ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 38 ನೇ ಪ್ರಗತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ʼಪ್ರಗತಿʼಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನೊಳಗೊಂಡ ಸಕ್ರಿಯ ಆಡಳಿತ ಮತ್ತು ಸಕಾಲಿಕ ಅನುಷ್ಠಾನಕ್ಕಾಗಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಆಧಾರಿತ ಬಹು ಮಾದರಿ ವೇದಿಕೆಯಾಗಿದೆ.
ಸಭೆಯಲ್ಲಿ, ಎಂಟು ಯೋಜನೆಗಳನ್ನು ಪರಿಶೀಲಿಸಲಾಯಿತು . ಇವುಗಳಲ್ಲಿ ನಾಲ್ಕು ಯೋಜನೆಗಳು ರೈಲ್ವೇ ಸಚಿವಾಲಯದಿಂದ, ಎರಡು ಇಂಧನ ಸಚಿವಾಲಯದಿಂದ ಹಾಗು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದಿಂದ ತಲಾ ಒಂದು ಯೋಜನೆಗಳು ಇದ್ದವು. ಸುಮಾರು 50,000 ಕೋಟಿ ರೂಪಾಯಿಗಳ ಒಟ್ಟು ವೆಚ್ಚವನ್ನು ಹೊಂದಿರುವ ಈ ಯೋಜನೆಗಳು ಒಡಿಶಾ, ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಿಗೆ ಸಂಬಂಧಿಸಿವೆ.
ಹಿಂದಿನ 37 ಪ್ರಗತಿ ಸಭೆಗಳಲ್ಲಿ, ಒಟ್ಟು ರೂ. 14.39 ಲಕ್ಷ ಕೋಟಿ ವೆಚ್ಚದ 297 ಯೋಜನೆಗಳನ್ನು ಪರಿಶೀಲಿಸಲಾಗಿತ್ತು.
***
Chaired the 38th PRAGATI meeting today, in which eight important projects relating to the Ministries of Railways, Power, Road Transport & Highways and Civil Aviation were reviewed. These projects span across 7 states and are worth over Rs. 50,000 crore.
— Narendra Modi (@narendramodi) September 29, 2021