ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ. ಕೊರೊನಾದ ಪ್ರಭಾವದಿಂದ ನಮ್ಮ ‘ಮನ್ ಕಿ ಬಾತ್’ ದೂರ ಉಳಿಯಲಿಲ್ಲ. ನಾನು ಕಳೆದ ಬಾರಿ ನಿಮ್ಮೊಂದಿಗೆ ಮನದ ಮಾತು ಹಂಚಿಕೊಂಡಾಗ, ಪ್ಯಾಸೆಂಜರ್ ಟ್ರೈನ್ ಚಲಿಸುತ್ತಿರಲಿಲ್ಲ, ಬಸ್ ಗಳು ಚಲಿಸುತ್ತಿರಲಿಲ್ಲ, ವಿಮಾನ ಸೇವೆ ಕೂಡಾ ನಿಂತುಹೋಗಿತ್ತು. ಈ ಬಾರಿ, ಬಹಳಷ್ಟು ಸೇವೆಗಳು ಆರಂಭವಾಗಿದೆ, ಶ್ರಮಿಕ್ ವಿಶೇಷ ರೈಲುಗಳು ಕೂಡಾ ಆರಂಭವಾಗಿವೆ, ಇತರ ವಿಶೇಷ ರೈಲುಗಳು ಕೂಡಾ ಚಲಿಸಲಾರಂಭಿಸಿವೆ. ಎಲ್ಲಾ ಮುನ್ನೆಚ್ಚರಿಕೆಗಳೊಂದಿಗೆ, ವಿಮಾನಗಳು ಹಾರಲಾರಂಭಿಸಿವೆ, ನಿಧಾನವಾಗಿ ಉದ್ಯಮ ನಡೆಯಲಾರಂಭಿಸಿದೆ, ಅಂದರೆ, ಅರ್ಥವ್ಯವಸ್ಥೆಯ ಒಂದು ದೊಡ್ಡ ಭಾಗ ನಡೆಯಲು ಆರಂಭಿಸಿದೆ, ತೆರೆದಿದೆ. ಇಂತಹದ್ದರಲ್ಲಿ, ನಾವು ಮತ್ತಷ್ಟು ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ. ಎರಡು ಗಜಗಳಷ್ಟು ಅಂತರ ಪಾಲನೆಯ ನಿಯಮವಿರಲಿ, ಮುಖಕ್ಕೆ ಮಾಸ್ಕ್ ಧರಿಸುವ ಮಾತಿರಲಿ, ಸಾಧ್ಯವಾದಷ್ಟೂ ಮನೆಯಲ್ಲಿಯೇ ಇರುವ ವಿಷಯವಿರಲಿ, ಈ ಎಲ್ಲಾ ಅಂಶಗಳ ಪಾಲನೆಯಲ್ಲಿ ಸ್ವಲ್ಪ ಮಾತ್ರ ಕೂಡಾ ಅಜಾಗರೂಕತೆ ಸಲ್ಲದು.
ದೇಶದಲ್ಲಿ, ಎಲ್ಲರ ಸಾಮೂಹಿಕ ಪ್ರಯತ್ನಗಳಿಂದ ಕೊರೊನಾ ವಿರುದ್ಧದ ಹೋರಾಟ ಬಹಳ ಬಲವಾಗಿ ನಡೆಯುತ್ತಿದೆ. ನಾವು ವಿಶ್ವದತ್ತ ನೋಡಿದಾಗ, ವಾಸ್ತವದಲ್ಲಿ ಭಾರತೀಯರ ಸಾಧನೆ ಎಷ್ಟು ದೊಡ್ಡದು ಎಂಬ ಅನುಭವ ನಮಗಾಗುತ್ತದೆ. ನಮ್ಮ ದೇಶದ ಜನಸಂಖ್ಯೆ ಹೆಚ್ಚಿನ ದೇಶಗಳಿಂತ ಎಷ್ಟೋ ಪಟ್ಟು ದೊಡ್ಡದು. ನಮ್ಮ ದೇಶದಲ್ಲಿ ಸವಾಲುಗಳು ಕೂಡಾ ಭಿನ್ನ ರೀತಿಯದ್ದಾಗಿವೆ, ಆದರೂ ಕೂಡಾ, ಬೇರೆ ದೇಶಗಳಲ್ಲಿ ವ್ಯಾಪಿಸಿದಷ್ಟು ವೇಗವಾಗಿ ನಮ್ಮ ದೇಶದಲ್ಲಿ ಕೊರೊನಾ ವ್ಯಾಪಿಸಲಿಲ್ಲ, ಕೊರೊನಾದಿಂದಾಗಿ ಸಂಭವಿಸುವ ಸಾವಿನ ಪ್ರಮಾಣ ಕೂಡಾ ನಮ್ಮ ದೇಶದಲ್ಲಿ ಬಹಳ ಕಡಿಮೆ ಇದೆ.
ಆಗಿರುವ ನಷ್ಟದ ಕುರಿತು ನಮ್ಮೆಲ್ಲರಿಗೂ ದುಃಖವಿದೆ. ಆದರೆ ನಮಗೆ ಏನನ್ನು ಉಳಿಸಲು ಸಾಧ್ಯವಾಯಿತೋ, ಅದು ಖಂಡಿತವಾಗಿಯೂ ದೇಶದ ಸಾಮೂಹಿಕ ಸಂಕಲ್ಪಶಕ್ತಿಯ ಪರಿಣಾಮವಾಗಿದೆ. ಇಷ್ಟೊಂದು ದೊಡ್ಡ ದೇಶದಲ್ಲಿ, ದೇಶದ ಪ್ರತಿಯೊಬ್ಬ ಪ್ರಜೆಯೂ, ಸ್ವತಃ ಈ ಸಮರದಲ್ಲಿ ಹೋರಾಡಲು ನಿರ್ಧರಿಸಿದ್ದಾರೆ, ಈ ಸಂಪೂರ್ಣ ಅಭಿಯಾನ ಜನರಿಂದ ಮುನ್ನಡೆಯುತ್ತಿದೆ.
ಸ್ನೇಹಿತರೇ, ದೇಶವಾಸಿಗಳ ಸಂಕಲ್ಪಶಕ್ತಿಯೊಂದಿಗೆ, ಮತ್ತೊಂದು ಶಕ್ತಿ ಈ ಯುದ್ಧದಲ್ಲಿ ನಮ್ಮ ಅತಿ ದೊಡ್ಡ ಸಾಮರ್ಥವಾಗಿದೆ ಅದೆಂದರೆ ದೇಶವಾಸಿಗಳ ಸೇವಾಶಕ್ತಿ. ವಾಸ್ತವದಲ್ಲಿ, ಈ ಮಹಾಮಾರಿಯ ಸಮಯದಲ್ಲಿ, ಸೇವೆ ಮತ್ತು ತ್ಯಾಗದ ಕಲ್ಪನೆಯು ಕೇವಲ ನಮ್ಮ ಆದರ್ಶ ಮಾತ್ರವಲ್ಲ, ಭಾರತದ ಜೀವನ ಪದ್ಧತಿಯೇ ಆಗಿದೆ ಎನ್ನುವುದನ್ನು ನಮ್ಮ ಭಾರತವಾಸಿಗಳು ತೋರಿಸಿಕೊಟ್ಟಿದ್ದಾರೆ. ಮತ್ತು ನಮ್ಮಲ್ಲಿ –
ಸೇವಾ ಪರಮೋ ಧರ್ಮಃ
ಸೇವಾ ಸ್ವಯಂ ಮೇ ಸುಖ್ ಹೈ, ಸೇವಾ ಮೇ ಹೀ ಸಂತೋಷ್ ಹೈ. ಎಂದು ಹೇಳಲಾಗುತ್ತದೆ.
ನೀವು ನೋಡಿರಬಹುದು, ಇತರರ ಸೇವೆಯಲ್ಲಿ ನಿರತರಾಗುವ ವ್ಯಕ್ತಿಯ ಜೀವನದಲ್ಲಿ, ಯಾವುದೇ ಖಿನ್ನತೆ, ಅಥವಾ ಬಳಲಿಕೆ ಎಂದಿಗೂ ಕಂಡುಬರುವುದಿಲ್ಲ. ಅವರ ಜೀವನದಲ್ಲಿ, ಜೀವನ ಕುರಿತ ಅವರ ದೃಷ್ಟಿಕೋನದಲ್ಲಿ, ಸಂಪೂರ್ಣ ಆತ್ಮವಿಶ್ವಾಸ, ಸಕಾರಾತ್ಮಕತೆ ಮತ್ತು ಜೀವಂತಿಕೆ ಪ್ರತಿಕ್ಷಣದಲ್ಲೂ ಕಂಡು ಬರುತ್ತದೆ.
