ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನೆದರ್ಲ್ಯಾಂಡ್ಸ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಡಿಕ್ ಸ್ಕೋಫ್ ಅವರಿಂದ ದೂರವಾಣಿ ಕರೆಯನ್ನು ಸ್ವೀಕರಿಸಿದರು.
ಉಭಯ ನಾಯಕರು ಹಂಚಿಕೆಯ ಮೌಲ್ಯಗಳು ಹಾಗೂ ಪ್ರಜಾಪ್ರಭುತ್ವ ಮತ್ತು ಕಾನೂನಿನ ನಂಬಿಕೆಯನ್ನು ಆಧರಿಸಿದ ಭಾರತ ಮತ್ತು ನೆದರ್ಲ್ಯಾಂಡ್ಸ್ ನಡುವಿನ ವಿಶ್ವಾಸಾರ್ಹ ಮತ್ತು ಮೌಲ್ಯಯುತ ಪಾಲುದಾರಿಕೆಯ ಬಗ್ಗೆ ಚರ್ಚಿಸಿದರು.
ನೀರು, ಕೃಷಿ, ಆರೋಗ್ಯ ಕ್ಷೇತ್ರಗಳಲ್ಲಿ ಅಸ್ತಿತ್ವದಲ್ಲಿರುವ ಸಹಕಾರವನ್ನು ಮತ್ತಷ್ಟು ಆಳಗೊಳಿಸುವ ಮಾರ್ಗಗಳ ಬಗ್ಗೆ ಅವರು ಚರ್ಚಿಸಿದರು. ದ್ವಿಪಕ್ಷೀಯ ಪಾಲುದಾರಿಕೆಯನ್ನು ಹೆಚ್ಚಿಸಲು ಮತ್ತು ವ್ಯಾಪಾರ, ರಕ್ಷಣೆ, ಭದ್ರತೆ, ನಾವೀನ್ಯತೆ, ಹಸಿರು ಹೈಡ್ರೋಜನ್ ಮತ್ತು ಅರೆವಾಹಕಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯತಂತ್ರದ ಆಯಾಮವನ್ನು ಒದಗಿಸಲು ಇಬ್ಬರೂ ಒಪ್ಪಿಕೊಂಡರು. ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಜನರೊಂದಿಗೆ ನಿಕಟ ಸಂಬಂಧ ಮತ್ತು ವಿನಿಮಯವನ್ನು ನಿರ್ಮಿಸಲು ಉಭಯ ನಾಯಕರು ಒತ್ತು ನೀಡಿದರು.
ಉಭಯ ನಾಯಕರು ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡು, ಶಾಂತಿ, ಭದ್ರತಾ ಸಹಕಾರ ಮತ್ತು ಸ್ಥಿರತೆಯನ್ನು ಉತ್ತೇಜಿಸಲು ಕೆಲಸ ಮಾಡುವ ಬದ್ಧತೆಯನ್ನು ಪುನರುಚ್ಚರಿಸಿದರು.
ಇಬ್ಬರೂ ನಾಯಕರು ಪರಸ್ಪರ ಸಂಪರ್ಕದಲ್ಲಿರಲು ಒಪ್ಪಿಕೊಂಡರು.
*****
Pleased to speak with PM Dick Schoof. The Netherlands is a trusted & valued partner. We are committed to advance and provide strategic dimension to bilateral ties in diverse sectors including water, agriculture, security, technology, semiconductors and renewable energy.@MinPres
— Narendra Modi (@narendramodi) December 18, 2024