Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನ ಮಂತ್ರಿ ಅವರಿಂದ “ ಚಂದ್ರಶೇಖರ್- ಸೈದ್ದಾಂತಿಕ ರಾಜಕಾರಣದ ಕೊನೆಯ ಪ್ರತಿಕೃತಿ” ಪುಸ್ತಕ ಅನಾವರಣ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು “ ಚಂದ್ರಶೇಖರ್- ಸೈದ್ದಾಂತಿಕ ರಾಜಕಾರಣದ ಕೊನೆಯ ಪ್ರತಿಕೃತಿ” ಪುಸ್ತಕವನ್ನು ಬಿಡುಗಡೆ ಮಾಡಿದರು. ರಾಜ್ಯಸಭೆಯ ಉಪಸಭಾಪತಿ ಶ್ರೀ ಹರಿವಂಶ ಮತ್ತು ಶ್ರೀ ರವಿ ದತ್ತಾ ಬಾಜಪೇಯಿ ಅವರು ಈ ಪುಸ್ತಕವನ್ನು ಬರೆದಿದ್ದಾರೆ. ಸಂಸತ್ತಿನ ಗ್ರಂಥಾಲಯ ಕಟ್ಟಡದ ಬಾಲಯೋಗಿ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು.

ಪ್ರಧಾನ ಮಂತ್ರಿ ಅವರು ಪುಸ್ತಕದ ಮೊದಲ ಪ್ರತಿಯನ್ನು ಭಾರತದ ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು ಅವರಿಗೆ ನೀಡಿದರು.

ಸಮಾರಂಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಅವರು ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ , ನಿಧನರಾದ 12 ವರ್ಷಗಳ ಬಳಿಕವೂ ಮಾಜಿ ಪ್ರಧಾನ ಮಂತ್ರಿ ಚಂದ್ರಶೇಖರ ಜೀ ಅವರ ಚಿಂತನೆಗಳು ನಮಗೆ ಮಾರ್ಗದರ್ಶನ ನೀಡುತ್ತಿರುವುದು ಮತ್ತು ಇನ್ನೂ ಸದಾ ರೋಮಾಂಚಕಾರಿ ಆಗಿರುವುದು ಗಮನೀಯ ಸಂಗತಿ ಎಂದರು.

ಪುಸ್ತಕ ಬರೆದಿರುವುದಕ್ಕೆ ಶ್ರೀ ಹರಿವಂಶ ಅವರನ್ನು ಅಭಿನಂದಿಸಿದ ಪ್ರಧಾನ ಮಂತ್ರಿ ಅವರು ಶ್ರೀ ಚಂದ್ರಶೇಖರ ಜೀ ಅವರೊಂದಿಗಿನ ತಮ್ಮ ಒಡನಾಟವನ್ನು , ನೆನಪುಗಳನ್ನು ಮತ್ತು ಮಾತುಕತೆಗಳನ್ನು ಹಂಚಿಕೊಂಡರು.

1977 ರಲ್ಲಿ ತಾವು ಮೊದಲ ಬಾರಿಗೆ ಶ್ರೀ ಚಂದ್ರಶೇಖರ ಜೀ ಅವರನ್ನು ಭೇಟಿಯಾಗಿದ್ದನ್ನು ಅವರು ಸ್ಮರಿಸಿಕೊಂಡರು. ಉಪರಾಷ್ಟ್ರಪತಿ ಬೈರಾನ್ ಸಿಂಗ್ ಶೇಖಾವತ್ ಜೀ ಅವರೊಂದಿಗೆ ಪ್ರಯಾಣಿಸುತ್ತಿದ್ದಾಗ ತಾವು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಶ್ರೀ ಚಂದ್ರಶೇಖರ ಜೀ ಅವರನ್ನು ಭೇಟಿಯಾಗಿದ್ದಾಗಿ ಅವರು ಹೇಳಿದರು. ಈ ಇಬ್ಬರು ನಾಯಕರೂ ತಮ್ಮ ಪ್ರತ್ಯೇಕ ರಾಜಕೀಯ ಸಿದ್ದಾಂತಗಳ ಹೊರತಾಗಿಯೂ ಅತ್ಯಂತ ನಿಕಟ ಸಂಬಂಧ ಹೊಂದಿದ್ದರು ಎಂದರು.

