Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಮತ್ತು ಫ್ರಾನ್ಸ್ ಅಧ್ಯಕ್ಷರು ಮಾರ್ಸಿಲ್ಲೆಯಲ್ಲಿ ಭಾರತದ ದೂತವಾಸ ಕಚೇರಿ ಅನ್ನು ಜಂಟಿಯಾಗಿ ಉದ್ಘಾಟಿಸಿದರು

ಪ್ರಧಾನಮಂತ್ರಿ ಮತ್ತು ಫ್ರಾನ್ಸ್ ಅಧ್ಯಕ್ಷರು ಮಾರ್ಸಿಲ್ಲೆಯಲ್ಲಿ ಭಾರತದ ದೂತವಾಸ ಕಚೇರಿ ಅನ್ನು ಜಂಟಿಯಾಗಿ ಉದ್ಘಾಟಿಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಫ್ರೆಂಚ್ ಗಣರಾಜ್ಯದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಇಂದು ಮಾರ್ಸಿಲ್ಲೆಯಲ್ಲಿ ಹೊಸದಾಗಿ ತೆರೆಯಲಾದ ಭಾರತದ ದೂತವಾಸ ಕಚೇರಿ ಅನ್ನು ಜಂಟಿಯಾಗಿ ಉದ್ಘಾಟಿಸಿದರು.

ಪ್ರಧಾನಮಂತ್ರಿ ಮತ್ತು ಅಧ್ಯಕ್ಷ ಶ್ರೀ ಮ್ಯಾಕ್ರನ್ ಅವರು ಭಾರತದ ದೂತವಾಸ ಕಚೇರಿ ಅನ್ನು ಉದ್ಘಾಟಿಸಿದ್ದು  ಇದು ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಮೈಲಿಗಲ್ಲು ಆಗಿದೆ. ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷ ಶ್ರೀ ಮ್ಯಾಕ್ರನ್ ಅವರ ಉಪಸ್ಥಿತಿಯು ವಿಶೇಷ ಹಾಗೂ ಮಹತ್ವಪೂರ್ಣವಾಗಿತ್ತು ಎಂದು ಅವರ ಉಪಸ್ಥಿತಿಯನ್ನು ಪ್ರಧಾನಮಂತ್ರಿಯವರು ಬಹಳವಾಗಿ ಶ್ಲಾಘಿಸಿದರು. ಐತಿಹಾಸಿಕ ಸಂದರ್ಭವನ್ನು ವೀಕ್ಷಿಸಲು ದೂತವಾಸ ಕಚೇರಿಯಲ್ಲಿ ನೆರೆದಿದ್ದ ಅನಿವಾಸಿ ಭಾರತೀಯ ಸಮುದಾಯಗಳ ಸದಸ್ಯರು, ಈ ಎರಡೂ ದೇಶಗಳ ನಾಯಕರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಜುಲೈ 2023ರಲ್ಲಿ ಪ್ರಧಾನಮಂತ್ರಿಯವರು ಫ್ರಾನ್ಸ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾರ್ಸಿಲ್ಲೆಯಲ್ಲಿ ಭಾರತದ ದೂತವಾಸ ಕಚೇರಿ ಅನ್ನು ತೆರೆಯುವ ನಿರ್ಧಾರವನ್ನು ಘೋಷಿಸಿದರು. ದೂತವಾಸ ಕಚೇರಿ ಫ್ರಾನ್ಸ್ ನ ದಕ್ಷಿಣದಲ್ಲಿರುವ ನಾಲ್ಕು ಫ್ರೆಂಚ್ ಆಡಳಿತ ಪ್ರದೇಶಗಳ ಮೇಲೆ ದೂತವಾಸ ಕಚೇರಿ ಅಧಿಕಾರ ವ್ಯಾಪ್ತಿಯನ್ನು ಹೊಂದಿರುತ್ತದೆ, ಅವುಗಳೆಂದರೆ – ಪ್ರೊವೆನ್ಸ್ ಆಲ್ಪೆಸ್ ಕೋಟ್ ಡಿ’ಅಜುರ್, ಕೊರ್ಸಿಕಾ, ಆಕ್ಸಿಟಾನಿ ಮತ್ತು ಆವೆರ್ಗ್ನೆ-ರೋನ್-ಆಲ್ಪೆಸ್.

ಫ್ರಾನ್ಸ್ ನ ಈ ಪ್ರದೇಶವು ವ್ಯಾಪಾರ, ಕೈಗಾರಿಕೆ, ಇಂಧನ ಮತ್ತು ಐಷಾರಾಮಿ ಪ್ರವಾಸೋದ್ಯಮ ಕ್ಷೇತ್ರದಗಳಿಗೆ ಸಮಾನಾರ್ಥಕವಾಗಿದೆ ಮತ್ತು ಭಾರತದೊಂದಿಗೆ ಗಮನಾರ್ಹ ಆರ್ಥಿಕ, ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಪರ್ಕವನ್ನು ಹೊಂದಿದೆ. ಫ್ರಾನ್ಸ್ ನ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರದಲ್ಲಿ ಪ್ರಾರಂಭಿಸಲಾದ ಹೊಸ ದೂತವಾಸ ಕಚೇರಿ ಬಹುಮುಖಿ ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ.

*****