ಸ್ನೇಹಿತರೆ, ನಮ್ಮ ವೈದ್ಯರು, ನರ್ಸಿಂಗ್ ಸಿಬ್ಬಂದಿ, ಸ್ವಚ್ಛತಾ ಕೆಲಸಗಾರರು, ಪೆÇಲೀಸ್ ಸಿಬ್ಬಂದಿ, ಮಾಧ್ಯಮದ ಸ್ನೇಹಿತರು, ಇವರೆಲ್ಲರೂ ಮಾಡುತ್ತಿರುವ ಸೇವೆಯ ಕುರಿತು, ನಾನು ಬಹಳಷ್ಟು ಬಾರಿ ಹೇಳಿದ್ದೇನೆ. “ಮನ್ ಕಿ ಬಾತ್” ನಲ್ಲಿ ಕೂಡಾ ನಾನು ಉಲ್ಲೇಖಿಸಿದ್ದೇನೆ. ಸೇವೆಯಲ್ಲಿ ತಮ್ಮ ಸರ್ವಸ್ವವನ್ನೂ ಸಮರ್ಪಿಸುವಂತಹ ಜನರ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟಿದೆ.
ಅಂತಹ ಓರ್ವ ಸಜ್ಜನ ತಮಿಳುನಾಡಿನ ಕೆ ಸಿ ಮೋಹನ್. ಸಿ ಮೋಹನ್ ಅವರು ಮಧುರೈನಲ್ಲಿ ಒಂದು ಸಲೂನ್ ನಡೆಸುತ್ತಾರೆ. ತಮ್ಮ ಕಷ್ಟದ ಸಂಪಾದನೆಯಿಂದ ವರು ತಮ್ಮ ಮಗಳ ಓದಿಗಾಗಿ ಐದು ಲಕ್ಷ ರೂಪಾಯಿ ಉಳಿತಾಯ ಮಾಡಿದ್ದರು. ಆದರೆ, ಅವರು ಈ ಸಂಪೂರ್ಣ ಮೊತ್ತವನ್ನು ಅಗತ್ಯವಿರುವವರ, ಬಡವರ ಸೇವೆಗಾಗಿ ಖರ್ಚು ಮಾಡಿಬಿಟ್ಟರು.
ಇದೇ ರೀತಿ, ಅಗರ್ತಲಾದಲ್ಲಿ, ಗಾಡಿ ತಳ್ಳಿಕೊಂಡು ಜೀವನ ನಡೆಸುವ ಗೌತಮ್ ದಾಸ್ ಅವರು, ತಮ್ಮ ದೈನಂದಿನ ಆದಾಯದಲ್ಲಿ ಉಳಿಸಿದ ಹಣದಿಂದ ಪ್ರತಿ ದಿನ ಅಕ್ಕಿ-ಬೇಳೆ ಖರೀದಿಸಿ, ಅಗತ್ಯವಿರುವವರಿಗೆ ಆಹಾರ ನೀಡುತ್ತಿದ್ದಾರೆ.
ಪಂಜಾಬ್ ನ ಪಠಾನ್ ಕೋಟ್ ನಿಂದ ಕೂಡಾ ನನಗೆ ಇಂತಹದ್ದೇ ಉದಾಹರಣೆ ಕುರಿತು ನನಗೆ ತಿಳಿದುಬಂತು. ರಾಜೂ ಎನ್ನುವ ಈ ದಿವ್ಯಾಂಗ ಸೋದರ, ಇತರರ ಸಹಾಯದಿಂದ, ಅಲ್ಪ ಮಾತ್ರದ ಬಂಡವಾಳದಿಂದ ಮೂರು ಸಾವಿರಕ್ಕೂ ಅಧಿಕ ಮಾಸ್ಕ್ ತಯಾರಿಸಿ, ಜನರಲ್ಲಿ ವಿತರಿಸಿದ್ದಾರೆ. ಸೋದರ ರಾಜು ಇಂತಹ ಕಷ್ಟದ ಸಮಯದಲ್ಲಿ ಸುಮಾರು 100 ಕುಟುಂಬಗಳಿಗೆ ಊಟಕ್ಕಾಗಿ ಪಡಿತರವನ್ನು ಕೂಡಾ ಸಂಗ್ರಹಿಸಿದ್ದಾರೆ.
ದೇಶದ ಎಲ್ಲಾ ಭಾಗಗಳಿಂದಲೂ, ಮಹಿಳಾ ಸ್ವಸಹಾಯ ಗುಂಪಿನ ಪರಿಶ್ರಮ ಕುರಿತಂತೆ ಅಸಂಖ್ಯಾತ ಘಟನೆಗಳು ಇಂದಿನ ದಿನಗಳಲ್ಲಿ ನಮ್ಮ ಮುಂದೆ ಬರುತ್ತಿವೆ.ಹಳ್ಳಿಗಳಲ್ಲಿ, ಸಣ್ಣ ಪಟ್ಟಣಗಳಲ್ಲಿ, ನಮ್ಮ ಸೋದರಿಯರು, ಹೆಣ್ಣುಮಕ್ಕಳು, ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಮಾಸ್ಕ್ ಗಳನ್ನು ತಯಾರಿಸುತ್ತಿದ್ದಾರೆ. ಈ ಕಾರ್ಯದಲ್ಲಿ ಎಲ್ಲಾ ಸಾಮಾಜಿಕ ಸಂಸ್ಥೆಗಳು ಇವರಿಗೆ ತಮ್ಮ ಸಹಕಾರ ನೀಡುತ್ತಿವೆ.
ಸ್ನೇಹಿತರೇ, ಈ ರೀತಿಯ ಅನೇಕ ಉದಾಹರಣೆಗಳು, ಪ್ರತಿ ದಿನ ಕೇಳಿ ಬರುತ್ತಿವೆ ಮತ್ತು ಕಾಣಿಸುತ್ತಿವೆ. ಎಷ್ಟೋ ಜನರು ಸ್ವತಃ ನನಗೆ ನಮೋ ಆಪ್ ಮತ್ತು ಇತರ ಮಾಧ್ಯಮಗಳ ಮೂಲಕ ತಮ್ಮ ಪ್ರಯತ್ನಗಳ ಕುರಿತು ಹೇಳುತ್ತಿದ್ದಾರೆ.
ಅನೇಕ ಬಾರಿ ಸಮಯದ ಅಭಾವದಿಂದಾಗಿ, ಅನೇಕ ಮಂದಿಯ, ಅನೇಕ ಸಂಸ್ಥೆಗಳ, ಅನೇಕ ಸಂಘಟನೆಗಳ, ಹೆಸರು ಹೇಳಲು ಸಾಧ್ಯವಾಗುವುದಿಲ್ಲ. ಸೇವಾ ಭಾವದಿಂದ, ಜನರ ಸಹಾಯ ಮಾಡುತ್ತಿರುವ, ಈ ಎಲ್ಲ ಜನರನ್ನು ನಾನು ಪ್ರಶಂಸಿಸುತ್ತೇನೆ, ಅವರನ್ನು ಗೌರವಿಸುತ್ತೇನೆ, ಅವರನ್ನು ಮನಃಪೂರ್ವಕವಾಗಿ ಅಭಿನಂದಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಈ ಬಿಕ್ಕಟ್ಟಿನ ಸಮಯದಲ್ಲಿ, ನನ್ನ ಮನಸ್ಸನ್ನು ಮುಟ್ಟುತ್ತಿರುವ ಮತ್ತೊಂದು ವಿಷಯವೆಂದರೆ, ಅದು ನಾವೀನ್ಯತೆ. ಹಳ್ಳಿಗಳಿಂದ ಹಿಡಿದು ನಗರಗಳವರೆಗೆ, ನಮ್ಮ ಸಣ್ಣ ವ್ಯಾಪಾರಿಗಳಿಂದ ಹಿಡಿದು ಸ್ಟಾರ್ಟ್ ಅಪ್ ವರೆಗೂ ಎಲ್ಲಾ ದೇಶವಾಸಿಗಳು, ನಮ್ಮ ಪ್ರಯೋಗಾಲಯಗಳು, ಕೊರೊನಾ ವಿರುದ್ಧದ ಹೋರಾಟದಲ್ಲಿ ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಿವೆ, ಹೊಸದನ್ನು ಆವಿಷ್ಕರಿಸುತ್ತಿವೆ.
