Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ಮನ್ ಕಿ ಬಾತ್ 2.0’ – 15 ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ


ನನ್ನ ಪ್ರಿಯ ದೇಶವಾಸಿಗಳೇನಮಸ್ಕಾರ.ಸಾಮಾನ್ಯವಾಗಿ ಇದು ಉತ್ಸವಗಳ ಸಮಯಅಲ್ಲಲ್ಲಿ ಜಾತ್ರೆಗಳನ್ನು ಆಯೋಜಿಸಲಾಗಿದೆಧಾರ್ಮಿಕ ಪೂಜೆ ಪುನಸ್ಕಾರಗಳು ನಡೆಯುತ್ತವೆಕೊರೊನಾದ  ಸಂಕಟದ ಸ್ಥಿತಿಯಲ್ಲಿ ಜನರಲ್ಲಿ ಸಂಭ್ರಮವಂತೂ ಇದೆತ್ಸಾಹವೂ ಇದೆ ಆದರೆ ನಮ್ಮೆಲ್ಲರ ಮನಸ್ಸನ್ನು ಕಲಕುವಂತಹ ಶಿಸ್ತೂ ಇದೆಒಟ್ಟಾರೆ ನೋಡುವುದಾದರೆ ನಾಗರಿಕರಲ್ಲಿ  ಕರ್ತವ್ಯದ ಅರಿವಿದೆಜನರು ತಮ್ಮ ಬಗ್ಗೆ ಎಚ್ಚರಿಕೆ ವಹಿಸುತ್ತಲೇಬೇರೆಯವರ ಬಗ್ಗೆ ಎಚ್ಚರಿಕೆವಹಿಸಿ ತಮ್ಮ ದೈನಂದಿನ ಕೆಲಸಗಳನ್ನು ಕೂಡಾ ಮಾಡುತ್ತಿದ್ದಾರೆದೇಶದಲ್ಲಿ ಆಯೋಜಿಸಲಾಗುತ್ತಿರುವ ಎಲ್ಲ ಕಾರ್ಯಕ್ರಮಗಳಲ್ಲಿ  ಬಾರಿ ಸರಳತೆ ಮತ್ತು ಸಂಯಮವನ್ನು ಕಾಯ್ದುಕೊಳ್ಳಲಾಗುತ್ತಿರುವುದು ಅಭುತಪೂರ್ವವಾಗಿದೆಕೆಲವೆಡೆ ಗಣೇಶ ಉತ್ಸವವನ್ನು ಆನ್ ಲೈನ್ ನಲ್ಲಿ ಆಚರಿಸಲಾಗುತ್ತಿದೆ ಇದೇ ವೇಳೆ ಹಲವೆಡೆ  ಬಾರಿ ನೈಸರ್ಗ ಸ್ನೇಹಿ ಗಣೇಶ ಪ್ರತಿಮೆಯನ್ನು ಸ್ಥಾಪಿಸಲಾಗಿದೆಸ್ನೇಹಿತರೆನಾವು ಸೂಕ್ಷ್ಮವಾಗಿ ಗಮನಿಸಿದರೆನಮ್ಮ ಹಬ್ಬಗಳು ಮತ್ತು ಪರಿಸರದ ಕುರಿತು ಖಂಡಿತ ನಮ್ಮ ಮನದಲ್ಲಿ ಒಂದು ವಿಷಯ ಮೂಡುತ್ತದೆಇವೆರಡ ಮಧ್ಯೆ ಬಹಳ ಗಾಢವಾದ ಸಂಬಂಧವಿದೆಒಂದೆಡೆ ನಮ್ಮ ಹಬ್ಬಹರಿದಿನಗಳಲ್ಲಿ ಪರಿಸರ ಮತ್ತು ಪ್ರಕೃತಿಯ ಜೊತೆಗೆ ಸಹಜೀವನದ ಸಂದೇಶ ಅಡಗಿದ್ದರೆ ಮತ್ತೊಂದೆಡೆ ಹಲವಾರು ಹಬ್ಬಗಳನ್ನು ಪ್ರಕೃತಿಯ ರಕ್ಷಣೆಗೆಂದೇ ಆಚರಿಸಲಾಗುತ್ತದೆಬಿಹಾರದ ಪಶ್ಚಿಮ ಚಂಪಾರಣ್ ನಲ್ಲಿ ಯುಗ ಯುಗಗಳಿಂದ ಥಾರು ಬುಡಕಟ್ಟು ಸಮಾಜದ ಜನರು 60 ಗಂಟೆಗಳ ಲಾಕ್ ಡೌನ್ ಅಥವಾ ಅವರದೇ ಭಾಷೆಯಲ್ಲಿ ಹೇಳುವುದಾದರೆ 60 ಗಂಟೆಗಳ ನಿಷೇಧ ವನ್ನು ಆಚರಿಸುತ್ತಾರೆಪ್ರಕೃತಿಯ ರಕ್ಷಣೆಗಾಗಿ ಥಾರು ಸಮಾಜದ ಜನತೆ ನಿಷೇಧವನ್ನು ತಮ್ಮ ಪರಂಪರೆಯ ಒಂದು ಭಾಗವನ್ನಾಗಿಸಿಕೊಂಡಿದೆ ಮತ್ತು ಯುಗಗಳಿಂದ ಅದನ್ನು ಪಾಲಿಸುತ್ತಾ ಬಂದಿದೆ ಅವಧಿಯಲ್ಲಿ ಯಾರೂ ಗ್ರಾಮದೊಳಗೆ ಪ್ರವೇಶಿಸುವುದಿಲ್ಲ ಮತ್ತು ಯಾರೂ ತಮ್ಮ ಮನೆಯಿಂದ ಹೊರಬೀಳುವುದಿಲ್ಲಅಲ್ಲದೆ ತಾವು ಹೊರ ಹೋದರೆ ಅಥವಾ ಯಾರಾದರೂ ಹೊರಗಿನಿಂದ ಬಂದರೆ ಅವರು ಬಂದು ಹೋಗುವುದರಿಂದ ಮತ್ತು ಜನರ ದೈನಂದಿನ ಕೆಲಸಕಾರ್ಯಗಳಿಂದ ಹೊಸ ಗಿಡ ಮರಗಳಿಗೆ ನಷ್ವಾಗಬಹುದು ಎಂದು ಅವರು ನಂಬುತ್ತಾರೆನಿಷೇಧದ ಆರಂಭಕ್ಕೂ ಮೊದಲು ನಮ್ಮ ಬುಡಕಟ್ಟು ಸಮುದಾಯದ ಸೋದರ ಸೋದರಿಯರು ಭವ್ಯವಾದ ರೀತಿಯಲ್ಲಿ ಪೂಜೆ ಪ್ರವಚನ ನಡೆಸುತ್ತಾರೆ ಮತ್ತು ಮುಕ್ತಾಯದಲ್ಲಿ ಬುಡಕಟ್ಟು ಸಾಂಪ್ರದಾಯಿಕ ಗೀತೆಸಂಗೀತನೃತ್ಯದ ಅದ್ಭುತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ

