Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿ ಭೇಟಿ ಮಾಡಿದ ಭಾರತೀಯ ಅಮೆರಿಕನ್ ಗಾಯಕಿ-ಗ್ರ್ಯಾಮಿ ಪ್ರಶಸ್ತಿ ವಿಜೇತೆ ಫಲ್ಗುಣಿ ಶಾ 

ಪ್ರಧಾನಿ ಭೇಟಿ ಮಾಡಿದ ಭಾರತೀಯ ಅಮೆರಿಕನ್ ಗಾಯಕಿ-ಗ್ರ್ಯಾಮಿ ಪ್ರಶಸ್ತಿ ವಿಜೇತೆ ಫಲ್ಗುಣಿ ಶಾ 


ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಅಮೆರಿಕದ ನ್ಯೂಯಾರ್ಕ್‌ನಲ್ಲಿ ಭಾರತೀಯ ಮೂಲದ ಅಮೆರಿಕದ ಗಾಯಕಿ, ಸಂಗೀತ ಸಂಯೋಜಕಿ ಹಾಗೂ ಗ್ರ್ಯಾಮಿ ಪ್ರಶಸ್ತಿ ವಿಜೇತೆ ಶ್ರೀಮತಿ ಫಲ್ಗುಣಿ ಶಾ ಅವರನ್ನು ಭೇಟಿ ಮಾಡಿದರು.

ಆರೋಗ್ಯಕರ ಮತ್ತು ಪರಿಸರ ಸ್ನೇಹಿ ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುವ ‘ಆಬುಂಡೆನ್ಸ್ ಇನ್ ಮಿಲೆಟ್ಸ್’ ಎಂಬ ಹಾಡನ್ನು ಸಂಯೋಜಿಸಿರುವ  ಫಲ್ಗುಣಿ ಶಾ ಅವರನ್ನು ಪ್ರಧಾನಿ ಶ್ಲಾಘಿಸಿದರು. ತಮ್ಮ ಸಂಗೀತದ ಮೂಲಕ ಭಾರತ ಮತ್ತು ಅಮೆರಿಕಾ ಪ್ರಜೆಗಳನ್ನು ಹತ್ತಿರ ತಂದಿದ್ದಕ್ಕಾಗಿ ಪ್ರಧಾನಮಂತ್ರಿಯವರು ಅವರನ್ನು ಶ್ಲಾಘಿಸಿದರು.

****