ದೇಶದ ಎಲ್ಲಾ ನನ್ನ ರೈತ ಸಹೋದರರಿಗೆ ಮತ್ತು ಸಹೋದರಿಯರಿಗೆ. ದೇಶದ ವಿವಿಧೆಡೆಯಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಕೇಂದ್ರ ಸಂಪುಟದ ಸಚಿವರಿಗೆ, ರಾಜ್ಯ ಸರಕಾರಗಳ ಸಚಿವರಿಗೆ, ಪಂಚಾಯತ್ ನಿಂದ ಹಿಡಿದು ಸಂಸತ್ತಿನವರೆಗೆ ಆಯ್ಕೆಯಾದ ಎಲ್ಲಾ ಜನ ಪ್ರತಿನಿಧಿಗಳಿಗೆ, ಗ್ರಾಮಗಳಲ್ಲಿ ರೈತರ ಜೊತೆ ಕುಳಿತಿರುವ ಎಲ್ಲಾ ಮಹನೀಯರಿಗೆ ಮತ್ತು ಮಹಿಳೆಯರಿಗೆ– ಎಲ್ಲರಿಗೂ ನಮಸ್ಕಾರ.
ರೈತರ ಬದುಕಿನಲ್ಲಿ ಸಂತೋಷ ಕಂಡಾಗ ಅದು ನಮ್ಮ ಸಂತೋಷವನ್ನು ಹೆಚ್ಚಿಸುತ್ತದೆ. ಮತ್ತು ಇಂದು ಬಹಳ ಪವಿತ್ರ ದಿನ. ರೈತರು ಇಂದು ಸಮ್ಮಾನ್ ನಿಧಿ ಪಡೆಯುವುದರ ಜೊತೆಗೆ ಇಂದಿನ ದಿನ ಹಲವು ಸಂದರ್ಭಗಳ ಸಂಗಮ. ಕ್ರಿಸ್ಮಸ್ ದಿನವಾದ ಇಂದು ಎಲ್ಲಾ ದೇಶವಾಸಿಗಳಿಗೆ ಶುಭಾಶಯಗಳು. ಈ ಕ್ರಿಸ್ಮಸ್ ಹಬ್ಬ ಪ್ರೀತಿಯನ್ನು ಹರಡಲಿ, ಶಾಂತಿಯನ್ನು ಮತ್ತು ಸೌಹಾರ್ದವನ್ನು ಜಗತ್ತಿನೆಲ್ಲೆಡೆ ಪಸರಿಸಲಿ.
ಸ್ನೇಹಿತರೇ,
ಇಂದು ಮೋಕ್ಷದ ಏಕಾದಶಿ, ಗೀತಾ ಜಯಂತಿ. ಇಂದು ಭಾರತ ರತ್ನ ಮಹಾಮಾನ ಮದನ್ ಮೋಹನ ಮಾಳವೀಯ ಜೀ ಅವರ ಜನ್ಮದಿನ. ದೇಶದ ಶ್ರೇಷ್ಟ ಕರ್ಮಯೋಗಿ, ನಮ್ಮೆಲ್ಲರ ಪ್ರೇರಣೆ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಜೀ ಅವರ ಜನ್ಮ ದಿನ. ಅವರ ನೆನಪಿನಲ್ಲಿ, ದೇಶವು ಇಂದು ಉತ್ತಮ ಆಡಳಿತ ದಿನವನ್ನು ಆಚರಿಸುತ್ತಿದೆ.
ಸ್ನೇಹಿತರೇ,
ಅಟಲ್ ಜೀ ಅವರು ಗೀತಾದಲ್ಲಿ ನೀಡಿರುವ ಸಂದೇಶದನ್ವಯ ತಮ್ಮ ಬದುಕನ್ನು ಬದುಕಲು ನಿರಂತರ ಪ್ರಯತ್ನಗಳನ್ನು ಮಾಡಿದರು. ಗೀತಾದಲ್ಲಿ ಹೀಗೆಂದು ಬರೆದಿದೆ: स्वे स्वे कर्मणि अभिरत: संसिद्धिम् लभते नरः ಅಂದರೆ ಯಾರು ತಮ್ಮ ಸಹಜ ಕರ್ಮಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಾರೋ ಅವರು ಸಾಧಕರಾಗುತ್ತಾರೆ. ಅಟಲ್ ಜೀ ಅವರು ತಮ್ಮ ಎಲ್ಲಾ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತ ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಮುಡಿಪಾಗಿಟ್ಟವರು. ಅಟಲ್ ಜೀ ಅವರು ಉತ್ತಮ ಆಡಳಿತವನ್ನು ಭಾರತದ ರಾಜಕೀಯದ ಭಾಗವಾಗಿಸಿದರು. ಸಾಮಾಜಿಕ ಚಿಂತನೆಯ ಅಂಗವಾಗಿಸಿದರು. ಅಟಲ್ ಜೀ ಅವರು ಹಳ್ಳಿಗಳ ಮತ್ತು ಬಡವರ ಅಭ್ಯುದಯಕ್ಕೆ ಗರಿಷ್ಟ ಆದ್ಯತೆ ನೀಡಿದರು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಇರಲಿ ಅಥವಾ ಸುವರ್ಣ ಚತುರ್ಭುಜ ಯೋಜನೆ ಇರಲಿ, ಅಂತ್ಯೋದಯ ಅನ್ನ ಯೋಜನಾ ಅಥವಾ ಸರ್ವ ಶಿಕ್ಷಾ ಅಭಿಯಾನ ಇರಲಿ ಎಲ್ಲದರಲ್ಲೂ ಅಟಲ್ ಜೀ ಅವರು ರಾಷ್ಟ್ರೀಯ ಜೀವನದಲ್ಲಿ ಅರ್ಥಪೂರ್ಣ ಬದಲಾವಣೆ ತರಲು ಹಲವಾರು ಕ್ರಮಗಳನ್ನು ಜಾರಿಗೆ ತಂದರು. ಇಂದು ಇಡೀ ದೇಶ ಅವರನ್ನು ನೆನಪಿಸಿಕೊಳ್ಳುತ್ತಿದೆ ಮತ್ತು ಅಟಲ್ ಜೀ ಅವರಿಗೆ ಶಿರ ಬಾಗಿ ನಮಿಸುತ್ತಿದೆ. ಈ ರೀತಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ದೇಶವಿಂದು ಜಾರಿಗೆ ತಂದಿರುವ ಕೃಷಿ ಸುಧಾರಣೆಗಳ ಶಿಲ್ಪಿ ಕೂಡಾ ಆಗಿದ್ದರು.
ಸ್ನೇಹಿತರೇ,
ಅಟಲ್ ಜೀ ಎಲ್ಲಾ ಯೋಜನೆಗಳಲ್ಲಿ ಭ್ರಷ್ಟಾಚಾರವನ್ನು ಬಡವರ ಮತ್ತು ರೈತರ ಹಿತಾಸಕ್ತಿಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಖಾಯಿಲೆ ಎಂದು ಪರಿಗಣಿಸಿದ್ದರು. ನೀವೆಲ್ಲ ನೆನಪಿಸಿಕೊಳ್ಳುತ್ತಿರಬಹುದು, ಅವರೊಮ್ಮೆ ಹಿಂದಿನ ಸರಕಾರಗಳ ಮಾಜಿ ಪ್ರಧಾನ ಮಂತ್ರಿ ಅವರ ಹೇಳಿಕೆಯನ್ನು ಸ್ಮರಿಸಿಕೊಂಡಿದ್ದರು. “ ರೂಪಾಯಿಯೊಂದನ್ನು ಜನಬಳಕೆಗೆ ಬಿಡುಗಡೆ ಮಾಡಿದರೆ, ಅದು ಸವೆಯುತ್ತ ಹೋಗುತ್ತದೆ ಮತ್ತು ಸವಕಳಿಯಿಂದಾಗಿ ಕೈಗಳಿಗೆ ಹೋದಾಗ ನಿಧನವಾಗಿ ಕಿಸೆಗಳಿಗೆ ಬೀಳುತ್ತದೆ”. ನಾನಿಂದು ಸಂತೋಷಗೊಂಡಿದ್ದೇನೆ ಯಾಕೆಂದರೆ ರೂಪಾಯಿ ಸವಕಳಿ ಆಗುವುದಿಲ್ಲ ಮತ್ತು ಅದು ತಪ್ಪು ಕೈಗಳಿಗೂ ಹೋಗುವುದಿಲ್ಲ. ಬಡವರಿಗಾಗಿ ದಿಲ್ಲಿಯಿಂದ ಬಿಡುಗಡೆಯಾಗುವ ಹಣ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಹೋಗುತ್ತದೆ. ಈಗಷ್ಟೆ ನಮ್ಮ ಕೃಷಿ ಸಚಿವರಾದ ನರೇಂದ್ರ ಜೀ ಥೋಮರ್ ಅವರು ಇದನ್ನೆಲ್ಲ ವಿವರವಾಗಿ ನಮ್ಮ ಮುಂದಿಟ್ಟಿದ್ದಾರೆ. ಪಿ.ಎಂ.ಕಿಸಾನ್ ಸಮ್ಮಾನ್ ನಿಧಿ ಇದಕ್ಕೆ ಒಂದು ಉತ್ತಮ ಉದಾಹರಣೆ.
ಇಂದು, 18,000 ಕೋ.ರೂ.ಗಳಿಗೂ ಅಧಿಕ ಮೊತ್ತವನ್ನು ದೇಶದಲ್ಲಿರುವ 9 ಕೋಟಿಗೂ ಅಧಿಕ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಕಂಪ್ಯೂಟರಿನ ಕ್ಲಿಕ್ ಮೂಲಕ ಜಮಾ ಮಾಡಲಾಗಿದೆ. ಯೋಜನೆ ಆರಂಭಗೊಂಡಂದಿನಿಂದ, 1,10,000 ಕೋ.ರೂ.ಗಳಿಗೂ ಅಧಿಕ ಮೊತ್ತವು ನೇರವಾಗಿ ರೈತರ ಖಾತೆಗಳಿಗೆ ಜಮೆಯಾಗಿದೆ. ಮತ್ತು ಇದು ಉತ್ತಮ ಆಡಳಿತ ಏನು ಎಂಬುದಕ್ಕೆ ಉದಾಹರಣೆ. ಉತ್ತಮ ಆಡಳಿತವನ್ನು ತಂತ್ರಜ್ಞಾನ ಬಳಸಿ ನಡೆಸಲಾಗುತ್ತಿದೆ. 18,000 ಕೋ.ರೂ.ಗಳಿಗೂ ಅಧಿಕ ಮೊತ್ತವನ್ನು ಕ್ಷಣದಲ್ಲಿ ನೇರವಾಗಿ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಕಮಿಶನ್ ಇಲ್ಲ, ಕಡಿತ ಇಲ್ಲ, ಸೋರಿಕೆ ಇಲ್ಲ. ತಂತ್ರಜ್ಞಾನ ಬಳಸಿ ಪಿ.ಎಂ. ಕಿಸಾನ್ ಸಮ್ಮಾನ ಯೋಜನೆಯಲ್ಲಿ ಸೋರಿಕೆಯನ್ನು ತಡೆಗಟ್ಟಲಾಗಿರುವುದನ್ನು ಖಾತ್ರಿಪಡಿಸಲಾಗಿದೆ. ರೈತರು ಆನ್ ಲೈನ್ ಮೂಲಕ ನೊಂದಾಯಿಸಿಕೊಂಡ ಬಳಿಕ ಅವರ ಆಧಾರ್ ನಂಬರ್ ಮತ್ತು ಬ್ಯಾಂಕ್ ಖಾತೆಗಳನ್ನು ರಾಜ್ಯ ಸರಕಾರಗಳ ಮೂಲಕ ಪರಿಶೀಲನೆ ನಡೆಸುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಆದರೆ ನಾನು ಇಂದು ವಿಷಾದದಿಂದ ಹೇಳಬೇಕಾಗಿದೆ ಪಶ್ಚಿಮ ಬಂಗಾಳದಲ್ಲಿಯ 70 ಲಕ್ಷಕ್ಕೂ ಅಧಿಕ ರೈತ ಸಹೋದರರು ಮತ್ತು ಸಹೋದರಿಯರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ವಿವಿಧ ಸಿದ್ಧಾಂತದ ಸರಕಾರಗಳು ಭಾಗಿಯಾಗಿ, ಇಡೀ ದೇಶದ ರೈತರಿಗೆ ಪ್ರಯೋಜನಕಾರಿಯಾದಂತಹ ಯೋಜನೆ ಅವರಿಗೆ ಲಭಿಸುತ್ತಿಲ್ಲ. ಬಂಗಾಳ ಸರಕಾರದ ರಾಜಕೀಯ ಕಾರಣಗಳಿಂದಾಗಿ ಅವರಿಗೆ ಈ ಹಣ ಲಭಿಸುತ್ತಿಲ್ಲ. ರಾಜ್ಯ ಸರಕಾರ ಇದಕ್ಕೆ ಒಂದು ರೂಪಾಯಿ ಕೂಡಾ ಖರ್ಚು ಮಾಡಬೇಕಾದದ್ದಿಲ್ಲ. ಹಣ ಭಾರತ ಸರಕಾರದಿಂದ ಹೋಗುತ್ತದೆ. ಆದಾಗ್ಯೂ ಆ ರೈತರಿಗೆ ಹಣ ಸಿಗುತ್ತಿಲ್ಲ. ಹಲವು ರೈತರು ಭಾರತ ಸರಕಾರಕ್ಕೆ ಪತ್ರ ಬರೆದಿದ್ದಾರೆ, ಆದರೆ ಆ ಬಗ್ಗೆ ಯಾವ ಕ್ರಮವನ್ನೂ ರಾಜ್ಯ ಕೈಗೊಳ್ಳುತ್ತಿಲ್ಲ. ಲಕ್ಷಾಂತರ ರೈತರು ಆನ್ ಲೈನ್ ಮೂಲಕ ಯೋಜನೆಯ ಪ್ರಯೋಜನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ, ಆದರೆ ರಾಜ್ಯ ಸರಕಾರ ಅದನ್ನು ತಡೆಹಿಡಿದಿದೆ ಎಂದರೆ ನೀವು ಕಲ್ಪಿಸಿಕೊಳ್ಳುವುದು ಸಾಧ್ಯವೇ?.
