ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವಿ ಮುಂಬೈನ ಖಾರ್ಘರ್ ನಲ್ಲಿ ಇಸ್ಕಾನ್ ಯೋಜನೆಯಾದ ಶ್ರೀ ಶ್ರೀ ರಾಧಾ ಮದನಮೋಹನ್ ಜಿ ದೇವಾಲಯವನ್ನು ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂತಹ ದೈವಿಕ ಸಮಾರಂಭದಲ್ಲಿ ಭಾಗವಹಿಸುವುದು ತಮ್ಮ ಅದೃಷ್ಟ ಎಂದು ಹೇಳಿದರು ಮತ್ತು ಶ್ರೀಲ ಪ್ರಭುಪಾದ ಸ್ವಾಮಿಗಳ ಆಶೀರ್ವಾದದೊಂದಿಗೆ ಇಸ್ಕಾನ್ನ ಸಂತರ ಅಪಾರ ಪ್ರೀತಿ ಮತ್ತು ಸೌಹಾರ್ದತೆಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಪ್ರಧಾನ ಮಂತ್ರಿಯವರು ಎಲ್ಲಾ ಪೂಜ್ಯ ಸಂತರಿಗೆ ಕೃತಜ್ಞತೆ ಸಲ್ಲಿಸಿದರು ಮತ್ತು ಅವರಿಗೆ ಗೌರವ ಸಲ್ಲಿಸಿದರು. ಆಧ್ಯಾತ್ಮಿಕತೆ ಮತ್ತು ಜ್ಞಾನದ ಸಂಪೂರ್ಣ ಸಂಪ್ರದಾಯವನ್ನು ಪ್ರತಿಬಿಂಬಿಸುವ ಶ್ರೀ ರಾಧಾ ಮದನಮೋಹಜ ಜಿ ದೇವಾಲಯ ಸಂಕೀರ್ಣದ ವಿನ್ಯಾಸ ಮತ್ತು ಪರಿಕಲ್ಪನೆಯನ್ನು ಅವರು ಎತ್ತಿ ತೋರಿಸಿದರು. ದೇವಾಲಯವು ದೈವಿಕತೆಯ ವಿವಿಧ ರೂಪಗಳನ್ನು ಪ್ರದರ್ಶಿಸುತ್ತಾ ‘ಏಕೋ ಅಹಂ ಬಹು ಶ್ಯಾಂ’ ಎಂಬ ಕಲ್ಪನೆಯನ್ನು ವ್ಯಕ್ತಪಡಿಸುತ್ತಿದೆ ಎಂದು ಅವರು ಹೇಳಿದರು. ಹೊಸ ಪೀಳಿಗೆಯ ಆಸಕ್ತಿಗಳು ಮತ್ತು ಆಕರ್ಷಣೆಗಳನ್ನು ಪೂರೈಸಲು ರಾಮಾಯಣ ಮತ್ತು ಮಹಾಭಾರತವನ್ನು ಆಧರಿಸಿದ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಹೆಚ್ಚುವರಿಯಾಗಿ, ಬೃಂದಾವನದ 12 ಕಾಡುಗಳಿಂದ ಪ್ರೇರಿತವಾದ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ದೇವಾಲಯ ಸಂಕೀರ್ಣವು ನಂಬಿಕೆಯ ಜೊತೆಗೆ ಭಾರತದ ಪ್ರಜ್ಞೆಯನ್ನು ಶ್ರೀಮಂತಗೊಳಿಸುವ ಪವಿತ್ರ ಕೇಂದ್ರವಾಗಲಿದೆ ಎನ್ನುವ ವಿಶ್ವಾಸವನ್ನು ಶ್ರೀ ಮೋದಿ ವ್ಯಕ್ತಪಡಿಸಿದರು. ಈ ಉದಾತ್ತ ಪ್ರಯತ್ನಕ್ಕಾಗಿ ಅವರು ಇಸ್ಕಾನ್ನ ಎಲ್ಲಾ ಸಂತರು ಹಾಗು ಸದಸ್ಯರು ಮತ್ತು ಮಹಾರಾಷ್ಟ್ರದ ಜನರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪೂಜ್ಯ ಗೋಪಾಲ ಕೃಷ್ಣ ಗೋಸ್ವಾಮಿ ಮಹಾರಾಜರ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ ಶ್ರೀ ಮೋದಿಯವರು, ಶ್ರೀಕೃಷ್ಣನ ಮೇಲಿನ ಅವರ ಆಳವಾದ ಭಕ್ತಿಯಲ್ಲಿ ಬೇರೂರಿರುವ ಮಹಾರಾಜರ ದೃಷ್ಟಿಕೋನ ಮತ್ತು