ಹಾಗೆಯೇ, ನಾಸಿಕ್ ನ ರಾಜೇಂದ್ರ ಯಾದವ್ ಅವರ ಉದಾಹರಣೆ ಬಹಳ ಆಸಕ್ತಿಕರವಾಗಿದೆ. ರಾಜೇಂದ್ರ ಅವರು ನಾಸಿಕ್ ನ ಸತನಾ ಗ್ರಾಮದಲ್ಲಿ ಓರ್ವ ರೈತ. ತನ್ನ ಗ್ರಾಮವನ್ನು ಕೊರೊನಾ ವ್ಯಾಪಿಸದಂತೆ ಕಾಪಾಡಲು, ತನ್ನ ಟ್ರ್ಯಾಕ್ಟರ್ ಗೆ ಜೋಡಿಸಿದಂತೆ ಒಂದು ಸ್ಯಾನಿಟೈಸೇಷನ್ ಯಂತ್ರ ತಯಾರಿಸಿದರು ಮತ್ತು ಈ ನವೀನ ಯಂತ್ರ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ.
ಇದೇ ರೀತಿ. ನಾನು ಸೋಷಿಯಲ್ ಮೀಡಿಯಾದಲ್ಲಿ ಅನೇಕ ಚಿತ್ರಗಳನ್ನು ನೋಡುತ್ತಿದ್ದೆ. ಅನೇಕ ಅಂಗಡಿಗಳವರು ಎರಡು ಗಜಗಳಷ್ಟು ಅಂತರ ನಿರ್ವಹಣೆಗಾಗಿ, ಅಂಗಡಿಯಲ್ಲಿ, ದೊಡ್ಡ ಪೈಪ್ ಲೈನ್ ಇಟ್ಟಿದ್ದಾರೆ, ಇದರಲ್ಲಿ, ಅವರು ಒಂದು ತುದಿಯಿಂದ ಸಾಮಾನು ಹಾಕುತ್ತಾರೆ ಮತ್ತು ಇನ್ನೊಂದು ತುದಿಯಿಂದ ಗ್ರಾಹಕರು ತಮ್ಮ ಸಾಮಾನು ತೆಗೆದುಕೊಳ್ಳುತ್ತಾರೆ.
ಈ ಸಮಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೂಡಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಂದುಗೂಡಿ ಹಲವಾರು ವಿಭಿನ್ನ ಆವಿಷ್ಕಾರಗಳನ್ನು ಮಾಡಿದ್ದಾರೆ. ಆನ್ ಲೈನ್ ತರಗತಿಗಳು, ವಿಡಿಯೋ ತರಗತಿಗಳು, ಇವುಗಳನ್ನು ಕೂಡಾ ವಿಭಿನ್ನ ರೀತಿಯಲ್ಲಿ ಆವಿಷ್ಕಾರ ಮಾಡುತ್ತಿದ್ದಾರೆ.
ಕೊರೊನಾ ವ್ಯಾಕ್ಸಿನ್ ಕುರಿತಂತೆ, ನಮ್ಮ ಪ್ರಯೋಗಾಲಯಗಳಲ್ಲಿ ನಡೆಯುತ್ತಿರುವ ಕಾರ್ಯಗಳ ಮೇಲೆ ವಿಶ್ವವೆಲ್ಲಾ ವೀಕ್ಷಿಸುತ್ತಿದೆ ಮತ್ತು ನಮ್ಮೆಲ್ಲರ ಆಶಯ ಕೂಡಾ ಆಗಿದೆ.
ಯಾವುದೇ ಪರಿಸ್ಥಿತಿ ಬದಲಾಗುವುದೆಂದರೆ, ಇಚ್ಛಾಶಕ್ತಿಯೊಂದಿಗೆ ಅನೇಕ ಆವಿಷ್ಕಾರಗಳ ಮೇಲೆ ಕೂಡಾ ಆಧರಿತವಾಗಿರುತ್ತದೆ. ಸಾವಿರಾರು ವರ್ಷಗಳ ಮಾನವ ಜಾತಿಯ ಪ್ರಯಾಣ, ನಿರಂತರ ಆವಿಷ್ಕಾರದಿಂದಲೇ ಇಷ್ಟೊಂದು ಆಧುನಿಕ ಯುಗವನ್ನು ತಲುಪಿದೆ, ಆದ್ದರಿಂದ ಈ ಮಹಾಮಾರಿಯ ವಿರುದ್ಧ ವಿಜಯಕ್ಕಾಗಿ, ನಮ್ಮ ಈ ವಿಶೇಷ ಆವಿಷ್ಕಾರಗಳು ಕೂಡಾ ಬಲು ದೊಡ್ಡ ಆಧಾರವಾಗಿವೆ.
ಸ್ನೇಹಿತರೇ, ಕೊರೊನಾ ವಿರುದ್ಧ ಹೋರಾಟದ ಈ ಮಾರ್ಗ ಬಹಳ ದೀರ್ಘವಾಗಿದೆ. ಇದೊಂದು ಸಂಪೂರ್ಣ ವಿಶ್ವದ ಬಳಿ ಯಾವುದೇ ಚಿಕಿತ್ಸೆ ಇಲ್ಲದಿರುವ ಆಪತ್ತಾಗಿದೆ, ಇದರ ಅನುಭವವೇ ಮೊದಲು ಇರಲಿಲ್ಲ, ಇಂತಹದ್ದರಲ್ಲಿ, ಹೊಸ ಹೊಸ ಸವಾಲುಗಳು ಮತ್ತು ಅವುಗಳಿಂದಾಗಿ ಸಮಸ್ಯೆಗಳ ಅನುಭವ ನಮಗಾಗುತ್ತಿದೆ. ಇದು ಪ್ರಪಂಚದ ಕೊರೊನಾ ಪೀಡಿತ ಪ್ರತಿಯೊಂದು ದೇಶದಲ್ಲಿ ನಡೆಯುತ್ತಿದೆ ಮತ್ತು ಭಾರತವೂ ಇದಕ್ಕೆ ಹೊರತಾಗಿಲ್ಲ. ನಮ್ಮ ದೇಶದಲ್ಲಿ ಕೂಡಾ ಕಷ್ಟಗಳಿಲ್ಲದ, ಸಮಸ್ಯೆಗಳಿಲ್ಲದ, ಯಾವುದೇ ವರ್ಗವಿಲ್ಲ. ಈ ಬಿಕ್ಕಟ್ಟಿನ ಅತಿ ದೊಡ್ಡ ಪರಿಣಾಮ ಯಾರ ಮೇಲಾದರೂ ಉಂಟಾಗಿದೆಯೆಂದರೆ ಅದು ನಮ್ಮ ಬಡವರು, ಕೂಲಿಕಾರರು ಮತ್ತು ಕಾರ್ಮಿಕ ವರ್ಗದವರ ಮೇಲೆ. ಅವರ ಕಷ್ಟ, ಅವರ ನೋವು, ಅವರ ಬಾಧೆ, ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅವರ ಮತ್ತು ಅವರ ಕುಟುಂಬದವರ ಕಷ್ಟಗಳ ಅನುಭವ ಆಗದವರು ನಮ್ಮಲ್ಲಿ ಯಾರೂ ಇಲ್ಲ. ನಾವೆಲ್ಲರೂ ಸೇರಿ ಈ ಕಷ್ಟಗಳನ್ನು, ಈ ನೋವನ್ನು, ಹಂಚಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ, ಸಂಪೂರ್ಣ ದೇಶವೇ ಪ್ರಯತ್ನಿಸುತ್ತಿದೆ. ನಮ್ಮ ರೈಲ್ವೇ ಸೋದರರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರವಿರಲಿ, ರಾಜ್ಯವಿರಲಿ, ಸ್ಥಳೀಯ ಸ್ವರಾಜ್ ಸಂಸ್ಥೆಗಳಿರಲಿ, ಪ್ರತಿಯೊಬ್ಬರೂ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಯಾವರೀತಿಯಲ್ಲಿ ರೈಲ್ವೇ ಉದ್ಯೋಗಿಗಳು ಇಂದು ಕೆಲಸ ಮಾಡುತ್ತಿದ್ದಾರೋ, ಅವರುಗಳು ಒಂದು ರೀತಿಯಲ್ಲಿ ಮೊದಲ ಸಾಲಿನಲ್ಲಿ ನಿಂತಿರುವ ಕೊರೊನಾ ಯೋಧರಾಗಿದ್ದಾರೆ. ಲಕ್ಷಾಂತರ ಕಾರ್ಮಿಕರನ್ನು ರೈಲುಗಳಲ್ಲಿ, ಮತ್ತು ಬಸ್ಸುಗಳಲ್ಲಿ, ಸುರಕ್ಷಿತವಾಗಿ ಕರೆದೊಯ್ಯುವುದು, ಅವರ ಊಟ ತಿಂಡಿಯ ಬಗ್ಗೆ ಆಲೋಚಿಸುವುದು, ಪ್ರತಿಯೊಂದು ಜಿಲ್ಲೆಯಲ್ಲೂ ಕ್ವಾರಂಟೈನ್ ಕೇಂದ್ರಗಳ ವ್ಯವಸ್ಥೆ ಮಾಡುವುದು, ಎಲ್ಲರಿಗೂ ತಪಾಸಣೆ, ಪರೀಕ್ಷೆ, ಚಿಕಿತ್ಸೆ ಇವುಗಳ ವ್ಯವಸ್ಥೆ ಮಾಡುವುದು, ಈ ಎಲ್ಲಾ ಕೆಲಸಗಳೂ ನಿರಂತರವಾಗಿ ನಡೆಯುತ್ತಿವೆ ಮತ್ತು ಬಹಳ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ.