ಸಹೋದರರೇ ಮತ್ತು ಸಹೋದರಿಯರೇ,
ನನಗೆ ಆಶ್ಚರ್ಯವಾಗಿದೆ ಮತ್ತು ನಾನಿಂದು ದೇಶವಾಸಿಗಳ ಎದುರು ಬಹಳ ನೋವು ಹಾಗು ಆಕ್ರೋಶದಿಂದ ಹೇಳಲು ಇಚ್ಚಿಸುತ್ತೇನೆ, ಬಂಗಾಳವನ್ನು 30 ವರ್ಷ ಕಾಲ ಆಳಿದ ಜನರು ಮತ್ತು ಪಶ್ಚಿಮ ಬಂಗಾಳದ ಪರಿಸ್ಥಿತಿಯನ್ನು ತಮ್ಮ ರಾಜಕೀಯ ಚಿಂತನೆಯ ದೆಸೆಯಿಂದ ಇಷ್ಟೊಂದು ಕೆಳ ಮಟ್ಟಕ್ಕೆ ತಂದವರ ಬಗ್ಗೆ ಇಡೀ ದೇಶಕ್ಕೆ ತಿಳಿದಿದೆ. ಮತ್ತು ನೀವು ಮಮತಾ ಜೀ ಅವರ 15 ವರ್ಷ ಹಳೆಯ ಭಾಷಣಗಳನ್ನು ಕೇಳಿದರೆ, ಈ ರಾಜಕೀಯ ಸಿದ್ದಾಂತ ಬಂಗಾಳವನ್ನು ಹೇಗೆ ಹದಗೆಡಿಸಿದೆ ಎಂಬುದು ಗೊತ್ತಾಗುತ್ತದೆ. ಈಗ ಈ ಜನರು ಯಾವ ರೀತಿಯವರು?. ಅವರು ಬಂಗಾಳದಲ್ಲಿ ಪಕ್ಷವನ್ನು ಹೊಂದಿದ್ದಾರೆ, ಅವರು ಅಲ್ಲಿ ಸಂಘಟನೆಯನ್ನು ಹೊಂದಿದ್ದಾರೆ. 30 ವರ್ಷಗಳಿಂದ ಅವರು ಸರಕಾರವನ್ನು ನಡೆಸುತ್ತಿದ್ದಾರೆ. ಮತ್ತು ಅವರು ಎಷ್ಟು ಮಂದಿಯನ್ನು ಹೊಂದಿದ್ದಾರೆ?. ರೈತರಿಗೆ 2,000 ರೂಪಾಯಿ ಕೊಡುವುದಕ್ಕೆ ಸಂಬಂಧಿಸಿದ ಯೋಜನೆಯ ಬಗ್ಗೆ ಅವರು ಯಾಕೆ ಚಳವಳಿ ಮಾಡಿರಲಿಲ್ಲ. ನಿಮಗೆ ರೈತರ ಬಗ್ಗೆ ನಿಮ್ಮ ಹೃದಯದಲ್ಲಿ ಅಷ್ಟೊಂದು ಪ್ರೀತಿ ಇದ್ದರೆ, ನೀವು ಬಂಗಾಳದಲ್ಲಿ ನಿಮ್ಮ ರೈತರಿಗೆ ಆಗಿರುವ ಅನ್ಯಾಯದ ಬಗ್ಗೆ ಯಾಕೆ ಚಳವಳಿ ಮಾಡುವುದಿಲ್ಲ. ಅವರಿಗೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಹಣ ಸಿಗುತ್ತಿತ್ತಲ್ಲವೇ?. ಯಾಕೆ ನೀವು ನಿಮ್ಮ ಸ್ವರ ಎತ್ತಲಿಲ್ಲ?. ಅಲ್ಲಿಂದ ನೀವು ಪಂಜಾಬಿಗೆ ಹೋದಾಗ ಈ ಪ್ರಶ್ನೆ ಕೇಳಲ್ಪಡುತ್ತದೆ. ಮತ್ತು ಪಶ್ಚಿಮ ಬಂಗಾಳ ಸರಕಾರದತ್ತ ನೋಡಿ. ಅವರ ರಾಜ್ಯದಲ್ಲಿ 70 ಲಕ್ಷ ರೈತರಿಗೆ ಸಾವಿರಾರು ರೂಪಾಯಿ ಲಭಿಸುವಾಗ ರಾಜಕೀಯ ಬರುತ್ತಿದೆ. ಅವರು ಪಂಜಾಬಿಗೆ ಹೋಗುತ್ತಿರುವವರ ಬಗ್ಗೆ ಮೌನವಾಗಿರುತ್ತಾರೆ. ಅವರ ವಿರೋಧಿಗಳು ಬಂಗಾಳದಲ್ಲಿ ಇದ್ದಾರೆಯೇ. ದೇಶದ ಜನತೆ ಈ ಆಟವನ್ನು ಅರ್ಥ ಮಾಡಿಕೊಳ್ಳುವುದಿಲ್ಲವೇ?. ದೇಶದ ಜನತೆಗೆ ಈ ಆಟದ ಬಗ್ಗೆ ಗೊತ್ತಿಲ್ಲವೇ?. ವಿರೋಧ ಪಕ್ಷಗಳಲ್ಲಿ ಇರುವವರು, ಯಾಕೆ ಅವರ ಬಾಯಿಯನ್ನು ಮುಚ್ಚಿಕೊಂಡಿದ್ದಾರೆ. ಅವರು ಯಾಕೆ ಮೌನ ಆಚರಿಸುತ್ತಿದ್ದಾರೆ?.
ಸ್ನೇಹಿತರೇ,
ಇಂದು ಆ ರಾಜಕೀಯ ಪಕ್ಷಗಳ ಜನರು ಜನತೆಯಿಂದ ತಿರಸ್ಕೃತರಾಗಿ ಬೇರೇನನ್ನೋ ಮಾಡುತ್ತಿದ್ದಾರೆ. ಕಾರ್ಯಕ್ರಮಗಳನ್ನು ಸಂಘಟಿಸಿ ಅವರ ಸೆಲ್ಫೀ ಅಥವಾ ಛಾಯಾ ಚಿತ್ರಗಳನ್ನು ತೆಗೆಸಿಕೊಂಡು ಪತ್ರಿಕೆಗಳಲ್ಲಿ ಪ್ರಕಟಿಸಿಕೊಳ್ಳುತ್ತಿದ್ದಾರೆ ಅಥವಾ ತಮ್ಮ ರಾಜಕೀಯ ಆಸೆಗಾಗಿ ಟಿ.ವಿ.ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ದೇಶವು ಅಂತಹ ವ್ಯಕ್ತಿಗಳನ್ನು ಕೂಡಾ ನೋಡಿದೆ. ಅವರು ಏನು ಎಂಬುದು ದೇಶದೆದುರು ಅನಾವರಣಗೊಂಡಿದೆ. ನಾವು ಸ್ವಾರ್ಥ ರಾಜಕೀಯದ ಅನ್ವರ್ಥನಾಮವನ್ನು ನಿಕಟವಾಗಿ ನೋಡುತ್ತಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ರೈತರಿಗೆ ಆಗುತ್ತಿರುವ ಹಾನಿಯ ಬಗ್ಗೆ ಮಾತನಾಡಲಾರದವರು ಇಲ್ಲಿ ದಿಲ್ಲಿಯ ನಾಗರಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಅವರು ದೇಶದ ಆರ್ಥಿಕತೆಯನ್ನು ಹಾಳು ಮಾಡುತ್ತಿದ್ದಾರೆ. ಮತ್ತು ಅದನ್ನು ರೈತರ ಹೆಸರಿನಲ್ಲಿ ಮಾಡುತ್ತಿದ್ದಾರೆ. ಮಂಡಿಗಳ ಬಗ್ಗೆ ಕೂಗು ಹಾಕುತ್ತಿರುವ ಈ ಪಕ್ಷಗಳ ಬಗ್ಗೆ , ಎ.ಪಿ.ಎಂ.ಸಿ.ಗಳ ಬಗ್ಗೆ ಮಾತನಾಡುತ್ತಿರುವ ಈ ಪಕ್ಷಗಳ ಬಗ್ಗೆ ಮತ್ತು ದೊಡ್ಡ ತಲೆಬರಹಗಳನ್ನು ಪಡೆಯಲು ಅವರು ಮಾಡುತ್ತಿರುವ ಭಾಷಣಗಳ ಬಗ್ಗೆ ನಿಮಗೆ ತಿಳಿದಿರಬಹುದು. ಅವೇ ಧ್ವಜಗಳು ಮತ್ತು ಚಿಂತನಾಕ್ರಮವನ್ನು ಹೊಂದಿರುವ ಪಕ್ಷಗಳು ಬಂಗಾಳವನ್ನು ಅಧೋಗತಿಗೆ ತಂದಿವೆ. ಅವು ಕೇರಳದಲ್ಲಿ ಅವರ ಸರಕಾರವನ್ನು ಹೊಂದಿದ್ದವು. ಇದಕ್ಕೆ ಮೊದಲು ದೇಶವನ್ನು 50-60 ವರ್ಷಗಳ ಕಾಲ ಆಳಿದವರು ಅಲ್ಲಿದ್ದಾರೆ. ಕೇರಳದಲ್ಲಿ ಎ.ಪಿ.ಎಂ.ಸಿ.ಗಳು, ಮಂಡಿಗಳು ಇಲ್ಲ. ತಮ್ಮನ್ನು ತಾವು ಛಾಯಾಚಿತ್ರಗಳಲ್ಲಿ ನೋಡುವುದರಲ್ಲಿ ತೊಡಗಿಕೊಂಡಿರುವ ಅವರನ್ನು ನಾನು ಕೇಳಲಿಚ್ಚಿಸುತ್ತೇನೆ, ಇಲ್ಲಿ ಹೋರಾಟ ಮಾಡುವವರು ಕೇರಳದಲ್ಲಿ ಎ.ಪಿ.ಎಂ.ಸಿ.ಗಾಗಿ ಯಾಕೆ ಹೋರಾಟ ಮಾಡುತ್ತಿಲ್ಲ. ನಿಮಗೆ ಪಂಜಾಬಿನ ರೈತರನ್ನು ಗೊಂದಲಗಳಲ್ಲಿ ಮುಳುಗಿಸಲು ಸಮಯವಿದೆ, ಆದರೆ ನೀವು ಕೇರಳದಲ್ಲಿ ಈ ವ್ಯವಸ್ಥೆಗಾಗಿ ಯಾಕೆ ಆಗ್ರಹಿಸುತ್ತಿಲ್ಲ. ಈ ವ್ಯವಸ್ಥೆ ಉತ್ತಮವಾಗಿದ್ದರೆ ಅದು ಕೇರಳದಲ್ಲಿ ಯಾಕೆ ಇರಬಾರದು?. ಈ ದ್ವಿಮುಖ ನೀತಿಯನ್ನು ನೀವ್ಯಾಕೆ ಅನುಸರಿಸುತ್ತಿದ್ದೀರಿ?. ಅವರು ಯಾವ ರೀತಿಯ ರಾಜಕೀಯ ಮಾಡುತ್ತಿದ್ದಾರೆ ಎಂದರೆ ಅಲ್ಲಿ ತರ್ಕವಾಗಲೀ ವಾಸ್ತವವಾಗಲೀ ಇಲ್ಲ. ಬರೇ ಸುಳ್ಳು ಆಪಾದನೆಗಳಿವೆ. ವದಂತಿಗಳನ್ನು ಹರಡುವುದು, ರೈತರನ್ನು ಗೊಂದಲಕ್ಕೆ ಹಾಕುವುದು ಇವರ ಕೆಲಸ. ಇದರಿಂದಾಗಿ ಕಲವೊಮ್ಮೆ ರೈತರು ತಪ್ಪು ದಾರಿಗೆ ಎಳೆಯಲ್ಪಡುತ್ತಿದ್ದಾರೆ.
