ನನ್ನ ಪ್ರಿಯ ದೇಶಬಾಂಧವರೆ, ಮನದ ಮಾತಿಗೆ ನಿಮಗೆಲ್ಲ ಸ್ವಾಗತ. ಇಂದು ಮನದ ಮಾತಿನ ಆರಂಭ ಯುವ ದೇಶದ, ಯುವಕರ, ಉತ್ಸಾಹ, ದೇಶಭಕ್ತಿ, ಆ ಸೇವೆಯ ಬಣ್ಣಗಳಲ್ಲಿ ಮಿಂದೆದ್ದ ಹದಿ ಹರೆಯದವರು, ನಿಮಗೆಲ್ಲ ಗೊತ್ತಿದೆಯಲ್ಲವೆ. ಪ್ರತಿ ವರ್ಷ ನವೆಂಬರ್ ತಿಂಗಳ ನಾಲ್ಕನೇ ರವಿವಾರವನ್ನು ಎನ್‍ಸಿಸಿ ದಿನವೆಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ನಮ್ಮ ಯುವ ಜನಾಂಗಕ್ಕೆ ಸ್ನೇಹಿತರ ದಿನ ಚೆನ್ನಾಗಿ ನೆನಪಿರುತ್ತದೆ. ಆದರೆ ಬಹಳಷ್ಟು ಜನರಿದ್ದಾರೆ ಅವರಿಗೆ ಎನ್‍ಸಿಸಿ ದಿನವೂ ಅಷ್ಟೇ ಚೆನ್ನಾಗಿ ನೆನಪಿರುತ್ತದೆ. ಹಾಗಾದರೆ ಬನ್ನಿ ಇಂದು ಎನ್‍ಸಿಸಿ ಬಗ್ಗೆ ಮಾತಾಡೋಣ. ನನಗೂ ಕೆಲ ನೆನಪುಗಳನ್ನು ಹಸಿರಾಗಿಸಿಕೊಳ್ಳುವ ಅವಕಾಶ ಸಿಕ್ಕಂತಾಗುತ್ತದೆ. ಎಲ್ಲಕ್ಕಿಂತ ಮೊದಲು ಹಿಂದಿನ ಮತ್ತು ಇಂದಿನ ಎಲ್ಲ ಎನ್ ಸಿಸಿ ಕೆಡೆಟ್ ಗಳಿಗೆ ಎನ್ ಸಿಸಿ ದಿನದ ಹಾರ್ದಿಕ ಶುಭಾಷಯಗಳನ್ನು ಕೋರುತ್ತೇನೆ. ಏಕೆಂದರೆ ನಾನೂ ನಿಮ್ಮಂತೆ ಕೆಡೆಟ್ ಆಗಿದ್ದೆ ಮತ್ತು ಇಂದಿಗೂ ಮನಃ ಪೂರ್ತಿಯಾಗಿ ನನ್ನನ್ನು ನಾನು ಕೆಡೆಟ್ ಎಂದು ಭಾವಿಸುತ್ತೇನೆ. ಎನ್‍ಸಿಸಿ ಎಂದರೆ ನ್ಯಾಶನಲ್ ಕೆಡೆಟ್ ಕೋರ್ ಎಂಬುದು ನಮಗೆಲ್ಲರಿಗೂ ತಿಳಿದಿದೆ. ವಿಶ್ವದ ಅತಿ ದೊಡ್ಡ ಸಮವಸ್ತ್ರಧಾರಿ ಯುವ ಸಂಘಟನೆ ಎಂದರೆ ಅದು ಭಾರತದ ಎನ್‍ಸಿಸಿ. ಇದೊಂದು ಮೂರು ಸೇವಾ ಸಂಸ್ಥೆಗಳ ಒಕ್ಕೂಟವಾಗಿದೆ. ಇದರಲ್ಲಿ ಸೇನೆ, ವಾಯುದಳ, ನೌಕಾಬಲ ಮೂರು ಸೇರ್ಪಡೆಗೊಂಡಿವೆ. ನಾಯಕತ್ವ, ದೇಶಭಕ್ತಿ, ನಿರಪೇಕ್ಷ ಸ್ವಯಂ ಸೇವೆ, ಶಿಸ್ತು, ಕಠಿಣ ಪರಿಶ್ರಮ ಇವೆಲ್ಲವನ್ನೂ ನಿಮ್ಮ ಸ್ವಭಾವದಲ್ಲಿ ಮೇಳೈಸಿಕೊಳ್ಳಿ, ನಮ್ಮ ಅಭ್ಯಾಸಗಳನ್ನು ರೂಪಿಸಿಕೊಳ್ಳುವ ಒಂದು ರೋಮಾಂಚಕಾರಿ ಯಾತ್ರೆ ಎಂದರೆ ಅದು ಎನ್‍ಸಿಸಿ. ಈ ಯಾತ್ರೆಯ ಕುರಿತು ಇನ್ನಷ್ಟು ಮಾತನಾಡಲು ಇಂದು ಫೋನ್ ಕಾಲ್ ಮೂಲಕ ಎನ್‍ಸಿಸಿ ಯಲ್ಲಿ ತಮ್ಮದೇ ಸ್ಥಾನವನ್ನು ಸೃಷ್ಟಿಸಿಕೊಂಡಂತಹ ಕೆಲ ಯುವಕರಿದ್ದಾರೆ. ಬನ್ನಿ ಅವರೊಂದಿಗೆ ಮಾತನಾಡೋಣ.
ಪ್ರಧಾನ ಮಂತ್ರಿ : ಸ್ನೇಹಿತರೇ ನೀವೆಲ್ಲ ಹೇಗಿದ್ದೀರಿ
ತರನ್ನುಮ್ ಖಾನ್ : ಜೈ ಹಿಂದ್ ಪ್ರಧಾನ ಮಂತ್ರಿಯವರೇ
ಪ್ರಧಾನ ಮಂತ್ರಿ : ಜೈ ಹಿಂದ್
ತರನ್ನುಮ್ ಖಾನ್ : ಸರ್ ನನ್ನ ಹೆಸರು ಜ್ಯೂನಿಯರ್ ಅಂಡರ್ ಆಫೀಸರ್ ತರನ್ನುಮ್ ಖಾನ್
ಪ್ರಧಾನ ಮಂತ್ರಿ : ತರನ್ನುಮ್ ನೀವು ಯಾವ ಊರಿನವರು
ತರನ್ನುಮ್ ಖಾನ್ : ನಾನು ದಿಲ್ಲಿ ನಿವಾಸಿ ಸರ್
ಪ್ರಧಾನ ಮಂತ್ರಿ : ಹೌದಾ, ಎನ್‍ಸಿಸಿಯಲ್ಲಿ ಎಷ್ಟು ವರ್ಷ ಇದ್ದಿರಿ. ನಿಮ್ಮ ಅನುಭವಗಳು ಎಂಥವು?
ತರನ್ನುಮ್ ಖಾನ್ : ಸರ್ ನಾನು ಎನ್ ಸಿಸಿ ಗೆ 2017 ರಲ್ಲಿ ಭರ್ತಿಯಾದೆ ಮತ್ತು ಈ 3 ವರ್ಷಗಳು ನನ್ನ ಜೀವನದ ಅತ್ಯುತ್ತಮ ವರ್ಷಗಳಾಗಿವೆ.
ಪ್ರಧಾನ ಮಂತ್ರಿ : ವಾವ್ ಕೇಳಿ ಬಹಳ ಆನಂದವಾಯಿತು.
ತರನ್ನುಮ್ ಖಾನ್ : ಸರ್ ನನ್ನ ಎಲ್ಲಕ್ಕಿಂತ ಉತ್ತಮ ಅನುಭವ ಏಕ್ ಭಾರತ್ ಶ್ರೇಷ್ಠ ಭಾರತ್ ಕ್ಯಾಂಪ್‍ನಲ್ಲಾಯಿತು ಎಂದು ನಾನು ನಿಮಗೆ ಹೇಳಬಯಸುತ್ತೇನೆ. ಈ ಕ್ಯಾಂಪ್ ಅಗಸ್ಟ್ ನಲ್ಲಿ ನಡೆಯಿತು. ಇದರಲ್ಲಿ ಎನ್ ಈ ಆರ್ ಈಶಾನ್ಯ ಭಾಗದ ಯುವಕರೂ ಬಂದಿದ್ದರು. ಆ ಕೆಡೆಟ್ಸ್‍ಗಳ ಜೊತೆಗೆ 10 ದಿನ ನಾವು ಇದ್ದೆವು. ನಾವು ಅವರ ನಡೆ ನುಡಿ ಕಲಿತೆವು. ಅವರ ಭಾಷೆ ಏನೆಂದು ತಿಳಿದೆವು. ಅವರ ಪರಂಪರೆ ಮತ್ತು ಸಂಸ್ಕøತಿ ಹೀಗೆ ಅವರಿಂದ ಹಲವಾರು ವಿಷಯಗಳನ್ನು ಕಲಿತೆವು. ಉದಾಹರಣೆಗೆ ವೈಝೋಮ್ ಎಂದರೆ ಹಲ್ಲೊ ಹೇಗಿದ್ದೀರಿ ಎಂದರ್ಥ. ಅದೇ ರೀತಿ ನಮ್ಮ ಸಾಂಸ್ಕøತಿಕ ಸಂಜೆ ಆಯೋಜಿಸಲಾಗಿತ್ತು. ಅದರಲ್ಲಿ ಅವರು ನಮಗೆ ತಮ್ಮ ನೃತ್ಯ ಕಲಿಸಿಕೊಟ್ಟರು. ಅವರ ನೃತ್ಯವನ್ನು ತೆಹರಾ ಎಂದು ಕರೆಯುತ್ತಾರೆ. ಅವರು ನನಗೆ ಮೆಖೆಲಾ ತೊಡುವುದನ್ನೂ ಕಲಿಸಿದರು. ಆ ಉಡುಗೆಯಲ್ಲಿ ನಿಜವಾಗಿಯೂ ದಿಲ್ಲಿಯ ಮತ್ತು ನಾಗಾಲ್ಯಾಂಡ್ ನ ಸ್ನೇಹಿತರು ಎಲ್ಲರೂ ಬಹಳ ಸುಂದರವಾಗಿ ಕಾಣಿಸುತ್ತಿದ್ದೆವು. ನಾವು ಅವರನ್ನು ದಿಲ್ಲಿ ದರ್ಶನಕ್ಕೂ ಕರೆದೊಯ್ದಿದ್ದೆವು. ನಾವು ಅವರಿಗೆ ರಾಷ್ಟ್ರೀಯ ಯುದ್ಧ ಸ್ಮಾರಕ ಮತ್ತು ಇಂಡಿಯಾ ಗೇಟ್ ತೋರಿಸಿದೆವು. ಅಲ್ಲಿ ನಾವು ಅವರಿಗೆ ದಿಲ್ಲಿ ಚಾಟ್ಸ್ ಕೂಡಾ ತಿನ್ನಿಸಿದೆವು. ಭೇಲ್ ಪುರಿ ಕೊಡಿಸಿದೆವು ಆದರೆ ಅವರಿಗೆ ಸ್ವಲ್ಪ ಖಾರವೆನಿಸಿತು. ಏಕೆಂದರೆ ಅವರು ನಮಗೆ ಹೇಳಿದಂತೆ ಸಾಮಾನ್ಯವಾಗಿ ಅವರು ಸೂಪ್ ಕುಡಿಯುವುದನ್ನು ಇಷ್ಟಪಡುತ್ತಾರೆ. ಸ್ವಲ್ಪ ಬೇಯಿಸಿದ ತರಕಾರಿ ತಿನ್ನುತ್ತಾರೆ. ಹಾಗಾಗಿ ಅವರ ಊಟ ಅಷ್ಟೊಂದು ಇಷ್ಟವಾಗಲಿಲ್ಲ. ಆದರೆ ಇದೆಲ್ಲದರ ಹೊರತಾಗಿ ನಾವು ಅವರೊಂದಿಗೆ ಸಾಕಷ್ಟು ಫೋಟೊ ತೆಗೆದುಕೊಂಡೆವು, ಸಾಕಷ್ಟು ಅನುಭವಗಳನ್ನು ಹಂಚಿಕೊಂಡೆವು.
ಪ್ರಧಾನ ಮಂತ್ರಿ : ನೀವು ಅವರೊಂದಿಗೆ ಸಂಪರ್ಕದಲ್ಲಿದ್ದೀರಾ?
ತರನ್ನುಮ್ ಖಾನ್ : ಹೌದು ಸರ್, ಇಂದಿಗೂ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ.
ಪ್ರಧಾನ ಮಂತ್ರಿ : ಒಳ್ಳೇದು ಮಾಡಿದ್ದೀರಿ.
ತರನ್ನುಮ್ ಖಾನ್ : ಹೌದು ಸರ್
ಪ್ರಧಾನ ಮಂತ್ರಿ : ಮತ್ತೆ ನಿಮ್ಮೊಂದಿಗೆ ಬೇರೆ ಸ್ನೇಹಿತರು ಯಾರಿದ್ದಾರೆ?
ಶ್ರೀಹರಿ ಜಿ ವಿ : ಜೈ ಹಿಂದ್ ಸರ್
ಪ್ರಧಾನ ಮಂತ್ರಿ : ಜೈ ಹಿಂದ್
ಶ್ರೀಹರಿ ಜಿ ವಿ : ನಾನು ಸೀನಿಯರ್ ಅಂಡರ್ ಆಫೀಸರ್ ಶ್ರೀ ಹರಿ ಜಿ ವಿ ಮಾತನಾಡುತ್ತಿದ್ದೇನೆ. ನಾನು ಕರ್ನಾಟಕದ ಬೆಂಗಳೂರಿನ ನಿವಾಸಿಯಾಗಿದ್ದೇನೆ.
ಪ್ರಧಾನ ಮಂತ್ರಿ : ನೀವು ಎಲ್ಲಿ ಓದುತ್ತಿದ್ದೀರಿ?
