77 ನೇ ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸದಿಲ್ಲಿಯ ಕೆಂಪು ಕೋಟೆಯ ಮೇಲಿನಿಂದ (ಕೊತ್ತಲಗಳಿಂದ) ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು, ತಾಂತ್ರಿಕ ಭೂದೃಶ್ಯದಲ್ಲಿ ದೇಶವು ಕೈಗೊಂಡಿರುವ ಗಮನಾರ್ಹ ಪ್ರಗತಿಯನ್ನು ಅವರು ಎತ್ತಿ ತೋರಿಸಿದರು ಮತ್ತು ಡಿಜಿಟಲ್ ಸಶಕ್ತ ಭಾರತದ ಮಹತ್ವವನ್ನು ಒತ್ತಿ ಹೇಳಿದರು.
1. ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಡಿಜಿಟಲ್ ಭೂದೃಶ್ಯದಲ್ಲಿನ ಗಮನಾರ್ಹ ಪರಿವರ್ತನೆಯ ಬಗ್ಗೆ ಬೆಳಕು ಚೆಲ್ಲಿದರು. ದೇಶದ ಮೂಲೆ ಮೂಲೆಗಳಿಗೂ ಅಂತರ್ಜಾಲ ಸಂಪರ್ಕವನ್ನು ತರುವಲ್ಲಿ ಮತ್ತು ಅಂತರ್ಜಾಲವು ಪ್ರತಿ ಹಳ್ಳಿಯನ್ನು ತಲುಪುತ್ತಿರುವಲ್ಲಿ ಹಾಗು ಡಿಜಿಟಲ್ ಕ್ರಾಂತಿಯ ಪ್ರಯೋಜನಗಳು ಪ್ರತಿಯೊಬ್ಬ ನಾಗರಿಕರನ್ನು ತಲುಪುವುದನ್ನು ಖಾತ್ರಿಪಡಿಸುವಲ್ಲಿ ಆಗಿರುವ ತ್ವರಿತ ಪ್ರಗತಿಯನ್ನು ಅವರು ಒತ್ತಿ ಹೇಳಿದರು.
2. 2014 ಕ್ಕಿಂತ ಮೊದಲು ಇಂಟರ್ನೆಟ್ ಡೇಟಾ (ಅಂತರ್ಜಾಲ ಡೇಟಾ) ದರವು ದುಬಾರಿಯಾಗಿದ್ದ ದಿನಗಳನ್ನು ಪ್ರಧಾನ ಮಂತ್ರಿ ಉಲ್ಲೇಖಿಸಿದರು ಮತ್ತು ಅದನ್ನು ಈಗಿನ ದರಕ್ಕೆ ಹೋಲಿಸಿದರು, ಭಾರತವು ವಿಶ್ವದಲ್ಲಿಯೇ ಅತ್ಯಂತ ಕೈಗೆಟುಕುವ ಇಂಟರ್ನೆಟ್ ಡೇಟಾ ದರಗಳನ್ನು ಹೊಂದಿದೆ ಎಂದ ಅವರು ಈ ವೆಚ್ಚ ಕಡಿತದಿಂದ ದೇಶಾದ್ಯಂತದ ಪ್ರತಿ ಕುಟುಂಬಕ್ಕೆ ಗಮನಾರ್ಹ ಮೊತ್ತದ ಉಳಿತಾಯ ಆಗುತಿದೆ ಎಂಬುದರತ್ತ ಗಮನ ಸೆಳೆದರು.
3. ತ್ವರಿತಗತಿಯ 5 ಜಿ ತಂತ್ರಜ್ಞಾನ ಮಾರುಕಟ್ಟೆಗೆ ಬಿಡುಗಡೆಯತ್ತ (ರೋಲ್ ಔಟ್ ) ರಾಷ್ಟ್ರದ ತ್ವರಿತ ಪ್ರಗತಿಯನ್ನು ಎತ್ತಿ ತೋರಿಸಿದ ಶ್ರೀ ನರೇಂದ್ರ ಮೋದಿ ಅವರು 5 ಜಿ ರೋಲ್ ಔಟ್ ಅತ್ಯಂತ ವೇಗದಿಂದ ಅನುಷ್ಠಾನಗೊಂದಿದೆ ಮತ್ತು 700 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅದು ಲಭ್ಯವಿದೆ ಎಂದೂ ಉಲ್ಲೇಖಿಸಿದರು.