ಸಹೋದರರೇ ಮತ್ತು ಸಹೋದರಿಯರೇ,
ಈ ಜನರು ಪ್ರಜಾಪ್ರಭುತ್ವದ ಯಾವುದೇ ಮಾನದಂಡಗಳನ್ನು ಅಂಗೀಕರಿಸಲು ತಯಾರಿಲ್ಲ. ಅವರು ಬರೇ ತಮ್ಮ ಲಾಭಗಳತ್ತ ಮತ್ತು ಸ್ವಾರ್ಥದತ್ತ ನೋಡುತ್ತಿದ್ದಾರೆ. ನಾನು ಹೇಳುತ್ತಿರುವುದು ರೈತರಿಗೆ ಸಂಬಂಧಿಸಿ ಅಲ್ಲ. ರೈತರ ಹೆಸರಿನಲ್ಲಿ ತಮ್ಮ ಧ್ವಜಗಳನ್ನು ಎತ್ತಿ ಹಿಡಿಯವವರು, ಮತ್ತು ಆಟ ಆಡುವವರು ಸತ್ಯವನ್ನು ಕೇಳಬೇಕು. ರೈತರನ್ನು ನಿಂದಿಸಿದವರು ಮತ್ತು ಅವಮಾನ ಮಾಡಿದವರು ಪರಾರಿಯಾಗುವಂತಿಲ್ಲ. ಸುದ್ದಿ ಪತ್ರಿಕೆಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಸ್ಥಳ ಕಂಡುಕೊಳ್ಳುವ ಮೂಲಕ ರಾಜಕೀಯ ರಂಗದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. ಆದರೆ ದೇಶದ ರೈತರು ಅವರನ್ನು ಗುರುತಿಸಿದ್ದಾರೆ ಮತ್ತು ಈ ಅಸ್ತಿತ್ವಕ್ಕಾಗಿ ಪರದಾಡುತ್ತಿರುವವರಿಗೆ ಅವರು ಆಶ್ರಯ ನೀಡಲಾರರು. ಅವರಿಗೆ ಪ್ರಜಾಪ್ರಭುತ್ವದಲ್ಲಿ ರಾಜಕಾರಣ ಮಾಡಲು ಹಕ್ಕಿದೆ. ನಾವದನ್ನು ವಿರೋಧಿಸುವುದಿಲ್ಲ. ಆದರೆ ಮುಗ್ಧ ರೈತರ ಬದುಕಿನಲ್ಲಿ ಆಟ ಆಡಬೇಡಿ, ಅವರ ಭವಿಷ್ಯದ ಜೊತೆ ಚೆಲ್ಲಾಟ ಆಡಬೇಡಿ. ಅವರನ್ನು ತಪ್ಪು ದಾರಿಗೆ ಎಳೆಯಬೇಡಿ. ಮತ್ತು ಅವರನ್ನು ಗೊಂದಲಕ್ಕೆ ಹಾಕಬೇಡಿ.
ಸ್ನೇಹಿತರೇ,
ಇವರೆಲ್ಲಾ ವರ್ಷಗಳ ಕಾಲ ಅಧಿಕಾರದಲ್ಲಿದ್ದವರು. ದೇಶದ ರೈತರು ಮತ್ತು ಕೃಷಿ ಅದರ ಸಾಮರ್ಥ್ಯಕ್ಕೆ ತಕ್ಕಂತೆ ಅಭಿವೃದ್ಧಿ ಸಾಧಿಸಲಿಲ್ಲ. ಇದಕ್ಕೆ ಕಾರಣ ಅವರ ನೀತಿಗಳು. ಬಹಳ ದೊಡ್ಡ ಭೂಮಿ ಹೊಂದಿರದ ರೈತರು ಮತ್ತು ಸಂಪನ್ಮೂಲಗಳಿಲ್ಲದ ರೈತರು ಈ ಮೊದಲಿನ ಸರಕಾರಗಳ ನೀತಿಯಿಂದಾಗಿ ಕಂಗೆಟ್ಟಿದ್ದರು. ಸಣ್ಣ ರೈತರಿಗೆ ಬ್ಯಾಂಕುಗಳಿಂದ ಸಾಲ ದೊರೆಯುತ್ತಿರಲಿಲ್ಲ. ಯಾಕೆಂದರೆ ಅವರು ಬ್ಯಾಂಕುಗಳಲ್ಲಿ ಖಾತೆಯನ್ನು ಹೊಂದಿರಲಿಲ್ಲ. ಈ ಮೊದಲೆಲ್ಲ ಬೆಳೆ ವಿಮಾ ಯೋಜನೆಯ ಪ್ರಯೋಜನ ಕೆಲವೇ ಕೆಲವು ರೈತರಿಗಷ್ಟೇ ಲಭಿಸುತ್ತಿತ್ತು. ಸಣ್ಣ ರೈತರಿಗೆ ತಮ್ಮ ಭೂಮಿಯನ್ನು ನೀರಾವರಿಗೆ ಒಳಪಡಿಸಲು ನೀರಾಗಲೀ, ವಿದ್ಯುತ್ತಾಗಲೀ ಲಭ್ಯ ಇರಲಿಲ್ಲ. ತನ್ನ ಬೆವರು, ರಕ್ತ ಹರಿಸಿ ತನ್ನ ಭೂಮಿಯಲ್ಲಿ ಬೆಳೆ ತೆಗೆಯುತ್ತಿದ್ದ ಬಡ ರೈತ ಅದನ್ನು ಮಾರಾಟ ಮಾಡಲು ಪರದಾಡುತ್ತಿದ್ದ. ಈ ಸಣ್ಣ ರೈತನ ಗೋಳನ್ನು ಕೇಳುವವರು ಯಾರೂ ಇರಲಿಲ್ಲ. ಮತ್ತು ಇಂದು, ನಾನು ದೇಶವಾಸಿಗಳಿಗೆ ನೆನಪು ಮಾಡಲು ಇಚ್ಚಿಸುತೇನೆ ದೇಶದಲ್ಲಿ ಇಂತಹ ಅನ್ಯಾಯಕ್ಕೆ ಒಳಗಾದ ರೈತರ ಸಂಖ್ಯೆ ಸಣ್ಣದೇನಲ್ಲ. ಅವರು ಶೇಖಡಾ 80 ಕ್ಕಿಂತ ಹೆಚ್ಚು ಇದ್ದಾರೆ ಮತ್ತು ಸಂಖ್ಯೆ ಸುಮಾರು 10 ಕೋಟಿಯಷ್ಟಿದೆ. ಹಲವಾರು ವರ್ಷಗಳ ಕಾಲ ಅಧಿಕಾರದಲ್ಲಿದ್ದರಲ್ಲ, ಸರಕಾರ ರಚಿಸಿದ್ದರಲ್ಲ, ವರದಿಗಳು ಬರುತ್ತಲೇ ಇದ್ದವಲ್ಲ, ಆಯೋಗಗಳು ರಚನೆಯಾಗುತ್ತಲೇ ಇದ್ದವಲ್ಲ, ಅವರು ಭರವಸೆಗಳನ್ನು ನೀಡುತ್ತಿದ್ದರು ಮತ್ತು ಅವುಗಳನ್ನು ಮರೆತುಬಿಡಲಾಗುತ್ತಿತ್ತು. ಈ ಸಂಗತಿಗಳೂ ಘಟಿಸಿವೆ. ಆದರೆ ರೈತರ ಸ್ಥಿತಿ ಗತಿ ಬದಲಾಗುತ್ತಿರಲಿಲ್ಲ. ಫಲಿತಾಂಶ ಏನು?. ಬಡ ರೈತರು ಬಡವರಾಗುತ್ತಲೇ ಬಂದರು. ದೇಶದಲ್ಲಿ ಈ ಪರಿಸ್ಥಿತಿ ಬದಲಾಗುವುದು ಅಗತ್ಯವಿರಲಿಲ್ಲವೇ?.
ನನ್ನ ರೈತ ಸಹೋದರರೇ ಮತ್ತು ಸಹೋದರಿಯರೇ,
2014ರಲ್ಲಿ ನಾವು ಅಧಿಕಾರಕ್ಕೆ ಬಂದ ಬಳಿಕ ಹೊಸ ಧೋರಣೆಯೊಂದಿಗೆ ಕೆಲಸ ಮಾಡಲು ಆರಂಭ ಮಾಡಿದೆವು. ನಾವು ದೇಶದ ರೈತರ ಸಣ್ಣ ಕಷ್ಟಗಳ ಬಗ್ಗೆ ಗಮನ ನೀಡಿದೆವು. ಮತ್ತು ಅದೇ ಕಾಲಕ್ಕೆ ಅವರ ಭವಿಷ್ಯದ ಅಗತ್ಯಗಳಿಗಾಗಿ ಅವರನ್ನು ಸಿದ್ದಪಡಿಸಲು ಕೃಷಿ ಆಧುನೀಕರಣದ ನಿಟ್ಟಿನಲ್ಲಿಯೂ ಕಾರ್ಯಪ್ರವೃತ್ತರಾದೆವು. ದೇಶದಲ್ಲಿ ಕೃಷಿ ಆಧುನೀಕರಣಗೊಂಡಿದೆ ಮತ್ತು ರೈತರು ಸಂಪದ್ಭರಿತರಾಗಿದ್ದಾರೆ ಎಂಬುದನ್ನು ಕೇಳಲು ಆಶಿಸುತ್ತೇವೆ. ನಾವು ಆಗಾಗ ಇಸ್ರೇಲಿನ ಉದಾಹರಣೆಯನ್ನು ಕೇಳುತ್ತೇವೆ. ನಾವು ಈ ಎಲ್ಲಾ ಸಂಗತಿಗಳನ್ನು ಆಳವಾಗಿ ಅಧ್ಯಯನ ಮಾಡಿದೆವು. ವಿಶ್ವದಾದ್ಯಂತ ನಡೆಯುತ್ತಿರುವ ಕೃಷಿ ಕ್ರಾಂತಿಯನ್ನೂ ಅಧ್ಯಯನ ಮಾಡಿದೆವು. ಆಗಿರುವ ಬದಲಾವಣೆಗಳು, ಹೊಸ ಉಪಕ್ರಮಗಳು, ಆರ್ಥಿಕತೆಯೊಂದಿಗೆ ಜೋಡಿಸಲ್ಪಟ್ಟ ಸಂಗತಿಗಳೇನು ಎಂಬುದನ್ನು ಅರಿತುಕೊಂಡೆವು. ಆಮೇಲೆ ನಾವು ಪ್ರತ್ಯೇಕ ಗುರಿಗಳನ್ನು ನಿಗದಿ ಮಾಡಿಕೊಂಡೆವು ಹಾಗು ಎಲ್ಲ ನಿಟ್ಟಿನಲ್ಲಿಯೂ ಏಕ ಕಾಲಕ್ಕೆ ಕಾರ್ಯಪ್ರವೃತ್ತರಾದೆವು. ಕೃಷಿಯ ಮೇಲೆ ದೇಶದ ರೈತರ ಖರ್ಚು ಕಡಿಮೆಯಾಗಬೇಕು ಎಂಬ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾದೆವು. ಒಳಸುರಿ ಖರ್ಚು ಕಡಿಮೆಯಾಗಬೇಕು, ಮತ್ತು ರೈತರ ಒಟ್ಟು ಖರ್ಚು ಕಡಿಮೆಯಾಗಬೇಕು ಎಂಬುದು ನಮ್ಮ ಇರಾದೆಯಾಗಿತ್ತು. ಮಣ್ಣು ಆರೋಗ್ಯ ಕಾರ್ಡ್, ಯೂರಿಯಾಕ್ಕೆ ಬೇವಿನ ಲೇಪನ, ಅವರ ಒಳಸುರಿ ಖರ್ಚುಗಳನ್ನು ಕಡಿಮೆ ಮಾಡಲು ಒಂದರ ಹಿಂದೆ ಒಂದರಂತೆ ಲಕ್ಷಾಂತರ ಸೌರ ಪಂಪುಗಳ ಸ್ಥಾಪನೆಗಳನ್ನು ಕೈಗೆತ್ತಿಕೊಂಡೆವು. ನಮ್ಮ ಸರಕಾರ ಪ್ರಯತ್ನಗಳನ್ನು ಮಾಡಿದ್ದರಿಂದ ರೈತರಿಗೆ ಉತ್ತಮ ಬೆಳೆ ವಿಮಾ ವ್ಯಾಪ್ತಿ ಲಭ್ಯವಾಗಿದೆ. ಇಂದು, ದೇಶದ ಕೋಟ್ಯಾಂತರ ರೈತರು ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.