ಶ್ರೀ ಚಂದ್ರಶೇಖರಜೀ ಅವರು ಶ್ರೀ ಅಟಲ್ ಬಿಹಾರಿ ವಾಜಪೇಯಿ ಜೀ ಅವರನ್ನು ಗುರೂಜಿ ಎಂದು ಕರೆಯುತ್ತಿದ್ದುದನ್ನು ಪ್ರಧಾನ ಮಂತ್ರಿ ಅವರು ಸ್ಮರಿಸಿಕೊಂಡರು. ಚಂದ್ರಶೇಖರ ಜೀ ಅವರು ಉತ್ತಮ ಸಂಸ್ಕೃತಿ ಮತ್ತು ಸಿದ್ದಾಂತಗಳನ್ನು ಹೊಂದಿದ್ದರು, ಅವರು ತಮ್ಮ ಕಾಲದ ಪ್ರಮುಖ ರಾಜಕೀಯ ಪಕ್ಷವನ್ನು ಅದರ ಕೆಲವು ಅಂಶಗಳಿಗಾಗಿ ಎದುರು ಹಾಕಿಕೊಳ್ಳಲು ಹಿಂಜರಿಯಲಿಲ್ಲ ಎಂದೂ ಪ್ರಧಾನ ಮಂತ್ರಿ ಹೇಳಿದರು.

ಮೋಹನ್ ಧಾರಿಯಾ ಜೀ ಮತ್ತು ಜಾರ್ಜ್ ಫೆರ್ನಾಂಡಿಸ್ ಜೀ ಅವರಂತಹ ರಾಜಕೀಯ ನಾಯಕರ ಹೆಸರುಗಳನ್ನು ಪ್ರಧಾನ ಮಂತ್ರಿ ಅವರು ಪ್ರಸ್ತಾಪಿಸಿದರು, ಇವರಿಬ್ಬರೂ ಚಂದ್ರಶೇಖರಜೀ ಅವರ ಬಗ್ಗೆ ಭಾರೀ ಗೌರವಾದರಗಳೊಂದಿಗೆ ಮಾತನಾಡುತ್ತಿದ್ದರು ಎಂಬುದಾಗಿಯೂ ಅವರು ಹೇಳಿದರು.

ಚಂದ್ರಶೇಖರ ಜೀ ಅವರೊಂದಿಗಿನ ತಮ್ಮ ಕೊನೆಯ ಭೇಟಿಯನ್ನು ನೆನಪಿಸಿಕೊಂಡ ಶ್ರೀ ನರೇಂದ್ರ ಮೋದಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಪ್ರಧಾನ ಮಂತ್ರಿ ಅವರು ತಮಗೆ ದೂರವಾಣಿ ಕರೆ ಮಾಡಿ ದಿಲ್ಲಿಗೆ ಬಂದಾಗ ತಮ್ಮನ್ನು ಭೇಟಿ ಮಾಡುವಂತೆ ನನಗೆ ಆಹ್ವಾನ ನೀಡಿದ್ದರು. ತಮ್ಮ ಜೊತೆಗಿನ ಮಾತುಕತೆಯಲ್ಲಿ ಅವರು ಗುಜರಾತಿನ ಅಭಿವೃದ್ದಿಯ ಬಗ್ಗೆ ವಿಚಾರಿಸಿದ್ದರು ಮತ್ತು ಹಲವು ರಾಷ್ಟ್ರೀಯ ವಿಷಯಗಳ ಬಗ್ಗೆ ತಮ್ಮ ಧೋರಣೆಯನ್ನು ಹಂಚಿಕೊಂಡಿದ್ದರು ಎಂದೂ ಹೇಳಿದರು.

