Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಮಂಗೋಲಿಯಾ ಅಧ್ಯಕ್ಷ ಶ್ರೀ ಖಲ್ತ್‌ಮಾಗಿನ್ ಬಟುಲ್ಗಾ ಅವರಿಂದ ಬುದ್ಧನ ಪ್ರತಿಮೆಯ ಜಂಟಿ ಅನಾವರಣ


ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಮಂಗೋಲಿಯಾದ ಅಧ್ಯಕ್ಷರಾದ ಶ್ರೀ ಖಲ್ತ್‌ಮಾಗಿನ್ ಬಟುಲ್ಗಾ ಅವರು ಉಲಾನ್‌ಬಾತಾರ್‌ನ ಐತಿಹಾಸಿಕ ಗಂಡನ್ ತೆಗ್ಚೆನ್ಲಿಂಗ್ ಬೌದ್ಧವಿಹಾರದಲ್ಲಿ ಸ್ಥಾಪಿಸಲಾದ ಭಗವಾನ್ ಬುದ್ಧ ಮತ್ತು ಅವರ ಇಬ್ಬರು ಅನುಯಾಯಿಗಳ ಪ್ರತಿಮೆಯನ್ನು ಜಂಟಿಯಾಗಿ ಅನಾವರಣಗೊಳಿಸಿದರು.

ಪ್ರಧಾನ ಮಂತ್ರಿ 2015 ರಲ್ಲಿ ಮಂಗೋಲಿಯಾ ಭೇಟಿಯ ಸಂದರ್ಭದಲ್ಲಿ ಗಂಡನ್ ತೆಗ್ಚೆನ್ಲಿಂಗ್ ಬೌದ್ಧ ವಿಹಾರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು ಮತ್ತು ನಮ್ಮ ಎರಡು ದೇಶಗಳು ಮತ್ತು ಜನರ ನಡುವಿನ ಸಾಮಾನ್ಯ ಬೌದ್ಧ ಪರಂಪರೆ ಮತ್ತು ನಾಗರಿಕ ಸಂಬಂಧಗಳ ಬಗ್ಗೆ ತಿಳಿಸಿ, ಭಗವಾನ್ ಬುದ್ಧನ ಪ್ರತಿಮೆಯನ್ನು ಬೌದ್ಧ ವಿಹಾರಕ್ಕೆ ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದರು. ಈ ಪ್ರತಿಮೆಯು ಭಗವಾನ್ ಬುದ್ಧನು ತನ್ನ ಇಬ್ಬರು ಅನುಯಾಯಿಗಳೊಂದಿಗೆ ಕುಳಿತುಕೊಂಡಿರುವ ಭಂಗಿಯಲ್ಲಿದ್ದು, ಶಾಂತಿ ಮತ್ತು ಸಹಬಾಳ್ವೆಯೊಂದಿಗೆ ಸಹಾನುಭೂತಿಯ ಸಂದೇಶವನ್ನು ಸಾರುತ್ತದೆ. ಈ ತಿಂಗಳ ಆರಂಭದಲ್ಲಿ ಸೆಪ್ಟೆಂಬರ್ 6 ರಿಂದ 7 ರವರೆಗೆ ಉಲಾನ್‌ಬಾತಾರ್‌ನಲ್ಲಿ ನಡೆದ SAMVAAD ಸಮಾವೇಶದ ಮೂರನೇ ಆವೃತ್ತಿಯ ಸಂದರ್ಭದಲ್ಲಿ ಗಂಡನ್ ವಿಹಾರಕೇಂದ್ರದಲ್ಲಿ ಈ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು. SAMVAAD ಸಂವಾದದ ಮೂರನೇ ಆವೃತ್ತಿಯು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಸಮಕಾಲೀನ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬೌದ್ಧ ಧಾರ್ಮಿಕ ಮುಖಂಡರು, ತಜ್ಞರು ಮತ್ತು ವಿವಿಧ ದೇಶಗಳ ವಿದ್ವಾಂಸರನ್ನು ಸೇರಿತ್ತು. ಗಂಡನ್ ತೆಗ್ಚೆನ್ಲಿಂಗ್ ವಿಹಾರವು ಮಂಗೋಲಿಯನ್ ಬೌದ್ಧರ ಪ್ರಮುಖ ಕೇಂದ್ರವಾಗಿದೆ ಮತ್ತು ಬೌದ್ಧ ಪರಂಪರೆಯ ಅಮೂಲ್ಯವಾದ ನಿಧಿಯಾಗಿದೆ. ಇದು ಏಷ್ಯನ್ ಬೌದ್ಧ ಶಾಂತಿ ಸಮ್ಮೇಳನದ 50 ನೇ ವರ್ಷಾಚರಣೆಯ ಪ್ರಯುಕ್ತ 21 ಜೂನ್ 23 ರಿಂದ 2019 ರವರೆಗೆ ಏಷ್ಯನ್ ಬೌದ್ಧ ಶಾಂತಿ ಸಮ್ಮೇಳನದ

11 ನೇ ಸಾಮಾನ್ಯ ಸಭೆಯನ್ನು ಆಯೋಜಿಸಿತು. ಭಾರತ, ದಕ್ಷಿಣ ಕೊರಿಯಾ, ರಷ್ಯಾ, ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್, ನೇಪಾಳ, ಉತ್ತರ ಕೊರಿಯಾ, ಎಲ್‌ಪಿಡಿಆರ್, ಥೈಲ್ಯಾಂಡ್, ಜಪಾನ್ ಸೇರಿದಂತೆ 14 ದೇಶಗಳ 150 ಕ್ಕೂ ಹೆಚ್ಚು ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಂಗೋಲಿಯನ್ ಅಧ್ಯಕ್ಷರಾದ ಖಲ್ಟ್‌ಮಾಗಿನ್ ಬಟುಲ್ಗಾ ಅವರಿಂದ ಇಂದು ಅನಾವರಣಗೊಂಡ ಈ ಪ್ರತಿಮೆಯು ಭಗವಾನ್ ಬುದ್ಧನ ಸಾರ್ವತ್ರಿಕ ಸಂದೇಶಕ್ಕೆ ಉಭಯ ದೇಶಗಳ ಪರಸ್ಪರ ಗೌರವವನ್ನು ಸಂಕೇತಿಸುತ್ತದೆ.

*******