ಶ್ರೀಹರಿ ಜಿ ವಿ : ಸರ್ ಬೆಂಗಳೂರಿನ ಕ್ರಿಸ್ತುಜಯಂತಿ ಕಾಲೇಜಿನಲ್ಲಿ
ಪ್ರಧಾನ ಮಂತ್ರಿ : ಹೌದಾ ಬೆಂಗಳೂರಿನಲ್ಲೇ ಇದ್ದೀರಾ?
ಶ್ರೀಹರಿ ಜಿ ವಿ : ಯಸ್ ಸರ್
ಪ್ರಧಾನ ಮಂತ್ರಿ : ಹೇಳಿ
ಶ್ರೀಹರಿ ಜಿ ವಿ : ಸರ್ ನಾನು ನಿನ್ನೆಯಷ್ಟೇ ಯೂತ್ ಎಕ್ಸಚೇಂಜ್ ಪ್ರೊಗ್ರಾಂ ಸಿಂಗಾಪೂರ್‍ನಿಂದ ಮರಳಿದ್ದೇನೆ.
ಪ್ರಧಾನ ಮಂತ್ರಿ : ಅರೆ ವಾವ್!
ಶ್ರೀಹರಿ ಜಿ ವಿ : ಹೌದು ಸರ್
ಪ್ರಧಾನ ಮಂತ್ರಿ : ಹಾಗಾದರೆ ನಿಮಗೆ ಅಲ್ಲಿಗೆ ಹೋಗುವ ಅವಕಾಶ ಅಭಿಸಿತು.
ಶ್ರೀಹರಿ ಜಿ ವಿ : ಹೌದು ಸರ್
ಪ್ರಧಾನ ಮಂತ್ರಿ : ಸಿಂಗಪೂರ್‍ನಲ್ಲಿಯ ಅನುಭವ ಹೇಗಿತ್ತು?
ಶ್ರೀಹರಿ ಜಿ ವಿ : ಅಲ್ಲಿ ಬ್ರಿಟನ್, ಅಮೇರಿಕ, ಸಿಂಗಪೂರ್, ಬ್ರುನೈ, ಹಾಂಗ್‍ಕಾಂಗ್ ಮತ್ತು ನೇಪಾಳ್ ಸೇರಿದಂತೆ ಆರು ದೇಶಗಳು ಬಂದಿದ್ದವು. ಅಲ್ಲಿ ನಮಗೆ ಯುದ್ಧ ತರಬೇತಿ ಮತ್ತು ಅಂತಾರಾಷ್ಟ್ರೀಯ ಸೇನಾ ಅಭ್ಯಾಸಗಳ ವಿನಿಮಯ ಮಾಡಿಕೊಳ್ಳುವ ಅವಕಾಶ ಲಭಿಸಿತು. ಇಲ್ಲಿ ನಮ್ಮ ಪ್ರದರ್ಶನ ಬೇರೆಯೇ ಆಗಿತ್ತು ಸರ್. ಇವುಗಳಲ್ಲಿ ನಮಗೆ ಜಲ ಕ್ರೀಡೆಗಳು ಮತ್ತು ಸಾಹಸ ಚಟುವಟಿಕೆಗಳಲ್ಲಿ ತರಬೇತಿ ನೀಡಲಾಯಿತು ಹಾಗೂ ವಾಟರ್ ಪೋಲೊ ಪಂದ್ಯಾವಳಿಯಲ್ಲಿ ಭಾರತದ ತಂಡ ಗೆಲುವು ಸಾಧಿಸಿತು ಸರ್ ಮತ್ತು ಸಾಂಸ್ಕøತಿಕ ವಿಭಾಗದಲ್ಲಂತೂ ನಾವು ಓವರ್ ಆಲ್ ಫರ್ಫಾರ್ಮರ್ಸ್ ಆಗಿದ್ದೆವು ಸರ್. ನಮ್ಮ ಡ್ರಿಲ್ ಮತ್ತು ವರ್ಡ ಆಫ್ ಕಮಾಂಡ್ ಅವರಿಗೆ ಇಷ್ಟವಾಗಿದ್ದವು ಸರ್.
ಪ್ರಧಾನ ಮಂತ್ರಿ : ನೀವು ಎಷ್ಟು ಜನ ಇದ್ದೀರಿ ಹರಿ?
ಶ್ರೀಹರಿ ಜಿ ವಿ : 20 ಜನರು ಸರ್, ಅದರಲ್ಲಿ 10 ಜನ ಹುಡುಗರು, ಹತ್ತು ಮಂದಿ ಹುಡುಗಿಯರು ಸರ್
ಪ್ರಧಾನ ಮಂತ್ರಿ : ಹೌದು ಭಾರತದ ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದೀರಲ್ಲವೇ?
ಶ್ರೀಹರಿ ಜಿ ವಿ : ಹೌದು ಸರ್
ಪ್ರಧಾನ ಮಂತ್ರಿ : ಬನ್ನಿ ನಿಮ್ಮೆಲ್ಲ ಸ್ನೇಹಿತರು ನಿಮ್ಮೆಲ್ಲ ಅನುಭವಗಳನ್ನು ಕೇಳಲು ಬಹಳ ಕಾತುರರಾಗಿರಬಹುದು ಆದರೆ, ನನಗೆ ತುಂಬಾ ಹಿತವೆನಿಸಿತು. ನಿಮ್ಮೊಂದಿಗೆ ಇನ್ನೂ ಯಾರಿದ್ದಾರೆ?
ವಿನೋಲೆ ಕಿಸೋ : ಜೈ ಹಿಂದ್ ಸರ್
ಪ್ರಧಾನ ಮಂತ್ರಿ : ಜೈ ಹಿಂದ್
ವಿನೋಲೆ ಕಿಸೋ : ನನ್ನ ಹೆಸರು ಸೀನಿಯರ್ ಅಂಡರ್ ಆಫೀಸರ್ ವಿನೋಲೆ ಕಿಸೋ. ನಾನು ಈಶಾನ್ಯ ಭಾಗದ ನಾಗಾಲ್ಯಾಂಡ್ ರಾಜ್ಯದವನಾಗಿದ್ದೇನೆ.
ಪ್ರಧಾನ ಮಂತ್ರಿ : ಹಾಂ ವಿನೋಲೆ. ನಿಮ್ಮ ಅನುಭವಗಳೇನು?
ವಿನೋಲೆ ಕಿಸೋ : ಸರ್. ನಾನು ಜಖಾಮಾದ ಸೆಂಟ್ ಜೋಸೆಫ್ಸ್ ಸ್ವಾಯತ್ತ ಕಾಲೇಜ್‍ನಲ್ಲಿ ಬಿ.ಎ. ಹಿಸ್ಟರಿ ಆನರ್ಸ್ ಓದುತ್ತಿದ್ದೇನೆ. ನಾನು 2017 ರಲ್ಲಿ ಎನ್ ಸಿ ಸಿ ಸೇರಿದೆ ಮತ್ತು ಅದು ನನ್ನ ಜೀವನದ ಬಹು ದೊಡ್ಡ ಮತ್ತು ಅತ್ಯುತ್ತಮ ನಿರ್ಧಾರವಾಗಿತ್ತು ಸರ್.
ಪ್ರಧಾನ ಮಂತ್ರಿ : ಎನ್ ಸಿ ಸಿ ಯಿಂದಾಗಿ ಭಾರತದ ಎಲ್ಲೆಲ್ಲಿ ಹೋಗುವ ಅವಕಾಶ ದೊರೆತಿದೆ?
ವಿನೋಲೆ ಕಿಸೋ : ಸರ್. ನಾನು ಎನ್ ಸಿ ಸಿ ಸೇರಿದೆ ಮತ್ತು ಬಹಳ ಕಲಿತೆ ಹಾಗೂ ನನಗೆ ಬಹಳಷ್ಟು ಅವಕಾಶಗಳೂ ದೊರೆತವು. ನನ್ನದೊಂದು ಅನುಭವವನ್ನು ನಿಮಗೆ ಹೇಳ ಬಯಸುತ್ತೇನೆ. ಈ ವರ್ಷ 2019 ರ ಜೂನ್ ತಿಂಗಳಿನಲ್ಲಿ ಒಂದು ಕ್ಯಾಂಪ್‍ನಲ್ಲಿ ಭಾಗವಹಿಸಿದ್ದೆ. ಅದು (ಕಂಬೈನ್ಡ್ ಆನ್ಯುವೆಲ್ ಟ್ರೈನಿಂಗ್ ಕ್ಯಾಂಪ್) ಸಂಯುಕ್ತ ವಾರ್ಷಿಕ ತರಬೇತಿ ಶಿಬಿರ ಮತ್ತು ಅದನ್ನು ಕೊಹಿಮಾದ ಥಾಜೋಲಿ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ 400 ಕೆಡೆಟ್ಸ್‍ಗಳು ಭಾಗವಹಿಸಿದ್ದರು.
ಪ್ರಧಾನ ಮಂತ್ರಿ : ಹಾಗಾದರೆ ನಾಗಾಲ್ಯಾಂಡ್‍ನ ನಿಮ್ಮ ಎಲ್ಲ ಸ್ನೇಹಿತರು ಭಾರತದಲ್ಲಿ ಎಲ್ಲಿಗೆ ಹೋಗಿದ್ದಿರಿ? ಏನೇನು ನೋಡಿದಿರಿ? ಎಂಬುದನ್ನ ತಿಳಿದುಕೊಳ್ಳಬಯಸುತ್ತಿರಬಹುದು. ಎಲ್ಲ ಅನುಭವಗಳನ್ನು ಅವರೆಲ್ಲರಿಗೂ ಹೇಳುತ್ತೀರಾ?
ವಿನೋಲೆ ಕಿಸೋ : ಹೌದು ಸರ್.
ಪ್ರಧಾನ ಮಂತ್ರಿ : ನಿಮ್ಮೊಂದಿಗೆ ಇನ್ನೂ ಬೇರೆ ಯಾರಿದ್ದಾರೆ?
ಅಖಿಲ್ : ಜೈ ಹಿಂದ್ ಸರ್. ನನ್ನ ಹೆಸರು ಜೂನಿಯರ್ ಅಂಡರ್ ಆಫೀಸರ್ ಅಖಿಲ್
ಪ್ರಧಾನ ಮಂತ್ರಿ : ಹಾಂ ಅಖಿಲ್. ಹೇಳಿ.
ಅಖಿಲ್ : ನಾನು ಹರಿಯಾಣದ ರೊಹ್ಟಕ್ ನಿವಾಸಿಯಾಗಿದ್ದೇನೆ ಸರ್.
ಪ್ರಧಾನ ಮಂತ್ರಿ : ಹಾಂ
ಅಖಿಲ್ : ನಾನು ದೆಹಲಿ ವಿಶ್ವವಿದ್ಯಾಲಯದ ದಯಾಲ್ ಸಿಂಗ್ ಕಾಲೇಜಿನಲ್ಲಿ ಫಿಸಿಕ್ಸ್ ಆನರ್ಸ್ ಓದುತ್ತಿದ್ದೇನೆ
ಪ್ರಧಾನ ಮಂತ್ರಿ : ಹಾಂ ಹಾಂ
ಅಖಿಲ್ : ಸರ್. ಎನ್ ಸಿ ಸಿ ಯಲ್ಲಿ ನನಗೆ ಶಿಸ್ತು ಎಲ್ಲಕ್ಕಿಂತ ಇಷ್ಟವಾದುದು ಸರ್.
ಪ್ರಧಾನ ಮಂತ್ರಿ : ವಾವ್!
ಅಖಿಲ್ : ಇದು ನನ್ನನ್ನು ಜವಾಬ್ದಾರಿಯುತ ನಾಗರಿಕನನ್ನಾಗಿಸಿದೆ ಸರ್. ಎನ್ ಸಿ ಸಿ ಕೆಡೆಟ್ ಡ್ರಿಲ್ ಮತ್ತು ಸಮವಸ್ತ್ರ ನನಗೆ ಬಹಳ ಇಷ್ಟ.
ಪ್ರಧಾನ ಮಂತ್ರಿ : ಎಷ್ಟು ಕ್ಯಾಂಪ್‍ಗಳಲ್ಲಿ ಭಾಗವಹಿಸುವ, ಎಲ್ಲೆಲ್ಲಿ ಹೋಗುವ ಅವಕಾಶ ಲಭಿಸಿತು?
ಅಖಿಲ್ : ಸರ್. ನಾನು 3 ಶಿಬಿರಗಳಲ್ಲಿ ಭಾಗವಹಿಸಿದ್ದೇನೆ. ನಾನು ಇತ್ತೀಚೆಗೆ ಡೆಹರಾಡೂನ್ ನಲ್ಲಿ ಭಾರತೀಯ ಸೇನಾ ಅಕಾಡೆಮಿಯ ಅಟ್ಯಾಚ್‍ಮೆಂಟ್ ಕ್ಯಾಂಪ್‍ನಲ್ಲಿ ಭಾಗವಹಿಸಿದ್ದೆ.
ಪ್ರಧಾನ ಮಂತ್ರಿ : ಎಷ್ಟು ಸಮಯದ್ದಾಗಿತ್ತು?
ಅಖಿಲ್ : ಸರ್. ಅದು 13 ದಿನಗಳ ಶಿಬಿರವಾಗಿತ್ತು.
ಪ್ರಧಾನ ಮಂತ್ರಿ : ಹೌದಾ…
ಅಖಿಲ್ : ಸರ್. ನಾನು ಅಲ್ಲಿ ಭಾರತೀಯ ಸೇನೆಯಲ್ಲಿ ಹೇಗೆ ಅಧಿಕಾರಿಗಳಾಗಬಹುದು ಎಂಬುದನ್ನು ಬಹಳ ಹತ್ತಿರದಿಂದ ಕಂಡೆ ಮತ್ತು ತದನಂತರ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗುವ ನನ್ನ ಸಂಕಲ್ಪ ಮತ್ತಷ್ಟು ದೃಢವಾಯಿತು ಸರ್.
ಪ್ರಧಾನ ಮಂತ್ರಿ : ವಾವ್!