ಆದರೆ ಸ್ನೇಹಿತರೆ, ನಾವಿಂದು ನೋಡುತ್ತಿರುವ ದೃಶ್ಯದಿಂದಾಗಿ, ದೇಶಕ್ಕೆ ಹಿಂದೆ ಏನಾಗಿತ್ತು ಎಂಬುದನ್ನು ಅವಲೋಕಿಸಲು ಮತ್ತು ಭವಿಷ್ಯಕ್ಕಾಗಿ ಆಲೋಚಿಸುವ ಅವಕಾಶ ಕೂಡಾ ದೊರೆತಿದೆ.
ಇಂದು, ನಮ್ಮ ಕಾರ್ಮಿಕರ ನೋವಿನಲ್ಲಿ ನಾವು ದೇಶದ ಪೂರ್ವ ಭಾಗದ ದುಃಖವನ್ನು ನೋಡಲು ಸಾಧ್ಯವಾಗುತ್ತಿದೆ. ಯಾವ ಪೂರ್ವ ಭಾಗದಲ್ಲಿ ದೇಶದ ಅಭಿವೃದ್ಧಿ ಯಂತ್ರವನ್ನು ತಯಾರಿಸುವ ಸಾಮಥ್ರ್ಯವಿತ್ತೋ, ಆ ಕಾರ್ಮಿಕರ ಭುಜಬಲದಲ್ಲಿ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಾಮಥ್ರ್ಯವಿದೆಯೋ, ಆ ಪೂರ್ವ ಭಾಗದ ಅಭಿವೃದ್ಧಿ ಬಹಳ ಅಗತ್ಯ. ಪೂರ್ವ ಭಾರತದ ಅಭಿವೃದ್ಧಿಯಿಂದಲೇ, ದೇಶದ ಸಮತೋಲಿತ ಆರ್ಥಿಕ ಅಭಿವೃದ್ಧಿ ಸಾಧ್ಯ. ದೇಶ ನನಗೆ ಸೇವೆಯ ಅವಕಾಶ ನೀಡಿದಾಗಿನಿಂದಲೂ, ನಾವು ಭಾರತದ ಪೂರ್ವ ಭಾಗದ ಅಭಿವೃದ್ಧಿಗೆ ಪ್ರಾಧಾನ್ಯತೆ ನೀಡಿದ್ದೇವೆ. ಕಳೆದ ವರ್ಷಗಳಲ್ಲಿ, ಈ ನಿಟ್ಟಿನಲ್ಲಿ, ಬಹಳಷ್ಟು ಅಭಿವೃದ್ಧಿ ನಡೆದಿದೆ ಎಂದು ನನಗೆ ಸಂತೋಷವೆನಿಸುತ್ತದೆ. ಮತ್ತು ಈಗ ವಲಸೆ ಕಾರ್ಮಿಕರನ್ನು ನೋಡಿದಾಗ ಬಹಳಷ್ಟು ಹೊಸ ಕ್ರಮಗಳನ್ನು ಕೈಗೊಳ್ಳುವುದು ಕೂಡಾ ಅಗತ್ಯವಾಗಿದೆ ಮತ್ತು ನಾವು ಆ ನಿಟ್ಟಿನಲ್ಲಿ ನಿರಂತರ ಮುಂದೆ ಸಾಗುತ್ತಿದ್ದೇವೆ. ಅಂದರೆ ಅನೇಕ ಕಾರ್ಮಿಕರ ಸ್ಕಿಲ್ ಮ್ಯಾಪಿಂಗ್ ನ ಕೆಲಸ ನಡೆಯುತ್ತಿದೆ, ಹಲವಾರು ಸ್ಟಾರ್ ಅಪ್ ಗಳು ಈ ಕೆಲಸದಲ್ಲಿ ನಿರತವಾಗಿವೆ. ಅನೇಕ ವಲಸೆ ಆಯೋಗಗಳನ್ನು (migration commission) ಸ್ಥಾಪಿಸುವ ಮಾತುಕತೆಗಳೂ ನಡೆಯುತ್ತಿವೆ. ಇವುಗಳಲ್ಲದೆ, ಕೇಂದ್ರ ಸರ್ಕಾರ ಈಗ ತೆಗೆದುಕೊಂಡಿರುವ ನಿರ್ಧಾರದಿಂದಾಗಿ, ಗ್ರಾಮಗಳಲ್ಲಿ ಉದ್ಯೋಗ, ಸ್ವ-ಉದ್ಯೋಗ, ಸಣ್ಣ ಕೈಗಾಲಿಕೆಗಳಿಗೆ ಸಂಬಂಧಿಸಿದಂತೆ ಅನೇಕ ಸಾಧ್ಯತೆಗಳು ತೆರೆದಿವೆ. ಈ ನಿರ್ಧಾರಗಳು, ಈ ಪರಿಸ್ಥಿತಿಗಳ ಪರಿಹಾರಕ್ಕಾಗಿವೆ, ಸ್ವಾವಲಂಬಿ ಭಾರತಕ್ಕಾಗಿದೆ. ಒಂದುವೇಳೆ ನಮ್ಮ ಗ್ರಾಮಗಳು ಸ್ವಾವಲಂಬಿಯಾಗಿದ್ದಿದ್ದರೆ, ನಮ್ಮ ಪಟ್ಟಣ, ನಮ್ಮ ಜಿಲ್ಲೆ, ನಮ್ಮ ರಾಜ್ಯ, ಸ್ವಾವಲಂಬಿಯಾಗಿದ್ದಿದ್ದರೆ, ಅನೇಕ ಸಮಸ್ಯೆಗಳು, ಇಂದು ನಮ್ಮ ಮುಂದಿರುವ ರೂಪದಲ್ಲಿ ಇರುತ್ತಿರಲಿಲ್ಲ. ಆದರೆ ಕತ್ತಲಿನಿಂದ ಬೆಳಕಿನೆಡೆಗೆ ಸಾಗುವುದು ಮನುಷ್ಯನ ಸ್ವಭಾವ. ಸ್ವಾವಲಂಬಿ ಭಾರತ ಕುರಿತಂತೆ ಇಂದು ದೇಶದಲ್ಲಿ ವ್ಯಾಪಕ ಚಿಂತನೆ ನಡೆದಿದೆ ಎನ್ನುವುದು ಈ ಸವಾಲುಗಳ ನಡುವೆಯೂ ನನಗೆ ಸಂತಸ ನೀಡುವ ವಿಷಯವಾಗಿದೆ. ಜನರು, ಈಗ ಇದನ್ನು ತಮ್ಮ ಅಭಿಯಾನ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಈ ಅಭಿಯಾನದ ನೇತೃತ್ವವನ್ನು ದೇಶವಾಸಿಗಳು ತಾವು ತೆಗೆದುಕೊಳ್ಳುತ್ತಿದ್ದಾರೆ. ಕೆಲವರಂತೂ ತಮ್ಮ ತಮ್ಮ ಪ್ರದೇಶಗಳಲ್ಲಿ ತಯಾರಿಸುವ ವಸ್ತುಗಳ ಪಟ್ಟಿ ತಯಾರಿಸಿದ್ದಾರೆಂದು ಬಹಳಷ್ಟು ಮಂದಿ ಹೇಳಿದ್ದಾರೆ. ಈ ಜನರು ಈಗ, ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸುತ್ತಿದ್ದಾರೆ ಮತ್ತು ವೋಕಲ್ ಫಾರ್ ಲೋಕಲ್ ಅನ್ನು ಉತ್ತೇಜಿಸುತ್ತಿದ್ದಾರೆ ಕೂಡಾ. Make in India ಗೆ ಪ್ರೋತ್ಸಾಹ ನೀಡಲು, ಪ್ರತಿಯೊಬ್ಬರೂ ತಮ್ಮ ತಮ್ಮ ಸಂಕಲ್ಪ ವ್ಯಕ್ತಪಡಿಸುತ್ತಿದ್ದಾರೆ.