ಸ್ನೇಹಿತರೆಇಂದು ಓನಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಹಬ್ಬ ಚಿಂಗಂ ಮಾಸದಲ್ಲಿ ಬರುತ್ತದೆ ಸಮಯದಲ್ಲಿ ಜನರು ಏನನ್ನಾದರೂ ಹೊಸ ವಸ್ತುವನ್ನು ಖರೀದಿಸುತ್ತಾರೆತಮ್ಮ ಮನೆಗಳನ್ನು ಸಿಂಗರಿಸುತ್ತಾರೆಹೂವಿನ ರಂಗೋಲಿ ಹಾಕುತ್ತಾರೆಓಣಂ ಹಬ್ಬದ ಆನಂದವನ್ನು ಅನುಭವಿಸುತ್ತಾರೆವಿವಿಧ ಬಗೆಯ ಕ್ರೀಡೆಗಳುಸ್ಪರ್ಧೆಗಳನ್ನೂ ಆಯೋಜಿಸಲಾಗುತ್ತದೆಓಣಂ ಹಬ್ಬದ ಸಡಗರ ಇಂದು ದೂರದ ವಿದೇಶಗಳಿಗೂ ಹಬ್ಬಿದೆಅಮೇರಿಕಾ ಆಗಲಿಯುರೋಪ್ ಆಗಲಿ ಅಥವಾ ಖಾಡಿ ದೇಶವೇ ಆಗಲಿ ಓಣಂ ಹಬ್ಬದ ಉಲ್ಲಾಸ ನಿಮಗೆ ಎಲ್ಲೆಡೆ ನೋಡಲು ಸಿಗುತ್ತದೆಓಣಂ ಈಗ ಒಂದು ಅಂತಾರಾಷ್ಟ್ರೀಯ ಹಬ್ಬವಾಗುತ್ತಾ ಸಾಗಿದೆ

ಸ್ನೇಹಿತರೆಓಣಂ ನಮ್ಮ ಕೃಷಿಗೆ ಸಂಬಂಧಸಿದ ಹಬ್ಬವಾಗಿದೆಇದು ನಮ್ಮ ಗ್ರಾಮೀಣ ಅರ್ಥವ್ಯವಸ್ಥೆಗೆ ಒಂದು ಹೊಸ ಆರಂಭದ ಸಮಯವಾಗಿರುತ್ತದೆಕೃಷಿಕರ ಶಕ್ತಿಯಿಂದಲೇ ನಮ್ಮ ಜೀವನನಮ್ಮ ಸಮಾಜ ಸಾಗುತ್ತದೆಯಲ್ಲವೇನಮ್ಮ ಹಬ್ಬಗಳು ಕೃಷಿಕರ ಪರಿಶ್ರಮದಿಂದಲೇ ವರ್ಣಮಯವಾಗುತ್ತವೆನಮ್ಮ ಅನ್ನದಾತರಕೃಷಿಕರ ಜೀವನಧಾರೆಯ ಶಕ್ತಿಗೆ ವೇದಗಳಲ್ಲೂ ಗೌರವಪೂರ್ಣ ನಮನ ಸಲ್ಲಿಸಲಾಗಿದೆ.