ಅಖಿಲ್ : ಮತ್ತೆ ಸರ್. ಗಣರಾಜ್ಯೋತ್ಸವ ಪಥ ಸಂಚಲನದಲ್ಲೂ ನಾನು ಭಾಗವಹಿಸಿದ್ದೆ ಮತ್ತು ಅದು ನನಗೂ ಹಾಗೂ ನನ್ನ ಕುಟುಂಬದವರಿಗೂ ಬಹಳ ಹೆಮ್ಮೆಯ ವಿಷಯವೆನಿಸಿದೆ.
ಪ್ರಧಾನ ಮಂತ್ರಿ : ಶಭಾಷ್!
ಅಖಿಲ್ : ನನಗಿಂತಲೂ ಹೆಚ್ಚು ನನ್ನ ತಾಯಿಗೆ ಸಂತೋಷವಾಗಿತ್ತು ಸರ್. ನಾವು ಬೆಳ್ಳಗ್ಗೆ 2 ಗಂಟೆಗೆ ಎದ್ದು ರಾಜ್‍ಪಥ್ ನಲ್ಲಿ ಅಭ್ಯಾಸ ಮಾಡಲು ಹೋಗುತ್ತಿದ್ದೆವು. ನಮ್ಮಲ್ಲಿ ಎಷ್ಟು ಹುಮ್ಮಸ್ಸು ಇತ್ತೆಂದರೆ, ಅದನ್ನು ಕಣ್ಣಾರೆ ನೊಡಲೇ ಬೇಕು ಸರ್. ಇತರ ಪಡೆಗಳು ನಮ್ಮನ್ನು ಎಷ್ಟು ಹುರಿದುಂಬಿಸುತ್ತಿದ್ದರು ಎಂದರೆ, ರಾಜ್‍ಪಥ್ ನಲ್ಲಿ, ಪಥ ಸಂಚಲನ ಮಾಡುವಾಗ ನಮಗೆ ಬಹಳ ರೋಮಾಂಚನವಾಗುತ್ತಿತ್ತು.
ಪ್ರಧಾನ ಮಂತ್ರಿ : ಎನ್ ಸಿ ಸಿ ದಿನದಂದು ನೀವು ನಾಲ್ಕೂ ಜನರೊಂದಿಗೆ ಮಾತನಾಡುವ ಅವಕಾಶ ಲಭಿಸಿತು. ನನಗೆ ಇದು ಬಹಳ ಸಂತೋಷದ ವಿಷಯವಾಗಿದೆ. ಏಕೆಂದರೆ, ನಾನೂ ಬಾಲ್ಯದಲ್ಲಿ ನನ್ನ ಗ್ರಾಮದ ಶಾಲೆಯಲ್ಲಿ ಎನ್ ಸಿ ಸಿ ಕೆಡೆಟ್ ಆಗಿದ್ದೆ. ಆದ್ದರಿಂದ, ಈ ಶಿಸ್ತು, ಈ ಸಮವಸ್ತ್ರ, ಅದರಿಂದಾಗಿ ವೃದ್ಧಿಸುವ ಆತ್ಮ ವಿಶ್ವಾಸದ ಮಟ್ಟ, ಇವೆಲ್ಲ ವಿಷಯಗಳೂ ಬಾಲ್ಯದಲ್ಲಿ ನನಗೂ ಎನ್ ಸಿ ಸಿ ಕೆಡೆಟ್ ರೂಪದಲ್ಲಿ ಅನುಭವಿಸುವ ಅವಕಾಶ ದೊರೆತಿತ್ತು.
ವಿನೋಲೆ : ಪ್ರಧಾನ ಮಂತ್ರಿಗಳೇ ನನ್ನದೊಂದು ಪ್ರಶ್ನೆ ಇದೆ.
ಪ್ರಧಾನ ಮಂತ್ರಿ : ಹಾಂ. ಹೇಳಿ. . .
ತರನ್ನುಮ್ : ನೀವೂ ಎನ್ ಸಿ ಸಿ ಯ ಒಂದು ಭಾಗವಾಗಿದ್ದಿರಿ ಎಂದು
ಪ್ರಧಾನ ಮಂತ್ರಿ : ಯಾರು? ವಿನೋಲೆ ಮಾತನಾಡುತ್ತಿದ್ದೀರಾ?
ವಿನೋಲೆ : ಹೌದು ಸರ್.. ಹೌದು ಸರ್ …
ಪ್ರಧಾನ ಮಂತ್ರಿ : ಹಾಂ ವಿನೋಲೆ ಹೇಳಿ. . .
ವಿನೋಲೆ : ನಿಮಗೆ ಎಂದಾದರೂ ಪನಿಶ್ಮೆಂಟ್ ಸಿಕ್ಕಿತ್ತೇ?
ಪ್ರಧಾನ ಮಂತ್ರಿ : (ನಗುತ್ತಾ) ಇದರರ್ಥ ನಿಮಗೆ ಪನಿಶ್ಮೆಂಟ್ ಸಿಗುತ್ತೆ ಎಂದಾಯಿತು
ವಿನೋಲೆ : ಹೌದು ಸರ್.
ಪ್ರಧಾನ ಮಂತ್ರಿ : ಇಲ್ಲ. ನನಗೆ ಹೀಗೆಂದೂ ಆಗಲಿಲ್ಲ. ಏಕೆಂದರೆ, ನಾನು ಬಹಳ, ಒಂದು ರೀತಿಯಲ್ಲಿ ಶಿಸ್ತನ್ನು ಪಾಲಿಸುವವನಾಗಿದ್ದೆ. ಆದರೆ, ಒಂದು ಬಾರಿ ಖಂಡಿತ ತಪ್ಪು ಕಲ್ಪನೆ ಆಗಿತ್ತು. ನಾವು ಶಿಬಿರದಲ್ಲಿದ್ದಾಗ ಒಂದು ಮರದ ಮೇಲೆ ಹತ್ತಿದ್ದೆ. ಆರಂಭದಲ್ಲಿ ಎಲ್ಲರಿಗೂ ನಾನು ಕಾನೂನನ್ನು ಮುರಿದಿದ್ದೇನೆ ಎನ್ನಿಸಿತ್ತು. ನಂತರ ಅಲ್ಲಿ ಒಂದು ಗಾಳಿ ಪಟದ ಸೂತ್ರದಲ್ಲಿ ಪಕ್ಷಿ ಸಿಲುಕಿಕೊಂಡಿರುವುದು ಎಲ್ಲರ ಗಮನಕ್ಕೆ ಬಂತು ಹಾಗಾಗಿ ಅದನ್ನು ರಕ್ಷಿಸಲು ನಾನು ಮರ ಹತ್ತಿದ್ದೆ. ಇರಲಿ ಮೊದಲು ನನ್ನ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಅನ್ನಿಸಿತ್ತು. ಆದರೆ, ನಂತರ ಬಹಳಷ್ಟು ನನ್ನನ್ನು ಪ್ರಶಂಸಿಸಲಾಯಿತು. ಹೀಗೆ ನನಗೆ ಬೇರೆಯದೇ ರೀತಿಯ ಅನುಭವವಾಯಿತು.
ತರನ್ನುಮ್ ಖಾನ್ : ಸರ್. ಇದನ್ನು ಕೇಳಿ ನಮಗೆ ಬಹಳ ಸಂತೋಷವಾಯಿತು.
ಪ್ರಧಾನ ಮಂತ್ರಿ : ಧನ್ಯವಾದಗಳು
ತರನ್ನುಮ್ ಖಾನ್ : ನಾನು ತರನ್ನುಮ್ ಮಾತನಾಡುತ್ತಿದ್ದೇನೆ.
ಪ್ರಧಾನ ಮಂತ್ರಿ : ಹಾಂ. ತರನ್ನುಮ್ ಹೇಳಿ
ತರನ್ನುಮ್ ಖಾನ್ : ನೀವು ಅನುಮತಿ ನೀಡಿದರೆ, ನಿಮಗೆ ಒಂದು ಪ್ರಶ್ನೆ ಕೇಳ ಬಯಸುತ್ತೇನೆ ಸಾರ್
ಪ್ರಧಾನ ಮಂತ್ರಿ : ಹಾಂ ಹಾಂ . . ಹೇಳಿ
ತರನ್ನುಮ್ ಖಾನ್ : ಸರ್. ನೀವು ನಿಮ್ಮ ಸಂದೇಶಗಳಲ್ಲಿ ಭಾರತದ ಪ್ರತಿಯೊಬ್ಬ ನಾಗರಿಕನಿಗೆ 3 ವರ್ಷಗಳಲ್ಲಿ 15 ಸ್ಥಳಗಳಿಗೆ ಭೇಟಿ ನೀಡಲೇಬೇಕು ಎಂದು ಹೇಳಿದ್ದೀರಿ. ನಾವು ಎಲ್ಲಿ ಹೋಗಬೇಕು ಎಂದು ನಮಗೆ ಹೇಳಬಹುದೇ? ಮತ್ತು ನಿಮಗೆ ಯಾವ ಸ್ಥಳಕ್ಕೆ ಹೋದಾಗ ಬಹಳ ಇಷ್ಟವಾದ ಅನುಭವವಾಗಿತ್ತು?
ಪ್ರಧಾನ ಮಂತ್ರಿ : ಹಾಗೆ ನಾನು ಯಾವಾಗಲೂ ಹಿಮಾಲಯವನ್ನು ಬಹಳ ಇಷ್ಟ ಪಡುತ್ತಿರುತ್ತೇನೆ.
ತರನ್ನುಮ್ ಖಾನ್ : ಸರ್ . . .
ಪ್ರಧಾನ ಮಂತ್ರಿ : ಆದರೂ ನಿಮಗೆ ಪ್ರಕೃತಿಯ ಬಗ್ಗೆ ಪ್ರೀತಿಯಿದೆ ಎಂದಾದಲ್ಲಿ ನಾನು ಭಾರತೀಯ ಜನತೆಗೆ ಆಗ್ರಹಿಸುತ್ತೇನೆ.
ತರನ್ನುಮ್ ಖಾನ್ : ಸರ್
ಪ್ರಧಾನ ಮಂತ್ರಿ : ದಟ್ಟ ಕಾಡು, ತೊರೆ ಝರಿಗಳು, ಒಂದು ವಿಭಿನ್ನ ವಾತಾವರಣವನ್ನು ನೋಡಬೇಕು ಎಂದಲ್ಲಿ ಖಂಡಿತಾ ಈಶಾನ್ಯ ಭಾಗಕ್ಕೆ ಭೇಟಿ ನೀಡಿ ಎಂದು ಎಲ್ಲರಿಗೂ ಹೇಳ ಬಯಸುತ್ತೇನೆ.
ತರನ್ನುಮ್ ಖಾನ್ : ಹಾಂ ಸರ್
ಪ್ರಧಾನ ಮಂತ್ರಿ : ಇದನ್ನು ನಾನು ಯಾವಾಗಲೂ ಹೇಳುತ್ತೇನೆ ಮತ್ತು ಇದರಿಂದಾಗಿ ಈಶಾನ್ಯ ಭಾಗದಲ್ಲಿ ಪ್ರವಾಸೋದ್ಯಮವೂ ಬಹಳ ವೃದ್ಧಿಸುವುದು ಆರ್ಥಿಕತೆಗೂ ಸಾಕಷ್ಟು ಲಾಭವಾಗುವುದು ಮತ್ತು ‘ಏಕ್ ಭಾರತ್ – ಶ್ರೇಷ್ಠ್ ಭಾರತ್’ ನ ಕನಸಿಗೂ ಅಲ್ಲಿ ಪುಷ್ಠಿ ದೊರೆಯುವುದು.
ತರನ್ನುಮ್ ಖಾನ್ : ಹೌದು ಸರ್
ಪ್ರಧಾನ ಮಂತ್ರಿ : ಆದರೆ ಭಾರತದಲ್ಲಿ ಪ್ರತಿಯೊಂದು ಸ್ಥಳದಲ್ಲೂ ಬಹಳಷ್ಟು ನೋಡುವಂಥದ್ದು ಇದೆ. ಅಧ್ಯಯನ ಮಾಡುವಂಥದಿದೆ ಮತ್ತು ಒಂದು ರೀತಿಯಲ್ಲಿ ಆತ್ಮವನ್ನು ಪರಿಶುದ್ಧಗೊಳಿಸುವಂತಿದೆ.
ಶ್ರೀಹರಿ ಜಿ ವಿ : ಪ್ರಧಾನ ಮಂತ್ರಿ ಅವರೇ ನಾನು ಶ್ರೀ ಹರಿ ಮಾತನಾಡುತ್ತಿದ್ದೇನೆ
ಪ್ರಧಾನ ಮಂತ್ರಿ : ಹರಿ ಅವರೇ ಹೇಳಿ
ಶ್ರೀಹರಿ ಜಿ ವಿ : ನೀವು ಒಬ್ಬ ರಾಜಕಾರಣಿ ಆಗಿರದೇ ಹೋದಲ್ಲಿ ಏನಾಗುತ್ತಿದ್ದಿರಿ ಎಂದು ನಿಮ್ಮಿಂದ ತಿಳಿಯ ಬಯಸುತ್ತೇನೆ
ಪ್ರಧಾನ ಮಂತ್ರಿ : ಇದು ಬಹಳ ಕಠಿಣವಾದ ಪ್ರಶ್ನೆ. ಏಕೆಂದರೆ, ಪ್ರತಿ ಮಗುವಿನ ಜೀವನದಲ್ಲೂ ಎಷ್ಟೋ ತಿರುವುಗಳು ಬರುತ್ತವೆ. ಕೆಲವೊಮ್ಮೆ ಇದಾಗಬೇಕೆಂದು ಬಯಸುತ್ತಾನೆ, ಕೆಲವೊಮ್ಮೆ ಅದಾಗಬೇಕೆಂದು ಬಯಸುತ್ತಾನೆ. ಆದರೆ, ಒಂದಂತೂ ನಿಜ ನನಗೆ ಎಂದಿಗೂ ರಾಜಕೀಯ ಪ್ರವೇಶಿಸುವ ಮನಸ್ಸಿರಲಿಲ್ಲ, ಎಂದೂ ಆಲೋಚಿಸಿರಲಿಲ್ಲ. ಆದರೆ, ಇಂದು ಇಲ್ಲಿಗೆ ತಲುಪಿದ್ದೇನೆ. ಆದ್ದರಿಂದ ತನು ಮನ ದಿಂದ ದೇಶಕ್ಕೆ ಉಪಯುಕ್ತವಾಗಬಯಸುತ್ತೇನೆ. ಅದಕ್ಕಾಗಿ ಆಲೋಚಿಸುತ್ತಿರುತ್ತೇನೆ. ಹಾಗಾಗಿ ಈಗ ನಾನು ‘ಇಲ್ಲಿರದಿದ್ದರೆ ಎಲ್ಲಿರುತ್ತಿದ್ದೆ’ ಎಂಬ ಬಗ್ಗೆ ಯೋಚಿಸಲಾರೆ. ಈಗಂತೂ ಎಲ್ಲಿದ್ದೇನೆಯೋ ಅಲ್ಲಿಯೇ ಮನಃಪೂರ್ವಕವಾಗಿ ಜೀವಿಸಬೇಕು, ಮನಃಪೂರ್ವಕವಾಗಿ ಒಗ್ಗೂಡಬೇಕು ಮತ್ತು ಹುಮ್ಮಸ್ಸಿನಿಂದ ದೇಶಕ್ಕಾಗಿ ಕೆಲಸ ಮಾಡಬೇಕು. ಹಗಲು ರಾತ್ರಿ ಎಂದೆಣಿಸದೇ ಇದೊಂದೇ ಗುರಿಯೊಂದಿಗೆ ನನ್ನನ್ನು ನಾನು ಸಮರ್ಪಿಸಿದ್ದೇನೆ.
