ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಪಾನ್-ಇಂಡಿಯಾ ಅಸೋಸಿಯೇಷನ್ (JIA) ಅಧ್ಯಕ್ಷರು ಮತ್ತು ಜಪಾನ್ನ ಮಾಜಿ ಪ್ರಧಾನಿ ಹೆಚ್.ಇ. ಶ್ರೀ ಯೋಶಿಹಿಡೆ ಸುಗಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಶ್ರೀ ಸುಗಾ ಅವರು ಸರ್ಕಾರಿ ಅಧಿಕಾರಿಗಳು, ಕೀಡಾನ್ರೆನ್ (ಜಪಾನ್ ಬ್ಯುಸಿನೆಸ್ ಫೆಡರೇಶನ್) ಮತ್ತು “ಗಣೇಶ ನೋ ಕೈ” ಸಂಸದರನ್ನು ಒಳಗೊಂಡ 100 ಕ್ಕೂ ಹೆಚ್ಚು ಸದಸ್ಯರ ನಿಯೋಗದೊಂದಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ.
ಜೆಐಎ ಅಧ್ಯಕ್ಷರಾಗಿ ಭಾರತಕ್ಕೆ ಇದೇ ಚೊಚ್ಚಲ ಬಾರಿ ಭೇಟಿ ನೀಡುತ್ತಿರುವ ಶ್ರೀ ಸುಗಾ ಅವರನ್ನು ಪ್ರಧಾನಮಂತ್ರಿಗಳು ಸ್ವಾಗತಿಸಿದರು. ಹೂಡಿಕೆ ಮತ್ತು ಆರ್ಥಿಕ ಸಹಕಾರ, ರೈಲ್ವೆ, ಜನರಿಂದ ಜನರ ನಡುವಿನ ಸಂಪರ್ಕ, ಕೌಶಲ್ಯ ಅಭಿವೃದ್ಧಿ, ಪಾಲುದಾರಿಕೆ ಸೇರಿದಂತೆ ಭಾರತ ಮತ್ತು ಜಪಾನ್ ನಡುವಿನ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯನ್ನು ಇನ್ನಷ್ಟು ವೃದ್ಧಿಗೊಳಿಸುವ ಕುರಿತು ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
ಉಭಯ ದೇಶಗಳ ನಡುವಿನ ಸಂಸದೀಯ ಸಂಪರ್ಕವನ್ನು ಬಲಪಡಿಸುವ ಕುರಿತು “ಗಣೇಶ ನೋ ಕೈ” ಸಂಸದೀಯ ಗುಂಪಿನಲ್ಲಿರುವ ಸದಸ್ಯರೊಂದಿಗೆ ಪ್ರಧಾನ ಮಂತ್ರಿಗಳು ಫಲಪ್ರದ ಸಂವಾದ ನಡೆಸಿದರು. ಜಪಾನ್ನಲ್ಲಿ ಯೋಗ ಮತ್ತು ಆಯುರ್ವೇದದ ಜನಪ್ರಿಯತೆ ಹೆಚ್ಚಾಗಿರುವುದನ್ನು ಸ್ವಾಗತಾರ್ಹ ಎಂದು ಪ್ರಧಾನಮಂತ್ರಿ ತಿಳಿಸಿದರು. ಭಾರತ ಮತ್ತು ಜಪಾನ್ ನಡುವಿನ ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಿದರು.
ಕೀಡಾನ್ರೆನ್ ಸದಸ್ಯರನ್ನು ಪ್ರಧಾನಮಂತ್ರಿಯವರು ಸ್ವಾಗತಿಸಿದರು. ವ್ಯಾಪಾರ ವ್ಯವಸ್ಥೆಯನ್ನು ಸುಧಾರಿಸಲು ದೇಶದಲ್ಲಿ ಕೈಗೊಂಡ ವ್ಯಾಪಕ ಸುಧಾರಣೆಗಳ ಬಗ್ಗೆ ಹಾಗೂ ಜಪಾನಿನ ಹೂಡಿಕೆದಾರರನ್ನು ಹೂಡಿಕೆಗಳನ್ನು ವಿಸ್ತರಿಸಲು ಮತ್ತು ಸಹಕಾರದ ಹೊಸ ಮಾರ್ಗಗಳನ್ನು ಅನ್ವೇಷಿಸಬೇಕೆಂದು ಪ್ರಧಾನಮಂತ್ರಿಗಳು ತಿಳಿಸಿದರು.
****
Glad to receive Mr. @sugawitter, Chairman JIA and former PM of Japan, along with the ‘Ganesha group’ of Japanese Parliamentarians and @keidanren CEOs. Had engaging discussion on deepening our Special Strategic and Global Partnership in different areas, including parliamentary… pic.twitter.com/J2NsvngzV1
— Narendra Modi (@narendramodi) July 6, 2023