ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀಲಂಕಾದ ಅಧ್ಯಕ್ಷ ಘನತೆವೆತ್ತ ಗೊತಾಬಾಯ್ ರಾಜಪಕ್ಸೆ ಅವರೊಂದಿಗೆ ಕೋವಿಡ್ 19 ಸಾಂಕ್ರಾಮಿಕದ ಕುರಿತಂತೆ ಮತ್ತು ವಲಯದೊಳಗೆ ಆರ್ಥಿಕ ಮತ್ತು ಆರೋಗ್ಯದ ಮೇಲೆ ಬೀರಿರುವ ಪರಿಣಾಮಗಳ ಬಗ್ಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿದರು.
ಸಾಂಕ್ರಾಮಿಕದ ಪರಿಣಾಮವನ್ನು ತಗ್ಗಿಸಲು ಭಾರತವು ಶ್ರೀಲಂಕಾಗೆ ಎಲ್ಲ ಸಾಧ್ಯ ನೆರವು ಒದಗಿಸುವುದನ್ನು ಮುಂದುವರಿಸುತ್ತದೆ ಎಂದು ಪ್ರಧಾನಿಯವರು ಶ್ರೀಲಂಕಾದ ಅಧ್ಯಕ್ಷರಿಗೆ ಭರವಸೆ ನೀಡಿದರು.
ಅಧ್ಯಕ್ಷ ರಾಜಪಕ್ಸ ಅವರು ತಮ್ಮ ಸರ್ಕಾರ ಆರ್ಥಿಕ ಚಟುವಟಿಕೆ ಪುನಾರಂಭಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. ಈ ನಿಟ್ಟಿನಲ್ಲಿ ಇಬ್ಬರೂ ನಾಯಕರು ಶ್ರೀಲಂಕಾದಲ್ಲಿ ಭಾರತೀಯ ನೆರವಿನ ಅಭಿವೃದ್ಧಿ ಯೋಜನೆ ಹೆಚ್ಚಿಸುವ ಅಗತ್ಯವನ್ನು ಒಪ್ಪಿಕೊಂಡರು.
ಶ್ರೀಲಂಕಾದಲ್ಲಿ ಭಾರತೀಯ ಖಾಸಗಿ ವಲಯದ ಹೂಡಿಕೆಗಳನ್ನು ಉತ್ತೇಜಿಸುವ ಸಾಧ್ಯತೆ ಮತ್ತು ಮೌಲ್ಯವರ್ಧನೆ ಕುರಿತು ಅವರು ಚರ್ಚಿಸಿದರು.
ಶ್ರೀಲಂಕಾದ ಜನರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಧಾನಿ ತಮ್ಮ ಶುಭಾಶಯಗಳನ್ನು ತಿಳಿಸಿದರು.
Had an excellent talk with President @GotabayaR. Sri Lanka is fighting COVID-19 effectively under his leadership. India will continue to support our close maritime neighbour in dealing with the pandemic and its economic impact.
— Narendra Modi (@narendramodi) May 23, 2020
We agreed to accelerate Indian-assisted development projects in Sri Lanka, and also strengthen investment links.
— Narendra Modi (@narendramodi) May 23, 2020