ಅಖಿಲ್ : ಪ್ರಧಾನ ಮಂತ್ರಿಯವರೇ
ಪ್ರಧಾನ ಮಂತ್ರಿ : ಹೇಳಿ
ಅಖಿಲ್ : ನೀವು ದಿನ ಪೂರ್ತಿ ಇಷ್ಟೊಂದು ಬ್ಯುಸಿಯಾಗಿರುತ್ತೀರಾದ್ದರಿಂದ ನಿಮಗೆ ಟಿವಿ ನೋಡಲು, ಚಲನಚಿತ್ರ ನೋಡಲು ಅಥವಾ ಪುಸ್ತಕ ಓದಲು ಸಮಯ ಸಿಗುತ್ತದೆಯೇ?
ಪ್ರಧಾನ ಮಂತ್ರಿ : ನನಗೆ ಪುಸ್ತಕ ಓದುವ ಹವ್ಯಾಸವಂತೂ ಇತ್ತು. ಚಲನಚಿತ್ರ ನೋಡುವ ಆಸಕ್ತಿ ಎಂದೂ ಇರಲಿಲ್ಲ. ಅದರಲ್ಲಿ ಸಮಯದ ಕಟ್ಟುಪಾಡಂತೂ ಇಲ್ಲ ಮತ್ತು ಅದರಂತೆ ಟಿವಿಯನ್ನು ನೋಡಲಾಗುವುದಿಲ್ಲ. ಬಹಳ ಕಡಿಮೆ. ಹಿಂದೆ ಒಮ್ಮೊಮ್ಮೆ ಕುತೂಹಲಕ್ಕಾಗಿ ಡಿಸ್ಕವರಿ ಚಾನೆಲ್ ನೋಡುತ್ತಿದ್ದೆ ಮತ್ತು ಪುಸ್ತಕಗಳನ್ನು ಓದುತ್ತಿದ್ದೆ. ಆದರೆ, ಈ ನಡುವೆ ಓದಲಾಗುತ್ತಿಲ್ಲ. ಮತ್ತೊಂದು ವಿಷಯ ಗೂಗಲ್‍ನಿಂದಾಗಿಯೂ ಅಭ್ಯಾಸಗಳು ಬಿಗಡಾಯಿಸಿವೆ. ಏಕೆಂದರೆ, ಏನಾದರೂ ರೆಫರೆನ್ಸ್ ನೋಡಬೇಕೆಂದಲ್ಲಿ ಕೂಡಲೇ ಶಾರ್ಟ ಕಟ್ ಹುಡುಕಿಕೊಳ್ಳುತ್ತೇವೆ. ಹೇಗೆ ಕೆಲ ಅಭ್ಯಾಸಗಳು ಎಲ್ಲರಲ್ಲೂ ಬಿಗಡಾಯಿಸಿವೆಯೋ, ಹಾಗೇ ನನ್ನಲ್ಲೂ ಬಿಗಡಾಯಿಸಿವೆ. ಸ್ನೇಹಿತರೇ ನಿಮ್ಮೆಲ್ಲರೊಂದಿಗೆ ಮಾತನಾಡಿದ್ದು ನನಗೆ ಸಂತೋಷವೆನಿಸಿದೆ ಮತ್ತು ನಿಮ್ಮ ಮೂಲಕ ನಾನು ಎಲ್ಲ ಎನ್ ಸಿ ಸಿ ಕೆಡೆಟ್ಸ್‍ಗಳಿಗೆ ಅನಂತ ಅನಂತ ಶುಭಾಷಯ ಕೋರುತ್ತೇನೆ. ಧನ್ಯವಾದಗಳು ಸ್ನೇಹಿತರೇ. ಥ್ಯಾಂಕ್ಯೂ.
ಎಲ್ಲ ಎನ್ ಸಿ ಸಿ ಕೆಡೆಟ್ಸ್ ಗಳು : ಅನಂತ ಅನಂತ ಧನ್ಯವಾದಗಳು ಸರ್. ಥ್ಯಾಂಕ್ಯೂ.
ಪ್ರಧಾನ ಮಂತ್ರಿ : ಥ್ಯಾಂಕ್ಯೂ. ಥ್ಯಾಂಕ್ಯೂ.
ಎಲ್ಲ ಎನ್ ಸಿ ಸಿ ಕೆಡೆಟ್ಸ್ ಗಳು : ಜೈ ಹಿಂದ್ ಸರ್
ಪ್ರಧಾನ ಮಂತ್ರಿ : ಜೈ ಹಿಂದ್
ಎಲ್ಲ ಎನ್ ಸಿ ಸಿ ಕೆಡೆಟ್ಸ್ ಗಳು : ಜೈ ಹಿಂದ್ ಸರ್
ಪ್ರಧಾನ ಮಂತ್ರಿ : ಜೈ ಹಿಂದ್, ಜೈ ಹಿಂದ್.
ನನ್ನ ಪ್ರೀತಿಯ ದೇಶಬಾಂಧವರೆ, ಡಿಸೆಂಬರ್ 7 ನೇ ತಾರೀಖು ಂಡಿmeಜ ಈoಡಿಛಿes ಈಟಚಿg ಆಚಿಥಿ ಆಚರಿಸಲಾಗುತ್ತಿದೆ ಎಂಬುದನ್ನು ದೇಶವಾಸಿಗಳಾದ ನಾವು ಎಂದೂ ಮರೆಯಕೂಡದು. ಈ ದಿನ ನಾವು ನಮ್ಮ ವೀರ ಸೈನಿಕರನ್ನು, ಅವರ ಪರಾಕ್ರಮವನ್ನು, ಅವರ ಬಲಿದಾನವನ್ನು ನೆನಪಿಸಿಕೊಳ್ಳುತ್ತೇವೆ ಜೊತೆಗೆ ಕೊಡುಗೆಯನ್ನೂ ನೀಡುತ್ತೇವೆ. ಕೇವಲ ಸನ್ಮಾನದ ಭಾವನೆಯಿದ್ದರಷ್ಟೇ ಸಾಲದು ಸಹಭಾಗಿತ್ವವೂ ಅವಶ್ಯಕವಾಗಿದೆ. ಡಿಶೆಂಬರ್ 7 ರಂದು ಪ್ರತಿಯೊಬ್ಬ ನಾಗರಿಕರೂ ಮುಂದೆ ಬರಬೇಕು. ಪ್ರತಿಯೊಬ್ಬರ ಹತ್ತಿರ ಆ ದಿನ ಂಡಿmeಜ ಈoಡಿಛಿes ನ ಫ್ಲ್ಯಾಗ ಇರಲೇ ಬೇಕು ಮತ್ತು ಇದರಲ್ಲಿ ಪ್ರತಿಯೊಬ್ಬರ ಕೊಡುಗೆಯೂ ಇರಬೇಕು. ಬನ್ನಿ, ಈ ಸಂದರ್ಭದಲ್ಲಿ ನಾವಿ ನಮ್ಮ ಂಡಿmeಜ ಈoಡಿಛಿes ನ ಅದಮ್ಯ ಸಾಹಸ, ಶೌರ್ಯ ಮತ್ತು ಸಮರ್ಪಣ ಭಾವಕ್ಕೆ ಕೃತಜ್ಞತೆಯನ್ನು ಹೇಳೋಣ ಮತ್ತು ವೀರ ಸೈನಿಕರನ್ನು ಸ್ಮರಿಸೋಣ.
ನನ್ನ ಪ್ರೀತಿಯ ದೇಶಬಾಂಧವರೆ, ಭಾರತದಲ್ಲಿ ಫಿಟ್ ಇಂಡಿಯಾ ಮೂವ್‍ಮೆಂಟ್ ನ ಬಗ್ಗೆ ನಿಮಗೆ ತಿಳಿದಿರಲೇಬೇಕು. ಈ ಸಂದರ್ಭದಲ್ಲಿ ಸಿ ಬಿ ಎಸ್ ಇ (ಅಃSಇ) ಯು ಒಂದು ಉತ್ತಮ ಹೆಜ್ಜೆಯನ್ನಿಟ್ಟಿದೆ. ಫಿಟ್ ಇಂಡಿಯಾ ಸಪ್ತಾಹವನ್ನು ಆಚರಿಸಲಾಯಿತು. ಶಾಲೆಗಳಲ್ಲಿ ಫಿಟ್ ಇಂಡಿಯಾ ಸಪ್ತಾಹವನ್ನು ಡಿಶೆಂಬರ್ ತಿಂಗಳಲ್ಲಿ ಯಾವಾಗಲಾದರೂ ಆಚರಿಸಬಹುದಾಗಿದೆ. ಇದರಲ್ಲಿ ಫಿಟ್‍ನೆಸ್ ಗೆ ಸಂಬಂಧಪಟ್ಟಂತೆ ಹಲವುಉ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ. ಅವುಗಳಲ್ಲಿ ಕ್ವಿಜ್, ನಿಬಂಧ, ಲೇಖನ, ಡ್ರಾಯಿಂಗ್, ಪಾರಂಪರಿ ಮತ್ತು ಸ್ಥಳೀಯ ಕ್ರೀಡೆಗಳು, ಯೋಗಾಸನ, ಡಾನ್ಸ ಹಾಗೂ ವಿವಿಧ ಕ್ರೀಡಾ ಸ್ಪರ್ಧೆಗಳು ಒಳಗೊಂಡಿವೆ. ಫಿತ್ ಇಂಡಿಯಾ ಸಪ್ತಾಹದಲ್ಲಿ ವಿದ್ಯಾರ್ಥಿಗಳ ಜೊತೆಜೊತೆಗೆ ಅವರ ಶಿಕ್ಷಕರು ಹಾಗೂ ಪೋಷಕರೂ ಭಾಗವಹಿಸಬಹುದಾಗಿದೆ. ಆದರೆ ಇದನ್ನು ಮರೆಯಬೇಡಿ ಫಿಟ್ ಇಂಡಿಯಾ ಅಂದರೆ ಕೇವಲ ಮೆದುಳಿವ ಅಭ್ಯಾಸ, ಕಾಗದದ ಅಭ್ಯಾಸ ಇಲ್ಲವೆ ಲ್ಯಾಪ್‍ಟಾಪ್ ಅಥವಾ ಕಂಪ್ಯೂಟರ್ ಇಲ್ಲವೆ ಮೊಬೈಲ್ ಫೋನ್ ನಲ್ಲಿ ಫಿಟ್‍ನೆಸ್ ಯ್ಯಾಪ್ ನೋಡುತ್ತ ಕೂಡುವುದಲ್ಲ. ಅದಲ್ಲ, ಇಲ್ಲಿ ಬೆವರು ಹರಿಸಬೇಕು. ಊಟದ ಪದ್ಧತಿ ಬದಲಾಗಬೇಕು. ಹೆಚ್ಚು ಹೆಚ್ಚು ಕಾರ್ಯಚಟುವಟಿಕೆಗಳನ್ನು ಮಾಡುವುದರತ್ತ ಗಮನ ಹರಿಸಬೇಕು. ನಾನು ದೇಶದ ಎಲ್ಲ ರಾಜ್ಯಗಳ ಸ್ಕೂಲ್ ಬೋರ್ಡಗಳು ಮತ್ತು ಸ್ಕೂಲ್ ವ್ಯವಸ್ಥಾಪಕರುಗಳಿಗೆ ಮನವಿ ಮಾಡುವುದೇನಂದರೆ ಸ್ಕೂಲುಗಳಲ್ಲಿ ಡಿಶೆಂಬರ್ ತಿಂಗಳಲ್ಲಿ ಫಿಟ್ ಇಂಡಿಯಾ ಸಪ್ತಾಹವನ್ನು ಆಚರಣೆಗೆ ತನ್ನಿರಿ. ಇದರಿಂದ ಫಿಟ್‍ನೆಸ್ ಎನ್ನುವುದು ನಮ್ಮ ದೈನಂದಿನ ಕಾರ್ಯಚಟುವಟಿಕೆಯಾಗುತ್ತದೆ. ಫಿಟ್‍ನೆಸ್ ಇಂಡಿಯಾ ಮೂವ್‍ಮೆಂಟ್ ನಲ್ಲಿ ಫಿಟ್‍ನೆಸ್ ಗೆ ಸಂಬಂಧಿಸಿದಂತೆ ಸ್ಕೂಲುಗಳ ರ್ಯಾಂಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ರ್ಯಾಂಕಿಂಗ್ ಪಡೆಯುವ ಎಲ್ಲ ಸ್ಕೂಲುಗಳು ಫಿಟ್ ಇಂಡಿಯಾ ಲೋಗೊ ಮತ್ತು ಪ್ಲ್ಯಾಗ್‍ಗಳ ಬಳಕೆಯನ್ನು ಮಾಡಲು ಅರ್ಹರಾಗುತ್ತಾರೆ. ಫಿಟ್ ಇಂಡಿಯಾ ಪೋರ್ಟಲ್‍ಗೆ ಹೋಗಿ ಸ್ಕೂಲುಗಳು ಸ್ವತ: ತಾವೇ ‘ಫಿಟ್’ ಎಂದು ಘೋಷಿಸಿಕೊಳ್ಳಬಹುದಾಗಿದೆ. ಫಿಟ್ ಇಂಡಿಯಾ ಥ್ರೀ ಸ್ಟಾರ್ ಹಾಗೂ ಫಿಟ್ ಇಂಡಿಯಾ ಫೈವ್ ಸ್ಟಾರ್ ರೇಟಿಂಗ್ ಕೂಡಾ ನೀಡಲಾಗುತ್ತದೆ. ಎಲ್ಲಾ ಸ್ಕೂಲುಗಳು ಈ ಫಿಟ್ ಇಂಡಿಯಾ ರ್ಯಾಂಕಿಂಗ್ ನಲ್ಲಿ ಭಾಗವಹಿಸಿ ಫಿಟ್ ಇಂಡಿಯಾ ಎಂಬುದು ಒಂದು ಸಹಜ ಸ್ವಭಾವವಾಗಲಿ ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಅದೊಂದು ಜನಾಂದೋಲನವಾಗಲಿ. ಜಾಗರೂಕತೆ ಬರಲಿ. ಇದಕ್ಕಾಗಿ ಶ್ರಮಿಸಬೇಕಾಗುತ್ತದೆ.