ಜನತೆಗೆ ಅವರ ಬದ್ದತೆ, ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಸಂಬಂಧಿಸಿ ಅವರು ಹೊಂದಿದ್ದ ಅರ್ಪಣಾ ಭಾವ, ಮತ್ತು ಚಿಂತನೆಯಲ್ಲಿ ಹೊಂದಿದ್ದ ನಿಖರತೆಯನ್ನು ಪ್ರಧಾನ ಮಂತ್ರಿ ಅವರು ಶ್ಲ್ಯಾಘಿಸಿದರು.

ರೈತರಿಗಾಗಿ , ಬಡವರಿಗಾಗಿ, ಮತ್ತು ಅಂಚಿನಲ್ಲಿರುವ ವರ್ಗದವರ ಪರವಾಗಿ ಶ್ರೀ ಚಂದ್ರಶೇಖರ ಜೀ ಕೈಗೊಂಡ ಚಾರಿತ್ರಿಕ ಪಾದಯಾತ್ರೆಯನ್ನು ಪ್ರಧಾನ ಮಂತ್ರಿ ಅವರು ನೆನಪಿಸಿಕೊಂಡರು. ಅವರಿಗೆ ಅರ್ಹವಾದ ಗೌರವವನ್ನು ನೀಡಲು ಆ ಕಾಲದಲ್ಲಿ ನಾವು ವಿಫಲರಾಗಿರುವುದು ಅತ್ಯಂತ ದುರದೃಷ್ಟಕರ ಎಂದೂ ಪ್ರಧಾನ ಮಂತ್ರಿ ಹೇಳಿದರು.

ಡಾ. ಅಂಬೇಡ್ಕರ್ ಮತ್ತು ಸರ್ದಾರ್ ಪಟೇಲ್ ಸಹಿತ ಕೆಲವು ದೊಡ್ಡ ಭಾರತೀಯ ನಾಯಕರ ಬಗ್ಗೆ ವಿರೋಧ ಭಾವನೆಯನ್ನು ಮೂಡಿಸುವಂತಹ ಜನರ ದೊಡ್ಡ ತಂಡವೇ ಆಗ ಇತ್ತು ಎಂಬುದನ್ನು ಪ್ರಧಾನ ಮಂತ್ರಿ ಅವರು ಉಲ್ಲೇಖಿಸಿದರು. ದಿಲ್ಲಿಯಲ್ಲಿ ಎಲ್ಲಾ ಮಾಜಿ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯವನ್ನು ಸ್ಥಾಪಿಸುವ ಬಗ್ಗೆ ಅವರು ಪ್ರಸ್ತಾಪಿಸಿದರು. ಈ ಪ್ರಧಾನ ಮಂತ್ರಿಗಳ ಬದುಕು ಮತ್ತು ಕೆಲಸದ ಸಂಗತಿಗಳನ್ನು ಹಂಚಿಕೊಳ್ಳುವಂತೆ ಮಾಜಿ ಪ್ರಧಾನ ಮಂತ್ರಿಗಳ ಕುಟುಂಬದವರಿಗೆ ಅವರು ಮನವಿ ಮಾಡಿದರು. ದೇಶಕ್ಕೀಗ ರಾಜಕೀಯ ಅಸ್ಪೃಶ್ಯತೆಯನ್ನು ಮೀರಿದ ಹೊಸ ರಾಜಕೀಯ ಸಂಸ್ಕೃತಿ ಬೇಕಾಗಿದೆ ಎಂದೂ ಅವರು ಅಭಿಪ್ರಾಯಪಟ್ಟರು.

ಲೋಕ ಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ,ರಾಜ್ಯ ಸಭಾ ಉಪ ಸಭಾಪತಿ ಶ್ರೀ ಹರಿವಂಶ, ರಾಜ್ಯ ಸಭೆಯಲ್ಲಿ ವಿಪಕ್ಷ ನಾಯಕ ಶ್ರೀ ಗುಲಾಂ ನಬಿ ಆಜಾದ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಮತ್ತು ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.