ಬಿಹಾರದ ನಮ್ಮ ಓರ್ವ ಸೋದರ ಶ್ರೀ ಹಿಮಾಂಶು ಅವರು ನಮೋ ಆಪ್ ನಲ್ಲಿ ನನಗೆ ಹೀಗೆಂದು ಬರೆದಿದ್ದಾರೆ, ಭಾರತಕ್ಕೆ ವಿದೇಶದಿಂದ ಬರುವ ಆಮದನ್ನು ಸಾಕಷ್ಟು ಕಡಿಮೆ ಮಾಡುವ ದಿನವನ್ನು ನೋಡುವ ಆಸೆ ತಮಗೆ ಇದೆ ಎಂದು. ಅದು ಪೆಟ್ರೋಲ್, ಡೀಸೆಲ್, ಇಂಧನ ಆಮದಾಗಿರಲೀ, ವಿದ್ಯುನ್ಮಾನ ಉಪಕರಣಗಳ ಆಮದಾಗಿರಲೀ, ಯೂರಿಯಾದ ಆಮದಾಗಿರಲೀ, ಅಥವಾ ಅಡುಗೆ ಎಣ್ಣೆಯ ಆಮದಾಗಿರಲಿ. ನಾನು ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತೇನೆ. ನಮ್ಮ ದೇಶದಲ್ಲಿ ಇಂತಹ ಎಷ್ಟೊಂದು ವಸ್ತುಗಳು ಹೊರಗಿನಿಂದ ಬರುತ್ತವೆ, ಅವುಗಳ ಮೇಲೆ ನಮ್ಮ ಪ್ರಾಮಾಣಿಕ ತೆರಿಗೆ ಪಾವತಿದಾರರ ಹಣ ಖರ್ಚಾಗುತ್ತದೆ, ಅವುಗಳ ಪರ್ಯಾಯ ಉತ್ಪನ್ನಗಳನ್ನು ನಾವು ಸುಲಭದಲ್ಲಿ ನಮ್ಮ ಭಾರತದಲ್ಲೇ ತಯಾರಿಸಬಹುದಾಗಿದೆ.
ಅಸ್ಸಾಂ ನ ಸುದೀಪ್ ನನಗೆ ಹೀಗೆಂದು ಬರೆದಿದ್ದಾರೆ, ಅವರು ಮಹಿಳೆಯರು ತಯಾರಿಸುವ ಸ್ಥಳೀಯ ಬಿದಿರಿನ ಉತ್ಪನ್ನಗಳ ವ್ಯಾಪಾರ ಮಾಡುತ್ತಾರೆ ಮತ್ತು ಮುಂಬರುವ 2 ವರ್ಷಗಳಲ್ಲಿ, ತಮ್ಮ ಬಿದಿರಿನ ಉತ್ಪನ್ನವನ್ನು ಜಾಗತಿಕ ಬ್ರ್ಯಾಂಡ್ ಮಾಡುವ ನಿರ್ಧಾರ ಮಾಡಿದ್ದಾರೆ. ಸ್ವಾವಲಂಬಿ ಭಾರತ ಅಭಿಯಾನ ಈ ದಶಕದಲ್ಲಿ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ನನಗೆ ಪೂರ್ಣ ವಿಶ್ವಾಸವಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೊರೊನಾ ಬಿಕ್ಕಟ್ಟಿನ ಈ ಸಮಯದಲ್ಲಿ, ವಿಶ್ವದ ಅನೇಕ ನಾಯಕರೊಂದಿಗೆ ನಾನು ಮಾತುಕತೆ ನಡೆಸಿದ್ದೇನೆ, ಆದರೆ ಒಂದು ರಹಸ್ಯವನ್ನು ಇಂದು ನಾನು ನಿಮಗೆ ಖಂಡಿತವಾಗಿಯೂ ಹೇಳಲು ಬಯಸುತ್ತೇನೆ. ವಿಶ್ವದ ಅನೇಕ ನಾಯಕರ ಮಾತುಕತೆ ನಡೆಯುವಾಗ, ಅವರುಗಳಿಗೆ ಇಂದಿನ ದಿನಗಳಲ್ಲಿ ಬಹಳ ಆಸಕ್ತಿಕರ ವಿಷಯವೆಂದರೆ ಅದು ಯೋಗ ಮತ್ತು ಆಯುರ್ವೇದಕ್ಕೆ ಸಂಬಂಧಿಸಿದ್ದಾಗಿದೆ ಎಂಬುದನ್ನು ನಾನು ಮನಗಂಡಿದ್ದೇನೆ. ಕೆಲವು ನಾಯಕರು ಕೊರೊನಾದ ಈ ಸಮಯದಲ್ಲಿ ಈ `ಯೋಗ’ ಮತ್ತು `ಆಯುರ್ವೇದ’ ಹೇಗೆ ಸಹಾಯ ಮಾಡುತ್ತದೆಂದು ನನ್ನನ್ನು ಕೇಳಿದ್ದಾರೆ.
ಮಿತ್ರರೇ, ಅಂತಾರಾಷ್ಟ್ರೀಯ ಯೋಗ ದಿನ ಸದ್ಯದಲ್ಲೇ ಬರುತ್ತಿದೆ. ಜನರ ಜೀವನದಲ್ಲಿ ಯೋಗವು ಹೇಗೆಲ್ಲ ಒಂದಾಗುತ್ತಿದೆಯೋ ಹಾಗೆಯೇ ತಮ್ಮ ಆರೋಗ್ಯದ ಕುರಿತು ಅವರಲ್ಲಿ ಕಾಳಜಿ, ಜಾಗರೂಕತೆ ಹೆಚ್ಚಾಗುತ್ತಿದೆ. ಈಗ ಕೊರೋನಾ ಸಂಕಟದ ದಿನಗಳಲ್ಲೂ ಇದು ಕಂಡುಬರುತ್ತಿದ್ದು, ಮನೆಯಲ್ಲೇ ಇರುವ ಸಮಯದಲ್ಲಿ ಹಾಲಿವುಡ್ ನಿಂದ ಹರಿದ್ವಾರದವರೆಗೆ ಜನರು ಯೋಗದ ಬಗ್ಗೆ ಬಹಳ ಗಂಭೀರವಾಗಿ ಗಮನ ನೀಡಿದ್ದಾರೆ. ಇಡೀ ಜಗತ್ತಿನಲ್ಲಿ ಜನರು ಯೋಗ ಹಾಗೂ ಅದರೊಂದಿಗೆ ಆಯುರ್ವೇದದ ಬಗ್ಗೆ ಹೆಚ್ಚಾಗಿ ಅರಿತುಕೊಳ್ಳಲು ಬಯಸುತ್ತಿದ್ದಾರೆ, ತಮ್ಮದಾಗಿಸಿಕೊಳ್ಳಲು ಮುಂದಾಗಿದ್ದಾರೆ. ಎಂದಿಗೂ ಯೋಗ ಮಾಡದವರು ಸಹ ಆನ್ ಲೈನ್ ಯೋಗ ತರಗತಿಯ ಮೂಲಕ ಇಲ್ಲವೇ ಆನ್ ಲೈನ್ ವಿಡಿಯೋ ಮಾಧ್ಯಮದ ಮೂಲಕ ಯೋಗವನ್ನು ಕಲಿತುಕೊಳ್ಳುತ್ತಿದ್ದಾರೆ. ನಿಜವೆಂದರೆ, ಯೋಗವು ಸಮುದಾಯ, ರೋಗನಿರೋಧಕತೆ ಮತ್ತು ಏಕತೆಗೆ ಎಲ್ಲದಕ್ಕೂ ಉತ್ತಮವೇ ಆಗಿದೆ.