ನನ್ನ ಪ್ರೀತಿಯ ದೇಶಬಾಂಧವರೆ, ನಮ್ಮ ದೇಶ ಇಷ್ಟೊಂದು ವಿಶಾಲವಾಗಿದೆ. ಇಷ್ಟೊಂದು ವಿವಿಧತೆಯಿಂದ ಒಡಗೂಡಿದೆ. ಇಷ್ಟೊಂದು ಪುರಾತನವಾಗಿಯೆಂದರೆ ಹಲವಾರು ಸಂಗತಿಗಳು ನಮ್ಮ ಗಮನಕ್ಕೇ ಬರುವುದಿಲ್ಲ ಮತ್ತು ಸ್ವಾಭಾವಿಕವಾಗಿ ನಡೆದು ಹೋಗುತ್ತವೆ. ಅಂತಹ ‘ಮಾಯ್ ಗೌ’ ನಲ್ಲಿ ಒಂದು ಕಮೆಂಟ್ ನನ್ನ ಗಮನ ಸಳೆಯಿತು. ಈ ಕಮೆಂಟ್‍ನ್ನು ಅಸಮ್ ರಾಜ್ಯದ ನೌಗಾಂವ್ ನ ಶ್ರೀ ರಮೇಶ್ ಶರ್ಮಾ ಅವರು ಬರೆದಿದ್ದರು. ಅವರು ಬರೆದಿದ್ದೇನಂದರೆ, ಬ್ರಹ್ಮ ಪುತ್ರ ನದಿ ಕುರಿತಂತೆ ಒಂದು ಉತ್ಸವ ನಡೆಯುತ್ತಿದೆ. ಅದರ ಹೆಸರು ಪ್ರಹ್ಮ ಪುತ್ರ ಪುಷ್ಕರ ಎಂದು. ನವಂಬರ್ ತಿಂಗಳು 4 ರಿಂದ 16 ರ ವರೆಗೆ ಈ ಉತ್ಸವ ನಡೆಯಿತು. ಈ ಬ್ರಹ್ಮ ಪುತ್ರ ಪುಷ್ಕರ ದಲ್ಲಿ ಭಾಗವಹಿಸಲು ದೇಶದ ವಿವಿಧ ಭಾಗಗಳಿಂದ ಹಲವಾರು ಜನರು ಬಂದಿದ್ದರು. ಇದನ್ನು ಕೇಳಿದ ತಮಗೂ ಆಶ್ಚರ್ಯವಾಗಿತಬೇಕಲ್ಲವೆ.. ಹೌದು, ಇದೇ ಮಾತು ಹೇಳಬೇಕೆಂದಿದ್ದು, ಇದೊಂದು ಇಂತಹ ಮಹತ್ವಪೂರ್ಣ ಉತ್ಸವವಾಗಿದ್ದು ನಮ್ಮ ಪೂರ್ವಜರು ಇದನ್ನು ಹೇಗೆ ಇಚನೆ ಮಾಡಿದ್ದಾರೆಂದರೆ ಅದನ್ನು ಪೂರ್ಣ ಕೇಳಿದರೆ ನಿಮಗೂ ಆಶ್ಚರ್ಯವಾಗುತ್ತದೆ. ಆದರೆ ದುರ್ಭಾಗ್ಯವೆಂದರೆ ಇದಕ್ಕೆ ಎಷ್ಟು ಪ್ರಚಾರ ಬೇಕಿತ್ತೋ, ಎಷ್ಟೋದು ದೇಶದ ಮೂಲೆ ಮೂಲೆ ತಲುಪಬೇಕಿತ್ತೋ ಅಷ್ಟು ಆಗುತ್ತಿಲ್ಲ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಉತ್ಸವದ ಆಯೋಜನೆ ಒಂದು ರೀತಿಯಿಂದ ಒಂದು ದೇಶ-ಒಂದು ಸಂದೇಶ, ನಾವೆಲ್ಲ ಒಂದು ಎನ್ನುವ ಭಾವನೆ ಮತ್ತು ಶಕ್ತಿ ತುಂಬುವುದಾಗಿದೆ.
ರಮೇಶ್ ಅವರೇ ಮೊದಲು ನಿಮಗೆ ತುಂಬಾ ಧನ್ಯವಾದಗಳು ಯಾಕಂದರೆ ನೀವು ‘ಮನ್ ಕೀ ಬಾತ್’ ನ ಮಾದ್ಯಮದೊಂದಿಗೆ ದೇಶವಾಸಿಗಳೊಂದಿಗೆ ತಮ್ಮ ಈ ಮಾತುಗಳನ್ನು ಶೇರ್ ಮಾಡಲು ನಿಶ್ಚಯಿಸಿದ್ದೀರಿ. ನೀವು ಸಂಕಟವನ್ನೂ ವದಕ್ತಪಡಿಸಿದ್ದೀರಿ, ಇಂತಹ ಮಹಲ್ವಪೂರ್ಣ ವಿಷಯದ ವ್ಯಾಪಕ ಚರ್ಚೆಯಾಗುವುದಿಲ್ಲ ಮತ್ತು ಪ್ರಚಾರವೂ ನಡೆಯುವುದಿಲ್ಲ. ತಮ್ಮ ಸಂಕಟವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ದೇಶದ ಹೆಚ್ಚು ಜನತೆ ಈ ವಿಷಯ ತಿಳಿದಿಲ್ಲ. ಹೌದು, ಯಾರಾದರೂ ಇದಕ್ಕೆ ‘ಅಂತರರಾಷ್ಟ್ರೀಯ ನದಿ ಉತ್ಸವ’ ಎಂದು ಹೆಸರಿಸಿದ್ದರೆ, ಕೆಲ ವಿಶಿಷ್ಟ ಪದಗಳ ಬಳಕೆಯಾಗಿದ್ದರೆ ನಮ್ಮ ದೇಶದ ಕೆಲವರು ಅವಶ್ಯವಾಗಿ ಏನಾದರೊಂದು ಚರ್ಚೆಯಾಗುತ್ತಿತ್ತು ಮತ್ತು ಹಾಗೆಯೇ ಪ್ರಚಾರವೂ ಆಗುತ್ತಿತ್ತು.
ನನ್ನ ಪ್ರೀತಿಯ ದೇಶಬಾಂಧವರೆ, ಪುಷ್ಕರಮ್, ಪುಷ್ಕರಾಲ್, ಪುಷ್ಕರ: ಎಂಬ ಶಬ್ದಗಳನ್ನು ನೀವು ಎಂದಾದರೂ ಕೇಳಿದ್ದೀರಾ.. ತಿಳಿದಿದ್ದೀರಾ.. ಗೊತ್ತಿದೆಯಾ.. ಸದೇನೆಂದು ನಾನು ಹೇಳುತ್ತೇನೆ, ಇದೊಂದು ದೇಶದ ಹನ್ನೆರಡು ವಿವಿಧ ನದಿಗಳ ಬಗ್ಗೆ ಯಾವ ಉತ್ಸವಗಳ ಆಯೋಜನೆಯಾಗುತ್ತದೆಯೋ ಅವುಗಳ ಭಿನ್ನ-ಭಿನ್ನ ಹೆಸರುಗಳಾಗಿವೆ. ಪ್ರತಿ ವರ್ಷ ಒಂದು ನದಿಯ ಉತ್ಸವ ಅಂದರೆ ಆ ನದಿಯ ಸರದಿ ಹನ್ನೆರಡು ವರ್ಷಗಳ ನಂತರ ಬರುತ್ತದದೆ. ಈ ಉತ್ಸವ ದೇಶದ ವಿಭಿನ್ನ ಸ್ಥಳಗಳಲ್ಲಿರುವ ಹನ್ನೆರಡು ನದಿಗಳಲ್ಲಿ ನಡೆಯುತ್ತದೆ. ಯಾವಾಗಲೂ ನಡೆಯುತ್ತವೆ ಮತ್ತು ಕುಂಭಮೇಳದಂತೆ ಈ ಉತ್ಸವ ರಾಷ್ಟ್ರೀಯ ಏಕತೆಗೆ ಒತ್ತು ನೀಡುತ್ತವೆ ಮತ್ತು ‘ಏಕ್ ಭಾರತ್ ಶ್ರೇಷ್ಠ ಭಾರತ್’ ದ ದರ್ಶನ ನೀಡುತ್ತವೆ. ‘ಪುಷ್ಕರಮ್’ ಈ ವಿಶಿಷ್ಟ ಉತ್ಸವದಿಂದ ನದಿಯ ಗೌರವ, ಜೀವನದಲ್ಲಿ ನದಿಯ ಮಹತ್ವ ಒಂದು ರೀತಿಯಲ್ಲಿ ಸಹಜವಾಗಿ ಜಾಗೃತಗೋಳ್ಳುತ್ತದೆ.
ನಮ್ಮ ಪೂರ್ವಜರು ಪೃಕೃತಿ, ಪರಿಸರ, ನಿರು, ಭೂಮಿ, ಕಾಡುಗಳಿಗೆ ಬಹಳ ಮಹತ್ವದ ಸ್ಥಾನ ನೀಡಿದ್ದಾರೆ. ಅವರು ನದಿಯ ಮಹತ್ವವನ್ನು ತಿಳಿದಿದ್ದರು ಮತ್ತು ಸಮಾಜದಲ್ಲ್ಕಿ ನದಿಗಳ ಬಗ್ಗೆ ಸಕಾರಾತ್ಮಕ ಭಾವ ಮೂಡಲು, ಒಂದು ಸಂಸ್ಕಾರ ಹೇಗೆ ಮೂಡಬೇಕು, ನದಿಗಳೊಂದಿಗೆ ಸಂಸ್ಕøತಿ, ಸಂಸ್ಕಾರಗಳ ಮತ್ತು ಸಮಾಜದ ಬೆಸುಗೆಯ ಪ್ರಯತ್ನ ನಿರಂತರ ಜಾರಿಯಲ್ಲಿದೆ. ವಿಶೇಷವೆಂದರೆ ಸಮಾಜವು ನದಿಯೊಂದಿಗೆ ಹಾಗೂ ತಮ್ಮ-ತಮ್ಮೊಂದಿಗೆಯೂ ಬೆಸುಗೊಂಡವು. ಕಳೆದ ವರ್ಷ ತಮಿಳುನಾಡಿನ ‘ತಾಮೀರ್‍ಬರನಿ’ ನದಿಯಲ್ಲಿ ಪುಷ್ಕರಮ್ ಆಯೋಜಿಸಲಾಗಿತ್ತು. ಈ ವರ್ಷ ಅದು ‘ಬ್ರಹ್ಮ ಪುತ್ರ’ ನದಿಯಲ್ಲಿ ಆಯೋಜಿಸಲಾಯಿತು. ಬರುವ ವರ್ಷ ಆಂಧ್ರಪ್ರದೇಶ್, ತೆಲಂಗಾಣಾ, ಕರ್ನಾಟಕ ದಲ್ಲಿ ಹರಿಯುವ ತುಂಗಭದ್ರ ನದಿಯಲ್ಲಿ ಆಯೋಜನೆಗೊಳ್ಳಲಿದೆ. ಒಂದು ರೀತಿಯಲ್ಲಿ ನೀವು ಈ ಹನ್ನೆರಡೂ ಸ್ಥಾನಗಳ ಯಾತ್ರೆಯನ್ನು ಒಂದು’ ಟೂರಿಷ್ಟ ಸರ್ಕೀಟ್’ ದಂತೆ ಮಾಡಬಹುದಾಗಿದೆ. ಇಲ್ಲಿ ನಾನು ‘ಆಸಾಮ್’ ನ ಜನತೆಯ ಉತ್ಸಾಹ ಹಾಗೂ ಆತಿಥ್ಯಗಳನ್ನು ಶ್ಲಾಘಿಸಬಯಸುತ್ತೇನೆ. ಇಡೀ ದೇಶದಾದ್ಯಂತ ಆಗಮಿಸಿದ ತೀರ್ಥಯಾತ್ರಿಗಳನ್ನು ಬಹಳ ಸುಂದರವಾಗಿ ಸತ್ಕರಿಸಿದ್ದಾರೆ. ಆಯೋಜಕರು ಸ್ವಚ್ಛತೆಯ ಬಗ್ಗೆಯೂ ಬಹಳ ಜಾಗರೂಕತೆಯನ್ನು ವಹಿಸಿದ್ದಾರೆ. ‘ಪ್ಲಾಸ್ಟಿಕ್ ಫ್ರೀ ಝೋನ್’ ಎಂಬುದನ್ನು ಪಾಲಿಸಿದ್ದಾರೆ. ಅಲ್ಲಲ್ಲಿ ‘ಬಾಯೋ ಟಾಯ್ಲೆಟ್’ ಗಳ ವದಯವಸ್ಥೆಯನ್ನು ಮಾಡಿದ್ದರು. ಸಾವಿರಾರು ವರ್ಷಗಳ ಹಿಂದಿನಿಂದ ನಮ್ಮ ಪೂರ್ವಜರು ನದಿಗಳ ಬಗ್ಗೆ ಇಂತಹ ಭಾವನೆಗಳನ್ನು ತಳೆಯಲು ಮಾಡಿದ ಪ್ರಯತ್ನಗಳು ನಮ್ಮ ಭಾವಿ ಪೀಳಿಗೆಯನ್ನು ಬೆಸೆಯುತ್ತದೆ ಎಂದು ಹೇಳಲು ನನಗೆ ಹರ್ಷವೆನಿಸುತ್ತದೆ. ಪೃಕೃತಿ, ಪರಿಸರ, ನಿರು, ಈ ಎಲ್ಲವುಗಳು ನಮ್ಮ ಪ್ರವಾಸದ ಅಂಗಗಳಾಗಲಿ, ಜೀವನದ ಅಂಗಗಳೂ ಅಗಲಿ.
