Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಮತ್ತು ಭೂತಾನ್ ಪ್ರಧಾನಮಂತ್ರಿಯವರ ನಡುವೆ ದೂರವಾಣಿ ಮಾತುಕತೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭೂತಾನ್ ಸಂಸ್ಥಾನದ ಪ್ರಧಾನಮಂತ್ರಿ (ಯಾಂಚೆನ್) ಘನತೆವೆತ್ತ ಡಾ. ಲೋಟೆ ಶೇರಿಂಗ್ ಅವರೊಂದಿಗೆ ಮಾತುಕತೆ ನಡೆಸಿದರು.

ಇಬ್ಬರೂ ಪ್ರಧಾನಮಂತ್ರಿಯವರು ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪ್ರಾದೇಶಿಕ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು ಮತ್ತು ಅದರ ಪರಿಣಾಮಗಳನ್ನು ನಿಯಂತ್ರಿಸಲು ತಮ್ಮ ತಮ್ಮ ಸರ್ಕಾರಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡರು.

ಸಂಸ್ಥಾನದೊಳಗೆ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಭೂತಾನ್ ದೊರೆ ಮತ್ತು ಯಾಂಚೆನ್ ಡಾ. ಶೇರಿಂಗ್ ಅವರು ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದ ರೀತಿಗೆ ಪ್ರಧಾನ ಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಲಿಯೋಂಚೆನ್ ಡಾ. ಶೇರಿಂಗ್ ಅವರು ಭಾರತದಂತಹ ಬೃಹತ್ ಮತ್ತು ಸಂಕೀರ್ಣ ದೇಶದೊಳಗೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಾಗಲೂ ಸ್ಥಳೀಯ ಮಟ್ಟದಲ್ಲಿ ಕೋವಿಡ್ ನಿಗ್ರಹಕ್ಕಾಗಿ ಸಹಯೋಗಕ್ಕೆ ಉತ್ತೇಜಿಸಿದ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು.

ಸಾರ್ಕ್ ರಾಷ್ಟ್ರಗಳ ನಾಯಕರುಗಳ ನಡುವೆ ಮಾರ್ಚ್ 15ರಂದು ಅಂಗೀಕರಿಸಲಾದ ವಿಶೇಷ ವ್ಯವಸ್ಥೆಗಳ ಅನುಷ್ಠಾನದ ಪ್ರಗತಿಯ ಬಗ್ಗೆ ನಾಯಕರು ಸಂತಸ ವ್ಯಕ್ತಪಡಿಸಿದರು.

ಭಾರತ-ಭೂತಾನ್ ಬಾಂಧವ್ಯದ ಕಾಲಾತೀತ ಮತ್ತು ವಿಶೇಷ ಸ್ವರೂಪವನ್ನು ಪ್ರಧಾನ ಮಂತ್ರಿ ಉಲ್ಲೇಖಿಸಿದರು ಮತ್ತು ಸಾಂಕ್ರಾಮಿಕ ರೋಗದ ಆರೋಗ್ಯ ಮತ್ತು ಆರ್ಥಿಕ ಪರಿಣಾಮವನ್ನು ಕಡಿಮೆ ಮಾಡಲು ಭೂತಾನ್ ಗೆ ಭಾರತವು ಎಲ್ಲ ಸಾಧ್ಯ ಬೆಂಬಲವನ್ನು ಖಚಿತಪಡಿಸುತ್ತದೆ ಎಂದು ಯಾಂಚೆನ್ ಅವರಿಗೆ ಭರವಸೆ ನೀಡಿದರು.

ಪ್ರಧಾನಮಂತ್ರಿಯವರು ದೊರೆ ಘನತೆವೆತ್ತ ಯಾಂಚೆನ್ ಡಾ. ಶೇರಿಂಗ್ ಮತ್ತು ಡ್ರುಕ್ ಯುಲ್ ನ ಎಲ್ಲ ಸ್ನೇಹಪರ ಜನರ ಕ್ಷೇಮ ಮತ್ತು ಉತ್ತಮ ಆರೋಗ್ಯಕ್ಕೆ ಶುಭಾಶಯಗಳನ್ನು ಸಲ್ಲಿಸಿದರು.