ಬಾಂಧವರೇ, ಕೊರೋನಾ ಸಂಕಟದ ಸಮಯದಲ್ಲಿ ಯೋಗವು ಈ ಕಾರಣಕ್ಕೂ ಇಂದು ಅತ್ಯಂತ ಮುಖ್ಯವಾಗಿದೆ, ಏನೆಂದರೆ, ಕೊರೋನಾ ವೈರಸ್, ನಮ್ಮ ಶ್ವಾಸಕೋಶದ ವ್ಯವಸ್ಥೆ ಮೇಲೆ ಎಲ್ಲಕ್ಕಿಂತ ಅಧಿಕವಾಗಿ ಪರಿಣಾಮ ಬೀರುತ್ತದೆ. ಯೋಗದಲ್ಲಿಯಾದರೋ ಶ್ವಾಸಕೋಶದ ವ್ಯವಸ್ಥೆಯನ್ನು ಬಲಪಡಿಸುವಂಥ ಅನೇಕ ರೀತಿಯ ಪ್ರಾಣಾಯಾಮಗಳಿವೆ. ಇದರ ಪರಿಣಾಮವನ್ನು ದೀರ್ಘ ಸಮಯದಿಂದ ನಾವು ನೋಡುತ್ತ ಬಂದಿದ್ದೇವೆ. ಅನಾದಿ ಕಾಲದಿಂದ ಪರೀಕ್ಷೆಗೆ ಒಳಪಟ್ಟಿರುವ ಯೋಗದ ವಿವಿಧ ಅಭ್ಯಾಸಗಳಿಗೆ ಬೇರೆಯದೇ ಮಹತ್ವ ಇದೆ. ಕಪಾಲಭಾತಿ, ಅನುಲೋಮ, ವಿಲೋಮ, ಪ್ರಾಣಾಯಾಮಗಳ ಕುರಿತು ಬಹಳ ಜನ ಪರಿಚಯ ಹೊಂದಿದ್ದಾರೆ. ಆದರೆ, ಭಸ್ತ್ರಿಕಾ, ಶೀತಲೀ, ಭ್ರಾಮರಿಯಂತಹ ಅನೇಕ ಪ್ರಾಣಾಯಾಮಗಳ ಪ್ರಕಾರಗಳಿವೆ, ಇವುಗಳಿಂದಲೂ ಅತೀವ ಲಾಭವಿದೆ. ಅಂದ ಹಾಗೆ, ತಮ್ಮ ಜೀವನದಲ್ಲಿ ಯೋಗವನ್ನು ಇನ್ನಷ್ಟು ಅಳವಡಿಸುವ ಉದ್ದೇಶದಿಂದ ಆಯುಷ್ ಸಚಿವಾಲಯ ಕೂಡ ಈ ಬಾರಿ ಒಂದು ವಿಶೇಷ ಪ್ರಯೋಗ ಮಾಡಿದೆ. ಆಯುಷ್ ಸಚಿವಾಲಯವು “My Life, MyYoga’ ಹೆಸರಿನಲ್ಲಿ ಅಂತಾರಾಷ್ಟ್ರೀಯ ವಿಡಿಯೋ ಬ್ಲಾಗ್ ಮೂಲಕ ಸ್ಪರ್ಧೆಯನ್ನು ಆರಂಭಿಸಿದೆ. ಭಾರತವೊಂದೇ ಅಲ್ಲ, ಇಡೀ ವಿಶ್ವದ ಜನರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಇದರಲ್ಲಿ ಭಾಗಿಯಾಗಲು ನೀವು ಯೋಗ ಮಾಡುತ್ತಿರುವ ಮೂರು ನಿಮಿಷಗಳ ವಿಡಿಯೋವನ್ನು ಅಪ್ಲೋಡ್ ಮಾಡಬೇಕು. ಈ ವಿಡಿಯೋದಲ್ಲಿ ತಾವು ಯೋಗ ಅಥವಾ ಆಸನ ಮಾಡುವುದನ್ನು ಚಿತ್ರೀಕರಿಸಬೇಕು. ಮತ್ತು ಯೋಗದಿಂದ ತಮ್ಮ ಜೀವನದಲ್ಲಿ ಆಗಿರುವ ಬದಲಾವಣೆಯನ್ನು ಸಹ ಅದರಲ್ಲಿ ಹೇಳಿಕೊಳ್ಳಬೇಕು. ಹೀಗಾಗಿ, ಈ ನಿಟ್ಟಿನಲ್ಲಿ ನನ್ನ ಆಗ್ರಹವೆಂದರೆ, ತಾವೆಲ್ಲರೂ ಈ ಸ್ಪರ್ಧೆಯಲ್ಲಿ ಅಗತ್ಯವಾಗಿ ಭಾಗಿಯಾಗಿ, ಹಾಗೂ ಈ ಹೊಸ ಮಾದರಿಯ ಮೂಲಕ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಎಲ್ಲರೂ ಪಾಲ್ಗೊಳ್ಳಿ.
ಗೆಳೆಯರೇ, ನಮ್ಮ ದೇಶದಲ್ಲಿ ಕೋಟಿ ಕೋಟಿ ಬಡಜನರು ದಶಕಗಳಿಂದ ಒಂದು ಬಹಳ ದೊಡ್ಡ ಚಿಂತೆಯಲ್ಲಿದ್ದಾರೆ, ಒಂದೊಮ್ಮೆ ತಮಗೆ ಅನಾರೋಗ್ಯವಾದರೆ, ಏನಾಗಬಹುದು? ನಮ್ಮ ಆರೋಗ್ಯಕ್ಕಾಗಿ ಚಿಕಿತ್ಸೆ ಮಾಡಿಸಬೇಕೇ ಅಥವಾ ನಮ್ಮ ಕುಟುಂಬದ ಊಟದ ಚಿಂತೆ ಮಾಡಬೇಕೆ ಎನ್ನುವುದು ಅವರ ಸಮಸ್ಯೆ. ಈ ಸಮಸ್ಯೆಯನ್ನು ಅರ್ಥಮಾಡಿಕೊಂಡು, ಇದನ್ನು ದೂರಮಾಡಲು ಸುಮಾರು ಆರು ತಿಂಗಳ ಹಿಂದೆ “ಆಯುಷ್ಮಾನ್ ಭಾರತ’ ಯೋಜನೆಯನ್ನು ಆರಂಭಿಸಲಾಗಿತ್ತು. ಕೆಲವೇ ದಿನಗಳ ಹಿಂದೆ “ಆಯುಷ್ಮಾನ್ ಭಾರತ’ದ ಫಲಾನುಭವಿಗಳ ಸಂಖ್ಯೆ ಒಂದು ಕೋಟಿಗೂ ಮೀರಿದೆ. ಇದರ ಅಡಿಯಲ್ಲಿ ಒಂದು ಕೋಟಿಗೂ ಅಧಿಕ ರೋಗಿಗಳು ಅರ್ಥಾತ್, ಕುಟುಂಬಗಳ ಸೇವೆ ಮಾಡಲಾಗಿದೆ. ಒಂದು ಕೋಟಿಗೂ ಹೆಚ್ಚಿನ ಕುಟುಂಬಗಳೆಂದರೆ ಏನು ಗೊತ್ತೇ? ನಾರ್ವೆ, ಸಿಂಗಾಪುರದಂಥ ದೇಶಗಳ ಒಟ್ಟು ಜನಸಂಖ್ಯೆಯ ಎರಡು ಪಟ್ಟು ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ. ಒಂದೊಮ್ಮೆ, ಆಸ್ಪತ್ರೆಗಳಿಗೆ ದಾಖಲಾತಿ ಮಾಡಿದ ಬಳಿಕ ಚಿಕಿತ್ಸೆಗೆ ಹಣ ನೀಡುವ ಪರಿಸ್ಥಿತಿಯಿದ್ದರೆ, ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡದೆ ಇದ್ದರೆ, ಸಣ್ಣದಾಗಿ ಅಂದಾಜು ಮಾಡಿದರೂ ಸರಿಸುಮಾರು 14 ಸಾವಿರ ಕೋಟಿ ರೂಪಾಯಿಗೂ ಹೆಚ್ಚಿನ ಹಣವನ್ನು ಅವರು ತಮ್ಮ ಜೇಬಿನಿಂದ ಖರ್ಚು ಮಾಡಬೇಕಾಗುತ್ತಿತ್ತು. “ಆಯುಷ್ಮಾನ್ ಭಾರತ’ ಯೋಜನೆಯು ಹಣ ವೆಚ್ಚ ಮಾಡುವುದರಿಂದ ಬಡವರನ್ನು ರಕ್ಷಿಸಿದೆ. ನಾನು “ಆಯುಷ್ಮಾನ್ ಭಾರತ’ ಯೋಜನೆಯ ಎಲ್ಲ ಫಲಾನುಭವಿಗಳು ಹಾಗೂ ಎಲ್ಲ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು, ನರ್ಸ್ ಗಳು ಹಾಗೂ ವೈದ್ಯ ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. “ಆಯುಷ್ಮಾನ್ ಭಾರತ’ ಯೋಜನೆಯಲ್ಲಿ ಪೆÇೀರ್ಟೆಬಿಲಿಟಿ ಮಾಡಿಕೊಳ್ಳುವಂಥ ಒಂದು ವಿಶೇಷ ಸೌಲಭ್ಯವಿದೆ. ಈ ಪೆÇೀರ್ಟೆಬಿಲಿಟಿ ವ್ಯವಸ್ಥೆಯು ದೇಶದ ಏಕತೆಯ ಬಣ್ಣಕ್ಕೆ ಇನ್ನಷ್ಟು ರಂಗು ತುಂಬಲು ಸಹಾಯ ಮಾಡಿದೆ. ಇದರಲ್ಲಿ, ಬಿಹಾರದ ಯಾವುದೇ ಬಡ ವ್ಯಕ್ತಿ, ತಾನು ಬಯಸಿದರೆ, ಕರ್ನಾಟಕದ ಆಸ್ಪತ್ರೆಯಲ್ಲಿ ತನ್ನ ರಾಜ್ಯದಲ್ಲಿ ಸಿಗುವಂಥದ್ದೇ ಮಾದರಿಯ ಉತ್ತಮ ವ್ಯವಸ್ಥೆಯನ್ನು ಪಡೆಯಬಲ್ಲ. ಇದೇ ರೀತಿ, ಮಹಾರಾಷ್ಟ್ರದ ಯಾವುದೇ ಬಡ ವ್ಯಕ್ತಿಗೆ ತಮಿಳುನಾಡಿನಲ್ಲಿಯೂ ತನ್ನ ರಾಜ್ಯದಂಥ ಅದೇ ಉತ್ತಮ ವ್ಯವಸ್ಥೆ ಸಿಗಬಲ್ಲದು. ಈ ಯೋಜನೆಯ ಕಾರಣದಿಂದ, ಯಾವುದೇ ಪ್ರದೇಶದಲ್ಲಿ ಆರೋಗ್ಯ ವ್ಯವಸ್ಥೆ ದುರ್ಬಲವಾಗಿದ್ದರೆ ಅಲ್ಲಿನ ಬಡವರು ದೇಶದ ಯಾವುದೇ ಮೂಲೆಗೆ ಹೋಗಿ ಗುಣಮಟ್ಟದ ಚಿಕಿತ್ಸೆಯನ್ನು ಪಡೆಯುವ ಸೌಲಭ್ಯ ದೊರಕುತ್ತದೆ.
ಬಾಂಧವರೇ, ಒಂದು ಕೋಟಿ ಫಲಾನುಭವಿಗಳಲ್ಲಿ ಶೇಕಡ 80ರಷ್ಟು ಜನ ಗ್ರಾಮೀಣ ಭಾಗದವರೇ ಆಗಿದ್ದಾರೆ ಎನ್ನುವುದನ್ನು ತಿಳಿದರೆ ತಾವು ಅಚ್ಚರಿ ಪಡಬಹುದು. ಇದರಲ್ಲೂ ಸರಿಸುಮಾರು ಶೇಕಡ 50ರಷ್ಟು ಜನ ನಮ್ಮ ಮಾತೆಯರು, ಸೋದರಿಯರು ಹಾಗೂ ಪುತ್ರಿಯರು ಸೇರಿದ್ದಾರೆ. ಈ ಫಲಾನುಭವಿಗಳಲ್ಲಿ ಹೆಚ್ಚಿನ ಜನರು ಸಾಮಾನ್ಯ ಔಷಧ, ಚಿಕಿತ್ಸೆಗೆ ಬಗ್ಗದ ರೋಗದಿಂದ ಪೀಡಿತರಾಗಿದ್ದರು. ಇವರಲ್ಲಿ ಶೇಕಡ 70ರಷ್ಟು ಜನರಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿದೆ. ಎಷ್ಟು ದೊಡ್ಡ ಸಮಸ್ಯೆಯಿಂದ ಇವರಿಗೆಲ್ಲ ಮುಕ್ತಿ ಸಿಕ್ಕಿದೆ ಎನ್ನುವುದನ್ನು ತಾವು ಅಂದಾಜಿಸಬಹುದು. ಮಣಿಪುರದ ಚುರಾ ಚಾಂದ್ ಪುರದಲ್ಲಿ ಆರು ವರ್ಷ ಮಗು ಕೆಲೆನ್ ಸಾಂಗ್ ಗೆ ಕೂಡ ಇದೇ ರೀತಿ ಆಯುಷ್ಮಾನ್ ಯೋಜನೆ ಅಡಿಯಲ್ಲಿ ಹೊಸ ಜೀವನ ಸಿಕ್ಕಿದೆ. ಕೆಲೆನ್ ಸಾಂಗ್ ನಿಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಮೆದುಳಿನಲ್ಲಿ ಗಂಭೀರವಾದ ರೋಗ ಕಂಡುಬಂದಿತ್ತು. ಈ ಬಾಲಕನ ತಂದೆ ದಿನಗೂಲಿ ಕಾರ್ಮಿನಾಗಿದ್ದಾನೆ, ಈತನ ತಾಯಿ ಹೆಣೆಯುವ ಕಾರ್ಯ ಮಾಡುತ್ತಾಳೆ. ಇಂಥದ್ದರಲ್ಲಿ ಬಾಲಕನಿಗೆ ಚಿಕಿತ್ಸೆ ಕೊಡಿಸುವುದು ಇವರಿಗೆ ಅತೀವ ಕಷ್ಟವಾಗಿತ್ತು. ಆದರೆ, “ಆಯುಷ್ಮಾನ್ ಭಾರತ’ ಯೋಜನೆಯಿಂದ ಅವರ ಮಗನಿಗೆ ಉಚಿತವಾಗಿ ಚಿಕಿತ್ಸೆ ಲಭ್ಯವಾಗಿದೆ. ಇದೇ ರೀತಿಯ ಅನುಭವ ಪುದುಚೇರಿಯ ಅಮೂರ್ಥಾ ವಲ್ಲಿಯದೂ ಆಗಿದೆ. ಅವಳಿಗೂ `ಆಯುಷ್ಮಾನ್ ಭಾರತ’ ಯೋಜನೆ ಸಂಕಟ ನಿವಾರಕವಾಗಿ ಬಂದಿದೆ. ಅಮೂರ್ಥಾ ವಲ್ಲಿಯ ಪತಿಗೆ ಹೃದಯಾಘಾತವಾಗಿ ನಿಧನ ಹೊಂದಿದ್ದಾರೆ. ಅವರ 27 ವರ್ಷದ ಮಗ ಜೀವಾನಿಗೆ ಕೂಡ ಹೃದಯದ ಸಮಸ್ಯೆಯಿದೆ. ವೈದ್ಯರು ಜೀವಾನಿಗೂ ಶಸ್ತ್ರಚಿಕಿತ್ಸೆ ಮಾಡಿಸುವಂತೆ ಸಲಹೆ ನೀಡಿದ್ದಾರೆ. ಆದರೆ, ಶ್ರಮಿಕ ದಿನಗೂಲಿ ಕಾರ್ಮಿಕರಾಗಿರುವ ಜೀವಾನಿಗೆ ಅಷ್ಟೆಲ್ಲ ವೆಚ್ಚ ಭರ್ತಿ ಮಾಡಿಕೊಂಡು ಆಪರೇಷನ್ ಮಾಡಿಸಿಕೊಳ್ಳುವ ಸಾಧ್ಯತೆಯೇ ಇಲ್ಲವಾಗಿತ್ತು. ಆದರೆ, ಅಮೂರ್ಥಾ ವಲ್ಲಿ ತಮ್ಮ ಮಗನನ್ನು “ಆಯುಷ್ಮಾನ್ ಭಾರತ’ ಯೋಜನೆಯಲ್ಲಿ ನೋಂದಣಿ ಮಾಡಿಸಿದರು ಹಾಗೂ ಒಂಭತ್ತು ದಿನಗಳ ಬಳಿಕ ಮಗ ಜೀವಾನಿಗೆ ಹೃದಯದ ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿದರು.
