ಪ್ರಧಾನಮಂತ್ರಿಯವರು ಇಂದು ಇಸ್ರೇಲ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.
ಇಬ್ಬರೂ ನಾಯಕರು ಪ್ರಸಕ್ತ ಕೋವಿಡ್ -19 ಸಾಂಕ್ರಾಮಿಕ ಮತ್ತು ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ತಮ್ಮ ಸರ್ಕಾರಗಳು ಅಳವಡಿಸಿಕೊಂಡಿರುವ ಸ್ಪಂದನಾತ್ಮಕ ಕಾರ್ಯತಂತ್ರದ ಕುರಿತು ಚರ್ಚಿಸಿದರು.
ಇಬ್ಬರೂ ನಾಯಕರು, ಸಾಂಕ್ರಾಮಿಕದ ವಿರುದ್ಧ ಭಾರತ ಮತ್ತು ಇಸ್ರೇಲ್ ನಡುವೆ ಔಷಧ ಪೂರೈಕೆಯ ಲಭ್ಯತೆ ಮತ್ತು ಉನ್ನತ ತಂತ್ರಜ್ಞಾನದ ನಾವಿನ್ಯಪೂರ್ಣ ಬಳಕೆ ಸೇರಿದಂತೆ ಸಾಧ್ಯ ಸಹಯೋಗದ ಶೋಧನೆ ಮಾಡಿದರು. .ಇಂಥ ಸಹಯೋಗ ಅನ್ವೇಷಿಸಲು ಸಂವಹನ ಕೇಂದ್ರೀಕೃತ ವಾಹಿನಿಯನ್ನು ನಿರ್ವಹಿಸಲು ಅವರು ಸಮ್ಮತಿಸಿದರು..
ಕೋವಿಡ್ -19 ಸಾಂಕ್ರಾಮಿಕ ಆಧುನಿಕ ಇತಿಹಾಸದಲ್ಲಿ ಮಹತ್ವದ ತಿರುವಾಗಿದ್ದು, ಮಾನವತೆಯ ಹಂಚಿಕೆಯ ಹಿತಾಸಕ್ತಿಯ ಮೇಲೆ ಕೇಂದ್ರೀಕೃತವಾದ ಜಾಗತೀಕರಣದ ಹೊಸ ಮುನ್ನೋಟದ ಅವಕಾಶಗಳನ್ನು ಒದಗಿಸುತ್ತದೆ ಎಂಬ ಪ್ರಧಾನಮಂತ್ರಿಯವರ ಅಭಿಪ್ರಾಯಕ್ಕೆ ಘನತೆವೆತ್ತ ಶ್ರೀ ನೆತನ್ಯಾಹು ಅವರು ಸಮ್ಮತಿ ವ್ಯಕ್ತಪಡಿಸಿದರು.
Had a telephone conversation with PM @netanyahu. We spoke about the situation arising due to COVID-19 and ways to fight the pandemic. https://t.co/NxdEO411b9
— Narendra Modi (@narendramodi) April 3, 2020