ನನ್ನ ಪ್ರೀತಿಯ ದೇಶಬಾಂಧವರರೆ, ‘ನಮೊ ಯ್ಯಾಪ್’ ನಲ್ಲಿ ಮಧ್ಯಪ್ರದೇಶದಿಂದ ಮಗಳು ಶ್ವೇತಾ ಬರೆಯುತ್ತಾಳೆ- ಸರ್, ನಾನು 9ನೇ ಕ್ಲಾಸಿನಲ್ಲಿ ಓದುತ್ತಿದ್ದೇನೆ, ನನ್ನ ಬೋರ್ಡ ಪರೀಕ್ಷೆಗಳಿಗೆ ಇನ್ನೂ ಒಂದು ವರ್ಷವಿದೆ ಆದರೆ ನಾನು ‘ಸ್ಟೂಡೆಂಟ್ಸ ಎಂಡ್ ಎಗ್ಜಾಮ್ ವರೀಜ್’ ವಿಷಯದ ಬಗ್ಗೆ ತಮ್ಮ ಮಾತುಗಳನ್ನು ಯಾವಾಗಲೂ ಕೇಳುತ್ತಿರುತ್ತೇನೆ. ನಾನು ಏಕೆ ತಮಗೆ ಬರೆಯುತ್ತಿದ್ದೇನೆಂದರೆ ಮುಂದಿನ ಪರೀಕ್ಷೆಗಳ ಬಗ್ಗೆ ಚರ್ಚೆ ಯಾವಾಗ ನಡೆಯುತ್ತದೆ ಎಂದು ತಾವು ಇನ್ನೂ ತಿಳಿಸಿಲ್ಲ. ದಯವಿಟ್ಟು ಇದನ್ನು ಆದಷ್ಟು ಬೇಗ ಮಾಡಿರಿ. ಸಾಧ್ಯವಾದರೆ ಇದನ್ನು ಬರುವ ಜನುವರಿಯಲ್ಲಿಯೇ ಆಯೋಜಿಸಿರಿ. ಬಂಧುಗಳೇ, ‘ಮನ್ ಕಿ ಬಾತ್’ ಬಗ್ಗೆ ನನಗೆ ಇದೇ ಮಾತು ಬಹಳ ಇಷ್ಟವಾಗುತ್ತದೆ. ನನ್ನ ಯುವ ಮಿತ್ರ, ನನಗೆ ಯಾವ ಅಧಿಕಾರ ಹಾಗೂ ಸ್ನೇಹದೊಂದಿಗೆ ದೂರು ನೀಡುತ್ತಾರೆ, ಆದೇಶ ನೀಡುತ್ತಾರೆ, ಸಲಹೆ ನೀಡುತ್ತಾರೆ- ಇದನ್ನು ಕಂಡು ನನಗೆ ಬಹಳ ಖುಷಿಯಾಗುತ್ತದೆ. ಶ್ವೇತಾ ಅವರೆ, ನೀವು ಬಹಳ ಸರಿಯಾದ ಸಮಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದೀರಿ. ಪರೀಕ್ಷೆಗಳು ಬರುತ್ತಲಿವೆ, ಹಾಗಾದರೆ, ಪ್ರತಿ ವರ್ಷದಂತೆ ನಾವು ಪರೀಕ್ಷೆಗಳ ಬಗ್ಗೆ ಚರ್ಚೆ ಮಾಡಬೇಕಿದೆ. ತಮ್ಮ ಮಾತು ಸರಿಯಾಗಿದೆ. ಈ ಕಾರ್ಯಕ್ರಮವನ್ನು ಸ್ವಲ್ಪ ಮೊದಲೇ ಆಯೋಜಿಸುವ ಅವಶ್ಯಕತೆಯಿದೆ.
ಕಳೆದ ಕಾರ್ಯಕ್ರಮದ ನಂತರ ಹಲವಾರು ಜನರು ಇದನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿಸಲು ತಮ್ಮ ಸಲಹೆಗಳನ್ನೂ ನೀಡಿದ್ದಾರೆ. ಮತ್ತು ದೂರನ್ನೂ ನೀಡಿದ್ದಾರೆ ಏಕೆಂದರೆ ಕಳೆದ ಸಲ ತಡವಾಗಿ ಮಾಡಲಾಯಿತು, ಪರೀಕ್ಷೆಗಳು ಬಹಳ ಸಮೀಪವಿದ್ದವು. ಅಲ್ಲದೆ ಶ್ವೇತಾಳ ಸಲಹೆ ಸರಿಯಾಗಿಯೇ ಇದೆ, ನಾನಿದನ್ನು ಜನೇವರಿಯಲ್ಲಿಯೇ ಮಾಡಬೇಕು. ‘ಎಚ್ ಆರ್ ಡಿ ಮಿನಿಸ್ಟ್ರೀ’ ಮತ್ತು ‘ಮಾಯ್ ಗೌ’ ನ ಟೀಮ್ ಕೂಡಿಕೊಂಡು ಇದರ ಕಾರ್ಯ ಮಾಡುತ್ತಿದ್ದಾರೆ. ಈ ಸಲದ ಪರಿಕ್ಷೆಗಳ ಮೇಲಿನ ಚರ್ಚೆಯನ್ನು ಜನೇವರಿ ಯ ಆರಂಭದಲ್ಲಿ ಇಲ್ಲವೆ ಮಧ್ಯದಲ್ಲಿ ಮಾಡಲು ನಾನು ಪ್ರಯತ್ನಿಸಿತ್ತೇನೆ. ದೇಶದ ಎಲ್ಲ ವಿದ್ಯಾರ್ಥಿಗಳಲ್ಲಿ ಮತ್ತು ಬಂಧುಗಳಲ್ಲಿ ಎರಡು ಅವಕಾಶಗಳಿವೆ. ಮೊದಲನೆಯದು, ತಮ್ಮ ಶಾಲೆಯಲ್ಲಿಯೇ ಇದರ ಅಂಗವಾಗುವುದು. ಎರಡನೆಯದು, ದಿಲ್ಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು. ದಿಲ್ಲಿಯ ಕಾರ್ಯಕ್ರಮಕ್ಕಾಗಿ ದೇಶದ ವಿದ್ಯಾರ್ಥಿಗಳಿಗಾಗಿ ‘ಮಾಯ್ ಗೌ’ ದ ಮುಖಾಂತರ ಆಯ್ಕೆಯನ್ನು ಮಾಡಲಾಗುವುದು. ಬಂಧುಗಳೆ, ನಾವೆಲ್ಲರು ಸೇರಿ ಪರೀಕ್ಷೆಯ ಭಯವನ್ನು ಓಡಿಸಬೇಕಿದೆ. ನನ್ನ ಯುವ ಮಿತ್ರರು ಪರೀಕ್ಷೆಯ ಸಮಯದಲ್ಲಿ ನಗು-ನಗುತ್ತ, ಆಡುತ್ತ ಕಾಣಬೇಕು. ಪೋಷಕರು ಒತ್ತಡದಿಂದ ಮುಕ್ತರಾಗಿರಬೇಕು. ಶಿಕ್ಷಕರು ಆತ್ಮವಿಶ್ವಾಸದಿಂದಿರಬೇಕು. ಇದೇ ಉದ್ದೇಶದೊಂದಿಗೆ ಕಳೆದ ಹಲವು ವರ್ಷಗಳಿಂದ ನಾವು ‘ಮನ್ ಕಿ ಬಾತ್’ ಮುಖೇನ ‘ಪರೀಕ್ಷೆಗಳ ಬಗ್ಗೆ ಚರ್ಚೆ, ‘ಟೌನ್ ಹಾಲ್’ ಮುಖೇನ ಪುನ: ‘ಎಗ್ಜಾಮ್ ವಾರಿಯರ್ಸ ಬುಕ್’ ನ ಸಹಾಯದೊಂದಿಗೆ ಸತತ ಪ್ರಯತ್ನಶೀಲರಾಗಿದ್ದೇವೆ. ಈ ಮಿಶನ್ ಅನ್ನು ದೇಶದಾದ್ಯಂತ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಸೇರಿ ಒಂದು ಮಾರ್ಗ ನೀಡಿದ್ದಾರೆ ಅದಕ್ಕಾಗಿ ನಾನು ಅವರೆಲ್ಲರಿಗೆ ಆಭಾರಿಯಾಗಿದ್ದೇನೆ. ಮತ್ತು ಬರುವ ಪರೀಕ್ಷೆಯ ಚರ್ಚಾ ಕಾರ್ಯಕ್ರಮ ನಾವೆಲ್ಲರು ಸೇರಿ ಮಾಡೋಣ. ತಮ್ಮೆಲ್ಲರಿಗೂ ಆಮಂತ್ರಣವಿದೆ.
ಬಂಧುಗಳೆ, ಕಳೆದ ‘ಮನ್ ಕಿ ಬಾತ್’ ನಲ್ಲಿ ನಾವು 2010 ರಲ್ಲಿ ಅಯೋಧ್ಯಾ ವಿಷಯಕ್ಕೆ ಸಂಬಂಧ ಪಟ್ಟಂತೆ ಅಲಾಹಾಬಾದ್ ಹೈಕೋರ್ಟನ ತೀರ್ಪಿನ ಬಗ್ಗೆ ಚರ್ಚಿಸಿದ್ದೆವು ಮತ್ತು ಅಂದು ನಿರ್ಣಯ ಬರುವ ಮೊದಲು ಹಾಗೂ ನಿರ್ಣಯ ಬಂದ ಮೇಲೆಯೂ ದೇಶವು ಹೇಗೆ ಭ್ರಾತೃತ್ವ ಮೆರೆದು ಶಾಂತಿ ನೆಲೆಸಲು ಕಾರಣವಾಗಿತ್ತು ಎಂದು ನಾನು ಹೇಳಿದ್ದೆ. ಈ ಸಲವೂ ನವೆಎಂಬರ್ 9 ರಂದು ಸುಪ್ರೀಮ್ ಕೋರ್ಟ್ ನ ತೀರ್ಪು ಬಂದಾಗ 130 ಕೋಟಿ ಭಾರತೀಯರು ಮತ್ತೊಮ್ಮೆ ಇದನ್ನು ಸಾಬೀತುಪಡಿಸಿದ್ದಾರೆ. ಅದೆಂದರೆ ದೇಶದ ಹಿತಕ್ಕಿಂತ ಬೇರೊಂದಿಲ್ಲ. ದೇಶದಲ್ಲಿ ಶಾಂತಿ, ಏಕತೆ ಮತ್ತು ಸದ್ಭಾವನೆಗಳ ಮೌಲ್ಯ ಸರ್ವೋಪರಿಯಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ರಾಮ ಮಂದಿರದ ಬಗ್ಗೆ ನಿರ್ಣಯ ಬಂದ ಮೇಲೆ ಅದನ್ನು ಸಂಪೂರ್ಣ ದೇಶ ತೆರೆದ ಮನಸ್ಸಿನಿಂದ ಆಲಂಗಿಸಿದೆ. ಪೂರ್ಣ ಸರಳತೆ ಹಾಗೂ ಶಾಂತಿಯಿಂದ ಸ್ವೀಕರಿಸಿದ್ದಾರೆ. ಇಂದು ‘ಮನ್‍ಕಿ ಬಾತ್’ ನ ಮುಖೇನ ನಾನು ದೇಶಬಾಂಧವರನ್ನು ಕೃತಜ್ಞತೆ ಸಲ್ಲಿಸುವುದರೊಂದಿಗೆ ಧನ್ಯವಾದ ಹೇಳಬಯಸುತ್ತೇನೆ. ಅವರು ಧೈರ್ಯ, ಸಂಯಮ ಹಾಗೂ ಪರಿಪಕ್ವತೆಯನ್ನು ಹೇಗೆ ಪರಿಚಯಿಸಿದ್ದಾರೋ ಅದಕ್ಕಾಗಿ ಅವರಿಗೆ ನಾನು ವಿಶೇಷವಾಗಿ ಆಭಾರಿಯಾಗಿದ್ದೇನೆ. ಇನ್ನೊಂದು ಮಾತು, ಬಹಳ ದೀರ್ಘ ಕಾಲದಿಂದ ಕಾನೂನಿನ ಕಾದಾಟ ಸಮಾಪ್ತವಾಗಿದೆ ಮತ್ತು ಹಾಗೆಯೇ ನ್ಯಾಯಾಲಯದ ಬಗ್ಗೆ ದೇಶದ ಗೌರವ ಮತ್ತಷ್ಟು ಹೆಚ್ಚಾಗಿದೆ. ವಾಸ್ತವವಾಗಿ ಈ ನಿರ್ಣಯ ನಮ್ಮ ನ್ಯಾಯಾಲಯಕ್ಕೂ ಒಂದು ಮೈಲುಗಲ್ಲಾಗಿ ಸಾಬೀತಾಗಿದೆ. ಸರ್ವೋಚ್ಚ ನ್ಯಾಯಾಲಯದ ಈ ಐತಿಹಾಸಿಕ ನಿರ್ಣಯದ ಬಳಿಕ ಈಗ ದೇಶ ಹೊಸ ಆಶೆ ಮತ್ತು ಹೊಸ ಆಕಾಂಕ್ಷೆಗಳೊಂದಿಗೆ ಹೊಸ ಮಾರ್ಗದತ್ತ ಹೊಸ ಕನಸುಗಳನ್ನು ಹೊತ್ತು ಸಾಗುತ್ತಿದೆ. ‘ನ್ಯೂ ಇಂಡಿಯಾ’ ದ ಪರಿಕಲ್ಪನೆಯನ್ನು ಹೊತ್ತು ಶಾಂತಿ, ಏಕತೆ ಮತ್ತು ಸದ್ಭಾವನೆಗಳೊಂದಿಗೆ ಮುಂದೆ ಸಾಗಲಿ, ಇದೇ ನನ್ನ ಕಾಮನೆಯಾಗಿದೆ, ನಮ್ಮೆಲ್ಲರ ಕಾಮನೆಯಾಗಿದೆ.
