Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಫ್ಘಾನಿಸ್ತಾನದ ಪರಮೋಚ್ಚ ನಾಗರಿಕ ಗೌರವ

ಪ್ರಧಾನಿ ನರೇಂದ್ರ ಮೋದಿ ಅವರಿಗೆ  ಆಫ್ಘಾನಿಸ್ತಾನದ ಪರಮೋಚ್ಚ ನಾಗರಿಕ ಗೌರವ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಆಫ್ಘಾನಿಸ್ತಾನದ ಪರಮೋಚ್ಚ ನಾಗರಿಕ ಗೌರವ ಅಮಿರ್ ಅಮಾನುಲ್ಲಾ ಖಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹೆರಾತ್‌ನಲ್ಲಿ ನಿನ್ನೆ ಐತಿಹಾಸಿಕ ಭಾರತ – ಆಫ್ಘಾನಿಸ್ತಾನ ಗೆಳೆತನದ ಜಲಾಶಯ ಉದ್ಘಾಟನೆಯ ಬಳಿಕ ಅಧ್ಯಕ್ಷ ಅಷ್ರಫ್ ಘನಿ ಅವರು ಪ್ರಧಾನಿಯವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಧಾನಮಂತ್ರಿಯವರು ತಮ್ಮ ಭಾವನೆಗಳನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದು “ಅಮಿರ್ ಅಮಾನುಲ್ಲಾ ಖಾನ್ ಪ್ರಶಸ್ತಿ ನೀಡಿದ್ದಕ್ಕಾಗಿ ಆಫ್ಘಾನಿಸ್ತಾನ ಸರ್ಕಾರಕ್ಕೆ ನನ್ನ ಕೃತಜ್ಞತೆ ಸಲ್ಲಿಸಬಯಸುತ್ತೇನೆ”

ಇದು ಆಫ್ಘಾನಿಸ್ತಾನ ಸರ್ಕಾರ ತನ್ನ ಪ್ರಜೆಗಳಿಗೆ ಮತ್ತು ವಿದೇಶೀಯರಿಗೆ ಅವರ ಸೇವೆಯನ್ನು ಪರಿಗಣಿಸಿ ನೀಡುವ ಅತ್ಯುನ್ನತ ನಾಗರಿಕ ಗೌರವವಾಗಿದೆ. ಈ ಪ್ರಶಸ್ತಿ ಪದಕದ ಹಿಂಭಾಗದಲ್ಲಿ ಇರುವ ಉಲ್ಲೇಖ ಹೀಗಿದೆ: “ನಿಶಾನ್-ಇ ದೌಲತಿ ಘಾಜಿ ಅಮಿರ್ ಅಮಾನುಲ್ಲಾ ಖಾನ್”, ಅಥವಾ “ಸ್ಟೇಟ್ ಆರ್ಡರ್ ಆಫ್ ಘಾಜಿ ಅಮಿರ್ ಅಮಾನುಲ್ಲಾ ಖಾನ್.”

ಹಿನ್ನೆಲೆ:

ಅಮಿರ್ ಅಮಾನುಲ್ಲಾ ಖಾನ್ ಪದಕ ಆಫ್ಘಾನಿಸ್ತಾನ ನೀಡುವ ಅತ್ಯುನ್ನತ ನಾಗರಿಕ ಗೌರವವಾಗಿದೆ. ಆಫ್ಘಾನಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಾಯಕ ಅಮಾನುಲ್ಲಾ ಖಾನ್ (ಘಾಜಿ) ಅವರ ನಂತರ ಪ್ರಶಸ್ತಿಗೆ ಅವರ ಹೆಸರಿಡಲಾಯಿತು. ಅವರು 1919-1929ರವರೆಗೆ ಎಮಿರೇಟ್ ಆಫ್ ಆಫ್ಘಾನಿಸ್ತಾನದ ಆಡಳಿತ ನಡೆಸಿದ್ದರು. ಆಫ್ಘಾನಿಸ್ತಾನಕ್ಕೆ ಸ್ವಾತಂತ್ರ್ಯದ ನಾಯಕತ್ವ ನೀಡಿದ್ದರು.

