ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ, ಕೋವಿಡ್–19 ಸಾಂಕ್ರಾಮಿಕ ಸೋಂಕಿನ ಪರಿಸ್ಥಿತಿಯನ್ನು ವಿಶೇಷವಾಗಿ ಓಮಿಕ್ರಾನ್ ಅಲೆಯ ಪರಿಣಾಮಗಳು ಮತ್ತು ದೇಶದಲ್ಲಿ ಲಸಿಕಾ ಅಭಿಯಾನ ಸ್ಥಿತಿಗತಿ ಪರಿಶೀಲಿಸಿದರು.
ಭಾರತದಲ್ಲಿ ಕೋವಿಡ್-19ರ ಸ್ಥಿತಿಗತಿ ಮತ್ತು ಜಾಗತಿಕ ಸನ್ನಿವೇಶ ಕುರಿತು ಸಭೆಯಲ್ಲಿ ಪ್ರಧಾನಿ ಅವರಿಗೆ ವಿವರವಾದ ಪ್ರಸ್ತುತಿ ನೀಡಲಾಗಿದೆ. ಲಸಿಕೆ ಅಭಿಯಾನದ ಕಡೆಗೆ ಭಾರತದ ನಿರಂತರ ಪ್ರಯತ್ನಗಳು ಮತ್ತು ಇತ್ತೀಚಿನ ಸೋಂಕು ಉಲ್ಬಣ ಸಮಯದಲ್ಲಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಇಳಿಮುಖವಾಗಲು, ಸೋಂಕಿನ ತೀವ್ರತೆ ಕಡಿಮೆಯಾಗಲು ಮತ್ತು ಮರಣ ಪ್ರಮಾಣ ತಗ್ಗಲು ಲಸಿಕೆ ಪರಿಣಾಮಕಾರಿತ್ವದ ವಿಶ್ಲೇಷಣೆಯನ್ನು ಪ್ರಧಾನಿ ಅವರಿಗೆ ವಿವರಿಸಲಾಯಿತು. ಕೇಂದ್ರ ಸರ್ಕಾರದ ನೇತೃತ್ವದಲ್ಲಿ ನಡೆದ ಸಹಭಾಗಿತ್ವದ ಪ್ರಯತ್ನಗಳ ಫಲವಾಗಿ ಸೋಂಕಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗಿದೆ ಎಂಬ ಪರಾಮರ್ಶೆ ಸಭೆಯಲ್ಲಿ ಹೂರಮೂಡಿತು. ವಿಶ್ವ ಆರೋಗ್ಯ ಸಂಘಟನೆ, ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ಯುನೈಟೆಡ್ ನೇಷನ್ಸ್, ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಮತ್ತು ಹಾರ್ವರ್ಡ್ ನಿಯಂತ್ರಣ ಮತ್ತು ಲಸಿಕಾ ಅಭಿಯಾನಗವನ್ನು ಶ್ಲಾಘಿಸಿವೆ ಎಂಬ ಅಂಶವನ್ನು ಸಭೆಯಲ್ಲಿ ಪ್ರಧಾನಿ ಅವರ ಗಮನಕ್ಕೆ ತರಲಾಯಿತು.
ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅವಿರತ ಪ್ರಯತ್ನಗಳನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು. ಕೋವಿಡ್ ಸಂಬಂಧಿತ ಶಿಷ್ಟಾಚಾರಗಳನ್ನು ಅನುಸರಿಸುವ ಮಹತ್ವ, ಸಮುದಾಯದ ನಿರಂತರ ಬೆಂಬಲ ಮತ್ತು ಕೋವಿಡ್ ಸೂಕ್ತ ನಡವಳಿಕೆಗಳ ಅನುಸರಣೆ ಮತ್ತು ಲಸಿಕೆ ಪಡೆಯಲು ಸಾರ್ವಜನಿಕರ ಸಕ್ರಿಯ ವ್ಯಕ್ತಿಗಳ ಭಾಗವಹಿಸುವಿಕೆಯ ಮಹತ್ವಕ್ಕೆ ಪ್ರಧಾನ ಮಂತ್ರಿ ಅವರು ಒತ್ತು ನೀಡಿದರು.
ಸಭೆಯಲ್ಲಿ ಗೃಹ ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರು ಮತ್ತು ನೀತಿಯ ಆಯೋಗದ ಆರೋಗ್ಯ ವಿಭಾಗದ ಸದಸ್ಯರು ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
***
Chaired a meeting to review the COVID-19 situation and vaccination drive across the nation. We are proud of our doctors, nurses and healthcare workers who have ensured stellar vaccination, which has helped in curtailing the spread of the infection. https://t.co/f5MNMx6dpV
— Narendra Modi (@narendramodi) March 9, 2022