ಋಗ್ವೇದದಲ್ಲಿ ಮಂತ್ರವೊಂದಿದೆ 

ಅನ್ನಾನಾಂ ಪತಯೇ ನಮಃಕ್ಷೇತ್ರಾಣಾಂ ಪತಯೇ ನಮಃ,

ಅಂದರೆ ಅನ್ನದಾತನಿಗೆ ನಮಸ್ಕಾರಗಳು ಕೃಷಿಕನಿಗೆ ನಮಸ್ಕಾರಗಳುನಮ್ಮ  ಕೃಷಿಕರು ಕೊರೊನಾದ  ಕಠಿಣ ಪರಿಸ್ಥಿತಿಯಲ್ಲೂ ತಮ್ಮ ಶಕ್ತಿಯನ್ನು ಸಾಬೀತುಪಡಿಸಿದ್ದಾರೆನಮ್ಮ ದೇಶದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ  ಬಾರಿ ಮುಂಗಾರು ಬೆಳೆಯ ಬಿತ್ತನೆ ಶೇ 7 ರಷ್ಟು ಹೆಚ್ಚಾಗಿದೆ.  ಧಾನ್ಯಗಳ ಬಿತ್ತನೆ  ಬಾರಿ ಸುಮಾರು ಶೇ 10 ರಷ್ಟುಬೇಳೆಕಾಳುಗಳ  ಬಿತ್ತನೆ  ಸುಮಾರು ಶೇ 5 ರಷ್ಟುಪ್ರಧಾನ ಧಾನ್ಯಗಳು ಸುಮಾರು ಶೇ 3 ರಷ್ಟು ಹೆಚ್ಚಾಗಿ ಬಿತ್ತನೆಯಾಗಿವೆಇದಕ್ಕಾಗಿ ದೇಶದ ಕೃಷಿಕ ಬಂಧುಗಳನ್ನು ಅಭಿನಂದಿಸುತ್ತೇನೆಅವರ ಪರಿಶ್ರಮಕ್ಕೆ ನಮಿಸುತ್ತೇನೆ.    

ನನ್ನ ಪ್ರಿಯ ದೇಶಬಾಂಧರೆಕೊರೊನಾದ  ಕಾಲಘಟ್ಟದಲ್ಲಿ ದೇಶ ಹಲವಾರು ವಿಷಯಗಳ ವಿರುದ್ಧ ಒಟ್ಟೊಟ್ಟಿಗೇ ಹೋರಾಡುತ್ತಿದೆಆದರೆ ಇದರ ಜೊತೆಗೆ ಹಲವಾರು ಬಾರಿ ಇಷ್ಟೊಂದು ಸುದೀರ್ಘಾವಧಿ ಮನೆಯಲ್ಲೇ ಉಳಿಯುವುದರಿದ ನನ್ನ ಪುಟ್ಟ ಬಾಲಮಿತ್ರರ ಸಮಯ ಹೇಗೆ ಕಳೆಯುತ್ತಿರಬಹುದು ಎಂಬ ಪ್ರಶ್ನೆಯೂ ಮನದಲ್ಲಿ ಮೂಡುತ್ತದೆಇದರಿಂದಾಗಿಯೇ ವಿಶ್ವದಲ್ಲೇ ಒಂದು ವಿಭಿನ್ನ ಪ್ರಯತ್ನವಾಗಿರುವ ಗಾಂಧಿನಗರದಲ್ಲಿರುವ ಮಕ್ಕಳ ವಿಶ್ವ ವಿದ್ಯಾಲಯ,  ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಸಚಿವಾಲಯಶಿಕ್ಷಣ ಸಚಿವಾಲಯಸಣ್ಣಲಘು ಮತ್ತು  ಮಧ್ಯಮ ಉದ್ಯೋಗಗಳ ಸಚಿವಾಲಯಗಳೊಂದಿಗೆ ಸೇರಿ ನಾವು ಮಕ್ಕಳಿಗಾಗಿ ಏನು ಮಾಡಬಹುದುಇದರ ಬಗ್ಗೆ ಚಿಂತನ ಮಂಥನಗಳು ನಡೆದವುಇದು ನನಗೆ ಬಹಳ ಆಹ್ಲಾದಕರ ಮತ್ತು ಲಾಭದಾಯಕವಾಗಿತ್ತು ಏಕೆಂದರೆ ಒಂದು ರೀತಿಯಲ್ಲಿ ಇದು ನನಗೆ ಹೊಸತನ್ನು ಅರಿಯುವಹೊಸತನ್ನು ಕಲಿಯುವಂಥ ಅವಕಾಶವಾಗಿತ್ತು.      

 

ಸ್ನೇಹಿತರೆಆಟಿಕೆಗಳು ಅದರಲ್ಲೂ ವಿಶೇಷವಾಗಿ ಭಾರತೀಯ ಆಟಿಕೆಗಳು ಎಂಬುದು ನಮ್ಮ ಚಿಂತನೆಯ ವಿಷಯವಾಗಿತ್ತುಭಾರತೀಯ ಮಕ್ಕಳಿಗೆ ಹೊಸ ಹೊಸ ಆಟಿಕೆಗಳು ಹೇಗೆ ಸಿಗಬೇಕುಭಾರತ ಆಟಿಕೆಗಳ ಉತ್ಪಾದನಾ ಕೇಂದ್ರ ಹೇಗೆ ಆಗಬೇಕು ಎಂಬುದರ ಕುರಿತು ವಿಚಾರ ವಿಮರ್ಶೆ ನಡೆಯಿತುಅಂದ ಹಾಗೆ ಮನದ ಮಾತನ್ನು ಕೇಳುತ್ತಿರುವ ಎಲ್ಲ ಮಕ್ಕಳ ತಂದೆತಾಯಿಯರಲ್ಲಿ ಕ್ಷಮೆ ಕೇಳುತ್ತೇನೆ ಏಕೆಂದರೆ ಬಹುಶಃ  ಮನದ ಮಾತನ್ನು ಕೇಳಿದ ನಂತರ ಆಟಿಕೆಗಳ ಹೊಸ ಹೊಸ ಬೇಡಿಕೆಗಳನ್ನು ಕೇಳುವಂತಹ  ಹೊಸತೊಂದು ಕೆಲಸ ಅವರ ಮನಸ್ಸಲ್ಲಿ ಮೂಡಬಹುದು.