ದೊರೆ ಅಮಾನುಲ್ಲಾ ಅಫ್ಘಾನಿಸ್ಥಾನ ಆಧುನಿಕ ಸಂವಿಧಾನ ಮುಂದುವರಿಸಿ ಸಮಾನ ಹಕ್ಕುಗಳು ಮತ್ತು ವೈಯಕ್ತಿಕ ಸ್ವಾತಂತ್ರ್ಯ ಸೇರಿಸಿದರು. ಅವರು ದೇಶವನ್ನು ಆಧುನಿಕಗೊಳಿಸಿದರು, ಬಾಲಕರು ಮತ್ತು ಬಾಲಕಿಯರಿಬ್ಬರಿಗೂ ಕಾಸ್ಮೋಪಾಲಿಟನ್ ಶಾಲೆಗಳನ್ನು ಸ್ಥಾಪಿಸಿದರು ಮತ್ತು ಏಷ್ಯಾ ಮತ್ತು ಯುರೋಪ್ ನೊಂದಿಗೆ ಆಫ್ಘಾನಿಸ್ತಾನದ ವ್ಯಾಪಾರ ಹೆಚ್ಚಿಸಿದರು. ದೊರೆ ಅಮಾನುಲ್ಲಾ ಅವರ ಸ್ವತಂತ್ರ ಮತ್ತು ಆಧುನಿಕ ಆಫ್ಘಾನಿಸ್ತಾನದ ನೋಟ ಇಂದಿಗೂ ಮತ್ತು ಎಂದೆಂದಿಗೂ ಪ್ರಸ್ತುತವಾಗಿದೆ.

ದೊರೆ ಅಮಾನುಲ್ಲಾ ಅವರು ಭಾರತದೊಂದಿಗೆ ಬಲವಾದ ಬಾಂಧವ್ಯ ಹೊಂದಿದ್ದರು ಮತ್ತು 1929ರಲ್ಲಿ ಇಲ್ಲಿಗೆ ಕೆಲ ಕಾಲ ಆಗಮಿಸಿದ್ದರು. ದೇಶದ ಬಗೆಗಿನ ಅವರ ಆತ್ಮೀಯ ಬಾಂಧವ್ಯ ಎರಡೂ ರಾಷ್ಟ್ರಗಳ ನಡುವಿನ ಬಲವಾದ ಪಾಲುದಾರಿಕೆಯಲ್ಲಿ ನಿರಂತರವಾಗಿ ಪ್ರತಿಫಲಿಸಿದೆ.

ಹೆರಾತ್ ನಲ್ಲಿ ಜೂನ್ 4ರಂದು ಆಫ್ಘಾನಿಸ್ತಾನ – ಭಾರತ ಗೆಳೆತನದ ಜಲಾಶಯದ ಲೋಕಾರ್ಪಣೆಯ ತರುವಾಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮಿರ್ ಅಮಾನುಲ್ಲಾ ಖಾನ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಪ್ರಶಸ್ತಿ ಪಡೆದಿರುವ ಕೆಲವೇ ಕೆಲವು ವಿದೇಶೀ ನಾಯಕರಲ್ಲಿ ಒಬ್ಬರಾದ ಪ್ರಧಾನಿ, ಈ ಪ್ರಶಸ್ತಿಗೆ ಭಾಜನರಾದ ಪ್ರಥಮ ಭಾರತೀಯರಾಗಿದ್ದಾರೆ. ಇದು ಅನನ್ಯ ಬಾಂಧವ್ಯ ಬಲಪಡಿಸುವುದರ ದ್ಯೋತಕವಾಗಿದ್ದು, ಭಾರತ ಮತ್ತು ಆಪ್ಘನ್ ಬಾಂಧವ್ಯವನ್ನು ಮುಂದುವರಿಸುವ ಪ್ರಧಾನಮಂತ್ರಿಯವರ ವೈಯಕ್ತಿಕ ಬದ್ಧತೆಗೆ ಸಾಕ್ಷಿಯಾಗಿದೆ.

ಈ ಪ್ರಶಸ್ತಿಯನ್ನು ಆಫ್ಘಾನಿಸ್ತಾನ ಸರ್ಕಾರ 2006ರಲ್ಲಿ ಸ್ಥಾಪಿಸಿತು. ಈ ಹಿಂದೆ ಈ ಪ್ರಶಸ್ತಿಗೆ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್, ಕಜಕ್ ಅಧ್ಯಕ್ಷ ನೂರ್ ಸುಲ್ತಾನ್ ನಜರ್ಬಯೇವ್, ತುರ್ಕಿ ಅಧ್ಯಕ್ಷ ರೆಸಿಪ್ ತಾಯಿಪ್ ಎರ್ಡುಗಾನ್, ನ್ಯಾಟೋ ಜನರಲ್ ಜೇಮ್ಸ್ ಜೋನ್ಸ್, ಆಫ್ಘನ್ ಮಾಜಿ ಅಧ್ಯಕ್ಷ ಆಧ್ಯಾತ್ಮಿಕ ನಾಯಕ ಸಿಬ್ಗತುಲ್ಲಾ ಮುಜಾದ್ದೇದಿ ಮತ್ತು ಆಫ್ಘನ್ ಮುಖ್ಯ ನ್ಯಾಯಮೂರ್ತಿ (ಸಿಜೆ) ಅಬ್ದುಲ್ ಸಲಾಮ್ ಅಜಿಮಿ ಪಾತ್ರರಾಗಿದ್ದರು.