ ಎಂದ ಪ್ರಧಾನ ಮಂತ್ರಿಯವರು , ಕೆಲಸದ ಅವಧಿಯನ್ನು 8 ಗಂಟೆಗೆ ಕಡಿತಗೊಳಿಸುವಲ್ಲಿ ಅವರ ಪಾಲು ಇದೆ ಎಂದು ವಿವರಿಸಿದರು.

ಇತ್ತೀಚಿನ ಕಾರ್ಯನೀತಿ ಉಪಕ್ರಮಗಳು ಮತ್ತು ಶಾಸನಾತ್ಮಕ ಕ್ರಮಗಳ ಬಗ್ಗೆ ಮಾತನಾಡಿದ ಅವರು, ಸಾಗರ ಕ್ಷೇತ್ರದಲ್ಲಿನ ಸಾಮರ್ಥ್ಯ ಮತ್ತು ಒಳನಾಡು ಸಾರಿಗೆ ಕುರಿತು ಮೊದಲು ಪರಿಭಾವಿಸಿದವರು ಡಾ ಅಂಬೇಡ್ಕರ್. ಅದೇ ರೀತಿ, ವಿದ್ಯುತ್ ಸಂಪರ್ಕ ಹೊಂದಿಲ್ಲದ ಎಲ್ಲ ಗ್ರಾಮಗಳಿಗೆ 2018ರೊಳಗೆ ವಿದ್ಯುತ್ ಒದಗಿಸಬೇಕೆಂಬ ಕೇಂದ್ರ ಸರ್ಕಾರದ ಆಶ್ವಾಸನೆಯು ಡಾ. ಅಂಬೇಡ್ಕರ್ ಅವರ ದರ್ಶನವನ್ನು ಪೂರ್ಣಗೊಳಿಸುವಲ್ಲಿನ ಒಂದು ಹೆಜ್ಜೆ ಎಂದು ಪ್ರಧಾನ ಮಂತ್ರಿ ಯವರು ನುಡಿದರು.

ದಲಿತ ಉದ್ಯಮಿಗಳ ಜತೆಗಿನ ತಮ್ಮ ಇತ್ತೀಚಿನ ಸಭೆ ಮತ್ತು ಮಾತುಕತೆ ಹಾಗೂ ಉದ್ಯಮಿಗಳು ನೀಡಿದ ಸಲಹೆಗಳನ್ನು ಪ್ರಧಾನಿ ಸ್ಮರಿಸಿಕೊಂಡರು. ಕೇಂದ್ರ ಆಯವ್ಯಯದಲ್ಲಿ ಈ ಎಲ್ಲ ಸಲಹೆಗಳನ್ನು ಅಳವಡಿಸಿರುವುದಾಗಿ ಪ್ರಧಾನ ಮಂತ್ರಿಯವರು ಹೇಳಿದರು.

ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ದೊರಕಿಸಿಕೊಡಲು ರಾಷ್ಟ್ರೀಯ ಕೃಷಿ ಮಾರುಕಟ್ಟೆ, ಇ- ಪ್ಲಾಟ್ಫಾರ್ಮ್
ಏಪ್ರಿಲ್ 14ರಂದು ಚಾಲನೆಗೊಳಿಸಲಾಗುವುದು ಎಂದು ಪ್ರಧಾನ ಮಂತ್ರಿಯವರು ತಿಳಿಸಿದರು.