ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇತರ ಜಿ-20 ನಾಯಕರೊಂದಿಗೆ ಇಂದು ಬಾಲಿಯಲ್ಲಿ ನಡೆದ ಜಿ-20 ಶೃಂಗಸಭೆಗೆ ಭೇಟಿ ನೀಡಿದ ಸಂದರ್ಭದಲ್ಲಿ ‘ತಮನ್ ಹುತಾನ್ ರಾಯಾ ನ್ಗುರಾ ರೈ’ ಮ್ಯಾಂಗ್ರೋವ್ ಅರಣ್ಯಗಳಲ್ಲಿ ಮ್ಯಾಂಗ್ರೋವ್ ಸಸಿಗಳನ್ನು ನೆಟ್ಟರು.
ಜಾಗತಿಕ ಪರಿಸರ ಸಂರಕ್ಷಣೆಯ ಪ್ರಯತ್ನಗಳಲ್ಲಿ ಮ್ಯಾಂಗ್ರೋವ್‌ಗಳು ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಇಂಡೋನೇಷ್ಯಾ ಜಿ-20 ಅಧ್ಯಕ್ಷರ ಅಡಿಯಲ್ಲಿ ಇಂಡೋನೇಷ್ಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಜಂಟಿ ಉಪಕ್ರಮವಾದ ಮ್ಯಾಂಗ್ರೋವ್ ಅಲೈಯನ್ಸ್ ಫಾರ್ ಕ್ಲೈಮೇಟ್ (ಎಂಎಸಿ) ಗೆ ಭಾರತವು ಸೇರಿದೆ.
ಭಾರತದ 5000 ಚದರ ಮೀಟರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ 50 ಕ್ಕೂ ಹೆಚ್ಚು ಪ್ರಭೇದಗಳ ಮ್ಯಾಂಗ್ರೋವ್‌ಗಳನ್ನು ಕಾಣಬಹುದು. ಭಾರತವು ಮ್ಯಾಂಗ್ರೋವ್ ಕಾಡುಗಳ ಸಂರಕ್ಷಣೆ ಮತ್ತು ಮರುಸ್ಥಾಪನೆಗೆ ಒತ್ತು ನೀಡುತ್ತಿದೆ, ಇದು ವಾತಾವರಣದಿಂದ ಇಂಗಾಲವನ್ನು ಹೀರಿಕೊಳ್ಳುವ ಮತ್ತು ಶ್ರೀಮಂತ ಜೀವವೈವಿಧ್ಯತೆಯ ತಾಣಗಳಾಗಿ ಕಾರ್ಯನಿರ್ವಹಿಸುತ್ತವೆ.
*****
With G-20 leaders at the Mangrove Forest in Bali. @g20org pic.twitter.com/D5L5A1B72e
— Narendra Modi (@narendramodi) November 16, 2022
PM @narendramodi and other G20 leaders visited a mangrove forest in Bali, giving a strong message of coming together to tackle climate change and boost sustainable development. India has also joined the Mangrove Alliance for Climate. pic.twitter.com/vyJX79CEAp
— PMO India (@PMOIndia) November 16, 2022