ಸ್ನೇಹಿತರೆಆಟಿಕೆಗಳು ಚಟುವಟಿಕೆಯನ್ನು ವೃದ್ಧಿಸುವಂತಹವಾಗಿರುವುದರ ಜೊತೆಗೆ ನಮ್ಮ ಆಕಾಂಕ್ಷೆಗಳಿಗೂ ರೆಕ್ಕೆ ಮೂಡಿಸುತ್ತವೆಆಟಿಕೆಗಳು ಕೇವಲ ಮನಸ್ಸನ್ನು ಉಲ್ಲಸಿತಗೊಳಿಸುವುದಲ್ಲದೆ ಮನಸ್ಸುಗಳನ್ನು ರೂಪಿಸುತ್ತವೆ ಮತ್ತು ಗುರಿಗಳನ್ನು ಗಟ್ಟಿಗೊಳಿಸುತ್ತವೆಆಟಿಕೆಗಳ ಕುರಿತು ಗುರುದೇವ ರವೀಂದ್ರನಾಥ ಟ್ಯಾಗೋರರು ಯಾವ ಆಟಿಕೆ ಅಪೂರ್ಣವಾದುದಾಗಿರುತ್ತದೆ ಅದೇ ಅತ್ಯುತ್ತಮವಾದುದಾಗಿರುತ್ತದೆಅದು ಎಂಥ ಆಟಿಕೆಯಾಗಿರಬೇಕೆಂದರೆ ಅದು ಅಪೂರ್ಣವಾಗಿರಬೇಕು ಮತ್ತು ಮಕ್ಕಳೆಲ್ಲ ಸೇರಿ ಅದನ್ನು ಪೂರ್ತಿಗೊಳಿಸಬೇಕು ಎಂದು ಹೇಳಿರುವುದನ್ನು ನಾನು ಎಲ್ಲೋ ಓದಿದ್ದೆಗುರುದೇವ ಟ್ಯಾಗೋರರು ತಾವು ಚಿಕ್ಕವರಾಗಿದ್ದಾಗ ತಮ್ಮದೇ ಕಲ್ಪನೆಯಿಂದ ಮನೆಯಲ್ಲಿರುವ ವಸ್ತುಗಳನ್ನೇ ಬಳಸಿತಮ್ಮ ಸ್ನೇಹಿತರೊಂದಿಗೆ ಸೇರಿ ತಮ್ಮ ಆಟಿಕೆಗಳನ್ನು ಮಾಡುತ್ತಿದ್ದರು ಮತ್ತು  ಆಟವನ್ನು ಆಡುತ್ತಿದ್ದರುಆದರೆ ಒಂದು ದಿನ ಬಾಲ್ಯದ  ಮೋಜಿನ ಕ್ಷಣಗಳಲ್ಲಿ ಹಿರಿಯರ ಹಸ್ತಕ್ಷೇಪವಾಯಿತುಅವರ ಒಬ್ಬ ಸ್ನೇಹಿತಒಂದು ದೊಡ್ಡಸುಂದರ ವಿದೇಶದ ಆಟಿಕೆಯನ್ನು ತೆಗೆದುಕೊಂಡು ಬಂದಆಟಿಕೆಯನ್ನು ತೋರಿಸುತ್ತಾ ಗರ್ವದಿಂದ ಬೀಗುತ್ತಿರುವಾಗ ಆಟಕ್ಕಿಂತ ಹೆಚ್ಚು ಆಟಿಕೆಯ ಮೇಲೆ  ಎಲ್ಲ ಸ್ನೇಹಿತರ ಗಮನ ಕೇಂದ್ರೀಕೃತವಾಗಿತ್ತುಎಲ್ಲರ ಆಕರ್ಷಣೆಯ ಕೇಂದ್ರ ಆಟದ ಬದಲಿಗೆ ಆಟಿಕೆಯಾಗಿತ್ತುಯಾವ ಮಗು ನಿನ್ನೆವರೆಗೆ ಎಲ್ಲ ಮಕ್ಕಳೊಂದಿಗೆ ಆಡುತ್ತಿದ್ದನೋಎಲ್ಲರೊಂದಿಗೆ ಇರುತ್ತಿದ್ದನೋಬೆರೆತುಹೋಗುತ್ತಿದ್ದನೋಆಟದಲ್ಲಿ ಮುಳುಗಿಹೋಗುತ್ತಿದ್ದನೋಈಗ ಆತ ದೂರ ಉಳಿಯಲಾರಂಭಿಸಿದಒಂದು ರೀತಿಯಲ್ಲಿ ಬೇರೆ ಮಕ್ಕಳಿಗಿಂತ ಭಿನ್ನ ಎನ್ನುವ ಭಾವ ಅವನ ಮನದಲ್ಲಿ ಬೇರೂರಿತುದುಬಾರಿ ಆಟಿಕೆಯಲ್ಲಿ ಮಾಡಲು ಏನೂ ಇರಲಿಲ್ಲಕಲಿಯಲೂ ಏನೂ ಇರಲಿಲ್ಲಅಂದರೆಒಂದು ಆಕರ್ಷಕ ಆಟಿಕೆ ಪ್ರತಿಭಾವಂತ ಮಗುವೊಂದನ್ನು ಎಲ್ಲೋ ತುಳಿದುಹಾಕಿತುಹುದುಗಿಸಿಟ್ಟಿತುಬಡವಾಗಿಸಿತು ಆಟಿಕೆ ಹಣದಸಂಪತ್ತಿನದೊಡ್ಡಸ್ತಿಕೆಯ ಪ್ರಸರ್ಶನ ಮಾಡಿತು ಆದರೆ ಮಗುವಿನ ಸೃಜನಶೀಲ ಮನೋಭಾವ ಬೆಳೆಯುವುದನ್ನು ಮತ್ತು ವಿಕಸನಗೊಳ್ಳುವುದನ್ನು ನಿರ್ಬಂಧಿಸಿತುಆಟಿಕೆಯೇನೋ ಬಂತು ಆದರೆ ಆಟವೇ ಮುಗಿದುಹೋಯಿತುಮಗುವಿನ ಬೆಳವಣಿಗೆಯೂ ಕುಂಠಿತವಾಯಿತುಆದ್ದರಿಂದ ಗುರುದೇವ ಹೇಳುತ್ತಿದ್ದರು ಆಟಿಕೆ ಹೇಗಿರಬೇಕೆಂದರೆ ಮಕ್ಕಳ ಬಾಲ್ಯವನ್ನು ಹೊರಹೊಮ್ಮಿಸುವಂತಿರಬೇಕುಅವರ ಸೃಜನಶೀಲತೆಯನ್ನು ಬಿಂಬಿಸುವಂತಿರಬೇಕುಮಕ್ಕಳ ಬೇರೆ ಬೇರೆ ಆಯಾಮಗಳ ಮೇಲೆ ಆಟಿಕೆಗಳ ಪ್ರಭಾವದ ಕುರಿತು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬಹಳಷ್ಟು ಗಮನಹರಿಸಲಾಗಿದೆಆಡುತ್ತಾ ಕಲಿಯುವುದುಆಟಿಕೆಗಳನ್ನು ತಯಾರಿಸುವುದನ್ನು ಕಲಿಯುವುದುಟಿಕೆಗಳನ್ನು ಸಿದ್ಧಪಡಿಸುವ ಸ್ಥಳಕ್ಕೆ ಭೇಟಿ ನೀಡುವುದುಇವೆಲ್ಲವನ್ನು ಕಲಿಕೆಯ ಭಾಗವನ್ನಾಗಿಸಿದೆ.