ಆಶೀರ್ವಾದಗಳು ಈ ಯೋಜನೆಗೆ ಅವಿಭಾಜ್ಯ ಅಂಗವಾಗಿವೆ ಎಂದು ಹೇಳಿದರು. ಮಹಾರಾಜರು ಭೌತಿಕವಾಗಿ ಇಲ್ಲದಿದ್ದರೂ, ಅವರ ಆಧ್ಯಾತ್ಮಿಕ ಉಪಸ್ಥಿತಿಯನ್ನು ಎಲ್ಲರೂ ಅನುಭವಿಸಿದರು ಎಂದು ಅವರು ಹೇಳಿದರು. ಮಹಾರಾಜರ ವಾತ್ಸಲ್ಯ ಮತ್ತು ನೆನಪುಗಳು ತಮ್ಮ ಜೀವನದಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ ಎಂದು ಪ್ರಧಾನಿಯವರು ಹೇಳಿದರು. ಶ್ರೀಲ ಪ್ರಭುಪಾದ ಜಿ ಅವರ 125 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ವಿಶ್ವದ ಅತಿದೊಡ್ಡ ಭಗವದ್ ಗೀತೆಯ ಅನಾವರಣ ಮತ್ತು ಅವರ ಮಾರ್ಗದರ್ಶನಕ್ಕಾಗಿ ಮಹಾರಾಜರು ತಮ್ಮನ್ನು ಆಹ್ವಾನಿಸಿದ್ದನ್ನು ಅವರು ನೆನಪಿಸಿಕೊಂಡರು. ಮಹಾರಾಜರ ಮತ್ತೊಂದು ಕನಸು ನನಸಾಗುವುದನ್ನು ಕಂಡ ತೃಪ್ತಿಯನ್ನು ಪ್ರಧಾನಮಂತ್ರಿಯವರು ವ್ಯಕ್ತಪಡಿಸಿದರು.
“ವಿಶ್ವಾದ್ಯಂತ ಇಸ್ಕಾನ್ ಅನುಯಾಯಿಗಳು ಭಗವಾನ್ ಕೃಷ್ಣನ ಮೇಲಿನ ಭಕ್ತಿಯಿಂದ ಒಂದಾಗಿದ್ದಾರೆ” ಎಂದು ಶ್ರೀ ಮೋದಿ ಹೇಳಿದರು ಮತ್ತು ಮತ್ತೊಂದು ಸಂಪರ್ಕ ದಾರವೆಂದರೆ ಶ್ರೀಲ ಪ್ರಭುಪಾದ ಸ್ವಾಮಿಗಳ ಬೋಧನೆಗಳು, ಇದು ಭಕ್ತರಿಗೆ 24/7 ಮಾರ್ಗದರ್ಶನ ನೀಡುತ್ತದೆ ಎಂದು ಶ್ರೀ ಮೋದಿಯವರು ಒತ್ತಿ ಹೇಳಿದರು. ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಶ್ರೀಲ ಪ್ರಭುಪಾದ ಸ್ವಾಮಿಗಳು ವೇದಗಳು, ವೇದಾಂತ ಮತ್ತು ಗೀತೆಯ ಮಹತ್ವವನ್ನು ಉತ್ತೇಜಿಸಿದರು, ಭಕ್ತಿ ವೇದಾಂತವನ್ನು ಸಾಮಾನ್ಯ ಜನರ ಪ್ರಜ್ಞೆಗೆ ಸಂಪರ್ಕಿಸಿದರು. ಹೆಚ್ಚಿನ ಜನರು ತಮ್ಮ ಕರ್ತವ್ಯಗಳೆಲ್ಲವೂ ಪೂರ್ಣಗೊಂಡಿವೆ ಎಂದು ಭಾವಿಸುವ 70 ನೇ ವಯಸ್ಸಿನಲ್ಲಿ, ಶ್ರೀಲ ಪ್ರಭುಪಾದ ಸ್ವಾಮಿಗಳು ಇಸ್ಕಾನ್ ಮಿಷನ್ ಅನ್ನು ಪ್ರಾರಂಭಿಸಿದರು ಮತ್ತು ಇಡೀ ಪ್ರಪಂಚವನ್ನು ಸುತ್ತಿ ಶ್ರೀಕೃಷ್ಣನ ಸಂದೇಶವನ್ನು ಪ್ರತಿಯೊಂದು ಮೂಲೆಗೂ ಹರಡಿದರು ಎಂದು ಅವರು ಹೇಳಿದರು. ಇಂದು, ಪ್ರಪಂಚದಾದ್ಯಂತ ಲಕ್ಷಾಂತರ ಜನರು ಅವರ ಸಮರ್ಪಣೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಶ್ರೀಲ ಪ್ರಭುಪಾದ ಸ್ವಾಮಿಗಳ ಸಕ್ರಿಯ ಪ್ರಯತ್ನಗಳು ನಮಗೆ ಸ್ಫೂರ್ತಿ ನೀಡುತ್ತಲೇ ಇವೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.