ಮತ್ತು ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ,
ಈಗ, ನಾನು ರೈತ ಸಹೋದರರ ಜೊತೆ ಮಾತನಾಡುವಾಗ, ನಮ್ಮ ಮಹಾರಾಷ್ಟ್ರದ ಲಾಥೂರ್ ಜಿಲ್ಲೆಯ ಗಣೇಶ್ ಜೀ ನನಗೆ ಹೇಳಿದರು ಪ್ರೀಮಿಯಂ 2,500 ರೂ . ಪಾವತಿಸಿದ್ದರಿಂದ ಅವರಿಗೆ ಸುಮಾರು 54,000 ರೂ. ಲಭಿಸಿದೆ ಎಂದು. ಸಾಂಕೇತಿಕ ಪ್ರೀಮಿಯಂ ಪಾವತಿಸಿದ್ದಕ್ಕೆ ಬದಲಾಗಿ ಕಳೆದ ಒಂದು ವರ್ಷದಲ್ಲಿ ರೈತರು 87,000 ಕೋ. ರೂ. ಕ್ಲೇಮ್ ಮೊತ್ತ ಪಡೆದಿದ್ದಾರೆ. ಇದು ಸುಮಾರು 90,000 ಕೋ.ರೂ. ಗಳು. ರೈತರು ಸಣ್ಣ ಮೊತ್ತವನ್ನು ಪಾವತಿ ಮಾಡುತ್ತಾರೆ ಮತ್ತು ಈ ಬೆಳೆ ವಿಮೆ ಸಂಕಷ್ಟದ ಸಂದರ್ಭದಲ್ಲಿ ಅವರ ರಕ್ಷಣೆಗೆ ಬರುತ್ತದೆ. ದೇಶದ ರೈತರಿಗೆ ಸಾಕಷ್ಟು ನೀರಾವರಿ ಸಔಲಭ್ಯ ಇರಬೇಕು ಎಂಬ ನಿಟ್ಟಿನಲ್ಲಿ ನಾವು ಕಾರ್ಯನಿರತರಾಗಿದ್ದೇವೆ. ದೇಶಾದ್ಯಂತ ಹನಿ ನೀರಿಗೆ ಹೆಚ್ಚು ಬೆಳೆ ಎಂಬ ಮಂತ್ರವನ್ನು ಪ್ರಚುರಪಡಿಸಿ ಕಿರು ನೀರಾವರಿಗೆ ಉತ್ತೇಜನ ನೀಡುತ್ತಿದ್ದೇವೆ. ದಶಕಗಳಷ್ಟು ಹಳೆಯ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿದ್ದೇವೆ. ಮತ್ತು ತಮಿಳುನಾಡಿನ ನಮ್ಮ ಸುಬ್ರಮಣ್ಯಂ ಜೀ ನನಗೆ ಹೇಳುತ್ತಿದ್ದರು ಅವರು ಮೊದಲು ಒಂದು ಎಕರೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಹನಿ ನೀರಾವರಿ ಬಂದ ಮೇಲೆ ಅದು ಮೂರು ಎಕರೆಗೆ ವಿಸ್ತರಿಸಿದೆ ಮತ್ತು ಅವರು ಹಿಂದಿಗಿಂತ ಹೆಚ್ಚುವರಿಯಾಗಿ 1 ಲಕ್ಷ ರೂ. ಗಳಿಸುತ್ತಿದ್ದಾರೆ ಎಂಬುದಾಗಿ. ಇದು ನನಗೆ ಸಂತೋಷದ ಸಂಗತಿ.
ಸ್ನೇಹಿತರೇ,
ದೇಶದ ರೈತರು ತಮ್ಮ ಬೆಳೆಗಳಿಗೆ ನ್ಯಾಯೋಚಿತ ದರ ಪಡೆಯುವಂತೆ ಮಾಡಲು ನಮ್ಮ ಸರಕಾರ ಯತ್ನಿಸುತ್ತಿದೆ. ನಾವು ಸ್ವಾಮಿನಾಥನ್ ಸಮಿತಿಯ ವರದಿಯ ಪ್ರಕಾರ ಕೃಷಿಕರಿಗೆ ವೆಚ್ಚದ ಒಂದೂವರೆ ಪಟ್ಟು ದರವನ್ನು ನೀಡುತ್ತಿದ್ದೇವೆ. ಕೆಲವೇ ಕೆಲವು ಬೆಳೆಗಳಿಗೆ ಎಂ.ಎಸ್.ಪಿ. ಇತ್ತು, ನಾವು ಬೆಳೆಗಳ ಸಂಖ್ಯೆಯನ್ನು ಹೆಚ್ಚಿಸಿದೆವು. ಮೊದಲು ಎಂ.ಎಸ್.ಪಿ.ಯನ್ನು ಸುದ್ದಿ ಪತ್ರಿಕೆಗಳಲ್ಲಿ ಸಣ್ಣ ಸುದ್ದಿಯ ಮೂಲಕ ಪ್ರಕಟಿಸಲಾಗುತ್ತಿತ್ತು. ಇದರ ಪರಿಣಾಮವಾಗಿ ಎಂ.ಎಸ್.ಪಿ. ರೈತರಿಗೆ ತಲುಪುತ್ತಿರಲಿಲ್ಲ. ಅಲ್ಲಿ ಮಾಪಕಗಳು ಇರಲಿಲ್ಲ. ಮತ್ತು ಅದರಿಂದಾಗಿ ರೈತರ ಜೀವನದಲ್ಲಿ ಬದಲಾವಣೆಗಳು ಇರಲಿಲ್ಲ. ಇಂದು ಸರಕಾರ ದಾಖಲೆ ಪ್ರಮಾಣದಲ್ಲಿ ಎಂ.ಎಸ್.ಪಿ. ಮೂಲಕ ಖರೀದಿ ಮಾಡುತ್ತಿದೆ ಮತ್ತು ದಾಖಲೆ ಪ್ರಮಾಣದಲ್ಲಿ ಹಣಕಾಸು ರೈತರ ಕಿಸೆ ಸೇರುತ್ತಿದೆ. ಇಂದು ರೈತರ ಹೆಸರಿನಲ್ಲಿ ಚಳವಳಿ ಮಾಡುತ್ತಿರುವವರು ಅವರ ಆಡಳಿತದಲ್ಲಿ ಸುಮ್ಮನೆ ಕುಳಿತಿದ್ದರು. ಈ ಎಲ್ಲಾ ಜನರು, ಈ ಚಳವಳಿಯ ಹಿಂದೆ ಇರುವವರು, ಸರಕಾರದ ಭಾಗವಾಗಿದ್ದರು ಮತ್ತು ವರ್ಷಗಳ ಕಾಲ ಸ್ವಾಮಿನಾಥನ್ ವರದಿಯನ್ನು ಮೂಲೆಗೆ ಹಾಕಿ ಕುಳಿತಿದ್ದರು. ರೈತರ ಜೀವನವನ್ನು ಉತ್ತಮಗೊಳಿಸಬೇಕು ಎಂಬ ಕಾರಣದಿಂದ ನಾವು ಆ ವರದಿಯನ್ನು ಹುಡುಕಿ ತೆಗೆದೆವು. ಇದು ನಮ್ಮ ಜೀವನದ ಮಂತ್ರ ಮತ್ತು ಆದುದರಿಂದಾಗಿ ನಾವದನ್ನು ಮಾಡುತ್ತಿದ್ದೇವೆ.
ಸ್ನೇಹಿತರೇ,
ರೈತರು ಒಂದೇ ಮಂಡಿಯನ್ನು ಅವಲಂಬಿಸದಂತೆ ಮಾಡುವ ನಿಟ್ಟಿನಲ್ಲಿ ಮತ್ತು ಆತನಿಗೆ ತನ್ನ ಬೆಳೆಯನ್ನು ಮಾರಾಟ ಮಾಡಲು ಬೇರೆ ಆಯ್ಕೆಗಳನ್ನು ಒದಗಿಸಬೇಕು ಎಂಬ ನಿಟ್ಟಿನಲ್ಲಿ ಕೂಡಾ ನಾವು ಕಾರ್ಯೋನ್ಮುಖರಾಗಿದ್ದೇವೆ. ನಾವು ದೇಶದಲ್ಲಿಯ 1,000 ಕ್ಕೂ ಅಧಿಕ ಕೃಷಿ ಮಾರುಕಟ್ಟೆಗಳನ್ನು ಆನ್ ಲೈನ್ ಗೆ ಜೋಡಿಸಿದ್ದೇವೆ. ಇದರ ಮೂಲಕ ರೈತರು ಒಂದು ಲಕ್ಷ ಕೋ.ರೂ.ಗಳ ವ್ಯವಹಾರ ನಡೆಸಿದ್ದಾರೆ. ರೈತರು ಆನ್ ಲೈನ್ ಮೂಲಕ ವ್ಯಾಪಾರ ಮಾಡಲು ಆರಂಭಿಸಿದ್ದಾರೆ.
ಸ್ನೇಹಿತರೇ,
ರೈತರು ತಮ್ಮ ತಮ್ಮ ಸ್ಥಳೀಯ ಪ್ರದೇಶಗಳಲ್ಲಿ ಸಾಮೂಹಿಕ ಶಕ್ತಿಯಾಗಿ ಕೆಲಸ ಮಾಡುವಂತಾಗಲು ಸಣ್ಣ ಸಣ್ಣ ರೈತ ಗುಂಪುಗಳನ್ನು ರಚಿಸುವ ಇನ್ನೊಂದು ಗುರಿ ಇಟ್ಟುಕೊಂಡು ನಾವು ಕಾರ್ಯನಿರತರಾಗಿದ್ದೇವೆ. 10,000 ರೈತ ಉತ್ಪಾದಕ ಸಂಘಟನೆ (ಎಫ್.ಪಿ.ಒ.) ಗಳನ್ನು ರಚಿಸುವ ಆಂದೋಲನ ಚಾಲ್ತಿಯಲ್ಲಿದೆ ಮತ್ತು ಅವುಗಳಿಗೆ ಹಣಕಾಸು ಸಹಾಯ ಒದಗಿಸಲಾಗುತ್ತಿದೆ. ನಾವು ಮಹಾರಾಜ್ ಗಂಜ್ ನ ರಾಂಗುಲಾಬ್ ಜೀ ಅವರು ರಚಿಸಿರುವ 300 ರೈತರ ಗುಂಪನ್ನು ಗಮನಿಸುತ್ತಿದ್ದೇವೆ ಮತ್ತು ಅವರು ಈ ಹಿಂದಿನದಕ್ಕಿಂತ ಒಂದೂವರೆ ಪಟ್ಟು ಅಧಿಕ ದರದಲ್ಲಿ ಉತ್ಪಾದನೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಅವರು ಎಫ್.ಪಿ.ಒ.ರಚಿಸಿದ್ದಾರೆ, ಕೃಷಿಯಲ್ಲಿ ವೈಜ್ಞಾನಿಕ ಸಹಾಯ ಪಡೆದುಕೊಂಡಿದ್ದಾರೆ ಮತ್ತು ಅವರಿಂದು ಲಾಭ ಪಡೆಯುತ್ತಿದ್ದಾರೆ.