ಸ್ನೇಹಿತರೆನಮ್ಮ ದೇಶದಲ್ಲಿ ಸ್ಥಳೀಯ ಆಟಿಕೆಗಳ ಸಮೃದ್ಧ ಪರಂಪರೆಯಿದೆಅತ್ಯುತ್ತಮ ಆಟಿಕೆಗಳನ್ನು ತಯಾರಿಸುವಲ್ಲಿ ಸಿದ್ಧಹಸ್ತರಾದ ಬಹಳಷ್ಟು ಪ್ರತಿಭಾವಂತ ಕುಶಲಕರ್ಮಿಗಳಿದ್ದಾರೆಭಾರತದಲ್ಲಿ ಕೆಲವೊಂದು ಕ್ಷೇತ್ರಗಳು ಟಾಯ್ ಕ್ಲಸ್ಟರ್ ಅಂದರೆ ಆಟಿಕೆಗಳ ಕೇಂದ್ರಗಳಾಗಿಯೂ ವಿಕಸಿತಗೊಳ್ಳುತ್ತಿವೆಉದಾಹರಣೆಗೆ ಕರ್ನಾಟಕದ ರಾಮನಗರದ ಚನ್ನಪಟ್ಟಣಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಕೊಂಡಪಲ್ಲಿತಮಿಳುನಾಡಿನ ತಂಜಾವೂರ್ಅಸ್ಸಾಂನ ದುಭರಿಉತ್ತರ ಪ್ರದೇಶದ ವಾರಣಾಸಿಇಂಥ ಅದೆಷ್ಟೋ ಸ್ಥಳಗಳಿವೆಬಹಳಷ್ಟು ಹೆಸರುಗಳನ್ನು ಪಟ್ಟಿ ಮಾಡಬಹಯದಾಗಿದೆಜಾಗತಿಕ ಆಟಿಕೆಗಳ ಉದ್ಯಮ ರೂ 7 ಲಕ್ಷ ಕೋಟಿ ಗಿಂತ ಅಧಿಕ ವ್ಯವಹಾರ ಹೊಂದಿದೆ ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು.  ರೂ 7 ಲಕ್ಷ ಕೋಟಿ ಗಿಂತ ಹೆಚ್ಚಿನ ವ್ಯವಹಾರದ ಇಷ್ಟು ದೊಡ್ಡ ಉದ್ಯಮವಾದರೂ ಭಾರತದ ಪಾಲುದಾರಿಕೆ ಇದರಲ್ಲಿ ಬಹಳ ಕಡಿಮೆಯಿದೆಯಾವ ರಾಷ್ಟ್ರದ ಬಳಿ ಇಷ್ಟು ಅಗಾಧವಾದ ಬಳುವಳಿ ಇದೆಪರಂಪರೆಯಿದೆವಿವಿಧತೆಯಿದೆಯುವಜನತೆಯಿದೆಆಟಿಕೆಗಳ ಮಾರುಕಟ್ಟೆಯಲ್ಲಿ ಅದರ ಪಾಲುದಾರಿಕೆ ಇಷ್ಟು ಕಡಿಮೆಯಿದೆ ಎಂದರೆ ನಮಗೆ ಖುಷಿಯೆನಿಸುತ್ತದೆಯೇಇಲ್ಲಇದನ್ನು ಕೇಳಿದ ಮೇಲೆ ನಿಮಗೂ ಖುಷಿಯೆನಿಸುವುದಿಲ್ಲನೋಡಿ ಸ್ನೇಹಿತರೆಆಟಿಕೆಗಳ ಉದ್ಯಮ ಬಹಳ ವ್ಯಾಪಕವಾದುದುಗೃಹ ಉದ್ಯೋಗವಾಗಲಿಸಣ್ಣ ಪುಟ್ಟ ಅಥವಾ ಲಘು ಉದ್ಯೋಗಗಳಾಗಲಿಎಂ ಎಸ್ ಎಂ  ಗಳಾಗಲಿಇದರ ಜೊತೆ ಜೊತೆಗೆ ದೊಡ್ಡ ಉದ್ಯೋಗಗಳುಖಾಸಗಿ ಉದ್ಯಮಗಳು  ವಲಯದ ಪರೀಧಿಗೆ ಬರುತ್ತವೆಇದನ್ನು ಮುಂದುವರಿಸಲು ದೇಶ ಒಗ್ಗೂಡಿ ಕೆಲಸ ಮಾಡಬೇಕಾಗಿದೆಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಶ್ರೀಯುತ ಸಿ ವಿ ರಾಜು ಅವರಿದ್ದಾರೆಅವರ ಗ್ರಾಮದ ಎತಿಕೊಪ್ಪಕಾ ಆಟಿಕೆಗಳು ಒಂದು ಕಾಲದಲ್ಲಿ ಬಹಳ ಪ್ರಸಿದ್ಧವಾಗಿದ್ದವು ಆಟಿಕೆಗಳನ್ನು ಕಟ್ಟಿಗೆಯಿಂದ ತಯಾರಿಸಿದ್ದು ಅದರ ವಿಶೇಷವಾಗಿತ್ತು ಆಟಿಕೆಗಳಲ್ಲಿ ಎಲ್ಲಿಯೂ ಯಾವುದೇ ರೀತಿಯ ಕೋನಗಳು ನೋಡಲು ಸಿಗುತ್ತಿರಲಿಲ್ಲ ಎಂಬುದು ಮತ್ತೊಂದು ವಿಶೇಷತೆಯಾಗಿತ್ತು ಆಟಿಕೆಗಳು ಎಲ್ಲ ಕೋನಗಳಿಂದಲೂ ದುಂಡಗೆ ಇರುತ್ತಿದ್ದವುಆದ್ದರಿಂದ ಮಕ್ಕಳಿಗೆ ಪೆಟ್ಟಾಗುವ ಸಮಸ್ಯೆ ಇರುತ್ತಿರಲಿಲ್ಲಸಿ ವಿ ರಾಜು ಅವರು ಎತಿಕೊಪ್ಪಿಕಾ ಆಟಿಕೆಗಳಿಗಾಗಿ ಈಗ ತಮ್ಮ ಗ್ರಾಮದ ಕುಶಲಕರ್ಮಿಗಳ ಜೊತೆ ಒಗ್ಗೂಡಿ ಒಂದು ರೀತಿಯ ಹೊಸ ಆಂದೋಲನವನ್ನು ಆರಂಭಿಸಿದ್ದಾರೆ.  ಅತ್ಯುತ್ತಮ ಗುಣಮಟ್ಟದ ಎತಿಕೊಪ್ಪಿಕಾ ಆಟಿಕೆಗಳನ್ನು ತಯಾರಿಸಿ ಸ್ಥಳೀಯ ಆಟಿಕೆಗಳ ಕುಂದಿಹೋದ ಗೌರವವನ್ನು ಸಿವಿ ರಾಜು ಅವರು ಮತ್ತೆ ತಂದುಕೊಟ್ಟಿದ್ದಾರೆಆಟಿಕೆಗಳ ಬಗ್ಗೆ ನಾವು ಎರಡು ವಿಷಯಗಳನ್ನು ಯೋಚಿಸಬಹುದುನಿಮ್ಮ ಗೌರವಪೂರ್ಣ ಇತಿಹಾಸವನ್ನು ನಿಮ್ಮ ಜೀವನದಲ್ಲಿ ಮತ್ತೆ ಅಳವಡಿಸಿಕೊಳ್ಳಬಹುದು ಹಾಗೂ ನಿಮ್ಮ ಸ್ವರ್ಣಮಯ ಭವಿಷ್ಯವನ್ನು ರೂಪಿಸಿಕೊಳ್ಳಬಹುದುನಾನು ನನ್ನ ಸ್ಟಾರ್ಟ್ ಅಪ್ ಮಿತ್ರರಿಗೆನಮ್ಮ ಹೊಸ ಉದ್ಯಮಿಗಳಿಗೆ – Team up for toys… ಎಂದು ಹೇಳುತ್ತೇನೆಬನ್ನಿ ಒಗ್ಗೂಡಿ ಆಟಿಕೆಗಳನ್ನು ತಯಾರಿಸೋಣಈಗ ಎಲ್ಲರಿಗೂ ಸ್ಥಳೀಯ ಆಟಿಕೆಗಳಿಗಾಗಿ ಧ್ವನಿ ಎತ್ತುವ ಸಮಯ ಬಂದಿದೆಬನ್ನಿನಾವು ನಮ್ಮ ಯುವಜನತೆಗಾಗಿಹೊಸತನದಉತ್ತಮ ಗುಣಮಟ್ಟದಆಟಿಕೆಗಳನ್ನು ತಯಾರಿಸೋಣಆಟಿಕೆಗಳು ಬಾಲ್ಯ ಅರಳಿಸುವಂತಹವು ಮತ್ತು ನಲಿಸುವಂತಹವಾಗಿರಬೇಕುಪರಿಸರಕ್ಕೂ ಅನುಕೂಲಕರವಾದಂತಹ ಆಟಿಕೆಗಳನ್ನು ನಾವು ತಯಾರಿಸೋಣ.                    