“ಭಾರತವು ಅಸಾಧಾರಣ ಮತ್ತು ಅದ್ಭುತವಾದ ಭೂಮಿಯಾಗಿದ್ದು, ಭೌಗೋಳಿಕ ಗಡಿಗಳಿಂದ ಸೀಮಿತವಾದ ಭೂಮಿಯ ತುಂಡು ಅಲ್ಲ, ಚೈತನ್ಯದಾಯಕ ಸಂಸ್ಕೃತಿಯನ್ನು ಹೊಂದಿರುವ ಜೀವಂತ ಭೂಮಿ” ಎಂದು ಪ್ರಧಾನಮಂತ್ರಿಯವರು ಉದ್ಗರಿಸಿದರು. ಈ ಸಂಸ್ಕೃತಿಯ ಸಾರವೇ ಆಧ್ಯಾತ್ಮ ಮತ್ತು ಭಾರತವನ್ನು ಅರ್ಥಮಾಡಿಕೊಳ್ಳಲು, ಒಬ್ಬರು ಮೊದಲು ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ಜಗತ್ತನ್ನು ಭೌತಿಕ ದೃಷ್ಟಿಕೋನದಿಂದ ಮಾತ್ರ ನೋಡುವವರು ಭಾರತವನ್ನು ವಿವಿಧ ಭಾಷೆಗಳು ಮತ್ತು ಪ್ರಾಂತ್ಯಗಳ ಸಂಗ್ರಹವಾಗಿ ನೋಡುತ್ತಾರೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಒಬ್ಬರು ತಮ್ಮ ಆತ್ಮವನ್ನು ಈ ಸಾಂಸ್ಕೃತಿಕ ಪ್ರಜ್ಞೆಯೊಂದಿಗೆ ಸಂಪರ್ಕಿಸಿದಾಗ, ಅವರು ನಿಜವಾಗಿಯೂ ಭಾರತವನ್ನು ಕಾಣುತ್ತಾರೆ ಎಂದು ಅವರು ಹೇಳಿದರು. ದೂರದ ಪೂರ್ವದಲ್ಲಿ, ಚೈತನ್ಯ ಮಹಾಪ್ರಭುಗಳಂತಹ ಸಂತರು ಬಂಗಾಳದಲ್ಲಿ ಕಾಣಿಸಿಕೊಂಡರು, ಪಶ್ಚಿಮದಲ್ಲಿ, ನಾಮದೇವ್, ತುಕಾರಾಮ್ ಮತ್ತು ಜ್ಞಾನೇಶ್ವರರಂತಹ ಸಂತರು ಮಹಾರಾಷ್ಟ್ರದಲ್ಲಿ ಹೊರಹೊಮ್ಮಿದರು ಎಂದು ಅವರು ಎತ್ತಿ ತೋರಿಸಿದರು. ಚೈತನ್ಯ ಮಹಾಪ್ರಭುಗಳು