Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಮತ್ತು ಮ್ಯಾನ್ಮಾರ್ ಸ್ಟೇಟ್ ಚಾನ್ಸಲರ್ ಡಾ ಆಂಗ್ ಸಾನ್ ಸ್ಯೂ ಕಿ ನಡುವೆ ದೂರವಾಣಿ ಮಾತುಕತೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮ್ಯಾನ್ಮಾರ್ ಗಣರಾಜ್ಯ ಒಕ್ಕೂಟದ ಸ್ಟೇಟ್ ಚಾನ್ಸಲರ್ ಡಾ ಆಂಗ್ ಸ್ಯಾನ್ ಸ್ಯೂಕಿ ಅವರೊಂದಿಗೆ 2020ರ ಏಪ್ರಿಲ್ 30ರಂದು ದೂರವಾಣಿ ಸಂಭಾಷಣೆ ನಡೆಸಿದರು.

ದೇಶೀಯ ಮತ್ತು ಪ್ರಾದೇಶಿಕ ನಿಟ್ಟಿನಲ್ಲಿ ಕೋವಿಡ್ 19ರಿಂದ ಎದುರಾಗಿರುವ ಪರಿಸ್ಥಿತಿಯ ಬಗ್ಗೆ ನಾಯಕರು ಚರ್ಚಿಸಿದರು ಮತ್ತು ಸಾಂಕ್ರಾಮಿಕ ಪ್ರಸರಣ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಇತ್ತೀಚಿನ ಮಾಹಿತಿ ಹಂಚಿಕೊಂಡರು.

ಭಾರತದ ನರೆ ಮೊದಲು ನೀತಿಯಂತೆ ಪ್ರಮುಖ ಆಧಾರಸ್ತಂಭವಾಗಿರುವ ಮ್ಯಾನ್ಮಾರ್ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಮೋದಿ, ಕೋವಿಡ್ 19ರ ಆರೋಗ್ಯ ಮತ್ತು ಆರ್ಥಿಕ ಪರಿಣಾಮಗಳನ್ನು ತಗ್ಗಿಸಲು ಎಲ್ಲ ಸಾಧ್ಯ ನೆರವನ್ನು ಮ್ಯಾನ್ಮಾರ್ ಗೆ ಒದಗಿಸಲು ಭಾರತ ಸನ್ನದ್ಧವಾಗಿದೆ ಎಂದು ತಿಳಿಸಿದರು.

ಪ್ರಧಾನಮಂತ್ರಿಯವರು ಭಾರತ ಸರ್ಕಾರದಿಂದ, ಭಾರತದಲ್ಲಿರುವ ಮ್ಯಾನ್ಮಾರ್ ಜನತೆಗೆ ಎಲ್ಲ ಸಾಧ್ಯ ಬೆಂಬಲದ ಭರವಸೆ ನೀಡಿದರು ಮತ್ತು ಮ್ಯಾನ್ಮಾರ್ ನಲ್ಲಿರುವ ಭಾರತೀಯ ಪ್ರಜೆಗಳಿಗೆ ಮ್ಯಾನ್ಮಾರ್ ಪ್ರಾಧಿಕಾರಗಳು ನೀಡಿರುವ ಸಹಕಾರಕ್ಕೆ ಚಾನ್ಸಲರ್ ಅವರಿಗೆ ಧನ್ಯವಾದ ಅರ್ಪಿಸಿದರು.

ಕೋವಿಡ್ 19 ಒಡ್ಡಿರುವ ಹಾಲಿ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ನಿರಂತರವಾಗಿ ಸಂಪರ್ಕದಲ್ಲಿರಲು ಮತ್ತು ಒಗ್ಗೂಡಿ ಶ್ರಮಿಸಲು ಇಬ್ಬರೂ ನಾಯಕರು ಸಮ್ಮತಿಸಿದರು.

***