ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಂದು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರಾದ ಶ್ರೀ ಆಂಟೋನಿಯೊ ಕೋಸ್ಟಾ ಅವರಿಂದ ದೂರವಾಣಿ ಕರೆ ಸ್ವೀಕರಿಸಿದರು.
ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅಧ್ಯಕ್ಷ ಕೋಸ್ಟಾ ಅವರನ್ನು ಪ್ರಧಾನಮಂತ್ರಿ ಅಭಿನಂದಿಸಿದರು.
ಕಳೆದ ದಶಕದಲ್ಲಿ ಭಾರತ-ಯೂರೋಪಿಯನ್ ಒಕ್ಕೂಟ (ಇಯು) ತಂತ್ರಗಾರಿಕಾ ಪಾಲುದಾರಿಕೆಯಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿವೆ ಎಂಬುದನ್ನು ಗಮನಿಸಿದ ಉಭಯ ನಾಯಕರು, ವ್ಯಾಪಾರ, ತಂತ್ರಜ್ಞಾನ, ಹೂಡಿಕೆ, ಹಸಿರು ಇಂಧನ, ಡಿಜಿಟಲ್ ಬಾಹ್ಯಾಕಾಶ ಸೇರಿದಂತೆ ವಿವಿಧ ವಲಯಗಳಲ್ಲಿ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನಿಕಟವಾಗಿ ಕಾರ್ಯನಿರ್ವಹಿಸಲು ಸಮ್ಮತಿಸಿದರು.
ಪರಸ್ಪರ ಲಾಭದಾಯಕ ಭಾರತ- ಯೂರೋಪಿಯನ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದ (ಎಫ್ ಟಿ ಎ) ಕುರಿತಂತೆ ತೀರ್ಮಾನವನ್ನು ಶೀಘ್ರ ಅಂತಿಮಗೊಳಿಸುವ ಅಗತ್ಯದ ಬಗ್ಗೆ ಅವರು ಒತ್ತಿ ಹೇಳಿದರು.
ಪರಸ್ಪರ ಅನುಕೂಲಕರ ಸಮಯದಲ್ಲಿ ಭಾರತದಲ್ಲಿ ನಡೆಯಲಿರುವ ಮುಂದಿನ ಭಾರತ-ಇಯು ಶೃಂಗಸಭೆಗಾಗಿ ಎರಡೂ ದೇಶಗಳ ನಾಯಕರು ಎದುರು ನೋಡುತ್ತಿದ್ದಾರೆ.
ಎರಡೂ ದೇಶಗಳ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಉಭಯರು ಅನಿಸಿಕೆ ಹಂಚಿಕೊಂಡರು. ಪರಸ್ಪರ ಸಂಪರ್ಕದಲ್ಲಿರಲು ನಾಯಕರು ಸಮ್ಮತಿಸಿದರು.
*****
Pleased to speak with President @antoniolscosta. India and the EU are natural partners. We are committed to working closely together to further strengthen the India-EU Strategic Partnership, including in the areas of technology, green energy, digital space, trade and investments.…
— Narendra Modi (@narendramodi) January 7, 2025