ಮಹಾವಾಕ್ಯ ಮಂತ್ರವನ್ನು ಜನಸಾಮಾನ್ಯರಿಗೆ ಹರಡಿದರು ಮತ್ತು ಮಹಾರಾಷ್ಟ್ರದ ಸಂತರು ‘ರಾಮಕೃಷ್ಣ ಹರಿ’ ಮಂತ್ರದ ಮೂಲಕ ಆಧ್ಯಾತ್ಮಿಕ ಅಮೃತವನ್ನು ಹಂಚಿಕೊಂಡರು ಎಂದು ಶ್ರೀ ಮೋದಿ ಹೇಳಿದರು. ಸಂತ ಜ್ಞಾನೇಶ್ವರರು ಜ್ಞಾನೇಶ್ವರಿ ಗೀತೆಯ ಮೂಲಕ ಶ್ರೀಕೃಷ್ಣನ ಆಳವಾದ ಜ್ಞಾನವನ್ನು ಲಭ್ಯವಾಗುವಂತೆ ಮಾಡಿದರು ಎಂದು ಅವರು ಹೇಳಿದರು. ಅದೇ ರೀತಿ, ಶ್ರೀಲ ಪ್ರಭುಪಾದರು ಇಸ್ಕಾನ್ ಮೂಲಕ ಭಗವದ್ ಗೀತೆಯನ್ನು ಜನಪ್ರಿಯಗೊಳಿಸಿದರು, ವ್ಯಾಖ್ಯಾನಗಳನ್ನು ಪ್ರಕಟಿಸಿದರು ಮತ್ತು ಜನರನ್ನು ಅದರ ಸಾರದೊಂದಿಗೆ ಸಂಪರ್ಕಿಸಿದರು. ವಿಭಿನ್ನ ಸ್ಥಳಗಳು ಮತ್ತು ಸಮಯಗಳಲ್ಲಿ ಜನಿಸಿದ ಈ ಪ್ರತಿಯೊಬ್ಬ ಸಂತರು ತಮ್ಮ ವಿಶಿಷ್ಟ ರೀತಿಯಲ್ಲಿ ಕೃಷ್ಣ ಭಕ್ತಿಯ ಪ್ರವಾಹವನ್ನು ಮುನ್ನಡೆಸಿದರು ಎಂದು ಪ್ರಧಾನಮಂತ್ರಿಯವರು ಹೇಳಿದರು. ಸಂತರ ಹುಟ್ಟಿದ ಕಾಲಗಳು, ಭಾಷೆಗಳು ಮತ್ತು ವಿಧಾನಗಳಲ್ಲಿನ ವ್ಯತ್ಯಾಸಗಳ ಹೊರತಾಗಿಯೂ, ಭಕ್ತಿಯ ಬೆಳಕಿನಿಂದ ಸಮಾಜಕ್ಕೆ ಹೊಸ ಜೀವ ತುಂಬಿ, ಅದಕ್ಕೆ ಹೊಸ ದಿಕ್ಕು ಮತ್ತು ಶಕ್ತಿಯನ್ನು ನೀಡಿದ ಅವರ ತಿಳುವಳಿಕೆ, ಆಲೋಚನೆಗಳು ಮತ್ತು ಪ್ರಜ್ಞೆ ಎಲ್ಲವೂ ಒಂದೇ ಆಗಿತ್ತು ಎಂದು ಅವರು ಹೇಳಿದರು.
