Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಲೈವ್ ಚೆಸ್ ರೇಟಿಂಗ್ ನಲ್ಲಿ 2800ರ ಗಡಿ ದಾಟಿದ್ದಕ್ಕಾಗಿ ಅರ್ಜುನ್ ಎರಿಗೈಸಿ ಅವರನ್ನು ಅಭಿನಂದಿಸಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಲೈವ್ ಚೆಸ್ ರೇಟಿಂಗ್ ನಲ್ಲಿ 2800ರ ಗಡಿ ದಾಟಿದ ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಅರ್ಜುನ್ ಎರಿಗೈಸಿ ಅವರನ್ನು ಅಭಿನಂದಿಸಿದ್ದಾರೆ. 

ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ ಅರ್ಜುನ್ ಎರಿಗೈಸಿಯವರ ಅಸಾಧಾರಣ ಪ್ರತಿಭೆ ಮತ್ತು ಪರಿಶ್ರಮವನ್ನು ಶ್ರೀ ಮೋದಿಯವರು ಶ್ಲಾಘಿಸಿ, ಈ ಸಾಧನೆಯು ಇನ್ನೂ ಅನೇಕ ಯುವಕರಿಗೆ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:

“ಲೈವ್ ಚೆಸ್ ರೇಟಿಂಗ್ ನಲ್ಲಿ 2800 ಗಡಿ ದಾಟಿದ ಅರ್ಜುನ್ ಎರಿಗೈಸಿಯವರಿಗೆ ಅಭಿನಂದನೆಗಳು! ಇದೊಂದು ಅಸಾಧಾರಣ ಸಾಧನೆ. ಅವರ ಅಸಾಧಾರಣ ಪ್ರತಿಭೆ ಮತ್ತು ಪರಿಶ್ರಮವು ನಮ್ಮ ಇಡೀ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ. ಇದು ಉತ್ತಮ ವೈಯಕ್ತಿಕ ಮೈಲಿಗಲ್ಲಾಗುವುದಲ್ಲದೆ, ಇನ್ನೂ ಅನೇಕ ಯುವಕರಿಗೆ ಚೆಸ್ ರಂಗದಲ್ಲಿ ಜಾಗತಿಕ ವೇದಿಕೆಯಲ್ಲಿ ಮಿಂಚಲು ಸ್ಫೂರ್ತಿ ನೀಡುತ್ತದೆ. ಅವರ ಭವಿಷ್ಯದ ಮುಂದಿನ ಎಲ್ಲಾ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

 

 

*****