ಹ್ಯಾಂಬರ್ಗ್ ನಲ್ಲಿ ನಡೆದಿರುವ ಜಿ 20 ಶೃಂಗಸಭೆಯ ವೇಳೆ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಶಿಂಜೋ ಅಬೆ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.
ಇಬ್ಬರೂ ನಾಯಕರು, 2016ರ ನವೆಂಬರ್ ನಲ್ಲಿ ಪ್ರಧಾನಿ ಮೋದಿ ಅವರು ಜಪಾನ್ ಗೆ ಭೇಟಿ ನೀಡಿದ್ದಾಗ ನಡೆದ ಕೊನೆಯ ಸಭೆಯಿಂದ ಇಂದಿನವರೆಗೆ ಮಹತ್ವದ ಯೋಜನೆ ಸೇರಿದಂತೆ ದ್ವಿಪಕ್ಷೀಯ ಸಂಬಂಧದ ಪ್ರಗತಿಯ ಬಗ್ಗೆ ಸಂಕ್ಷಿಪ್ತವಾಗಿ ಪರಾಮರ್ಶಿಸಿದರು. ಅಲ್ಲಿಂದ ಇಲ್ಲಿಯವರೆಗೆ ದ್ವಿಪಕ್ಷೀಯ ಬಾಂಧವ್ಯದಲ್ಲಿ ಆಗಿರುವ ಅಭಿವೃದ್ಧಿಯ ಬಗ್ಗೆ ಪ್ರಧಾನಿ ಮೋದಿ ಸಂತೃಪ್ತಿ ವ್ಯಕ್ತಪಡಿಸಿದರು.
ಮುಂಬರುವ ವಾರ್ಷಿಕ ಶೃಂಗಸಭೆಗಾಗಿ ಪ್ರಧಾನಮಂತ್ರಿ ಅಬೆ ಅವರ ಭಾರತ ಭೇಟಿಯನ್ನು ತಾವು ಎದಿರು ನೋಡುತ್ತಿರುವುದಾಗಿ ಹಾಗೂ ಇದು ನಮ್ಮ ಸಹಕಾರವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಮೋದಿ ತಿಳಿಸಿದರು.
***
AKT/AK
Furthering India-Japan ties...Prime Ministers @narendramodi and @AbeShinzo meet on the sidelines of the G20 Summit. pic.twitter.com/MgHnJ9y3Ds
— PMO India (@PMOIndia) July 7, 2017