ಭಾರತದ ಆಧ್ಯಾತ್ಮಿಕ ಸಂಸ್ಕೃತಿಯ ತಳಹದಿಯು ಸೇವೆ ಆಗಿದೆ ಎಂದು ಹೇಳಿದ ಶ್ರೀ ಮೋದಿಯವರು, ಆಧ್ಯಾತ್ಮಿಕತೆಯಲ್ಲಿ ದೇವರ ಸೇವೆ ಮತ್ತು ಜನರಿಗೆ ಸೇವೆ ಮಾಡುವುದು ಒಂದಾಗುತ್ತದೆ ಎಂದು ಒತ್ತಿ ಹೇಳಿದರು. ಭಾರತದ ಆಧ್ಯಾತ್ಮಿಕ ಸಂಸ್ಕೃತಿಯು ಸಾಧಕರನ್ನು ಸಮಾಜಕ್ಕೆ ಸಂಪರ್ಕಿಸುತ್ತದೆ, ಸಹಾನುಭೂತಿಯನ್ನು ಬೆಳೆಸುತ್ತದೆ ಮತ್ತು ಅವರನ್ನು ಸೇವೆಯತ್ತ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದರು. ನಿಜವಾದ ಸೇವೆ ನಿಸ್ವಾರ್ಥ ಎಂಬ ಶ್ರೀ ಕೃಷ್ಣನ ಶ್ಲೋಕವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಎಲ್ಲಾ ಧಾರ್ಮಿಕ ಗ್ರಂಥಗಳು ಮತ್ತು ಧರ್ಮಗ್ರಂಥಗಳು ಸೇವಾ ಮನೋಭಾವದಲ್ಲಿ ಬೇರೂರಿವೆ ಎಂದು ಹೇಳಿದರು. ಇಸ್ಕಾನ್ ಒಂದು ವಿಶಾಲವಾದ ಸಂಘಟನೆಯಾಗಿದ್ದು, ಶಿಕ್ಷಣ, ಆರೋಗ್ಯ ಮತ್ತು ಪರಿಸರಕ್ಕೆ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು. ಕುಂಭಮೇಳದಲ್ಲಿ ಇಸ್ಕಾನ್ ಪ್ರಮುಖ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಅವರು ಹೇಳಿದರು.
ಸರ್ಕಾರವು ನಿರಂತರವಾಗಿ ನಾಗರಿಕರ ಕಲ್ಯಾಣಕ್ಕಾಗಿ ಅದೇ ಸೇವಾ ಮನೋಭಾವದಿಂದ ಕೆಲಸ ಮಾಡುತ್ತಿದೆ ಎಂದು ಪ್ರಧಾನಮಂತ್ರಿಯವರು ತೃಪ್ತಿ ವ್ಯಕ್ತಪಡಿಸಿದರು. ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಾಣ, ಉಜ್ವಲ ಯೋಜನೆಯ ಮೂಲಕ ಬಡ ಮಹಿಳೆಯರಿಗೆ ಅನಿಲ ಸಂಪರ್ಕ ಒದಗಿಸುವುದು, ಪ್ರತಿ ಮನೆಯಲ್ಲೂ ನಲ್ಲಿ ನೀರನ್ನು ಖಚಿತಪಡಿಸುವುದು, ಪ್ರತಿ ಬಡವರಿಗೂ 5 ಲಕ್ಷ ರೂಪಾಯಿಗಳವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವುದು, 70 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ವೃದ್ಧರಿಗೂ ಈ ಸೌಲಭ್ಯವನ್ನು ವಿಸ್ತರಿಸುವುದು ಮತ್ತು ನಿರಾಶ್ರಿತರಿಗೆ ಪಕ್ಕಾ ಮನೆಗಳನ್ನು ಒದಗಿಸುವುದು ಇವೆಲ್ಲವೂ ಈ ಸೇವಾ ಮನೋಭಾವದಿಂದ ನಡೆಸಲ್ಪಡುವ ಕ್ರಮಗಳಾಗಿವೆ ಎಂದು ಅವರು ಹೇಳಿದರು. ಈ ಸೇವಾ ಮನೋಭಾವವು ನಿಜವಾದ ಸಾಮಾಜಿಕ ನ್ಯಾಯವನ್ನು ತರುತ್ತದೆ ಮತ್ತು ಇದು ನಿಜವಾದ ಜಾತ್ಯತೀತತೆಯ ಸಂಕೇತವಾಗಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.