ಸ್ನೇಹಿತರೇ,
ನಮ್ಮ ಕೃಷಿ ವಲಯದ ಅತ್ಯಂತ ದೊಡ್ಡ ಆವಶ್ಯಕತೆ ಎಂದರೆ ಹಳ್ಳಿಗಳ ಬಳಿಯಲ್ಲಿ ದಾಸ್ತಾನುಗಾರಗಳ ಸವಲತ್ತು ಮತ್ತು ಕಡಿಮೆ ದರದಲ್ಲಿ ನಮ್ಮ ರೈತರಿಗೆ ಶೀತಲೀಕೃತ ದಾಸ್ತಾನಿನ ಆಧುನಿಕ ಸವಲತ್ತುಗಳ ಲಭ್ಯತೆ. ನಮ್ಮ ಸರಕಾರ ಇದಕ್ಕೆ ಆದ್ಯತೆ ನೀಡಿದೆ. ಇಂದು ಸರಕಾರ ಕೋಟ್ಯಾಂತರ ರೂಪಾಯಿಗಳನ್ನು ದೇಶಾದ್ಯಂತ ಶೀತಲೀಕೃತ ದಾಸ್ತಾನುಗಾರಗಳ ಸರಪಳಿಯನ್ನು ಅಭಿವೃದ್ಧಿಪಡಿಸಲು ಹೂಡಿಕೆ ಮಾಡುತ್ತಿದೆ. ಬೆಳೆ ಬೆಳೆಯುವುದರ ಜೊತೆಗೆ ರೈತರಿಗೆ ಆದಾಯವನ್ನು ಹೆಚ್ಚಿಸಿಕೊಳ್ಳಲು ಇತರ ಅವಕಾಶಗಳು ಲಭ್ಯ ಇರಬೇಕು ಎಂಬುದನ್ನು ನಮ್ಮ ನೀತಿಗಳು ಒತ್ತಿ ಹೇಳುತ್ತವೆ. ನಮ್ಮ ಸರಕಾರ ಮೀನುಗಾರಿಕೆ, ಪಶುಪಾಲನೆ, ಡೈರಿ, ಮತ್ತು ಜೇನು ಸಾಕಾಣಿಕೆಯನ್ನು ಉತ್ತೇಜಿಸುತ್ತಿದೆ. ದೇಶದ ಬ್ಯಾಂಕುಗಳ ಹಣ ರೈತರ ಸಹಾಯಕ್ಕೆ ಲಭ್ಯವಾಗುವುದನ್ನೂ ನಮ್ಮ ಸರಕಾರ ಖಾತ್ರಿಪಡಿಸಿದೆ. 2014 ರಲ್ಲಿ , ನಾವು ಮೊದಲ ಬಾರಿಗೆ ಸರಕಾರ ರಚಿಸಿದಾಗ ರೈತರ ಸಾಲಕ್ಕೆ 700,000 ಕೋ.ರೂ.ಗಳ ಲಭ್ಯತೆ ಇತ್ತು, ಅದೀಗ ದುಪ್ಪಟ್ಟಾಗಿ 14,00,000 ಕೋ.ರೂ.ಗಳಿಗೇರಿದೆ. ಕಳೆದ ಕೆಲವು ತಿಂಗಳಲ್ಲಿ, ಸುಮಾರು 2.5 ಕೋಟಿ ಸಣ್ಣ ರೈತರನ್ನು ರೈತರ ಕ್ರೆಡಿಟ್ ಕಾರ್ಡ್ ಗಳ ಮೂಲಕ ಜೋಡಿಸಲಾಗಿದೆ ಮತ್ತು ಈ ಆಂದೋಲನ ವೇಗದಿಂದ ಮುಂದೆ ಸಾಗುತ್ತಿದೆ. ನಾವು ರೈತರ ಕ್ರೆಡಿಟ್ ಕಾರ್ಡ್ ಗಳ ಪ್ರಯೋಜನಗಳನ್ನು ಮೀನುಗಾರರು ಮತ್ತು ಪಶುಪಾಲಕರಿಗೂ ನೀಡುತ್ತಿದ್ದೇವೆ.
ಸ್ನೇಹಿತರೇ,
ವಿಶ್ವದಲ್ಲಿ ಚಾಲ್ತಿಯಲ್ಲಿರುವ ಕೃಷಿ ಪದ್ಧತಿಗಳ ಬಗ್ಗೆಯೂ ನಾವು ಅಧ್ಯಯನ ನಡೆಸಿದ್ದೇವೆ ಮತ್ತು ದೇಶದಲ್ಲಿ ಆಧುನಿಕ ಕೃಷಿ ಸಂಸ್ಥೆಗಳನ್ನು ಹೊಂದುವ ಗುರಿಯ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಕಳೆದ ಕೆಲವು ವರ್ಷಗಳಿಂದ ಹಲವು ಹೊಸ ಕೃಷಿ ಸಂಸ್ಥೆಗಳನ್ನು ದೇಶದಲ್ಲಿ ಸ್ಥಾಪಿಸಲಾಗಿದೆ ಮತ್ತು ಕೃಷಿ ಶಿಕ್ಷಣ ಸೀಟುಗಳನ್ನು ಹೆಚ್ಚಿಸಲಾಗಿದೆ.
ಮತ್ತು ಸ್ನೇಹಿತರೇ,
ಈ ಎಲ್ಲಾ ಕೃಷಿ ಸಂಬಂಧಿ ಪ್ರಯತ್ನಗಳ ಜೊತೆ, ನಾವು ಹಳ್ಳಿಗಳಲ್ಲಿ ಬದುಕುತ್ತಿರುವ ರೈತರ ಬದುಕನ್ನು ಸುಲಭಗೊಳಿಸುವ ಇನ್ನೊಂದು ದೊಡ್ಡ ಗುರಿಯನ್ನೂ ನಿಗದಿ ಮಾಡಿಕೊಂಡು ಕಾರ್ಯನಿರ್ವಹಿಸಿದ್ದೇವೆ.
ಸ್ನೇಹಿತರೇ,
ದೇಶದ ರೈತರಿಗೆ ಅವರು ಅಧಿಕಾರದಲ್ಲಿದ್ದಾಗ, ರೈತರ ಕುಂದು ಕೊರತೆ, ಸಮಸ್ಯೆಗಳನ್ನು ನಿವಾರಣೆ ಮಾಡಲು ಏನು ಮಾಡಿದ್ದಾರೆ ಮತ್ತು ಇಂದು ರೈತರ ಕುರಿತಾಗಿ ಕಣ್ಣೀರು ಸುರಿಸುತ್ತಿರುವವರು, ರೈತರ ಪರವಾಗಿ ದೊಡ್ಡ ದೊಡ್ಡ ಹೇಳಿಕೆಗಳನ್ನು ಕೊಡುತ್ತಿರುವವರು, ದೊಡ್ಡದಾಗಿ ದುಃಖವನ್ನು ವ್ಯಕ್ತಪಡಿಸುವವರು ಏನು ಮಾಡಿದ್ದಾರೆ. ಕೃಷಿ ಮಾತ್ರವಲ್ಲ, ನಮ್ಮ ಸರಕಾರ ರೈತರ ಬದುಕನ್ನು ಸುಲಭ ಮಾಡಲು ಅವರ ಮನೆ ಬಾಗಿಲನ್ನು ತಲುಪಿದೆ. ಇಂದು ದೇಶದ ಸಣ್ಣ ಮತ್ತು ಮಧ್ಯಮ ರೈತರು ಅವರ ಪಕ್ಕಾ ಮನೆಗಳನ್ನು ಪಡೆಯುತ್ತಿದ್ದಾರೆ. ಶೌಚಾಲಯ ಮತ್ತು ಶುದ್ದ ಕೊಳವೆ ನೀರನ್ನು ಪಡೆಯುತ್ತಿದ್ದಾರೆ. ಉಚಿತ ವಿದ್ಯುತ್ ಮತ್ತು ಅನಿಲ ಸಂಪರ್ಕದಿಂದ ರೈತರಿಗೆ ಬಹಳಷ್ಟು ಪ್ರಯೋಜನ, ಲಾಭಗಳಾಗಿವೆ. ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ 5 ಲಕ್ಷ ರೂ. ಗಳವರೆಗೆ ಉಚಿತ ಚಿಕಿತ್ಸೆಯ ಅವಕಾಶ ನನ್ನ ಸಣ್ಣ ರೈತರ ಜೀವನದ ಬಹಳ ದೊಡ್ಡ ಚಿಂತೆಯನ್ನು ಕಡಿಮೆ ಮಾಡಿದೆ. ಒಂದು ಕಪ್ ಚಹಾಕ್ಕಿಂತ ಕಡಿಮೆ ದರದಲ್ಲಿ, ದಿನಕ್ಕೆ 90 ಪೈಸೆ ಪ್ರೀಮಿಯಂನಲ್ಲಿ ವಿಮೆ ಮತ್ತು ತಿಂಗಳಿಗೆ ಒಂದು ರೂಪಾಯಿ ನನ್ನ ರೈತರ ಬದುಕಿನಲ್ಲಿ ದೊಡ್ಡ ಶಕ್ತಿಯಾಗಿದೆ. 60 ವರ್ಷದ ಬಳಿಕ ತಿಂಗಳಿಗೆ 3,000 ರೂಪಾಯಿಗಳ ಪೆನ್ಷನ್ ಕೂಡಾ ಇಂದು ರೈತರಿಗೆ ಲಭ್ಯವಿದೆ.
ಸ್ನೇಹಿತರೇ,
ಈಗಿನ ದಿನಮಾನಗಳಲ್ಲಿ ಕೆಲವು ಜನರು ರೈತರ ಭೂಮಿಯ ಬಗ್ಗೆ ಚಿಂತಿತರಾಗಿರುವಂತೆ ನಟಿಸುತ್ತಿದ್ದಾರೆ. ರೈತರ ಭೂಮಿ ಕಬಳಿಸಿದ ಹೆಸರುಗಳ ಬಗ್ಗೆ ನಮಗೆ ತಿಳಿದಿದೆ. ಮತ್ತು ಅವರ ಹೆಸರು ವೃತ್ತ ಪತ್ರಿಕೆಗಳಲ್ಲಿ ಆಗಾಗ ತೋರಿಸಲಾಗುತ್ತಿದೆ. ರೈತರ ಮನೆಗಳು ಮತ್ತು ಭೂಮಿಯನ್ನು ಅಕ್ರಮವಾಗಿ ಮಾಲಕತ್ವದ ದಾಖಲೆಗಳಿಲ್ಲದ ಸಂದರ್ಭದಲ್ಲಿ ಅತಿಕ್ರಮಿಸಿಕೊಳ್ಳುತ್ತಿದ್ದಾಗ ಇವರೆಲ್ಲಿ ಹೋಗಿದ್ದರು?. ಸಣ್ಣ ಮತ್ತು ಮಧ್ಯಮ ವರ್ಗದ ರೈತರನ್ನು ಮತ್ತು ಕೃಷಿ ಕಾರ್ಮಿಕರನ್ನು ಈ ಹಲವಾರು ವರ್ಷಗಳ ಕಾಲ ಈ ಹಕ್ಕಿನಿಂದ ವಂಚಿಸಿದವರು ಯಾರು?. ಈ ಜನರಲ್ಲಿ ಉತ್ತರ ಇಲ್ಲ. ಇದನ್ನು ಇಂದು ಗ್ರಾಮಗಳಲ್ಲಿ ವಾಸಿಸುತ್ತಿರುವ ನಮ್ಮ ಸಹೋದರರು ಮತ್ತು ಸಹೋದರಿಯರಿಗಾಗಿ ಮಾಡಲಾಗುತ್ತಿದೆ. ಈಗ, ಹಳ್ಳಿಗಳಲ್ಲಿರುವ ರೈತರಿಗೆ ಅವರ ಮನೆಗಳು, ಭೂಮಿಯ ನಕ್ಷೆ, ಮತ್ತು ಕಾನೂನು ದಾಖಲೆಗಳನ್ನು ನೀಡಲಾಗುತ್ತಿದೆ. ತಂತ್ರಜ್ಞಾನದ ಸಹಾಯದಿಂದ ಹಳ್ಳಿಗಳಲ್ಲಿಯ ರೈತರು ಬ್ಯಾಂಕುಗಳಿಂದ ತಮ್ಮ ಭೂಮಿ ಮತ್ತು ಮನೆಗಳ ಮೇಲೆ ಸ್ವಾಮಿತ್ವ ಯೋಜನೆಯಿಂದಾಗಿ ಸಾಲ ಪಡೆಯಬಹುದಾಗಿದೆ.
