Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡಿದ 2022 ತಂಡದ ಐಎಫ್‌ಎಸ್ ಪ್ರಶಿಕ್ಷಣಾರ್ಥಿ ಅಧಿಕಾರಿಗಳು

ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡಿದ 2022 ತಂಡದ ಐಎಫ್‌ಎಸ್ ಪ್ರಶಿಕ್ಷಣಾರ್ಥಿ ಅಧಿಕಾರಿಗಳು


ಭಾರತೀಯ ವಿದೇಶಾಂಗ ಸೇವೆ(ಐಎಫ್ಎಸ್)ಯ 2022ರ ತಂಡದ ಪ್ರಶಿಕ್ಷಣಾರ್ಥಿ ಅಧಿಕಾರಿಗಳು ಇಂದು ಮುಂಜಾನೆ ಲೋಕ ಕಲ್ಯಾಣ್ ಮಾರ್ಗ್‌ನಲ್ಲಿರುವ 7ನೇ ಸಂಖ್ಯೆಯ ನಿವಾಸದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಪ್ರಧಾನ ಮಂತ್ರಿ ಅವರು ಪ್ರಶಿಕ್ಷಣಾರ್ಥಿ ಅಧಿಕಾರಿಗಳೊಂದಿಗೆ ವ್ಯಾಪಕ ಸಂವಾದದಲ್ಲಿ ತೊಡಗಿದರು. ಸರ್ಕಾರಿ ಸೇವೆಗೆ ಸೇರಿದ ನಂತರ ಅವರ ಈವರೆಗಿನ ಅನುಭವವನ್ನು ವಿಚಾರಿಸಿದರು. ಪ್ರಶಿಕ್ಷಣಾರ್ಥಿ ಅಧಿಕಾರಿ ಗಳು ತಮ್ಮ ತರಬೇತಿಯ ಅವಧಿಯಲ್ಲಿ ಗ್ರಾಮ ಭೇಟಿ, ಭಾರತ ದರ್ಶನ ಮತ್ತು ಸಶಸ್ತ್ರ ಪಡೆಗಳ ಬಾಂಧವ್ಯ ಸೇರಿದಂತೆ ತಮ್ಮ ಸಮಗ್ರ ಕಲಿಕೆಯನ್ನು ಹಂಚಿಕೊಂಡರು. ಜಲಜೀವನ್ ಮಿಷನ್ ಮತ್ತು ಪಿಎಂ ಆವಾಸ್ ಯೋಜನಾ ಮುಂತಾದ ಸರ್ಕಾರದ ಅನೇಕ ಕಲ್ಯಾಣ ಯೋಜನೆಗಳ ಪರಿವರ್ತನೀಯ ಪ್ರಭಾವದ ಬಗ್ಗೆ ಅವರು ಪ್ರಧಾನ ಮಂತ್ರಿಗೆ ತಿಳಿಸಿದರು.

ಜನಕಲ್ಯಾಣ ಯೋಜನೆಗಳಲ್ಲಿ ಪಾರದರ್ಶಕತೆ ಮತ್ತು ಸಂತೃಪ್ತಿ ಸಾಧಿಸುವತ್ತ ಸರ್ಕಾರದ ಗಮನ ಮತ್ತು ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬ ನಿರ್ಗತಿಕ ವ್ಯಕ್ತಿಯನ್ನು ತಲುಪುವಲ್ಲಿ ಅದು ಹೇಗೆ ಫಲಿತಾಂಶ ನೀಡುತ್ತಿವೆ ಎಂಬುದರ ಕುರಿತು ಪ್ರಧಾನ ಮಂತ್ರಿ ಮಾತನಾಡಿದರು. ಈ ತಿಳುವಳಿಕೆಯು ಜಾಗತಿಕ ದಕ್ಷಿಣದ ದೇಶಗಳಿಗೆ ಅವರ ಅಭಿವೃದ್ಧಿಯ ಪಥದಲ್ಲಿ ಸಹಾಯ ಮಾಡಲು ಸಹಾಯಕವಾಗಿರುವುದರಿಂದ ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮದ ಅನುಷ್ಠಾನ ಮತ್ತು ಯಶಸ್ಸನ್ನು ಅಧ್ಯಯನ ಮಾಡುವಂತೆ ಅವರು ಪ್ರಶಿಕ್ಷಣಾರ್ಥಿ ಅಧಿಕಾರಿಗಳನ್ನು ಉತ್ತೇಜಿಸಿದರು.

ಪ್ರಧಾನ ಮಂತ್ರಿ ಅವರು ಭಾರತದ ಜಿ-20 ಅಧ್ಯಕ್ಷತೆ ಬಗ್ಗೆ ಚರ್ಚಿಸಿದರು. ಜಿ-20 ಸಭೆಗಳಲ್ಲಿ ಭಾಗವಹಿಸಿದ ಅನುಭವದ ಹೇಗಿತ್ತು ಎಂದು ಅಧಿಕಾರಿಗಳನ್ನು ಕೇಳಿದರು. ಪರಿಸರ ಸಮಸ್ಯೆಗಳ ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿ, ಮಿಷನ್ ಲೈಫ್ (ಪರಿಸರಕ್ಕಾಗಿ ಜೀವನಶೈಲಿ) ಕುರಿತು ವಿವರಿಸಿದರು. ಪ್ರತಿಯೊಬ್ಬರೂ ಜೀವನಶೈಲಿಯ ಬದಲಾವಣೆಯಿಂದ ಹವಾಮಾನ ಬದಲಾವಣೆ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು ಎಂದು ಹೇಳಿದರು.

****