ಸ್ನೇಹಿತರೆಇದೇ ರೀತಿಈಗ ಕಂಪ್ಯೂಟರ್ ಮತ್ತು ಸ್ಮಾರ್ಟ್ ಫೋನ್  ಯುಗದಲ್ಲಿ ಕಂಪ್ಯೂಟರ್ ಗೇಮ್ಸ್ ಗಳ ಟ್ರೆಂಡ್ ಕೂಡ ಇದೆ ಆಟಗಳನ್ನು ಮಕ್ಕಳೂ ಆಡುತ್ತಾರೆಆದರೆ ಇದರಲ್ಲಿ ಎಷ್ಟು ಆಟಗಳಿರುತ್ತವೆಯೋ ಅವುಗಳ ಥೀಮ್ ಗಳು ಕೂಡಾ ಹೆಚ್ಚಾಗಿ ವಿದೇಶಗಳದ್ದೇ ಆಗಿರುತ್ತವೆನಮ್ಮ ದೇಶದಲ್ಲಿ ಎಷ್ಟೊಂದು ಐಡಿಯಾಗಳಿವೆಎಷ್ಟೊಂದು ಕಾನ್ಸೆಪ್ಟ್ ಗಳಿವೆ ಎಂದರೆ ನಮ್ಮ ಇತಿಹಾಸ ಬಹಳ ಸಮೃದ್ಧವಾಗಿದೆನಾವು ಅವುಗಳ ಮೇಲೆ ಗೇಮ್ಸ್ ಸಿದ್ಧಪಡಿಸಬಹುದೇನೀವೂ ಭಾರತದಲ್ಲೂ ಗೇಮ್ಸ್ ಸಿದ್ಧಪಡಿಸಿಎಂದು ನಾನು ದೇಶದ ಯುವಪ್ರತಿಭೆಗೆ ಹೇಳುತ್ತೇನೆLet the games begin ಎಂದೂ ಹೇಳಲಾಗುತ್ತದೆಹಾಗಾದರೆ ಬನ್ನಿ ಆಟ ಆರಂಭಿಸೋಣ.     