ಸರ್ಕಾರವು ಕೃಷ್ಣ ಸರ್ಕ್ಯೂಟ್ ಮೂಲಕ ದೇಶಾದ್ಯಂತ ವಿವಿಧ ತೀರ್ಥಯಾತ್ರೆ ಮತ್ತು ಧಾರ್ಮಿಕ ತಾಣಗಳನ್ನು ಸಂಪರ್ಕಿಸುತ್ತಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿಯವರು, ಈ ಸರ್ಕ್ಯೂಟ್ ಗುಜರಾತ್, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ ಮತ್ತು ಒಡಿಶಾದಾದ್ಯಂತ ವಿಸ್ತರಿಸಿದೆ ಎಂದು ಒತ್ತಿ ಹೇಳಿದರು. ಈ ತಾಣಗಳನ್ನು ಸ್ವದೇಶ ದರ್ಶನ ಮತ್ತು ಪ್ರಸಾದ ಯೋಜನೆಗಳ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಈ ದೇವಾಲಯಗಳು ಶ್ರೀಕೃಷ್ಣನ ಬಾಲ್ಯದ ರೂಪದಿಂದ ಹಿಡಿದು ರಾಧಾ ರಾಣಿಯೊಂದಿಗಿನ ಆರಾಧನೆ, ಅವರ ಕರ್ಮಯೋಗಿ ರೂಪ ಮತ್ತು ರಾಜನಾಗಿ ಆರಾಧಿಸುವವರೆಗೆ ವಿವಿಧ ರೂಪಗಳನ್ನು ಚಿತ್ರಿಸುತ್ತವೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಶ್ರೀಕೃಷ್ಣನ ಜೀವನ ಮತ್ತು ದೇವಾಲಯಗಳಿಗೆ ಸಂಬಂಧಿಸಿದ ವಿವಿಧ ಸ್ಥಳಗಳಿಗೆ ಪ್ರಯಾಣವನ್ನು ಸುಗಮಗೊಳಿಸುವುದು ಇದರ ಉದ್ದೇಶವಾಗಿದೆ, ಇದಕ್ಕಾಗಿ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಕೃಷ್ಣ ಸರ್ಕ್ಯೂಟ್ಗೆ ಸಂಬಂಧಿಸಿದ ಈ ಶ್ರದ್ಧಾ ಕೇಂದ್ರಗಳಿಗೆ ಭಕ್ತರನ್ನು ಕರೆತರುವಲ್ಲಿ ಇಸ್ಕಾನ್ ಸಹಾಯ ಮಾಡಬಹುದು ಎಂದು ಪ್ರಧಾನಮಂತ್ರಿಯವರು ಸಲಹೆ ನೀಡಿದರು. ಇಸ್ಕಾನ್ ಕೇಂದ್ರಗಳೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಭಕ್ತರು ಭಾರತದಲ್ಲಿ ಕನಿಷ್ಠ ಐದು ಅಂತಹ ಸ್ಥಳಗಳಿಗೆ ಭೇಟಿ ನೀಡಬೇಕೆಂದು ಅವರು ಇಸ್ಕಾನ್ ಅನ್ನು ಒತ್ತಾಯಿಸಿದರು.
ಕಳೆದ ದಶಕದಲ್ಲಿ, ದೇಶವು ಅಭಿವೃದ್ಧಿ ಮತ್ತು ಪರಂಪರೆಯಲ್ಲಿ ಏಕಕಾಲದಲ್ಲಿ ಪ್ರಗತಿಯನ್ನು ಕಂಡಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಪರಂಪರೆಯ ಮೂಲಕ ಅಭಿವೃದ್ಧಿಯ ಈ ಧ್ಯೇಯಕ್ಕೆ ಇಸ್ಕಾನ್ ನಂತಹ ಸಂಸ್ಥೆಗಳ ಮಹತ್ವದ ಕೊಡುಗೆಯನ್ನು ಎತ್ತಿ ತೋರಿಸಿದರು. ದೇವಾಲಯಗಳು ಮತ್ತು ಧಾರ್ಮಿಕ ತಾಣಗಳು ಶತಮಾನಗಳಿಂದ ಸಾಮಾಜಿಕ ಪ್ರಜ್ಞೆಯ ಕೇಂದ್ರಗಳಾಗಿವೆ ಹಾಗು ಗುರುಕುಲಗಳು ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಇಸ್ಕಾನ್ ತನ್ನ ಕಾರ್ಯಕ್ರಮಗಳ ಮೂಲಕ ಯುವಕರನ್ನು ಆಧ್ಯಾತ್ಮಿಕತೆಯನ್ನು ತಮ್ಮ ಜೀವನದ ಭಾಗವಾಗಿಸಲು ಪ್ರೇರೇಪಿಸುತ್ತದೆ. ಇಸ್ಕಾನ್ ನ ಯುವ ವೈದ್ಯರು ತಮ್ಮ ಸಂಪ್ರದಾಯಗಳನ್ನು ಅನುಸರಿಸುವಾಗ ಆಧುನಿಕ ತಂತ್ರಜ್ಞಾನವನ್ನು ಹೇಗೆ ಅಳವಡಿಸಿಕೊಳ್ಳುತ್ತಾರೆ, ಅವರ ಮಾಹಿತಿ ಜಾಲವನ್ನು ಇತರರಿಗೆ ಮಾದರಿಯಾಗಿ ಹೇಗೆ ಮಾಡುತ್ತಾರೆ ಎನ್ನುವುದರ ಕುರಿತು ಪ್ರಧಾನಮಂತ್ರಿಯವರು ಹೇಳಿದರು. ಇಸ್ಕಾನ್ ನ ಮಾರ್ಗದರ್ಶನದಲ್ಲಿ, ಯುವಕರು ಸೇವೆ ಮತ್ತು ಸಮರ್ಪಣಾ ಮನೋಭಾವದಿಂದ ರಾಷ್ಟ್ರೀಯ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ದೇವಾಲಯ ಸಂಕೀರ್ಣದಲ್ಲಿ ಸ್ಥಾಪಿಸಲಾದ ಭಕ್ತಿವೇದಾಂತ ಆಯುರ್ವೇದಿಕ್ ಹೀಲಿಂಗ್ ಸೆಂಟರ್ ಮತ್ತು ಭಕ್ತಿವೇದಾಂತ ಕಾಲೇಜ್ ಫಾರ್ ವೇದಿಕ್ ಎಜುಕೇಶನ್ ಸಮಾಜ ಮತ್ತು ಇಡೀ ದೇಶಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಶ್ರೀ ಮೋದಿಯವರು ಹೇಳಿದರು. ‘ಭಾರತದಲ್ಲಿ ಗುಣಮುಖರಾಗಿ’ ಎನ್ನುವ ಕರೆಗೆ ಅವರು ಒತ್ತು ನೀಡಿದರು.
ಸಮಾಜವು ಹೆಚ್ಚು ಆಧುನಿಕವಾಗುತ್ತಿದ್ದಂತೆ, ಅದಕ್ಕೆ ಹೆಚ್ಚಿನ ಸಹಾನುಭೂತಿ ಮತ್ತು ಸೂಕ್ಷ್ಮತೆಯ ಅಗತ್ಯವಿದೆ ಎಂದು ಶ್ರೀ ಮೋದಿಯವರು ಅಭಿಪ್ರಾಯ ಪಟ್ಟರು. ಮಾನವೀಯ ಗುಣಗಳು ಮತ್ತು ಆತ್ಮೀಯತೆಯ ಭಾವನೆಯೊಂದಿಗೆ ಮುನ್ನಡೆಯುವ ಸೂಕ್ಷ್ಮ ವ್ಯಕ್ತಿಗಳ ಸಮಾಜವನ್ನು ಸೃಷ್ಟಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಇಸ್ಕಾನ್ ತನ್ನ ಭಕ್ತಿ ವೇದಾಂತದ ಮೂಲಕ ಜಾಗತಿಕ ಸೂಕ್ಷ್ಮತೆಗೆ ಹೊಸ ಜೀವ ತುಂಬಬಹುದು ಮತ್ತು ವಿಶ್ವಾದ್ಯಂತ ಮಾನವೀಯ ಮೌಲ್ಯಗಳನ್ನು ವಿಸ್ತರಿಸಬಹುದು ಎಂದು ಪ್ರಧಾನಮಂತ್ರಿಯವರು ಹೇಳಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಇಸ್ಕಾನ್ ನಾಯಕರು ಶ್ರೀಲ ಪ್ರಭುಪಾದ ಸ್ವಾಮಿಗಳ ಆದರ್ಶಗಳನ್ನು ಎತ್ತಿಹಿಡಿಯುವುದನ್ನು ಮುಂದುವರಿಸುತ್ತಾರೆ ಎನ್ನುವ ವಿಶ್ವಾಸವನ್ನು ಪ್ರಧಾನಮಂತ್ರಿಯವರು ವ್ಯಕ್ತಪಡಿಸಿದರು. ರಾಧಾ ಮದನಮೋಹನ್ ಜಿ ದೇವಾಲಯದ ಉದ್ಘಾಟನೆಗೆ ಅವರು ಮತ್ತೊಮ್ಮೆ ಇಡೀ ಇಸ್ಕಾನ್ ಕುಟುಂಬ ಮತ್ತು ಎಲ್ಲಾ ನಾಗರಿಕರನ್ನು ಅಭಿನಂದಿಸಿದರು.
