Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಿ ಅವರಿಂದ ಬೆಂಗಳೂರಿನ ಐಐಎಸ್ ಸಿಯಲ್ಲಿ ಬ್ರೈನ್ ರೀಸರ್ಚ್ ಸೆಂಟರ್ ಉದ್ಘಾಟನೆ ಮತ್ತು ಬಾಗ್ಚಿ-ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ.

ಪ್ರಧಾನಿ ಅವರಿಂದ ಬೆಂಗಳೂರಿನ ಐಐಎಸ್ ಸಿಯಲ್ಲಿ ಬ್ರೈನ್ ರೀಸರ್ಚ್ ಸೆಂಟರ್ ಉದ್ಘಾಟನೆ ಮತ್ತು ಬಾಗ್ಚಿ-ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ  ಅವರು ಇಂದು ಬೆಂಗಳೂರಿನ ಐಐಎಸ್ ಸಿಯಲ್ಲಿ ಬ್ರೈನ್ ರೀಸರ್ಚ್ ಸೆಂಟರ್ ಉದ್ಘಾಟನೆ ಮತ್ತು ಬಾಗ್ಚಿ-ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಪ್ರಧಾನಮಂತ್ರಿ ಅವರು ತಮ್ಮಟ್ವೀಟ್ ನಲ್ಲಿ

“ಬೆಂಗಳೂರು ಐಐಎಸ್ ಸಿಯಲ್ಲಿ ಮೆದುಳಿನ ಸಂಶೋಧನಾ ಕೇಂದ್ರ ಉದ್ಘಾಟಿಸಿರುವುದು ಸಂತಸ ತಂದಿದೆ.ಈ ಯೋಜನೆಗೆ ಶಂಕುಸ್ಥಾಪನೆ ಮಾಡಿದ ಗೌರವ ನನಗೂ ಸಿಕ್ಕಿದ್ದು ಸಂತೋಷ  ಹೆಚ್ಚಿಸಿದೆ. ಈ ಕೇಂದ್ರವು ಮೆದುಳಿಗೆ ಸಂಬಂಧಿಸಿದ ಅಸ್ವಸ್ಥತೆಗಳನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುತ್ತದೆ’’
 
“ಪ್ರತಿಯೊಂದು ರಾಷ್ಟ್ರವೂ ಆರೋಗ್ಯ ರಕ್ಷಣೆಗೆ ಅಗ್ರ ಆದ್ಯತೆ ನೀಡಬೇಕಾದ ಸಮಯದಲ್ಲಿ, ಬಾಗ್ಚಿ-ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಂತಹ ಪ್ರಯತ್ನಗಳು ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಮುಂದಿನ ದಿನಗಳಲ್ಲಿ, ಇದು ಆರೋಗ್ಯ ರಕ್ಷಣೆಯ ಸಾಮರ್ಥ್ಯವನ್ನು ಬಲವರ್ಧನೆಗೊಳಿಸುತ್ತದೆ ಮತ್ತು ಈ ವಲಯದಲ್ಲಿ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವಂತೆ ಉತ್ತೇಜಿಸುತ್ತದೆ’’ 

 

 

 

 
ಈ ಮಿದುಳಿನ ಸಂಶೋಧನಾ ಕೇಂದ್ರವನ್ನು ಅದಕ್ಕೆ ಸಂಬಂಧಿಸಿದ ಅತ್ಯಾಧುನಿಕ ಸಂಶೋಧನಾ ಸೌಕರ್ಯವನ್ನಾಗಿ ಅಭಿವೃದ್ಧಿಪಡಿಸಲಾಗಿದೆ ಮತ್ತು ವಯೋ ಸಂಬಂಧಿ ಮಿದುಳಿನ ಅಸ್ವಸ್ಥತೆಗಳನ್ನು ನಿರ್ವಹಿಸಲು ಸಾಕ್ಷ್ಯಾಧಾರಿತ ಸಾರ್ವಜನಿಕ ಆರೋಗ್ಯ ಮಧ್ಯ ಪ್ರವೇಶ ಮಾಡಲು ಪ್ರಮುಖ ಸಂಶೋಧನೆಗಳನ್ನು ನಡೆಸುವುದರ ಕುರಿತು ಹೆಚ್ಚಿನ ಗಮನವನ್ನು ಕೇಂದ್ರೀಕರಿಸುತ್ತದೆ. ಬೆಂಗಳೂರಿನ ಐಐಎಸ್ ಸಿ ಆವರಣದಲ್ಲಿ 832 ಹಾಸಿಗೆಗಳ ಬಾಗ್ಚಿ-ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ಇದರಿಂದ ಪ್ರತಿಷ್ಠಿತ ಸಂಸ್ಥೆಯಲ್ಲಿ ವಿಜ್ಞಾನ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರಗಳ ಸಂಯೋಜನೆಗೆ ಸಹಕಾರಿಯಾಗುತ್ತದೆ. ಇದು ದೇಶದಲ್ಲಿ ಕ್ಲಿನಿಕಲ್ ಸಂಶೋಧನೆಗೆ ಪ್ರಮುಖ ಉತ್ತೇಜನವನ್ನು ನೀಡುತ್ತದೆ ಮತ್ತು ದೇಶದಲ್ಲಿ ಆರೋಗ್ಯ ಸೇವೆಗಳ ಸುಧಾರಣೆಗೆ ಸಹಾಯ ಮಾಡುವ ನವೀನ ಪರಿಹಾರಗಳನ್ನು ಕಂಡಹಿಡಿಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿದೆ. 

 

******