ಸ್ನೇಹಿತರೇ,
ಬದಲಾದ ಕಾಲದಲ್ಲಿ ತನ್ನ ಧೋರಣೆಗಳನ್ನು ವಿಸ್ತರಿಸಿಕೊಳ್ಳುವುದು ಅಷ್ಟೇ ಮುಖ್ಯ. ನಾವು 21 ನೇ ಶತಮಾನದಲ್ಲಿ ಭಾರತದ ಕೃಷಿಯನ್ನು ಆಧುನೀಕರಣಗೊಳಿಸಬೇಕು. ಮತ್ತು ದೇಶದ ಕೋಟ್ಯಾಂತರ ಮಂದಿ ರೈತರು ಈ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಮತ್ತು ಸರಕಾರ ಕೂಡಾ ಅವರೊಂದಿಗೆ ಮುಂದಡಿ ಇಡಲು ಬದ್ಧವಾಗಿದೆ. ಇಂದು ಪ್ರತಿಯೊಬ್ಬ ರೈತನಿಗೂ ಗೊತ್ತಿದೆ– ತನ್ನ ಉತ್ಪನ್ನಕ್ಕೆ ಉತ್ತಮ ಬೆಲೆ ಎಲ್ಲಿ ಸಿಗುತ್ತದೆ ಎಂಬುದು. ಈ ಮೊದಲು ಏನಾಗುತ್ತಿತ್ತೆಂದರೆ, ರೈತರಿಗೆ ಮಂಡಿಯಲ್ಲಿ ಉತ್ತಮ ಬೆಲೆ ಸಿಗದಿದ್ದರೆ ಅಥವಾ ಕಳಪೆ ಗುಣಮಟ್ಟವೆಂದು ಆತನ ಉತ್ಪನ್ನ ತಿರಸ್ಕರಿಸಲ್ಪಟ್ಟರೆ, ಆಗ ಆತ ತನ್ನ ಉತ್ಪನ್ನವನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದಂತಹ ಸ್ಥಿತಿಗೆ ಸಿಕ್ಕಿ ಬೀಳುತ್ತಿದ್ದ. ನಾವು ಈ ಕೃಷಿ ಸುಧಾರಣೆಗಳ ಮೂಲಕ ರೈತರಿಗೆ ಉತ್ತಮ ಅವಕಾಶಗಳನ್ನು ಒದಗಿಸಿಕೊಟ್ಟಿದ್ದೇವೆ. ಈ ಕಾನೂನುಗಳ ಬಳಿಕ, ನೀವು ನಿಮ್ಮ ಉತ್ಪನ್ನಗಳನ್ನು ನಿಮಗೆ ಇಷ್ಟವಿದ್ದಲ್ಲಿ, ಯಾರಿಗೆ ಬೇಕಾದರೂ ನಿಮ್ಮ ಆಶಯದಂತೆ ಮಾರಾಟ ಮಾಡಬಹುದು.
ನನ್ನ ರೈತ ಸಹೋದರರೇ ಮತ್ತು ಸಹೋದರಿಯರೇ,
ನನ್ನ ಈ ಮಾತುಗಳನ್ನು ಲಕ್ಷ್ಯವಿಟ್ಟು ಕೇಳಿ. ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ ಏನೆಂದರೆ ನೀವು ನಿಮ್ಮ ಬೆಳೆಯನ್ನು ನಿಮ್ಮ ನಿರ್ಧಾರ ಪ್ರಕಾರ ನಿಮಗೆ ಇಚ್ಚೆ ಬಂದಲ್ಲಿ ಮಾರಾಟ ಮಾಡಬಹುದು. ನೀವು ಉತ್ಪನ್ನಗಳನ್ನು ನಿಮಗೆ ಸರಿಯಾದ ಬೆಲೆ ದೊರೆಯುವಲ್ಲಿ ಮಾರಾಟ ಮಾಡಬಹುದು. ನೀವು ನಿಮ್ಮ ಉತ್ಪನ್ನವನ್ನು ಎಂ.ಎಸ್.ಪಿ.ಯಲ್ಲಿ ಮಾರಾಟ ಮಾಡುತ್ತೀರೋ?, ನೀವು ಮಾರಾಟ ಮಾಡಬಹುದು. ನಿಮ್ಮ ಉತ್ಪನ್ನವನ್ನು ಮಂಡಿಯಲ್ಲಿ ಮಾರಾಟ ಮಾಡುತೀರೋ?, ನೀವು ಮಾರಾಟ ಮಾಡಬಹುದು. ನೀವು ಉತ್ಪನ್ನವನ್ನು ರಫ್ತು ಮಾಡಲು ಇಚ್ಛಿಸುತ್ತೀರೋ?, ನೀವು ರಫ್ತು ಮಾಡಬಹುದು. ಬೇರೆ ರಾಜ್ಯದಲ್ಲಿ ಮಾರಾಟ ಮಾಡಲು ಬಯಸುತ್ತೀರೋ?, ನೀವು ಮಾರಾಟ ಮಾಡಬಹುದು. ಇಡೀ ಗ್ರಾಮದ ಉತ್ಪನ್ನಗಳನ್ನು ಎಫ್.ಪಿ.ಒ.ಗಳ ಮೂಲಕ ಮಾರಾಟ ಮಾಡುತ್ತೀರೋ?, ನೀವು ಮಾರಾಟ ಮಾಡಬಹುದು. ನೀವು ಬಿಸ್ಕತ್ತು, ಚಿಪ್ಸ್, ಜಾಮ್ ಮತ್ತು ಇತರ ಗ್ರಾಹಕ ಉತ್ಪನ್ನಗಳ ಮೌಲ್ಯವರ್ಧಿತ ಸರಪಳಿಯಲ್ಲಿ ಭಾಗವಾಗಲು ಇಚ್ಛಿಸುತ್ತೀರೋ?, ಅದನ್ನೂ ಮಾಡಬಹುದು. ದೇಶದ ರೈತರು ಬಹಳಷ್ಟು ಹಕ್ಕುಗಳನ್ನು ಪಡೆಯುತ್ತಿದ್ದರೆ, ಅದರಲ್ಲಿ ತಪ್ಪೇನಿದೆ?. ರೈತರು ತಮ್ಮ ಉತ್ಪಾದನೆಗಳನ್ನು ಆನ್ ಲೈನ್ ಮೂಲಕ ವರ್ಷಪೂರ್ತಿ ಮತ್ತು ಅವರಿಗಿಷ್ಟ ಬಂದಲ್ಲಿ ಮಾರಾಟ ಮಾಡಲು ಅವಕಾಶ ದೊರೆತರೆ ಅದರಲ್ಲೇನು ತಪ್ಪು?.
ಸ್ನೇಹಿತರೇ,
ಇಂದು, ನೂತನ ಕೃಷಿ ಸುಧಾರಣೆಗಳ ಬಗ್ಗೆ ಅಸಂಖ್ಯಾತ ಸುಳ್ಳುಗಳನ್ನು ಹೇಳಲಾಗುತ್ತಿದೆ. ಎಂ.ಎಸ್.ಪಿ.ಯನ್ನು ತೆಗೆದು ಹಾಕಲಾಗುತ್ತದೆ ಎಂಬ ಗೊಂದಲವನ್ನು ಕೆಲವರು ರೈತ ಸಮುದಾಯದಲ್ಲಿ ಹರಡುತ್ತಿದ್ದರೆ, ಇನ್ನು ಕೆಲವರು ಮಂಡಿಗಳನ್ನು ಮುಚ್ಚಲಾಗುತ್ತದೆ ಎಂಬ ಗಾಳಿ ಸುದ್ದಿಗಳನ್ನು ಹರಡುತ್ತಿದ್ದಾರೆ. ನಾನು ನಿಮಗೆ ಮತ್ತೆ ನೆನಪಿಸಲು ಇಚ್ಛಿಸುತ್ತೇನೆ, ಈ ಕಾನೂನುಗಳು ಅಂಗೀಕಾರವಾಗಿ ಹಲವು ತಿಂಗಳುಗಳು ಕಳೆದಿವೆ. ದೇಶದ ಯಾವುದಾದರೊಂದು ಭಾಗದಲ್ಲಿ ಮಂಡಿಗಳು ಮುಚ್ಚಲ್ಪಟ್ಟ ಒಂದೇ ಒಂದು ಸುದ್ದಿಯನ್ನು ನೀವೇನಾದರೂ ಕೇಳಿದ್ದೀರಾ?. ಎಂ.ಎಸ್.ಪಿ.ಗೆ ಸಂಬಂಧಿಸಿ, ಸರಕಾರ ಇತ್ತೀಚಿನ ದಿನಗಳಲ್ಲಿ ಹಲವು ಬೆಳೆಗಳ ಕನಿಷ್ಟ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಇದು ಕೃಷಿ ಸುಧಾರಣೆಗಳು ಜಾರಿಗೆ ಬಂದ ಬಳಿಕವೂ, ಹೊಸ ಕೃಷಿ ಕಾಯ್ದೆಗಳು ಅನುಷ್ಟಾನಗೊಂಡ ಬಳಿಕವೂ ಆಗಿದೆ. ರೈತರ ಹೆಸರಿನಲ್ಲಿ ನಡೆಯುತ್ತಿರುವ ಚಳವಳಿಯಲ್ಲಿ ಅನೇಕ ನೈಜ ಮತ್ತು ಮುಗ್ಧ ರೈತರು ಇದ್ದಾರೆ. ಕೆಲವು ರಾಜಕೀಯ ಮನೋಸ್ಥಿತಿಯ ನಾಯಕರನ್ನು ಹೊರತುಪಡಿಸಿದರೆ ಬಹುತೇಕರು ಉತ್ತಮ ಮತ್ತು ಮುಗ್ಧ ರೈತರು. ಅವರ ಬಳಿ ನೀವು ಎಷ್ಟು ಭೂಮಿಯನ್ನು ಹೊಂದಿದ್ದೀರಿ ಎಂದು ರಹಸ್ಯವಾಗಿ ಕೇಳಿದರೆ, ನೀವು ಏನು ಉತ್ಪಾದಿಸುತ್ತೀರಿ, ಈ ಬಾರಿ ನೀವು ಉತ್ಪನ್ನಗಳನ್ನು ಮಾರುತ್ತೀರೋ ಇಲ್ಲವೋ ? ಎಂದು ಕೇಳಿದರೆ, ಅವರು ನಿಮಗೆ ಹೇಳುತ್ತಾರೆ, ತಾನು ಉತ್ಪನ್ನವನ್ನು ಎಂ.ಎಸ್.ಪಿ.ಯಲ್ಲಿ ಮಾರಾಟ ಮಾಡಿದ್ದೇವೆ ಎಂದು. ಎಂ.ಎಸ್.ಪಿ.ಯಲ್ಲಿ ಖರೀದಿ ನಡೆಯುತ್ತಿರುವಾಗ ಅವರು ಆ ಚಳವಳಿಯನ್ನು ಮೌನವಾಗಿಸಿದರು, ಯಾಕೆಂದರೆ ಅವರಿಗೆ ಗೊತ್ತಿತ್ತು, ರೈತರು ಅವರ ಉತ್ಪನ್ನಗಳನ್ನು ಮಂಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬುದು. ಅದೆಲ್ಲಾ ಮಾರಾಟ ಮಾಡಿದ ಬಳಿಕ ಮತ್ತು ಕೆಲಸ ಪೂರ್ಣಗೊಳಿಸಿದ ಬಳಿಕ ಅವರು ಚಳವಳಿ ಆರಂಭ ಮಾಡಿದರು.
ಸ್ನೇಹಿತರೇ,
ವಸ್ತು ಸ್ಥಿತಿ ಏನೆಂದರೆ ಹೊಸ ಕಾನೂನುಗಳು ಜಾರಿಗೆ ಬಂದ ಬಳಿಕವೂ ಸರಕಾರ ಹೆಚ್ಚಳ ಮಾಡಿದ ಎಂ.ಎಸ್.ಪಿ.ಯಲ್ಲಿ ರೈತರ ಉತ್ಪನ್ನಗಳನ್ನು ಖರೀದಿ ಮಾಡಿದೆ. ಅದೂ ದಾಖಲೆ ಪ್ರಮಾಣದಲ್ಲಿ. ಮತ್ತು ಒಂದು ಬಹಳ ಪ್ರಮುಖವಾದ ಸಂಗತಿ ಎಂದರೆ, ಸರಕಾರ ಈ ಕೃಷಿ ಸುಧಾರಣೆಗಳ ಮೂಲಕ ತನ್ನ ಜವಾಬ್ದಾರಿಯನ್ನು ಹೆಚ್ಚಿಸಿಕೊಂಡಿದೆ!. ಉದಾಹರಣೆಗೆ ತೆಗೆದುಕೊಳ್ಳಿ, ಗುತ್ತಿಗೆ ಕೃಷಿ ಪದ್ದತಿಯನ್ನು. ಪಂಜಾಬ್, ಸಹಿತ ಕೆಲವು ರಾಜ್ಯಗಳಲ್ಲಿ, ಈ ಕಾನೂನುಗಳು, ಅದರ ನಿಬಂಧನೆಗಳು ಹಲವಾರು ವರ್ಷಗಳಿಂದ ಅಲ್ಲಿವೆ. ಅಲ್ಲಿ, ಖಾಸಗಿ ಕಂಪೆನಿಗಳು ಒಪ್ಪಂದ/ಗುತ್ತಿಗೆಯ ಮೂಲಕ ಕೃಷಿ ಮಾಡುತ್ತಿವೆ. ಒಪ್ಪಂದ ಮುರಿದರೆ ರೈತರಿಗೆ ದಂಡ ವಿಧಿಸುವಂತಹ ಪ್ರಸ್ತಾವನೆ ಈ ಮೊದಲಿನ ಕಾನೂನುಗಳಲ್ಲಿ ಇತ್ತೆನ್ನುವುದು ನಿಮಗೆ ಗೊತ್ತಿತ್ತೇ?. ಇದನ್ನು ಯಾರೂ ನನ್ನ ರೈತ ಸಹೋದರರಿಗೆ ವಿವರಿಸುತ್ತಿರಲಿಲ್ಲ. ಆದರೆ ನಮ್ಮ ಸರಕಾರ ಈ ಸುಧಾರಣೆಗಳನ್ನು ಮಾಡಿತು ಮತ್ತು ನನ್ನ ರೈತ ಸಹೋದರರು ದಂಡ ಪಾವತಿ ಮಾಡಬೇಕಾದ ಸ್ಥಿತಿಯ ನಿವಾರಣೆಯನ್ನು ಖಾತ್ರಿ ಮಾಡಿತು!.
