Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಮ್ಯಾನ್ಮಾರ್ ರಕ್ಷಣಾ ಸೇವೆಯ ಕಮಾಂಡರ್ ಇನ್ ಚೀಫ್ ಹಿರಿಯ ಜನರಲ್ ಮಿನ್ ಆಂಗ್ ಹಲೇಯಿಂಗ್


ಮ್ಯಾನ್ಮಾರ್ ರಕ್ಷಣಾ ಸೇವೆಯ ಕಮಾಂಡರ್ ಇನ್ ಚೀಫ್ ಹಿರಿಯ ಜನರಲ್ ಮಿನ್ ಆಂಗ್ ಹಲೇಯಿಂಗ್ ಅವರಿಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಹಿರಿಯ ಜನರಲ್ ಇತ್ತೀಚೆಗೆ ನಡೆದ ಸಂಸತ್ ಚುನಾವಣೆಯಲ್ಲಿನ ಯಶಸ್ಸಿಗಾಗಿ ಪ್ರಧಾನಮಂತ್ರಿಯವರಿಗೆ ಅಭಿನಂದನೆ ಸಲ್ಲಿಸಿದರು. ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಆಗಿರುವ ತ್ವರಿತ ಪ್ರಗತಿ ಮತ್ತು ರಕ್ಷಣಾ ಹಾಗೂ ಭದ್ರತಾ ಸಹಕಾರ ಕ್ಷೇತ್ರ ಸೇರಿದಂತೆ ಎರಡು ನೆರೆ ರಾಷ್ಟ್ರಗಳ ನಡುವಿನ ವಿಶಿಷ್ಟ ಸಂಬಂಧಗಳ ಸರ್ವಾಂಗೀಣ ಬಾಂಧವ್ಯ ಆಳವಾಗುತ್ತಿರುವುದನ್ನು ಅವರು ಉಲ್ಲೇಖಿಸಿದರು.

ಮ್ಯಾನ್ಮಾರ್ ಗೆ ತಾವು ಭೇಟಿ ನೀಡಿದ ಸಂದರ್ಭದಲ್ಲಿ ತಮಗೆ ತೋರಿದ ಆತ್ಮೀಯ ಆತಿಥ್ಯವನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಬಂಡಾಯದ ನಿಗ್ರಹ, ಸಾಮರ್ಥ್ಯವರ್ಧನೆ, ಸೇನಾ ಸಂಬಂಧಗಳು ಮತ್ತು ಕಡಲ ಸಹಕಾರ, ಹಾಗೆಯೇ ಆರ್ಥಿಕ ಮತ್ತು ಅಭಿವೃದ್ಧಿ ಸಹಕಾರ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದ ಅತ್ಯುತ್ತಮ ಸ್ಥಿತಿಯನ್ನು ಅವರು ಉಲ್ಲೇಖಿಸಿದರು.

ಮ್ಯಾನ್ಮಾರ್ ಒಕ್ಕೂಟದೊಂದಿಗಿನ ಅನನ್ಯ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಆಳಗೊಳಿಸುವ ನಿಟ್ಟಿನಲ್ಲಿ ಶ್ರಮಿಸುವ ಭಾರತದ ಬಲವಾದ ಬದ್ಧತೆಯನ್ನು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು.