ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ತಂತ್ರಜ್ಞಾನ ವೇದಿಕೆ ಚಾಂಪಿಯನ್ಸ್ ಉದ್ಘಾಟಿಸಿದರು. ಚಾಂಪಿಯನ್ಸ್ ಅಂದರೆ ಸಿ–ಕ್ರಿಯೇಷನ್ (ಸೃಷ್ಟಿ), ಎಚ್-ಹಾರ್ಮೋನಿಯಸ್ (ಸಾಮರಸ್ಯ), ಎ–ಅಪ್ಲಿಕೇಶನ್ (ಅನ್ವಯಿಸುವುದು), ಎಂ– ಮಾಡ್ರನ್ (ಆಧುನಿಕ), ಪಿ–ಪ್ರೋಸಸ್ (ಪ್ರಕ್ರಿಯೆ), ಫಾರ್ ಐ-ಇನ್ ಕ್ರೀಸಿಂಗ್ (ಹೆಚ್ಚಳ), ಒ-ಔಟ್ ಪುಟ್ (ಉತ್ಪತ್ತಿ) ಅಂಡ್ ಎನ್-ನ್ಯಾಷನಲ್ (ರಾಷ್ಟ್ರೀಯ) ಎಸ್-ಸ್ಟ್ರೆಂತ್ (ಶಕ್ತಿ ಅಥವಾ ಬಲ)
ಹೆಸರೇ ಸೂಚಿಸುವಂತೆ ಈ ಪೋರ್ಟಲ್ ಮುಖ್ಯವಾಗಿ ಸಣ್ಣ ಘಟಕಗಳ ಸಮಸ್ಯೆಗಳನ್ನು ಬಗೆಹರಿಸಿ, ಅವುಗಳಿಗೆ ಉತ್ತೇಜನ, ಬೆಂಬಲ ಮತ್ತು ಸಹಾಯ ಹಾಗೂ ಕೈಹಿಡಿದು ನಡೆಸುವ ಮೂಲಕ ದೊಡ್ಡ ಘಟಕಗಳನ್ನಾಗಿ ಮಾಡುವುದು. ಇದು ನಿಜಕ್ಕೂ ಒಂದೇ ವೇದಿಕೆಯಲ್ಲಿ ಎಂಎಸ್ಎಂಇ ಸಚಿವಾಲಯದಿಂದ ಎಲ್ಲ ಪರಿಹಾರಗಳನ್ನು ಒದಗಿಸುವ ವೇದಿಕೆಯಾಗಿದೆ.
ಈ ಐಸಿಟಿ ಆಧಾರಿತ ವ್ಯವಸ್ಥೆ, ಪ್ರಸಕ್ತ ಸಂಕಷ್ಟಗಳ ಸಂದರ್ಭದಲ್ಲಿ ಎಂಎಸ್ಎಂಇಗಳಿಗೆ ಸಹಾಯ ಮಾಡುವುದು ಮತ್ತು ಅವುಗಳನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಾಂಪಿಯನ್ ಗಳನ್ನಾಗಿ ರೂಪಿಸಿ, ಕೈಹಿಡಿದು ಮುನ್ನಡೆಸಲು ರೂಪಿಸಿರುವ ವ್ಯವಸ್ಥೆಯಾಗಿದೆ.
ಚಾಂಪಿಯನ್ ನ ವಿಸ್ತೃತ ಧ್ಯೇಯಗಳು:
iii. ಸ್ಪಾರ್ಕ್ ಗಳನ್ನು ಗುರುತಿಸುವುದು ಮತ್ತು ಉತ್ತೇಜಿಸುವುದು: ಅಂದರೆ ಪ್ರಸಕ್ತ ಸ್ಥಿತಿಗತಿಯನ್ನು ಎದುರಿಸುವ ಸಂಭಾವ್ಯ ಎಂಎಸ್ಎಂಇಗಳನ್ನು ಗುರುತಿಸುವುದು ಮತ್ತು ಅವುಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಾಂಪಿಯನ್ ಗಳನ್ನಾಗಿ ಮಾಡಲು ಸಹಕರಿಸುವುದು.
ಇದು ತಂತ್ರಜ್ಞಾನವನ್ನೊಳಗೊಂಡ ನಿಯಂತ್ರಣ ವ್ಯವಸ್ಥೆ ಮತ್ತು ಮಾಹಿತಿ ನಿರ್ವಹಣಾ ವ್ಯವಸ್ಥೆ, ಇದರಲ್ಲಿ ದೂರವಾಣಿ, ಅಂತರ್ಜಾಲ ಮತ್ತು ವಿಡಿಯೋ ಕಾನ್ಫರೆನ್ಸ್ ಸೇರಿದಂತೆ ಐಸಿಟಿ ಉಪಕರಣಗಳ ಜೊತೆಗೆ ಹೆಚ್ಚುವರಿಯಾಗಿ ಈ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ, ದತ್ತಾಂಶ ವಿಶ್ಲೇಷಣೆ ಮತ್ತು ಯಂತ್ರ ಕಲಿಕೆಗಳನ್ನು ಸೇರಿಸಲಾಗಿದೆ. ಇದನ್ನು ಭಾರತ ಸರ್ಕಾರದ ಮುಖ್ಯ ಕುಂದುಕೊರತೆ ಪೋರ್ಟಲ್ ಸಿಪಿಜಿಆರ್ ಎಎಂಎಸ್ ಮತ್ತು ಎಂಎಸ್ಎಂಇ ಸಚಿವಾಲಯದ ವೆಬ್ ಆಧಾರಿತ ತಂತ್ರಜ್ಞಾನಗಳ ಜೊತೆ ಸಂಪೂರ್ಣವಾಗಿ ಬೆಸೆಯಲಾಗಿದೆ. ಎನ್ಐಸಿ ಸಹಾಯದಿಂದ ಯಾವುದೇ ವೆಚ್ಚವಿಲ್ಲದೆ ಸ್ವಂತವಾಗಿ ಈ ಇಡೀ ಐಸಿಟಿಯನ್ನು ವಿನ್ಯಾಸಗೊಳಿಸಲಾಗಿದೆ. ಅದೇ ರೀತಿ ದಾಖಲೆಯ ಅವಧಿಯಲ್ಲಿ ಸಚಿವಾಲಯದ ಒಂದು ಡಂಪಿಂಗ್ ಕೊಠಡಿಯಲ್ಲಿ ಭೌತಿಕ ಮೂಲಸೌಕರ್ಯವನ್ನು ಸೃಷ್ಟಿಸಲಾಗಿದೆ.
ನಿಯಂತ್ರಣ ಕೊಠಡಿಗಳ ಸಂಪರ್ಕಜಾಲ ವ್ಯವಸ್ಥೆಯ ಭಾಗವಾಗಿ ಹಬ್ ಮತ್ತು ಸ್ಪೋಕ್ ಮಾದರಿಯನ್ನು ಸೃಷ್ಟಿಸಲಾಗಿದೆ. ಹಬ್ ಅನ್ನು ನವದೆಹಲಿಯ ಎಂಎಸ್ಎಂಇ ಕಾರ್ಯದರ್ಶಿಗಳ ಕಚೇರಿಯಲ್ಲಿ ಸ್ಥಾಪಿಸಲಾಗಿದೆ. ಸ್ಪೋಕ್ ಗಳನ್ನು ರಾಜ್ಯಗಳ ಹಲವು ಕಚೇರಿಗಳಲ್ಲಿ ಮತ್ತು ಎಂಎಸ್ಎಂಇ ಸಚಿವಾಲಯದ ಸಂಸ್ಥೆಗಳಲ್ಲಿ ಸ್ಥಾಪಿಸಲಾಗಿದೆ. ಸದ್ಯ ರಾಜ್ಯಮಟ್ಟದ 66 ನಿಯಂತ್ರಣ ಕೊಠಡಿಗಳನ್ನು ಸೃಷ್ಟಿಸಲಾಗಿದೆ ಮತ್ತು ಅವು ಕಾರ್ಯಾರಂಭ ಮಾಡಿವೆ. ಅವುಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪರ್ಕ ಕಲ್ಪಿಸಲಾಗಿದ್ದು, ಅವು ಚಾಂಪಿಯನ್ ಗಳ ಪೋರ್ಟಲ್ ಗಳ ಜೊತೆ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸಲಿವೆ. ಈ ಬಗ್ಗೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ವಿಸ್ತೃತ ನಿರ್ದಿಷ್ಟ ಕಾರ್ಯಾನುಷ್ಠಾನ ಪ್ರಕ್ರಿಯೆ(ಎಸ್ಒಪಿ)ಯನ್ನು ಹೊರಡಿಸಲಾಗಿದ್ದು, ಆ ಸಿಬ್ಬಂದಿಗಳಿಗೆ ತರಬೇತಿ ವ್ಯವಸ್ಥೆಗಾಗಿ ನಿಯೋಜಿಸಲಾಗಿದೆ.
ಇದೇ ಸಂದರ್ಭದಲ್ಲಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಸಹ ಉಪಸ್ಥಿತರಿದ್ದರು.
Launched the portal, https://t.co/ZdLkL1rwK5
— Narendra Modi (@narendramodi) June 1, 2020
This is a one stop place for MSME sector. The focus areas are support & hand-holding, grievance redressal, harnessing entrepreneurial talent and discovering new business opportunities. https://t.co/diLjzKeRY5 pic.twitter.com/d9t8XGJcxT