ಸ್ನೇಹಿತರೆಸ್ವಾವಲಂಬಿ ಭಾರತ ಆಂದೋಲನದಲ್ಲಿ ವರ್ಚುವಲ್ ಗೇಮ್ಸ್ ಆಗಲಿಆಟಿಕೆಗಳ ಕ್ಷೇತ್ರವಾಗಲಿಎಲ್ಲವೂ ಬಹಳ ಮಹತ್ವಪೂರ್ಣ ಪಾತ್ರವನ್ನು ವಹಿಸಬೇಕಿದೆ ಮತ್ತು ಇದೊಂದು ಅವಕಾಶವೂ ಆಗಿದೆಇಂದಿನಿಂದ 100 ವರ್ಷ ಹಿಂದೆ ಅಸಹಕಾರ ಆಂದೋಲನ ಆರಂಭವಾಗಿತ್ತುಆಗ ಗಾಂಧೀಜಿ ಬರೆದಿದ್ದರು – “ಅಸಹಕಾರ ಆಂದೋಲನ ದೇಶದ ಜನತೆಗೆ ಸ್ವಾಭಿಮಾನ ಮತ್ತು ತಮ್ಮ ಶಕ್ತಿಯ ಅರಿವು ಮೂಡಿಸುವ ಒಂದು ಪ್ರಯತ್ನ” ಎಂದು.

ಇಂದು ನಾವು ದೇಶವನ್ನು ಸ್ವಾವಲಂಬಿಯಾಗಿಸುವ ಪ್ರಯತ್ನ ಮಾಡುತ್ತಿದ್ದೇವೆಅಂದರೆ ಸಂಪೂರ್ಣ ಸ್ವಾಭಿಮಾನದೊಂದಿಗೆ ಮುಂದೆ ಸಾಗಬೇಕಿದೆಪ್ರತಿಯೊಂದು ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬಿ ಮಾಡಬೇಕಿದೆಅಸಹಕಾರ ಆಂದೋಲನದ ರೂಪದಲ್ಲಿ ಯಾವ ಬೀಜವನ್ನು ಬಿತ್ತಲಾಗಿತ್ತೊ ಅದನ್ನು ಈಗ ಸ್ವಾವಲಂಬಿ ಭಾರತದ ವಟವೃಕ್ಷದಂತೆ ಪರಿವರ್ತನೆಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.    