ಸ್ನೇಹಿತರೇ,
ಕೆಲವಾರು ಕಾರಣಗಳಿಂದ ಮಂಡಿಗೆ ಹೋಗಲಾಗದಿದ್ದರೆ ರೈತ ಏನು ಮಾಡುತ್ತಾನೆ ಎಂಬುದರ ಬಗ್ಗೆ ನಿಮಗೆ ತಿಳಿದಿದೆಯೇ?. ಆತ ವ್ಯಾಪಾರಿಗೆ ತನ್ನ ಉತ್ಪನ್ನವನ್ನು ಮಾರಾಟ ಮಾಡುತ್ತಾನೆ. ನಮ್ಮ ಸರಕಾರ ರೈತ ಶೋಷಣೆಗೆ ಒಳಪಡಬಾರದು ಎಂಬ ನಿಟ್ಟಿನಲ್ಲಿ ಕಾನೂನು ಕ್ರಮಗಳನ್ನು ಕೂಡಾ ಖಾತ್ರಿಪಡಿಸಿದೆ. ಈಗ ಖರೀದಿದಾರರು ನಿಮಗೆ ಸಕಾಲದಲ್ಲಿ ಪಾವತಿ ಮಾಡಲು ಬಾಧ್ಯಸ್ಥರಾಗಿರುತ್ತಾರೆ. ಆತ ರಸೀದಿ ಕೊಡಬೇಕು ಮತ್ತು ಮೂರು ದಿನಗಳ ಒಳಗೆ ಪಾವತಿ ಮಾಡಬೇಕು. ಇಲ್ಲದಿದ್ದರೆ, ಕಾನೂನು ರೈತನಿಗೆ ಅಧಿಕಾರಿಗಳ ಬಳಿಗೆ ಹೋಗಲು ಕಾನೂನು ಪರಿಹಾರಗಳ ಮೂಲಕ ತನ್ನ ಹಣ ಪಡೆಯಲು ಶಕ್ತನನ್ನಾಗಿಸುತ್ತದೆ. ಈ ಎಲ್ಲಾ ಸಂಗತಿಗಳನ್ನು ಮಾಡಲಾಗಿದೆ ಮತ್ತು ಈ ಕಾನೂನುಗಳ ಪ್ರಯೋಜನವನ್ನು ನಮ್ಮ ದೇಶದ ರೈತ ಸಹೋದರರು ಪಡೆದುಕೊಳ್ಳಬಹುದು ಎಂಬ ಸಂಗತಿ ಪ್ರಚಾರ ಪಡೆಯುತ್ತಿದೆ. ಸರಕಾರ ಪ್ರತೀ ಹಂತದಲ್ಲಿಯೂ ರೈತರ ಪರ ನಿಂತಿದೆ. ರೈತರು ತಮ್ಮ ಉತ್ಪನ್ನವನ್ನು ಯಾರಿಗೇ ಆದರೂ ಮಾರಾಟ ಮಾಡುವ ಸಂದರ್ಭದಲ್ಲಿ ಕಾನೂನು ವ್ಯವಸ್ಥೆ ರೈತರ ಪರ ಇರುವಂತೆ ಬಲವಾದ ಕಾನೂನು ಮತ್ತು ಕಾನೂನು ವ್ಯವಸ್ಥೆಯನ್ನು ಸರಕಾರ ಮಾಡಿದೆ.
ಸ್ನೇಹಿತರೇ,
ಕೃಷಿ ಸುಧಾರಣೆಗಳ ಇನ್ನೊಂದು ಪ್ರಮುಖ ಸಂಗತಿಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅವಶ್ಯ. ಈಗ ಯಾರಾದರೊಬ್ಬರು ರೈತರ ಜೊತೆ ಒಪ್ಪಂದ ಮಾಡಿಕೊಂಡರೆ, ಆಗ ಆತ ಉತ್ತಮ ಬೆಳೆ ನಿರೀಕ್ಷೆ ಮಾಡುತ್ತಾರೆ. ಇದಕ್ಕಾಗಿ ಗುತ್ತಿಗೆದಾರರು ಉತ್ತಮ ಬೀಜ, ಆಧುನಿಕ ತಂತ್ರಜ್ಞಾನ, ಅತ್ಯಾಧುನಿಕ ಉಪಕರಣ ಮತ್ತು ತಜ್ಞತೆಯನ್ನು ರೈತರು ಪಡೆದುಕೊಳ್ಳುವುದಕ್ಕೆ ಸಹಾಯ ಮಾಡುತ್ತಾರೆ. ಯಾಕೆಂದರೆ ಅದು ಆತನಿಗೆ ಅನ್ನಾಹಾರ ಒದಗಿಸುತ್ತದೆ. ಆತ ಉತ್ತಮ ಉತ್ಪಾದನೆಗಾಗಿ ರೈತರ ಮನೆ ಬಾಗಿಲಲ್ಲಿ ಸೌಲಭ್ಯಗಳು ದೊರೆಯುವಂತೆ ಮಾಡುತ್ತಾನೆ. ಗುತ್ತಿಗೆದಾರನಿಗೆ ಮಾರುಕಟ್ಟೆಯ ಸ್ಥಿತಿ ಗತಿ ಗೊತ್ತಿರುತ್ತದೆ ಮತ್ತು ಮಾರುಕಟ್ಟೆ ಬೇಡಿಕೆಗಳಿಗೆ ಅನುಗುಣವಾಗಿ ನಮ್ಮ ರೈತರು ಕೆಲಸ ಮಾಡುವಂತಾಗಲು ಆತ ಸಹಾಯ ಮಾಡುತ್ತಾನೆ. ನಾನು ನಿಮಗೆ ಇನ್ನೊಂದು ಪರಿಸ್ಥಿತಿಯ ಬಗ್ಗೆ ವಿವರಿಸುತ್ತೇನೆ. ಒಂದು ವೇಳೆ, ಯಾವುದಾದರೂ ಕಾರಣಕ್ಕೆ, ರೈತನ ಉತ್ಪನ್ನ ಉತ್ತಮವಾಗಿರದೇ ಇದ್ದಲ್ಲಿ ಅಥವಾ ಅದು ಹಾನಿಗೀಡಾದರೆ, ಆ ಪ್ರಕರಣಗಳಲ್ಲಿ ಗುತ್ತಿಗೆದಾರರು ಒಪ್ಪಂದದಲ್ಲಿ ಒಪ್ಪಿಕೊಂಡ ದರವನ್ನು ಪಾವತಿಸುವುದಕ್ಕೆ ಬದ್ದರಾಗಿರುತ್ತಾರೆ. ಗುತ್ತಿಗೆದಾರರು ತಮ್ಮ ಇಚ್ಛಾನುಸಾರ ಗುತ್ತಿಗೆ ಕರಾರನ್ನು ರದ್ದು ಮಾಡುವಂತಿಲ್ಲ. ಆದರೆ ರೈತರು ಅದನ್ನು ಮಾಡಬಹುದು. ಇತರರು ಅಲ್ಲ. ಈ ಪರಿಸ್ಥಿತಿ ನಮ್ಮ ರೈತರಿಗೆ ಲಾಭದಾಯಕವಲ್ಲವೇ?. ಇದು ರೈತರಿಗೆ ಅತ್ಯಂತ ವಿಸ್ತಾರ ವ್ಯಾಪ್ತಿಯ ಭರವಸೆ ಅಲ್ಲವೇ?. ಇದರಲ್ಲಿ ರೈತರಿಗೆ ಲಾಭದ ಗ್ಯಾರಂಟಿ ಇದೆಯೇ, ಇಲ್ಲವೇ?. ಜನರು ಇನ್ನೊಂದು ಪ್ರಶ್ನೆಯನ್ನು ಎತ್ತುತ್ತಿದ್ದಾರೆ ಮತ್ತು ಅದು ನಿಮ್ಮ ಮನಸ್ಸಿಗೆ ಬಂದಿರಲೂ ಬಹುದು. ಒಂದು ವೇಳೆ ಉತ್ಪನ್ನ ಅತ್ಯುತ್ತಮವಾಗಿದ್ದರೆ, ಮಾರುಕಟ್ಟೆ ಅತ್ಯಂತ ಆಕರ್ಷಕವಾಗಿದ್ದರೆ, ಮತ್ತು ಗುತ್ತಿಗೆದಾರರು ಒಪ್ಪಂದದಲ್ಲಿಯದಕ್ಕಿಂತ ಹೆಚ್ಚು ಲಾಭ ಗಳಿಸುವಂತಾದರೆ, ಅಂತಹ ಪರಿಸ್ಥಿತಿಯಲ್ಲಿ, ಆಗ ಗುತ್ತಿಗೆದಾರರು ಒಪ್ಪಿಕೊಂಡ ಮೊತ್ತವನ್ನು ಮಾತ್ರವೇ ಪಾವತಿ ಮಾಡುವುದಲ್ಲ, ಬದಲು ಹೆಚ್ಚು ಲಾಭಕ್ಕಾಗಿ ಬೋನಸ್ ಕೂಡಾ ಪಾವತಿ ಮಾಡಬೇಕಾಗುತ್ತದೆ. ಇದು ರೈತರಿಗೆ ಉತ್ತಮ ರಕ್ಷಣೆ ಅಲ್ಲವೇ?. ಅಂತಹ ಪರಿಸ್ಥಿತಿಗಳಲ್ಲಿ, ಒಪ್ಪಂದದಲ್ಲಿ ನಿಗದಿ ಮಾಡಲಾದ ದರಕ್ಕಿಂತ ಹೆಚ್ಚು ಅಂದರೆ ನಾನು ಹೇಳಿದಂತೆ ಬೋನಸ್ಸನ್ನು ರೈತರು ಪಡೆಯುತ್ತಾರೆ. ಈ ಮೊದಲು ಏನಾಗುತ್ತಿತ್ತು ಎಂಬುದು ನಿಮಗೆ ನೆನಪಿದೆಯೇ?. ರೈತರು ಇಡೀ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬೇಕಾಗಿತ್ತು. ಮತ್ತು ಪ್ರತಿಫಲವನ್ನು ಬೇರಾರೋ ಅನುಭವಿಸುತ್ತಿದ್ದರು. ಈಗ ಹೊಸ ಕೃಷಿ ಕಾನೂನುಗಳು ಮತ್ತು ಸುಧಾರಣೆಗಳು ಬಂದ ಬಳಿಕ ಪರಿಸ್ಥಿತಿ ಪೂರ್ಣವಾಗಿ ರೈತರ ಪರವಾಗಿದೆ. ಈಗ ಇಡೀ ಅಪಾಯದ ಹೊಣೆಗಾರಿಕೆ ಒಪ್ಪಂದ ಮಾಡಿಕೊಂಡ ಕಂಪೆನಿ ಅಥವಾ ವ್ಯಕ್ತಿಯದಾಗಿರುತ್ತದೆ ಮತ್ತು ರೈತನಿಗೆ ಲಾಭವಾಗುತ್ತದೆ!.