4. ಇದಲ್ಲದೆ, 6 ಜಿ ತಂತ್ರಜ್ಞಾನದತ್ತ ಮುನ್ನಡೆಯುವ ಮಹತ್ವಾಕಾಂಕ್ಷೆಯ ಗುರಿಯನ್ನು ಪ್ರಧಾನಿ ವಿವರಿಸಿದರು ಮತ್ತು ಈ ಉಪಕ್ರಮವನ್ನು ಮುಂದುವರಿಸಲು ಅದಕ್ಕೆ ಮೀಸಲಾದ ಪ್ರತ್ಯೇಕ ಕಾರ್ಯಪಡೆಯ ರಚನೆಯ ಬಗ್ಗೆಯೂ ಮಾತನಾಡಿದರು.
ಹಿನ್ನೆಲೆ –
* ವಿಶ್ವದಲ್ಲೇ ಅತಿ ವೇಗದಲ್ಲಿ 5ಜಿ ಸೇವೆಗಳು. 5 ಜಿ ಸೇವೆಗಳು 700 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಲಭ್ಯವಿವೆ. 2014 ರಿಂದ ದಿನಕ್ಕೆ 500 ಬಿಟಿಎಸ್ ಗಳನ್ನು (3 ಜಿ / 4 ಜಿ) ಸ್ಥಾಪಿಸಲಾಗುತ್ತಿದ್ದರೆ, 5 ಜಿ ಸೈಟ್ ಗಳನ್ನು ದಿನವೊಂದಕ್ಕೆ ಸುಮಾರು 1,000 ಸೈಟ್ ಗಳಂತೆ ಸ್ಥಾಪಿಸಲಾಗಿದೆ.
* ಹೈಸ್ಪೀಡ್ ಬ್ರಾಡ್ ಬ್ಯಾಂಡ್ ಸೇವೆಗಳನ್ನು ಸಕ್ರಿಯಗೊಳಿಸಲು/ಲಭ್ಯವಾಗುವಂತೆ ಮಾಡಲು ಇತ್ತೀಚಿನ ಆಧುನಿಕ ತಂತ್ರಜ್ಞಾನ 5 ಜಿ ಜಾಲಗಳನ್ನು (ನೆಟ್ ವರ್ಕ್ ) ಹಿಂದೆಂದಿಗಿಂತಲೂ ಹೆಚ್ಚು ತ್ವರಿತವಾಗಿ ಅನುಷ್ಠಾನಿಸಲಾಗಿದೆ.
* 6ಜಿ ಮಾನದಂಡಗಳ ಅಭಿವೃದ್ಧಿಯನ್ನು ಮುನ್ನಡೆಸಲು ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಭಾರತ್ 6ಜಿ ವಿಷನ್’ ದಾಖಲೆಗೆ ಚಾಲನೆ ನೀಡಿದ್ದು, ದೂರಸಂಪರ್ಕ ಇಲಾಖೆ (ಡಿಒಟಿ) ‘ಭಾರತ್ 6ಜಿ ಅಲೈಯನ್ಸ್’ ಎಂಬ ಕಾರ್ಯಪಡೆಯನ್ನು ರಚಿಸಿದೆ.
* ಭಾರತವು 4G ಯಲ್ಲಿ ಜಗತ್ತನ್ನು ಅನುಸರಿಸಿದೆ, ಅದು 5G ಯಲ್ಲಿ ವಿಶ್ವದೊಂದಿಗೆ ಮುನ್ನಡೆಯಿತು ಮತ್ತು ಈಗ 6G ಯಲ್ಲಿ ಜಗತ್ತನ್ನು ಮುನ್ನಡೆಸುವ ಗುರಿಯನ್ನು ಹೊಂದಿದೆ
* ಮೊಬೈಲ್ ಡೇಟಾ ದರ 2014ರಲ್ಲಿ ಜಿ.ಬಿ.ಗೆ 269 ರೂ.ಗಳು ಇತ್ತು, ಅದೀಗ (2023ರಲ್ಲಿ) ಜಿ.ಬಿ.ಗೆ 10.1 ರೂ.ಗೆ ಇಳಿಕೆಯಾಗಿದೆ. ಮೊಬೈಲ್ ಸೇವೆಗಳ ಮೇಲಿನ ದರವನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ
* ಸರಾಸರಿ ಡೇಟಾ ದರದಲ್ಲಿ ಭಾರತವು ಕಡಿಮೆ ಸರಾಸರಿ ಡೇಟಾ ದರವನ್ನು/ಶುಲ್ಕವನ್ನು (ಜಿ.ಬಿ.ಯೊಂದಕ್ಕೆ) ಹೊಂದಿರುವ ಮೂರನೇ ರಾಷ್ಟ್ರವಾಗಿದೆ.
* ಈಶಾನ್ಯ ಪ್ರದೇಶ, ಗಡಿ ಪ್ರದೇಶಗಳು, ಎಲ್ ಡಬ್ಲ್ಯುಇ ಬಾಧಿತ ಪ್ರದೇಶಗಳು, ಆಶೋತ್ತರಗಳ ಜಿಲ್ಲೆಗಳು ಮತ್ತು ಇತರ ದೂರದ ದುರ್ಗಮ ಸ್ಥಳಗಳಿಗೆ, ನಮ್ಮ ದ್ವೀಪಗಳಲ್ಲಿ ಗುಣಮಟ್ಟದ ದೂರಸಂಪರ್ಕ ಸೇವೆ ಮತ್ತು ಮೂಲಸೌಕರ್ಯ ಒದಗಿಸಲು ವಿಶೇಷ ಪ್ರಯತ್ನಗಳನ್ನು ಮಾಡಲಾಗಿದೆ.
* 1,224 ಕೋಟಿ ರೂ.ಗಳ ವೆಚ್ಚದ ಸಮುದ್ರದಾಳದ ಕೇಬಲ್ ಆಧಾರಿತ ಚೆನ್ನೈ-ಅಂಡಮಾನ್ ಮತ್ತು ನಿಕೋಬಾರ್ (ಸಿಎಎನ್ಐ) ಯೋಜನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 10, 2020 ರಂದು ಕಾರ್ಯಾರಂಭಗೊಳಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು.
* ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಉಪಗ್ರಹ ಬ್ಯಾಂಡ್ ವಿಡ್ತ್ ಹೆಚ್ಚಳ ಸೇರಿದಂತೆ ದೂರಸಂಪರ್ಕ ಜಾಲವನ್ನು ಮತ್ತಷ್ಟು ಬಲಪಡಿಸಲಾಗಿದೆ.
* 1,072 ಕೋಟಿ ರೂ.ಗಳ ವೆಚ್ಚದಲ್ಲಿ ಕೊಚ್ಚಿ-ಲಕ್ಷದ್ವೀಪ ದ್ವೀಪಗಳ ಸಮುದ್ರದಾಳದ ಒಎಫ್ ಸಿ ಸಂಪರ್ಕವೂ ಪೂರ್ಣಗೊಂಡಿದೆ ಮತ್ತು ಪರೀಕ್ಷಾ ಉದ್ದೇಶಕ್ಕಾಗಿ ಪ್ರಾಯೋಗಿಕ ಸಂಪರ್ಕವನ್ನು ಕಾರ್ಯಾರಂಭಿಸಲಾಗಿದೆ. ಇದು ಪೂರ್ಣಗೊಂಡಾಗ, ಕೊಚ್ಚಿ ಮತ್ತು ಹನ್ನೊಂದು ದ್ವೀಪಗಳ ನಡುವೆ ಅದು 100 ಜಿಬಿಪಿಎಸ್ ಸಾಮರ್ಥ್ಯವನ್ನು ಒದಗಿಸುತ್ತದೆ
* ಒಟ್ಟು 26,316 ಕೋಟಿ ರೂ.ಗಳ ವೆಚ್ಚದಲ್ಲಿ ದೇಶಾದ್ಯಂತ ಸಂಪರ್ಕವಿಲ್ಲದ ಹಳ್ಳಿಗಳಲ್ಲಿ 4ಜಿ ಮೊಬೈಲ್ ಸೇವೆಗಳ ಪರಿಪೂರ್ಣ ಅನುಷ್ಠಾನ
* ಈ ಯೋಜನೆಯು ದೂರದ ದುರ್ಗಮ ಮತ್ತು ಕಠಿಣ ಪರಿಸ್ಥಿತಿಯ ಪ್ರದೇಶಗಳಲ್ಲಿನ ಹಾಗು ಪ್ರಸ್ತುತ ಸಂಪರ್ಕ ಜಾಲದಲ್ಲಿ ಇಲ್ಲದ 24,680 ಹಳ್ಳಿಗಳಲ್ಲಿ 4 ಜಿ ಮೊಬೈಲ್ ಸೇವೆಗಳನ್ನು ಒದಗಿಸುತ್ತದೆ
****