ನನ್ನ ಪ್ರೀತಿಯ ದೇಶವಾಸಿಗಳೇಭಾರತೀಯರ ಅನ್ವೇಷಣೆ ಮತ್ತು ಪರಿಹಾರ ನೀಡುವ ಸಾಮರ್ಥ್ಯದ ಬಲವನ್ನು ಪ್ರತಿಯೊಬ್ಬರೂ ಮಾನ್ಯ ಮಾಡುತ್ತಾರೆಮತ್ತು ಎಲ್ಲಿ ಸಮರ್ಪಣಾ ಭಾವವಿದೆಯೋಸಂವೇದನೆ ಇದೆಯೋ ಅಲ್ಲಿ  ಶಕ್ತಿ ಅಪರಿಮಿತವಾಗುತ್ತದೆ ತಿಂಗಳ ಆರಂಭದಲ್ಲಿ ದೇಶದ ಯುವಜನತೆಯ ಎದುರು ಆ್ಯಪ್ ಆವಿಷ್ಕಾರದ ಸವಾಲೊಂದನ್ನು ಇಡಲಾಗಿತ್ತು ಸ್ವಾವಲಂಬಿ ಭಾರತ ಆ್ಯಪ್ ಆವಿಷ್ಕಾರದ ಸವಾಲಿನಲ್ಲಿ ನಮ್ಮ ಯುವಜನರು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರುಸುಮಾರು 7 ಸಾವಿರ entry ಗಳು  ಬಂದಿದ್ದವುಅವುಗಳಲ್ಲಿಮೂರನೇ ಎರಡರಷ್ಟು ಆ್ಯಪ್ ಗಳು ಎರಡು ಮತ್ತು ಮೂರನೇ ಶ್ರೇಣಿಯ ನಗರಗಳ ಯುವಕರು ಅಭಿವೃದ್ಧಿಪಡಿಸಿರುವಂಥವುಗಳಾಗಿವೆಇದು ಸ್ವಾವಲಂಬಿ ಭಾರತ ಮತ್ತು ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಶುಭ ಸಂಕೇತವಾಗಿದೆಸ್ವಾವಲಂಬಿ  ಭಾರತ ಆ್ಯಪ್ ಆವಿಷ್ಕಾರ ಸವಾಲಿನ ಫಲಿತಾಂಶವನ್ನು ನೋಡಿದರೆ ತಾವು ಖಂಡಿತವಾಗಿ ಪ್ರಭಾವಿತರಾಗುತ್ತೀರಿಸಾಕಷ್ಟು ವಿಚಾರ ವಿನಿಮಯಗಳ ನಂತರ ಬೇರೆ ಬೇರೆ ವಿಭಾಗಗಳಲ್ಲಿ ಸರಿಸುಮಾರು 2 ಡಜನ್ ಆ್ಯಪ್ ಗಳಿಗೆ ಪ್ರಶಸ್ತಿಯನ್ನೂ ನೀಡಲಾಗಿದೆತಾವೆಲ್ಲರೂ  ಆ್ಯಪ್ ಗಳ ಬಗ್ಗೆ ತಿಳಿದುಕೊಂಡು ಅವುಗಳನ್ನು ಬಳಕೆ ಮಾಡಿಕೊಳ್ಳಿಇದರಿಂದ ತಮಗೂ ಇಂಥದ್ದೇನಾದರೂ ಮಾಡಲು ಪ್ರೇರಣೆಯಾಗಬಹುದುಇವುಗಳಲ್ಲಿ ಕುಟುಕೀ ಎನ್ನುವ ಮಕ್ಕಳ ಕಲಿಕಾ ಆ್ಯಪ್ ಒಂದಿದೆಚಿಕ್ಕಮಕ್ಕಳಿಗೆ ಉತ್ತಮ ಸಂವಾದಿಯಾಗಿರುವ  ಆ್ಯಪ್ ನಲ್ಲಿ ಹಾಡುಗಳನ್ನುಕಥೆಗಳನ್ನು ಕೇಳಿಸಲಾಗುತ್ತದೆ ಮೂಲಕವೇ ಮಕ್ಕಳು ಸಾಕಷ್ಟು ಗಣಿತ ಹಾಗೂ ವಿಜ್ಞಾನದ ಹಲವಾರು ಅಂಶಗಳನ್ನು ಕಲಿತುಕೊಳ್ಳುತ್ತಾರೆ.  ಇದರಲ್ಲಿ ಚಟುವಟಿಕೆಗಳೂ ಇವೆಆಟವೂ ಇದೆಇದೇ ರೀತಿಯಲ್ಲಿ ಒಂದು ಮೈಕ್ರೊ ಬ್ಲಾಗಿಂಗ್ ವೇದಿಕೆಯಾಗಿರುವ ಆ್ಯಪ್ ಕೂಡ ಇದೆಇದರ ಹೆಸರು ಕೆಒಒ ಅಂದರೆ ಕೂಇದರಲ್ಲಿ ನಾವು ನಮ್ಮ ಮಾತೃಭಾಷೆಯಲ್ಲಿ ಬರಹವಿಡಿಯೋ ಹಾಗೂ ಧ್ವನಿಯ ಮೂಲಕ ನಮ್ಮ ಮಾತುಗಳನ್ನು ದಾಖಲಿಸಬಹುದುಸಂವಾದ ನಡೆಸಬಹುದುಇದೇ ರೀತಿಚಿಂಗಾರಿ ಎನ್ನುವ ಆ್ಯಪ್ ಸಹ ಯುವಜನತೆಯಲ್ಲಿ ಸಾಕಷ್ಟು ಜನಪ್ರಿಯವಾಗುತ್ತಿದೆಆಸ್ಕ್ ಸರ್ಕಾರ್’ ಎನ್ನುವ ಆ್ಯಪ್ ಇದೆಇದರಲ್ಲಿ ಚಾಟ್ ಬೋಟ್ ಮೂಲಕ 

*****