ನನ್ನ ಪ್ರೀತಿಯ ದೇಶ ಬಾಂಧವರೆ, ನಮ್ಮ ಸಭ್ಯತೆ, ಸಂಸ್ಕøತಿ ಮತ್ತು ಭಾಷೆಗಳು ಇಡೀ ವಿಶ್ವಕ್ಕೆ ಅನೇಕತೆಯಲ್ಲಿ ಏಕತೆಯ ಸಂದೇಶವನ್ನು ನೀಡುತ್ತವೆ. 130 ಕೋಟಿ ಭಾರತಿಯರ ಈ ದೇಶಹೇಗಿದೆಯೆಂದರೆ (ಕೋಸ್ ಕೋಸ್ ಪರ್ ಪಾನಿ ಬದಲೆ ಚಾರ ಕೋಸ್ ಪರ್ ಬಾನಿ’) ‘ಗಾವುದ ದಾಟಿದರೆ ಬದಲಿ ನೀರು ಸಿಗುತ್ತದೆ, ನಾಲ್ಕು ಗಾವುದ ದಾಟಿದರೆ ಬದಲಿ ಭಾಷೆ ಇರುತ್ತದೆ’. ನಮ್ಮ ಭಾರತ ಭೂಮಿಯಲ್ಲಿ ನೂರಾರು ಭಾಷೆಗಳು ಶತಮಾನಗಳಿಂದ ಪುಷ್ಪಿತ ಪಲ್ಲವಿತಗೊಳ್ಳುತ್ತಲಿವೆ. ನಮಗೆ ಎಲ್ಲಿ ಈ ಭಾಷೆಗಳೂ ಮತ್ತು ಈ ಉಪಭಾಷೆಗಳು ಅಳಿದುಹೋಗುವವೋ ಎಂಬ ಒಂದು ಆತಂಕವಿದೆ. ಹಿಂದೆ ನನಗೆ ಉತ್ತರಾಖಂಡದ ಧಾರಚುಲಾ ದ ಕತೆ ಓದಲು ಸಿಕ್ಕಿತ್ತು. ನನಗೆ ಬಹಳ ಸಂತೊಷವಾಯಿತು. ಈ ಕತೆಯಿಂದ ತಿಳಿದುಬರುವುದೇನಂದರೆ ಯಾವ ರೀತಿ ಜನರು ತಮ್ಮ ಭಾಷೆಗಳನ್ನು ಅಭಿವೃದ್ಧಿಗೊಳಿಸಲು ಮುಂದೆ ಬರುತ್ತಿದ್ದಾರೆ. ಇವರು ಹೊಸ ವಿಚಾರಗಳನ್ನು ಮಾಡುತ್ತಿದ್ದಾರೆ. ಧಾರಚುಲಾ ಹೆಸರು ಕೇಳುತ್ತಲೇ ಅದರ ಬಗ್ಗೆ ತಿಳಿಯಲು ಉತ್ಸುಕನಾದೆ ಏಕೆಂದರೆ ಒಂದು ಕಾಲದಲ್ಲಿ ನಾನು ಅಲ್ಲಿ ಪ್ರಯಾಣ ಮಾಡುವಾಗ ಅಲ್ಲಿ ಉಳಿದುಕೊಳ್ಳುತ್ತಿದ್ದೆ. ಅತ್ತ ನೇಪಾಳ ಇತ್ತಕಾಲಿ ಗಂಗಾ ಹೀಗಾಗಿ ಧಾರಚುಲಾ ಹೆಸರು ಕೇಳುತ್ತಲೇ ಅದು ನನ್ನ ಗಮನ ಸೆಳೆಯಿತು. ಪಿಥೌರ್‍ಗಡ ದ ಧಾರಚುಲಾದಲ್ಲಿ ರಂಗ ಸಮುದಾಯದ ಬಹಳ ಜನರಿದ್ದಾರೆ. ಅವರ ಮಧ್ಯೆ ಬಳಕೆಯ ಭಾಷೆ ’ರಗಲೊ’ ಇದೆ. ಆ ಜನರು ಭಾಷೆಯ ಬಗ್ಗೆ ಮಾತು ಬಂದಾಗ ಬಹಳ ದುಃಖಿತರಾಗುತ್ತಾರೆ ಏಕೆಂದರೆ ಅದನ್ನು ಮಾತನಾಡುವ ಜನರು ದಿನ ಕಳೆದಂತೆ ಕಡಿಮೆಯಾಗುತ್ತಿದ್ದಾರೆ. ಅವರೇನು ಮಾಡಿದರು ಅಂದರೆ ಎಲ್ಲರು ಸೇರಿ ಒಮ್ಮೆ ತಮ್ಮ ಭಾಷೆಯನ್ನು ಉಳಿಸಿಕೊಳ್ಳುವ ಸಂಕಲ್ಪ ಮಾಡಿದರು. ನೋಡು ನೋಡುತ್ತಲೇ ಈ ಅಭಿಯಾನದಲ್ಲಿ ‘ರಂಗ’ ಸಮುದಾಯದ ಜನರು ಸೇರುತ್ತ ಹೋದರು. ತಮಗೆ ಕೇಳಿದರೆ ಆಶ್ಚರ್ಯವಾಗಬಹುದು, ಈ ಸಮುದಾಯದ ಸಂಖ್ಯೆ ಎಣಿಕೆಗೆ ಸಿಗುವಷ್ಟು ಮಾತ್ರ ಇದೆ. ಹತ್ತು ಸಾವಿರ ಇರಬಹುದೇನೊ ಎಂದು ಒಂದು ಅಂದಾಜು ಮಾಡಬಹುದು. ಆದರೆ ‘ರಂಗ’ ಭಾóಷೆಯನ್ನು ಉಳಿಸಲು ಎಲ್ಲರು ಒಂದುಗೂಡಿದರು, ಅದು ಎಂಬತ್ನಾಲ್ಕರ ಹಿರಿಯ ವಯಸ್ಸಿನ ಅಜ್ಜನಾಗಿರಬಹುದು, ದೀವಾನಸಿಂಹನಾಗಿರಬಹುದು ಇಲ್ಲವೆ ಇಪ್ಪತ್ತೆರಡು ವರ್ಷದ ಯುವ ಪ್ರೊಫೆಸರ್ ವೈಶಾಲಿ ಗರ್ಬ್ಯಾಲ್ ಆಗಿರಬಹುದು, ಇಲ್ಲವೆ ವ್ಯಾಪಾರಿ ಸಮುದಾಯವಿರಬಹುದು. ಎಲ್ಲರೂ ಸರ್ವ ಪ್ರಯತ್ನದಲ್ಲಿ ತೊಡಗಿಕೊಂಡರು. ಈ ಅಭಿಯಾನದಲ್ಲಿ ಸಾಮಾಜಿಕ ಜಾಲತಾಣದ ಉಪಯೋಗವೂ ಸಾಕಷ್ಟು ಆಯಿತು. ಹಲವು ವಾಟ್ಸಪ್ ಗ್ರೂಪ್‍ಗಳು ಆದವು. ನೂರಾರು ಜನರು ಅದರಲ್ಲಿಯೂ ಸೇರಿದರು. ಈ ಭಾಷೆಗೆ ಯಾವುದೇ ಲಿಪಿಯಿಲ್ಲ. ಇದರ ಪ್ರಯೋಗ ಮಾತನಾಡುವುದಕ್ಕೆ ಮಾತ್ರ ಸೀಮಿತವಾಗಿದೆ. ಅದರಲ್ಲಿಯೇ ಜನರು ಕತೆ, ಕವಿತೆ ಇತ್ಯಾದಿ ಪೋಸ್ಟ್ ಮಾಡತೊಡಗಿದರು. ಒಬ್ಬರ ಭಾಷೆಯನ್ನು ಇನ್ನೊಬ್ಬರು ತಿದ್ದತೊಡಗಿದರು. ಒಂದು ರೀತಿಯಲ್ಲಿ ವಾಟ್ಸಪ್ ಗ್ರೂಪ್ ಒಂದು ಕ್ಲಾಸ್ ರೂಮಾಯಿತು. ಪ್ರತಿಯೊಬ್ಬರೂ ಶಿಕ್ಷಕರೂ ಹೌದು, ವಿದ್ಯಾರ್ಥಿಯೂ ಹೌದು. ರಂಗ ಲೋಕ ಈ ಉಪಭಾಷೆಯನ್ನು ಉಳಿಸುವ ಇಂತಹ ಪ್ರಯತ್ನದಲ್ಲಿ ತೊಡಗಿಕೊಂಡಿದೆ. ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪತ್ರಿಕೆ ಹೊರಡಿಸಲಾಗುತ್ತಿದೆ. ಇದರಲ್ಲಿ ಸಾಮಾಜಿಕ ಸಂಸ್ಥೆಗಳ ಸಹಾಯವೂ ಸಿಗುತ್ತಲಿದೆ.
ಬಂಧುಗಳೆ, ವಿಶೇಷವೆಂದರೆ ಸಂಯುಕ್ತ ರಾಷ್ಟ್ರ ಸಂಘವು 2019 ಅಂದರೆ ಪ್ರಸಕ್ತ ವರ್ಷವನ್ನು ‘’ಪ್ರಾದೇಶಿಕ ಭಾಷೆಗಳ ಅಂತರರಾಷ್ಟ್ರೀಯ ವರ್ಷ’’ ಎಂದು ಘೋಷಿಸಿದೆ. ಅಂದರೆ ಯಾವ ಭಾಷೆಗಳು ಅಳಿವಿನಂಚಿನಲ್ಲಿವೆಯೋ ಅವುಗಳನ್ನು ಸಂರಕ್ಷಿಸಲು ಒತ್ತು ನೀಡಲಾಗುತ್ತಿದೆ. ನೂರೈವತ್ತು ವರ್ಷಗಳ ಹಿಂದೆಯೇ ಆಧುನಿಕ ಹಿಂದಿಯ ಜನಕ ಭಾತತೆಂದು ಹರಿಶ್ಚಂದ್ರ ಹೀಗೆ ಹೇಳಿದ್ದರು-
ನಿಜ ಭಾಷಾ ಉನ್ನತಿ ಅಹೈ, ಸಬ್ ಉನ್ನತಿ ಕೊ ಮೂಲ,
ಬಿನ ನಿಜ ಭಾಷಾ ಜ್ಞಾನ ಕೆ, ಮಿಟತಾ ನ ಹಿಯ ಕೊ ಸೂಲ.
(ಮಾತೃ ಭಾಷೆಯ ಉನ್ನತಿಯಲ್ಲಿಯೇ, ಎಲ್ಲ ಉನ್ನತಿ ಯ ಮೂಲವಿದೆ)
ಅಂದರೆ, ಮಾತೃಭಾಷೆಯ ಜ್ಞಾನವಿಲ್ಲದಿದ್ದರೆ ಉನ್ನತಿ ಸಾಧ್ಯವಿಲ್ಲ. ಇಂತಹದ್ದರಲ್ಲಿ ‘ರಂಗ’ ಸಮುದಾಯದ ಈ ಒಂದು ಹೆಜ್ಜೆ ಇಡೀ ವಿಶ್ವಕ್ಕೇ ದಾರಿದೀಪವಾಗಿದೆ. ಒಂದು ವೇಳೆ ತಾವೂ ಈ ಕತೆಯಿಂದ ಪ್ರೇರಿತರಾಗಿದ್ದರೆ, ಇಂದಿನಿಂದಲೇ ಸ್ವತ: ನಿಮ್ಮ ಮಾತೃಭಾಷೆಯನ್ನು ಬಳಸಿರಿ. ಪರಿವಾರ ಮತ್ತು ಸಮಾಜವನ್ನೂ ಪ್ರೇರೆಪಿಸಿರಿ.
19 ನೇ ಶತಮಾನದ ಅಂತ್ಯದಲ್ಲಿ ಮಹಾಕವಿ ಸುಬ್ರಹ್ಮಣ್ಯಂ ಭಾರತಿಯವರು ಹೇಳಿದ್ದರು. ಅದೂ ತಮಿಳಿನಲ್ಲಿ ಹೇಳಿದ್ದರು. ಅದು ಕೂಡಾ ನಮಗೆ ಬಹಳ ಪ್ರೇರಣೆ ನೀಡುವಂಥದ್ದಾಗಿದೆ. ಸುಬ್ರಹ್ಮಣ್ಯಂ ಭಾರತಿಯವರು ತಮಿಳ್ ಭಾಷೆಯಲ್ಲಿ ಹೇಳಿದ್ದರು.
ಮುಪ್ಪದು ಕೋಡಿ ಮುಗಮುಡಯ್ಯಾಳ್
ಉಯಿರ್ ಮೊಯಿಂಬುರ್ ಓಂದ್ರುಡಯ್ಯಾಳ್
ಇವಳ್ ಸೆಪ್ಪು ಮೋಳಿ ಪದಿನೆಟ್ಟುಡೈಯ್ಯಾಳ್
ಎನಿರ್ ಸಿಂದನೈ ಓಂದ್ರುಡಯ್ಯಾಳ್
ಮತ್ತು ಆ ಸಮಯ 19 ನೇ ಶತಮಾನದ ಉತ್ತರಾರ್ಧದ ಅಂತ್ಯದ ಕುರಿತಾಗಿತ್ತು. ಅಲ್ಲದೆ ಭಾರತ ಮಾತೆಯ 30 ಕೋಟಿ ಮುಖಗಳಿವೆ ಆದರೆ ದೇಹವೊಂದೇ ಎಂದು ಅವರು ಹೇಳಿದ್ದಾರೆ. ಇಲ್ಲಿ 18 ಭಾಷೆಗಳನ್ನು ಮಾತಾಡುತ್ತಾರೆ ಆದರೆ ಆಲೋಚನೆ ಒಂದೇ.
ನನ್ನ ಪ್ರಿಯ ದೇಶವಾಸಿಗಳೇ, ಒಮ್ಮೊಮ್ಮೆ ಜೀವನದಲ್ಲಿ ಚಿಕ್ಕ ಚಿಕ್ಕ ವಿಷಯಗಳೂ ನಮಗೆ ಬಹುದೊಡ್ಡ ಸಂದೇಶ ನೀಡುತ್ತವೆ. ಈಗ ನೋಡಿ ಮಾಧ್ಯಮದಲ್ಲಿ ಸ್ಕೂಬಾ ಡೈವರ್‍ಗಳ ಬಗ್ಗೆ ಒಂದು ಕಥೆ ಓದುತ್ತಿದ್ದೆ. ಇದು ಪ್ರತಿಯೊಬ್ಬ ಭಾರತೀಯನಿಗೂ ಪ್ರೇರಣೆ ನೀಡುವಂಥ ಕಥೆಯಾಗಿದೆ. ವಿಶಾಖಪಟ್ಟಣದಲ್ಲಿ ಡೈವಿಂಗ್ ತರಬೇತಿ ನೀಡುವ ಸ್ಕೂಬಾ ಡೈವರ್ಸ್ ಒಂದು ದಿನ ಮಂಗಮರಿಪೇಟಾ ಬೀಚ್ ನಲ್ಲಿ ಸಮುದ್ರದಿಂದ ಹಿಂದಿರುಗುತ್ತಿದ್ದಾಗ ಸಮುದ್ರದಲ್ಲಿ ತೇಲುತ್ತಿದ್ದ ಕೆಲ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಚೀಲಗಳು ತಾಗುತ್ತಿದ್ದವು. ಇದನ್ನು ಸ್ವಚ್ಛಗೊಳಿಸುತ್ತಲೇ ವಿಷಯದ ಗಾಂಭೀರ್ಯ ಅವರಿಗೆ ಅರ್ಥವಾಯಿತು. ನಮ್ಮ ಸಮುದ್ರವನ್ನು ಒಂದಲ್ಲ ಒಂದು ರೀತಿಯಿಂದ ಕಸದಿಂದ ತುಂಬಿಸಲಾಗುತ್ತಿದೆ. ಕಳೆದ ಹಲವು ದಿನಗಳಿಂದ ಈ ಡೈವರ್ಸ್ ಸಮುದ್ರದಲ್ಲಿ, ದಡದ ಸುಮಾರು 100 ಮೀಟರ್ ದೂರ ಹೋಗುತ್ತಾರೆ ಆಳವಾದ ನೀರಿನಲ್ಲಿ ಮುಳುಗು ಹಾಕುತ್ತಾರೆ ಮತ್ತು ಅಲ್ಲಿರುವ ಕಸವನ್ನು ಹೊರತೆಗೆಯುತ್ತಾರೆ. ಅಲ್ಲದೇ 13 ದಿನಗಳಲ್ಲೇ ಅಂದರೆ 2 ವಾರಗಳೊಳಗೆ 4000 ಕಿಲೋದಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಅವರು ಹೊರತೆಗೆದಿದ್ದಾರೆ ಎಂದು ನನಗೆ ಹೇಳಲಾಗಿದೆ. ಈ ಸ್ಕೂಬಾ ಡೈವರ್ಸ್ ಗಳ ಪುಟ್ಟದೊಂದು ಆರಂಭ ಒಂದು ದೊಡ್ಡ ಆಂದೋಲನೆಯ ರೂಪ ತಾಳುತ್ತಿದೆ. ಈಗ ಇವರಿಗೆ ಸ್ಥಳೀಯರ ನೆರವೂ ಲಭಿಸುತ್ತಿದೆ. ಸುತ್ತ ಮುತ್ತಲ ಮೀನುಗಾರರೂ ಎಲ್ಲ ರೀತಿಯಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದಾರೆ. ಈ ಸ್ಕೂಬಾ ಡೈವರ್ಸ್‍ರಿಂದ ಪ್ರೇರಿತರಾಗಿ ನಾವೆಲ್ಲರೂ ಕೂಡಾ ಕೇವಲ ನಮ್ಮ ನೆರೆಹೊರೆಯ ಸ್ಥಳಗಳನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಸಂಕಲ್ಪಗೈದರೆ ಪ್ಲಾಸ್ಟಿಕ್ ಮುಕ್ತ ಭಾರತ ಸಂಪೂರ್ಣ ವಿಶ್ವಕ್ಕೆ ಒಂದು ಹೊಸ ನಿದರ್ಶನದಂತೆ ಹೊರಹೊಮ್ಮಬಹುದಾಗಿದೆ.
ನನ್ನ ಪ್ರಿಯ ದೇಶವಾಸಿಗಳೇ, 2 ದಿನಗಳ ನಂತರ 26 ನವೆಂಬರ್ ಇದೆ. ಇದು ಸಂಪೂರ್ಣ ದೇಶಕ್ಕೆ ಬಹಳ ವಿಶೇಷವಾದ ದಿನ. ನನ್ನ ಪ್ರಜಾಪ್ರಭುತ್ವಕ್ಕೆ ವಿಶೇಷವಾಗಿ ಮಹತ್ವಪೂರ್ಣವಾಗಿದೆ ಏಕೆಂದರೆ ಈ ದಿನವನ್ನು ನಾವು ಸಂವಿಧಾನ ದಿನವೆಂದು ಆಚರಿಸುತ್ತೇವೆ. ಈ ಬಾರಿಯ ಸಂವಿಧಾನ ದಿನ ಬಹಳ ವಿಶೇಷವಾದದ್ದಾಗಿದೆ. ಏಕೆಂದರೆ ಸಂವಿಧಾನವನ್ನು ಅಂಗೀಕರಿಸಿ 70 ವರ್ಷಗಳು ಪೂರ್ಣಗೊಳ್ಳುತ್ತಿವೆ. ಈ ಬಾರಿ ಈ ಸಂದರ್ಭದಲ್ಲಿ ಸಂಸತ್ತಿನಲ್ಲಿ ವಿಶೇಷ ಆಯೋಜನೆ ಮಾಡಲಾಗುತ್ತಿದೆ ಮತ್ತು ವರ್ಷ ಪೂರ್ತಿ ದೇಶಾದ್ಯಂತ ವಿಭಿನ್ನ ಕಾರ್ಯಕ್ರಮಗಳಿರುತ್ತವೆ. ಬನ್ನಿ, ಈ ಸಂದರ್ಭದಲ್ಲಿ ನಾವು ಸಂವಿಧಾನ ಸಭೆಯ ಎಲ್ಲ ಸದಸ್ಯರಿಗೂ ಆದರದಿಮದ ನಮಿಸೋಣ. ಶ್ರದ್ಧೆಯನ್ನು ಸಮರ್ಪಿಸೋಣ. ಭಾರತದ ಸಂವಿಧಾನ ಪ್ರತಿಯೊಬ್ಬ ನಾಗರಿಕನ ಅಧಿಕಾರಗಳನ್ನು ಮತ್ತು ಗೌರವವನ್ನು ರಕ್ಷಿಸುವಂಥದ್ದಾಗಿದೆ ಮತ್ತು ಇದು ನಮ್ಮ ಸಂವಿಧಾನ ನಿರ್ಮಾತೃಗಳ ದೂರದೃಷ್ಠಿಯಿಂದಲೇ ಸಾಧ್ಯವಾಗಿದೆ. ಸಂವಿಧಾನ ದಿನ ನಮ್ಮ ಆದರ್ಶಗಳನ್ನು ಎತ್ತಿ ಹಿಡಿಯುವ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಪಾಲುದಾರಿಕೆಯನ್ನು ನೀಡುವ ನಮ್ಮ ಬದ್ಧತೆಗೆ ಬಲ ನೀಡಲಿ ಎಂದು ನಾನು ಆಶಿಸುತ್ತೇನೆ. ಇದೇ ಕನಸನ್ನು ನಮ್ಮ ಸಂವಿಧಾನ ನಿರ್ಮಾತೃಗಳು ಕೂಡಾ ಕಂಡಿದ್ದರಲ್ಲವೇ!
ಪ್ರಿಯ ದೇಶ ಬಾಂಧವರೇ, ಚಳಿಗಾಲ ಆರಂಭವಾಗುತ್ತಿದೆ, ಚುಮು ಚುಮು ಚಳಿ ಈಗ ಅನುಭವವಾಗುತ್ತಿದೆ. ಹಿಮಾಲಯದ ಕೆಲ ಭಾಗ ಹಿಮದಿಂದಾವೃತವಾಗುತ್ತಿದೆ. ಆದರೆ, ಈ ಋತುಮಾನ ಫಿಟ್ ಇಂಡಿಯಾ ಮೊಮೆಂಟ್‍ನದ್ದಾಗಿದೆ. ನೀವು ನಿಮ್ಮ ಕುಟುಂಬ, ನಿಮ್ಮ ಮಿತ್ರ ವೃಂದ, ನಿಮ್ಮ ಸಹಚರರು ಈ ಅವಕಾಶ ಕಳೆದುಕೊಳ್ಳ ಬೇಡಿ. ‘ಫಿಟ್ ಇಂಡಿಯಾ ಮೊಮೆಂಟ್’ ಅನ್ನು ಮುಂದುವರೆಸಲು ಋತುಮಾನದ ಸಂಪೂರ್ಣ ಲಾಭ ಪಡೆಯಿರಿ.
ಅನಂತ ಅನಂತ ಶುಭಹಾರೈಕೆಗಳು. ಅನಂತ ಅನಂತ ಧನ್ಯವಾದಗಳು.
Today's #MannKiBaat begins with a special interaction with a few youngsters.
— PMO India (@PMOIndia) November 24, 2019
These are youngsters associated with the NCC.
PM Modi also conveys greetings to all NCC Cadets on NCC Day. https://t.co/omR3Qf3sSY
NCC Cadets are sharing their experiences with PM @narendramodi.
— PMO India (@PMOIndia) November 24, 2019
They are sharing how NCC has helped further national integration.
They are also narrating to PM about their recent visit to Singapore.
Do tune in. #MannKiBaat https://t.co/jjjScOqsPP
One of the NCC Cadets asks PM @narendramodi - were you ever punished while you were associated with the NCC?
— PMO India (@PMOIndia) November 24, 2019
Know what PM has to say. #MannKiBaat https://t.co/jjjScOqsPP
I have always liked being in the Himalayas.
— PMO India (@PMOIndia) November 24, 2019
But, if someone likes nature I would strongly urge you all to go to India's Northeast: PM @narendramodi #MannKiBaat
During #MannKiBaat, PM talks about the significance of Armed Forces Flag Day.
— PMO India (@PMOIndia) November 24, 2019
He pays tributes to the valour of our armed forces and at the same time appeals to the people of India to contribute towards the well-being of the welfare of the personnel of the armed forces.
Highlighting an interesting initiative by CBSE to promote fitness among youngsters.
— PMO India (@PMOIndia) November 24, 2019
PM @narendramodi also urges schools to follow a Fit India week in the month of December. #MannKiBaat pic.twitter.com/8HGflknTos
Do you know about Pushkaram?
— PMO India (@PMOIndia) November 24, 2019
A great festival held across various rivers, occurring once a year on the banks of each river.
It teaches us to respect nature, especially our rivers. #MannKiBaat pic.twitter.com/q10azETeb5
On the basis of valuable feedback, the 'Pariksha Pe Charcha' programme will be held earlier, sometime in January.
— PMO India (@PMOIndia) November 24, 2019
The feedback received after the last Town Hall Programme and from Exam Warriors book has been very valuable, says PM @narendramodi. #MannKiBaat pic.twitter.com/m9uZMmQFwT
PM @narendramodi once again thanks the 130 crore people of India for the manner in which the spirit of unity and brotherhood was furthered after the verdict on the Ram Janmabhoomi case. #MannKiBaat pic.twitter.com/ftmaoPsUYN
— PMO India (@PMOIndia) November 24, 2019
A news report from Uttarakhand's Dharchula caught PM @narendramodi's eye.
— PMO India (@PMOIndia) November 24, 2019
This was about how a group of people, across all age groups came together to preserve their language and further their culture. #MannKiBaat pic.twitter.com/ewxw8ZhN8t
A group of scuba divers made a strong contribution towards furthering cleanliness.
— PMO India (@PMOIndia) November 24, 2019
PM @narendramodi highlights their effort during #MannKiBaat. pic.twitter.com/8cATW4ClZk
A special Constitution Day this 26th.
— PMO India (@PMOIndia) November 24, 2019
Come, let us rededicate ourselves to the values enshrined in our Constitution. #MannKiBaat pic.twitter.com/kjSSzRG5Mx