ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಶ್ರೀ ನವೀನಚಂದ್ರ ರಾಮಗೂಲಮ್ ಅವರು ಇಂದು ಮಾರಿಷಸ್ ನ ರೆಡ್ಯೂಟ್ ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಾರ್ವಜನಿಕ ಸೇವೆ ಮತ್ತು ನಾವೀನ್ಯತೆ ಸಂಸ್ಥೆಯನ್ನು ಜಂಟಿಯಾಗಿ ಉದ್ಘಾಟಿಸಿದರು. ಭಾರತ-ಮಾರಿಷಸ್ ಅಭಿವೃದ್ಧಿ ಸಹಭಾಗಿತ್ವದ ಅಡಿಯಲ್ಲಿ ಜಾರಿಗೆ ತರಲಾದ ಈ ಮಹತ್ವದ ಯೋಜನೆಯು ಸಾಮರ್ಥ್ಯ ವೃದ್ಧಿಗೆ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ.
2017ರ ತಿಳುವಳಿಕೆ ಒಪ್ಪಂದದ ಅಡಿಯಲ್ಲಿ 4.74 ಮಿಲಿಯನ್ ಡಾಲರ್ ಅನುದಾನದ ಮೂಲಕ ಹಣಕಾಸು ಒದಗಿಸಲಾದ ಈ ಅತ್ಯಾಧುನಿಕ ಸಂಸ್ಥೆಯು ಸಚಿವಾಲಯಗಳು, ಸಾರ್ವಜನಿಕ ಕಚೇರಿಗಳು, ಅರೆ-ಸರ್ಕಾರಿ ಸಂಸ್ಥೆಗಳು ಮತ್ತು ಸರ್ಕಾರಿ ಉದ್ಯಮಗಳಲ್ಲಿ ಮಾರಿಷಸ್ ನಾಗರಿಕ ಸೇವಕರ ತರಬೇತಿ ಅಗತ್ಯಗಳನ್ನು ಪೂರೈಸುತ್ತದೆ. ತರಬೇತಿಯ ಹೊರತಾಗಿ, ಸಂಸ್ಥೆಯು ಸಾರ್ವಜನಿಕ ಆಡಳಿತದಲ್ಲಿ ಶ್ರೇಷ್ಠತೆಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಸಂಶೋಧನೆ, ಆಡಳಿತ ಅಧ್ಯಯನಗಳು ಮತ್ತು ಭಾರತದೊಂದಿಗೆ ಸಾಂಸ್ಥಿಕ ಸಂಬಂಧಗಳನ್ನು ಉತ್ತೇಜಿಸುತ್ತದೆ.
ಈ ಸಂದರ್ಭದಲ್ಲಿ, ಭಾರತದಲ್ಲಿ ತರಬೇತಿ ಮತ್ತು ಶಿಕ್ಷಣ ಹಾಗೂ ಐಟಿಇಸಿ ಮತ್ತು ಭಾರತ ಸರ್ಕಾರದ ವಿದ್ಯಾರ್ಥಿವೇತನದ ಪಡೆದಿರುವ ಹಳೆಯ ವಿದ್ಯಾರ್ಥಿಗಳೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಿದರು. ಈ ಸಾಮರ್ಥ್ಯ ವೃದ್ಧಿ ವಿನಿಮಯವು ಉಭಯ ದೇಶಗಳ ನಡುವಿನ ಬಲವಾದ ಜನರು-ಜನರ ನಡುವಿನ ಸಂಬಂಧವನ್ನು ಇನ್ನಷ್ಟು ಗಾಢಗೊಳಿಸಿದೆ.
ಜಾಗತಿಕ ದಕ್ಷಿಣ ರಾಷ್ಟ್ರಗಳಿಗೆ ಭಾರತದ ಬದ್ಧತೆಗೆ ಅನುಗುಣವಾಗಿ, ಸಂಸ್ಥೆಯು ಹಿಂದೂ ಮಹಾಸಾಗರ ಪ್ರದೇಶದಲ್ಲಿ ವಿಶ್ವಾಸಾರ್ಹ ಪಾಲುದಾರನಾಗಿ ಭಾರತದ ಪಾತ್ರವನ್ನು ಮತ್ತು ಸಮಗ್ರ ಭಾರತ-ಮಾರಿಷಸ್ ಪಾಲುದಾರಿಕೆಯನ್ನು ಬಲಪಡಿಸುವ ಅದರ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
*****
PM @narendramodi and PM @Ramgoolam_Dr jointly inaugurated the Atal Bihari Vajpayee Institute of Public Service and Innovation in Mauritius. It will serve as a hub for learning, research and public service. pic.twitter.com/1ZjqsXnWNb
— PMO India (@PMOIndia) March 12, 2025
PM Dr. Navinchandra Ramgoolam and I jointly inaugurated the Atal Bihari Vajpayee Institute of Public Service and Innovation. It will serve as a hub for learning, research and public service, fostering new ideas and leadership for the future. It also strengthens our shared… pic.twitter.com/hrb5p7XRkp
— Narendra Modi (@narendramodi) March 12, 2025