ಮಹಾರಾಷ್ಟ್ರದ ರಾಜ್ಯಪಾಲ ಶ್ರೀ ಸಿ.ಪಿ. ರಾಧಾಕೃಷ್ಣನ್, ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ನವಿ ಮುಂಬೈನ ಖಾರ್ಘರ್ ನಲ್ಲಿರುವ ಇಸ್ಕಾನ್ ಯೋಜನೆಯಾದ ಶ್ರೀ ಶ್ರೀ ರಾಧಾ ಮದನಮೋಹನ್ ಜಿ ದೇವಾಲಯವು ಒಂಬತ್ತು ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಇದು ಅನೇಕ ದೇವತೆಗಳನ್ನು ಹೊಂದಿರುವ ದೇವಾಲಯವಾಗಿದೆ. ಇದು ವೇದ ಶಿಕ್ಷಣ ಕೇಂದ್ರ, ಪ್ರಸ್ತಾವಿತ ವಸ್ತು ಸಂಗ್ರಹಾಲಯಗಳು, ಸಭಾಂಗಣಗಳು ಮತ್ತು ಚಿಕಿತ್ಸಾ ಕೇಂದ್ರವನ್ನು ಒಳಗೊಂಡಿದೆ. ಇದು ವೈದಿಕ ಬೋಧನೆಗಳ ಮೂಲಕ ಜಾಗತಿಕ ಸಹೋದರತ್ವ, ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
*****
Speaking at the inauguration of Sri Sri Radha Madanmohanji Temple in Navi Mumbai. https://t.co/ysYXd8PLxz
— Narendra Modi (@narendramodi) January 15, 2025
दुनियाभर में फैले इस्कॉन के अनुयायी भगवान श्रीकृष्ण की भक्ति के डोर से बंधे हैं।
— PMO India (@PMOIndia) January 15, 2025
उन सबको एक-दूसरे से कनेक्ट रखने वाला एक और सूत्र है, जो चौबीसों घंटे हर भक्त को दिशा दिखाता रहता है।
ये श्रील प्रभुपाद स्वामी के विचारों का सूत्र है: PM @narendramodi
भारत केवल भौगोलिक सीमाओं में बंधा भूमि का एक टुकड़ा मात्र नहीं है।
— PMO India (@PMOIndia) January 15, 2025
भारत एक जीवंत धरती है, एक जीवंत संस्कृति है।
और, इस संस्कृति की चेतना है- यहाँ का आध्यात्म!
इसलिए, यदि भारत को समझना है, तो हमें पहले आध्यात्म को आत्मसात करना होता है: PM @narendramodi
हमारी आध्यात्मिक संस्कृति की नींव का प्रमुख आधार सेवा भाव है: PM @narendramodi
— PMO India (@PMOIndia) January 15, 2025
नवी मुंबई में इस्कॉन के दिव्य-भव्य श्री श्री राधा मदनमोहन जी मंदिर में दर्शन-पूजन कर मन को अत्यंत प्रसन्नता हुई है। pic.twitter.com/3WlVpgeEnY
— Narendra Modi (@narendramodi) January 15, 2025
भगवान श्रीकृष्ण के संदेश को दुनिया के कोने-कोने में पहुंचाने वाले श्रील प्रभुपाद स्वामी जी के प्रयास आज भी सभी देशवासियों को प्रेरित करने वाले हैं। pic.twitter.com/JDN2bVLVQA
— Narendra Modi (@narendramodi) January 15, 2025
श्रील प्रभुपाद जी ने इस्कॉन के माध्यम से गीता को लोकप्रिय बनाया। अलग-अलग कालखंड में जन्मे कई और संतों ने भी भक्ति के प्रकाश से समाज को नई दिशा दी है। pic.twitter.com/WwgfApsmtO
— Narendra Modi (@narendramodi) January 15, 2025
हमारे सभी धार्मिक ग्रंथों और शास्त्रों के मूल में सेवा भावना ही है। मुझे संतोष है कि हमारी सरकार भी इसी सेवा भावना के साथ लगातार देशवासियों के हित में काम कर रही है। pic.twitter.com/m9Q1wekk9k
— Narendra Modi (@narendramodi) January 15, 2025