ಮಿತ್ರರೇ, ನಾನು ನಿಮಗೆ ಕೇವಲ ಎರಡು ಘಟನೆಗಳ ಬಗ್ಗೆ ಮಾಹಿತಿ ನೀಡಿದ್ದೇನೆ. “ಆಯುಷ್ಮಾನ್ ಭಾರತ’ ವು ಇಂಥ ಒಂದು ಕೋಟಿಗೂ ಅಧಿಕ ಘಟನೆಗಳನ್ನು ತನ್ನಲ್ಲಿ ಒಳಗೊಂಡಿದೆ. ಈ ಘಟನೆಗಳು ಬದುಕಿರುವ ಮಾನವರದ್ದು, ದುಃಖ-ಸಮಸ್ಯೆಗಳಿಂದ ಮುಕ್ತಿ ಹೊಂದಿರುವ ನಮ್ಮ ಪರಿವಾರದ ಜನರದ್ದು. ತಮ್ಮಲ್ಲಿ ನನ್ನ ಒತ್ತಾಯವೆಂದರೆ, ಸಮಯ ಸಿಕ್ಕಾಗ “ಆಯುಷ್ಮಾನ್ ಭಾರತ’ ಯೋಜನೆ ಅಡಿಯಲ್ಲಿ ಚಿಕಿತ್ಸೆ ಪಡೆದಿರುವ ಇಂಥ ಜನರೊಂದಿಗೆ ಖಂಡಿತವಾಗಿ ಮಾತನಾಡಿ. ಬಡವನೊಬ್ಬ ತನ್ನ ರೋಗದಿಂದ ಹೊರ ಬಂದಾಗ ಆತನಲ್ಲಿ ಬಡತನದೊಂದಿಗೂ
During the last two #MannKiBaat programmes, we have been largely discussing the COVID-19 situation.
— PMO India (@PMOIndia) May 31, 2020
It indicates how importance of talking about the pandemic and taking the relevant precautions. pic.twitter.com/iT3IAhxZjm
It is important to be even more careful now. #MannKiBaat pic.twitter.com/VAaqoyaG5V
— PMO India (@PMOIndia) May 31, 2020
India's people driven fight against COVID-19. #MannKiBaat pic.twitter.com/7fkmJzrcau
— PMO India (@PMOIndia) May 31, 2020
Every Indian has played a part in the battle against COVID-19. #MannKiBaat pic.twitter.com/Ga38DG5OdS
— PMO India (@PMOIndia) May 31, 2020
India's Seva Shakti is visible in the fight against COVID-19. #MannKiBaat pic.twitter.com/hVGETo0XJO
— PMO India (@PMOIndia) May 31, 2020
During #MannKiBaat and on other platforms as well as occasions, India has repeatedly expressed gratitude to those at the forefront of battling COVID-19. #MannKiBaat pic.twitter.com/KPkK8RMbEn
— PMO India (@PMOIndia) May 31, 2020
India is seeing the remarkable work of Women Self Help Groups. #MannKiBaat pic.twitter.com/GwQW2lXimK
— PMO India (@PMOIndia) May 31, 2020
The fight against COVID-19 is also being powered by the innovative spirit of our citizens.
— PMO India (@PMOIndia) May 31, 2020
They are innovating in a wide range of sectors. #MannKiBaat pic.twitter.com/fbuuxIcDKk
The road ahead is a long one.
— PMO India (@PMOIndia) May 31, 2020
We are fighting a pandemic about which little was previously known. #MannKiBaat pic.twitter.com/TSoCrAMT64
Making every effort to mitigate people's problems in this time. #MannKiBaat pic.twitter.com/oJ7jwbyIUH
— PMO India (@PMOIndia) May 31, 2020
The Indian Railways Family is at the forefront of fighting COVID-19. #MannKiBaat pic.twitter.com/MvhBgsp99e
— PMO India (@PMOIndia) May 31, 2020
Continued efforts to make Eastern India the growth engine of our nation. #MannKiBaat pic.twitter.com/sUueOnu7x0
— PMO India (@PMOIndia) May 31, 2020
Working towards all-round development and the empowerment of every Indian. #MannKiBaat pic.twitter.com/4YjaCUUw07
— PMO India (@PMOIndia) May 31, 2020
Commendable efforts by some states in helping those who are most vulnerable. #MannKiBaat pic.twitter.com/XihgcF50JB
— PMO India (@PMOIndia) May 31, 2020
Vocal for local! #MannKiBaat pic.twitter.com/DtHLgOUI1m
— PMO India (@PMOIndia) May 31, 2020
There is great interest towards Yoga globally. #MannKiBaat pic.twitter.com/7W1QZzkDjz
— PMO India (@PMOIndia) May 31, 2020
Yoga for community, immunity and unity. #MannKiBaat pic.twitter.com/zOAbk794yo
— PMO India (@PMOIndia) May 31, 2020
There is a link between respiratory problems and COVID-19.
— PMO India (@PMOIndia) May 31, 2020
Hence, this Yoga Day, try to work on breathing exercises. #MannKiBaat pic.twitter.com/ZJt8JvXk0e
1 crore beneficiaries of Ayushman Bharat. #MannKiBaat pic.twitter.com/ilrOXLtIZd
— PMO India (@PMOIndia) May 31, 2020
Ensuring a healthier India. #MannKiBaat pic.twitter.com/fgABqE3hxz
— PMO India (@PMOIndia) May 31, 2020
Portability is a key feature of Ayushman Bharat. #MannKiBaat pic.twitter.com/PCYsBbUn65
— PMO India (@PMOIndia) May 31, 2020
Some facts about Ayushman Bharat that would make you happy. #MannKiBaat pic.twitter.com/g3GJjYtFOC
— PMO India (@PMOIndia) May 31, 2020
India stands with Odisha and West Bengal.
— PMO India (@PMOIndia) May 31, 2020
The people of those states have shown remarkable courage. #MannKiBaat pic.twitter.com/N8klMAoVPi
Help will be given to all those affected by the locust attacks that have been taking place in the recent days. #MannKiBaat pic.twitter.com/HcO4ouoy4H
— PMO India (@PMOIndia) May 31, 2020
Giving importance to bio-diversity. #MannKiBaat pic.twitter.com/btkWGEhLTu
— PMO India (@PMOIndia) May 31, 2020
Work towards conserving every drop of water. #MannKiBaat pic.twitter.com/j5s4jERkfh
— PMO India (@PMOIndia) May 31, 2020
Plant a tree, deepen your bond with Nature. #MannKiBaat pic.twitter.com/SKLwuwVyzm
— PMO India (@PMOIndia) May 31, 2020
COVID-19 is very much there and we cannot be complacent.
— PMO India (@PMOIndia) May 31, 2020
Keep fighting.
Wear masks.
Wash hands.
Take all other precautions.
Every life is precious. #MannKiBaat pic.twitter.com/fvKvVoNoF2