Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನ ಕಾರ್ಯದರ್ಶಿ ನ್ರಿಪೇಂದ್ರ ಮಿಶ್ರಾಗೆ ಪ್ರಧಾನಿ ಅವರಿಂದ ಬೀಳ್ಕೊಡುಗೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 7 ಲೋಕಕಲ್ಯಾಣ ಮಾರ್ಗ್ ನಲ್ಲಿಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀ ನ್ರಿಪೇಂದ್ರ ಮಿಶ್ರಾ ಅವರಿಗೆ ಬೀಳ್ಕೊಡುಗೆ ನೀಡಿದರು. ಈ ಕಾರ್ಯಕ್ರಮದಲ್ಲಿ ಹಲವು ಕೇಂದ್ರ ಸಚಿವರು ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ಮಿಶ್ರಾ ಅವರನ್ನು ಅಮೂಲ್ಯ ಸಂಪತ್ತು ಎಂದು ಬಣ್ಣಿಸಿದ ಪ್ರಧಾನಮಂತ್ರಿ ಅವರು, ಕಳೆದ ಐದು ವರ್ಷ ಅವರೊಂದಿಗಿನ ಪಯಣವನ್ನು ನೆನಪು ಮಾಡಿಕೊಂಡರು. ಪ್ರಧಾನ ಕಾರ್ಯದರ್ಶಿ ಅವರನ್ನು ಅವರ ಕಾರ್ಯವೈಖರಿ, ಕೆಲಸದ ಬಗ್ಗೆ ಇದ್ದ ಬದ್ಧತೆ ಮತ್ತು ನಾಗರಿಕ ಸಿಬ್ಬಂದಿಯಾಗಿ ಅವರ ಅನುಕರಣೀಯ ವೃತ್ತಿಯ ಬಗ್ಗೆ ಪ್ರಧಾನಿ ಮೆಚ್ಚುಗೆ ಸೂಚಿಸಿದರು. ಆಡಳಿತದಲ್ಲಿ ಶ್ರೀ ಮಿಶ್ರಾ ಅವರು ತಮ್ಮ ಅಗಾಧ ಅನುಭವವನ್ನು ಪ್ರದರ್ಶಿಸಿದ ಹಲವು ಘಟನೆಗಳನ್ನು ಪ್ರಧಾನಿ ಅವರು ವಿವರಿಸಿದರು.

ಶ್ರೀ ಮಿಶ್ರಾ ಅವರು ಸಮರ್ಥ ಮತ್ತು ಅನುಭವಿ ಅಧಿಕಾರಿ ಅವರು ಬಿಕ್ಕಟ್ಟಿನ ಸಂದರ್ಭಗಳಲ್ಲಿ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು ಎಂದು ಪ್ರಧಾನಿ ಹೇಳಿದರು. ಅವರ ಮುಂದಿನ ಭವಿಷ್ಯಕ್ಕೆ ಶುಭವಾಗಲಿ ಎಂದು ಹಾರೈಸಿದ ಪ್ರಧಾನಿ, ಭಾರತದಲ್ಲಿ ಆಡಳಿತಕ್ಕೆ ಅಪಾರ ಕೊಡುಗೆ ನೀಡಿದ್ದಕ್ಕಾಗಿ ಪ್ರಧಾನ ಕಾರ್ಯದರ್ಶಿಗೆ ಧನ್ಯವಾದಗಳನ್ನು ಹೇಳಿದರು.

ಪ್ರಧಾನ ಕಾರ್ಯದರ್ಶಿಗಳು, ನವಭಾರತ ನಿರ್ಮಾಣ ಕನಸು ನನಸು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲು ತಮಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಪ್ರಧಾನಮಂತ್ರಿಗಳಿಗೆ ಕೃತಘ್ಞತೆಗಳನ್ನು ತಿಳಿಸಿದರು. ನಿರ್ದಿಷ್ಟ ಗುರಿ ಇರುವ, ತಂತ್ರಜ್ಞಾನ ಸ್ನೇಹಿ ಮತ್ತು ಮಾನವೀಯತೆ ದೂರದೃಷ್ಟಿ ಹೊಂದಿರುವ ಪ್ರಧಾನಮಂತ್ರಿಗಳನ್ನು ಅಭಿನಂದಿಸಿದ ಅವರು, ನವ ಭಾರತ ನಿರ್ಮಾಣ ಗುರಿ ಸಾಧನೆಗೆ ಇಡೀ ಸರ್ಕಾರ ವ್ಯವಸ್ಥೆ ದುಡಿಯಬೇಕು ಎಂದು ಆಗ್ರಹಿಸಿದರು.