ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ ಎಂಟು ಸದಸ್ಯರ ಅಮೆರಿಕ ಕಾಂಗ್ರೆಷನಲ್ ನಿಯೋಗವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು.
ನಿಯೋಗದಲ್ಲಿ ಇಂಡಿಯಾ ಕಾಕಸ್ ನ ಡೆಮಾಕ್ರಟಿಕ್ ಸಹ-ಅಧ್ಯಕ್ಷ ರೋ ಖನ್ನಾ, ಇಂಡಿಯಾ ಕಾಕಸ್ ನ ರಿಪಬ್ಲಿಕನ್ ಸಹ ಅಧ್ಯಕ್ಷ ಮೈಕ್ ವಾಲ್ಟ್ಜ್, ಎಡ್ ಕೇಸ್, ಕ್ಯಾಟ್ ಕ್ಯಾಮ್ಯಾಕ್, ಡೆಬೊರಾ ರಾಸ್, ಜಾಸ್ಮಿನ್ ಕ್ರೋಕೆಟ್, ರಿಚ್ ಮೆಕ್ಕಾರ್ಮಿಕ್ ಮತ್ತು ಥಾನೇಡರ್ ಇದ್ದರು.
ನಿಯೋಗವನ್ನು ಸ್ವಾಗತಿಸಿದ ಪ್ರಧಾನಮಂತ್ರಿಯವರು, ಭಾರತ-ಅಮೆರಿಕ ಸಂಬಂಧಗಳಿಗೆ ಅಮೆರಿಕ ಕಾಂಗ್ರೆಸ್ ನ ಸ್ಥಿರ ಮತ್ತು ದ್ವಿಪಕ್ಷೀಯ ಬೆಂಬಲಕ್ಕಾಗಿ ತಮ್ಮ ಮೆಚ್ಚುಗೆಯನ್ನು ತಿಳಿಸಿದರು.
ಅಧ್ಯಕ್ಷ ಬಿಡೆನ್ ಅವರ ಆಹ್ವಾನದ ಮೇರೆಗೆ ಜೂನ್ ನ ಲ್ಲಿ ಯುಎಸ್ ಗೆ ಐತಿಹಾಸಿಕ ಭೇಟಿ ನೀಡಿದ ಸಂದರ್ಭ, ಈ ಸಮಯದಲ್ಲಿ ಯುಎಸ್ ಕಾಂಗ್ರೆಸ್ ನ ಜಂಟಿ ಅಧಿವೇಶನವನ್ನು ಎರಡನೇ ಬಾರಿಗೆ ಉದ್ದೇಶಿಸಿ ಮಾತನಾಡಲು ಅವಕಾಶ ಸಿಕ್ಕಿದ ಬಗ್ಗೆ ಪ್ರಧಾನಿ ಪ್ರೀತಿಯಿಂದ ನೆನಪಿಸಿಕೊಂಡರು,
ಪ್ರಧಾನಮಂತ್ರಿ ಮತ್ತು ಅಮೆರಿಕ ನಿಯೋಗವು ಭಾರತ-ಯುಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯು ಪ್ರಜಾಪ್ರಭುತ್ವ ಮೌಲ್ಯಗಳು, ಕಾನೂನಿನ ನಿಯಮಕ್ಕೆ ಗೌರವ ಮತ್ತು ಬಲವಾದ ಜನರ ನಡುವಿನ ಸಂಬಂಧಗಳನ್ನು ಆಧರಿಸಿದೆ ಎಂದು ಪ್ರಸ್ತಾಪಿಸಿದರು.
***
Glad to receive a Congressional delegation from US, including co-chairs of India Caucus in the House of Representatives, Rep. @RoKhanna and Rep. @michaelgwaltz.
— Narendra Modi (@narendramodi) August 16, 2023
Strong bipartisan support from the US Congress is instrumental in further elevating India-US Comprehensive Global… pic.twitter.com/2BHbLS5OHK