ಸ್ನೇಹಿತರೇ,
ಗುತ್ತಿಗೆ ಕೃಷಿಯನ್ನು ದೇಶದ ವಿವಿಧ ಭಾಗಗಳಲ್ಲಿ ಈಗಾಗಲೇ ಪರೀಕ್ಷಿಸಲಾಗಿದೆ. ವಿಶ್ವದ ಅತ್ಯಂತ ಹೆಚ್ಚು ಹಾಲು ಉತ್ಪಾದಿಸುವ ರಾಷ್ಟ್ರ ಯಾವುದೆಂದು ನಿಮಗೆ ಗೊತ್ತಿದೆಯೇ?. ಈ ದೇಶ ಬೇರಾವುದೇ ಅಲ್ಲ, ಅದು ನಮ್ಮ ಭಾರತ!. ಇದು ಸಾಧ್ಯವಾಗಿರುವುದು ಪಶುಪಾಲಕರಿಂದಾಗಿ. ಇಂದು ಡೈರಿ ವಲಯದಲ್ಲಿ, ಹಲವು ಸಹಕಾರಿ ಮತ್ತು ಖಾಸಗಿ ಕಂಪೆನಿಗಳು ಹಾಲನ್ನು ಹಾಲು ಉತ್ಪಾದಕರಿಂದ ಖರೀದಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿವೆ. ಎಷ್ಟು ವರ್ಷಗಳಿಂದ ಈ ಮಾದರಿ ಮುಂದುವರೆದುಕೊಂಡು ಬಂದಿಲ್ಲ?. ಯಾವುದಾದರೂ ಒಂದು ಕಂಪೆನಿ ಅಥವಾ ಸಹಕಾರಿ ಮಾರುಕಟ್ಟೆಯನ್ನು ತನ್ನ ಕಪಿಮುಷ್ಟಿಗೆ ತೆಗೆದುಕೊಂಡು ಏಕಸ್ವಾಮ್ಯ ಸಾಧಿಸಿದ್ದರ ಬಗ್ಗೆ ನೀವು ಕೇಳಿರುವಿರೋ?. ಡೈರಿ ವಲಯದಲ್ಲಿ ಈ ವ್ಯವಸ್ಥೆಯಿಂದ ರೈತರು ಮತ್ತು ಹಾಲು ಉತ್ಪಾದಕರು ಲಾಭ ಪಡೆದುಕೊಂಡು ಯಶಸ್ವಿಯಾದ ಸಂಗತಿ ನಿಮಗೆ ಚಿರಪರಿಚಿತವಲ್ಲವೇ?. ನಮ್ಮ ದೇಶ ಬಹಳ ಮುಂದೆ ಇರುವ ಇನ್ನೊಂದು ವಲಯವಿದೆ–ಅದೆಂದರೆ ಕೋಳಿ ಸಾಕಾಣಿಕೆ. ಇಂದು ಭಾರತ ಗರಿಷ್ಟ ಪ್ರಮಾಣದಲ್ಲಿ ಮೊಟ್ಟೆಗಳನ್ನು ಉತ್ಪಾದಿಸುತ್ತಿದೆ. ಅನೇಕ ದೊಡ್ಡ ಕಂಪೆನಿಗಳು ಕೋಳಿ ಸಾಕಾಣಿಕೆ ಕ್ಷೇತ್ರದಲ್ಲಿ ತೊಡಗಿಕೊಂಡಿವೆ. ಈ ವ್ಯಾಪಾರದಲ್ಲಿ ತೊಡಗಿಕೊಂಡಿರುವ ಸಣ್ಣ ಕಂಪೆನಿಗಳು ಮತ್ತು ಕೆಲವು ಸ್ಥಳೀಯ ಖರೀದಿದಾರರೂ ಇದ್ದಾರೆ. ಈ ಕ್ಷೇತ್ರದಲ್ಲಿರುವ ಜನರು ತಮ್ಮ ಉತ್ಪಾದನೆಯನ್ನು ಎಲ್ಲಿ ಬೇಕಾದರೂ, ಯಾರಿಗೆ ಬೇಕಾದರೂ ಮಾರಾಟ ಮಾಡಬಲ್ಲರು. ಎಲ್ಲಿ ಅವರಿಗೆ ಹೆಚ್ಚಿನ ದರ ಸಿಗುತ್ತದೆಯೋ, ಅಲ್ಲಿ ಅವರು ಮಾರಾಟ ಮಾಡಬಹುದು. ನಮ್ಮ ರೈತರಿಗೆ ಮತ್ತು ಕೃಷಿ ಕ್ಷೇತ್ರಕ್ಕೆ ಇಂತಹದೇ ಕೋಳಿ ಸಾಕಾಣಿಕೆ ಮತ್ತು ಡೈರಿ ವಲಯಕ್ಕೆ ಲಭ್ಯ ಇರುವಂತಹ ಅವಕಾಶವನ್ನು ಒದಗಿಸಿಕೊಡಲು ನಾವು ಇಚ್ಛಿಸುತ್ತೇವೆ. ವ್ಯಾಪಾರದಲ್ಲಿ ಹಲವು ಕಂಪೆನಿಗಳು ಮತ್ತು ವಿವಿಧ ಸ್ಪರ್ಧಾಳುಗಳು ಇದ್ದಾಗ ರೈತರಿಗೆ ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಪಡೆಯಲು ಸಾಧ್ಯವಾಗುತ್ತದೆ ಹಾಗು ಮಾರುಕಟ್ಟೆಗೆ ಸುಲಭ ಸಂಪರ್ಕ ಸಾಧ್ಯವಾಗುತ್ತದೆ.
ಸ್ನೇಹಿತರೇ,
ಭಾರತೀಯ ಕೃಷಿ ಕೂಡಾ ಹೊಸ ಕೃಷಿ ಸುಧಾರಣೆಗಳ ಮೂಲಕ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ. ಆಧುನಿಕ ತಂತ್ರಜ್ಞಾನದ ಮೂಲಕ, ನಮ್ಮ ರೈತರಿಗೆ ತಮ್ಮ ಉತ್ಪಾದನೆಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿದೆ. ಮಾತ್ರವಲ್ಲ ಉತ್ಪಾದನೆಯಲ್ಲಿ ವೈವಿಧ್ಯತೆ, ತಮ್ಮ ಉತ್ಪಾದನೆಗಳ ಉತ್ತಮ ಪ್ಯಾಕೇಜಿಂಗ್ ಮತ್ತು ಅವರ ಉತ್ಪಾದನೆಗಳ ಮೌಲ್ಯವರ್ಧನೆ ಸಾಧ್ಯವಾಗಲಿದೆ. ಇದು ಅನುಷ್ಟಾನಕ್ಕೆ ಬಂದಾಗ ನಮ್ಮ ರೈತರ ಉತ್ಪಾದನೆಗೆ ವಿಶ್ವದಾದ್ಯಂತ ಬೇಡಿಕೆ ಬರಲಿದೆ ಮತ್ತು ಬೇಡಿಕೆ ಇನ್ನಷ್ಟು ಹೆಚ್ಚಲಿದೆ. ನಮ್ಮ ರೈತರು ಬರೇ ಉತ್ಪಾದಕರಾಗಿ ಉಳಿಯದೆ ರಫ್ತುದಾರರಾಗುತ್ತಾರೆ. ವಿಶ್ವದಲ್ಲಿ ಯಾರಾದರೂ ಕೃಷಿ ಉತ್ಪನ್ನಗಳ ಮೂಲಕ ಮಾರುಕಟ್ಟೆ ಸ್ಥಾಪಿಸಲು ಇಚ್ಚಿಸಿದರೆ ಅವರು ಭಾರತಕ್ಕೆ ಬರಬೇಕಾಗುತ್ತದೆ. ವಿಶ್ವದಲ್ಲಿ ಎಲ್ಲಿಯಾದರೂ ಗುಣಮಟ್ಟ ಮತ್ತು ಗಾತ್ರ/ಪ್ರಮಾಣ ಅವಶ್ಯವಾದರೆ, ಆಗ ಭಾರತದ ರೈತರ ಜೊತೆ ಪಾಲುದಾರಿಕೆ ಮಾಡಿಕೊಳ್ಳಬೇಕಾಗುತ್ತದೆ. ಇತರ ವಲಯದಲ್ಲಿ ನಾವು ಹೂಡಿಕೆ ಮತ್ತು ಅನ್ವೇಷಣೆ ಹೆಚ್ಚಿಸಿದರೆ, ಅದು ಆದಾಯ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಆ ವಲಯಗಳಲ್ಲಿ ನಮಗೆ ಬ್ರಾಂಡ್ ಇಂಡಿಯಾವನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ. ವಿಶ್ವದ ಕೃಷಿ ಮಾರುಕಟ್ಟೆಗಳಲ್ಲಿ ಅದೇ ವೈಭವದೊಂದಿಗೆ ಬ್ರಾಂಡ್ ಇಂಡಿಯಾವನ್ನು ಸ್ಥಾಪಿಸಲು ಕಾಲ ಕೂಡಿ ಬಂದಿದೆ.
ಸ್ನೇಹಿತರೇ,
ದೇಶದ ಜನತೆಯಿಂದ ಪ್ರಜಾಸತ್ತಾತ್ಮಕವಾಗಿ ತಿರಸ್ಕರಿಸಲ್ಪಟ್ಟ ಕೆಲವು ರಾಜಕೀಯ ಪಕ್ಷಗಳು ಈ ಚರ್ಚೆಯನ್ನು ನಡೆಯಲು ಬಿಡುತ್ತಿಲ್ಲ. ಮತ್ತು ಸರಕಾರದ ಪ್ರಾಮಾಣಿಕ ಪ್ರಯತ್ನಗಳ ಹೊರತಾಗಿಯೂ ಅವು ಕೆಲವು ರಾಜಕೀಯ ಕಾರಣಗಳಿಗಾಗಿ ಅಥವಾ ರಾಜಕೀಯ ಸಿದ್ಧಾಂತಗಳಿಗಾಗಿ ರೈತರನ್ನು ತಪ್ಪುದಾರಿಗೆ ಎಳೆಯುತ್ತಿವೆ. ಕೃಷಿ ಕಾನೂನುಗಳ ಹಿನ್ನೆಲೆಯಲ್ಲಿ, ಈ ರಾಜಕೀಯ ಸಿದ್ಧಾಂತಗಳ ಜನರು ರೈತರ ಹೆಗಲ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸುತ್ತಿದ್ದಾರೆ. ರೈತರ ಹೆಸರಿನಲ್ಲಿ ವಿವಿಧ ವಿಷಯಗಳನ್ನು ಹರಡುತ್ತಿದ್ದಾರೆ. ಅವರಲ್ಲಿ ಯಾವುದೇ ದೃಢವಾದ ವಾದಗಳಿಲ್ಲ. ನೀವು ನೋಡಿರಬಹುದು, ಅದು ಆರಂಭವಾಗುವಾಗ, ಅವರು ಬರೇ ಎಂ.ಎಸ್.ಪಿ. ಗ್ಯಾರಂಟಿಯನ್ನು ಮಾತ್ರವೇ ಕೇಳುತ್ತಿದ್ದರು. ಅವರು ರೈತರಾಗಿದ್ದುದರಿಂದ ಅವರ ಕಳವಳ ನೈಜವಾದುದಾಗಿತ್ತು. ಆದರೆ ಈ ರಾಜಕೀಯ ಸಿದ್ಧಾಂತದ ಜನರು ಅಸ್ಥಿರ ಪರಿಸ್ಥಿತಿಯನ್ನು ಉಂಟು ಮಾಡಿದರು ಮತ್ತು ಎಂ.ಎಸ್.ಪಿ. ವಿಷಯವನ್ನು ಬದಿಗೆ ಸರಿಸಿ ಚಳವಳಿಗೆ ಸೇರಿಕೊಂಡರು. ಇವರು ಹಿಂಸಾಚಾರದಲ್ಲಿ ಆರೋಪಿಗಳಾಗಿರುವವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಹಿಂದಿನ ಸರಕಾರಗಳು ಆಧುನಿಕ ಹೆದ್ದಾರಿಗಳನ್ನು ನಿರ್ಮಾಣ ಮಾಡುತ್ತಿರುವಾಗ, ಈ ಜನರು ಸರಕಾರವನ್ನು ಬೆಂಬಲಿಸುತ್ತಿದ್ದರು, ಯಾಕೆಂದರೆ ಇವರು ಅದರಲ್ಲಿ ಪಾಲುದಾರರಾಗಿರುತ್ತಿದ್ದರು. ಈಗ ಅವರು ರಸ್ತೆ ಬಳಕೆ ತೆರಿಗೆ ಬೇಡ, ಅದನ್ನು ತೆಗೆದು ಹಾಕಿ ಎನ್ನುತ್ತಿದ್ದಾರೆ. ರೈತರ ವಿಷಯ ಬಿಟ್ಟು, ಅವರು ಯಾಕೆ ಹೊಸ ಕ್ಷೇತ್ರ ಪ್ರವೇಶಿಸುತ್ತಿದ್ದಾರೆ?. ಅವರು ಈಗ ಚಾಲ್ತಿಯಲ್ಲಿರುವ ನೀತಿಗಳನ್ನು ವಿರೋಧಿಸುತ್ತಿದ್ದಾರೆ ಮತ್ತು ರೈತರ ಚಳವಳಿಯ ನೆಪದಲ್ಲಿ ರಸ್ತೆ ಬಳಕೆ ತೆರಿಗೆಯನ್ನು ವಿರೋಧಿಸುತ್ತಿದ್ದಾರೆ.
ಸ್ನೇಹಿತರೇ,
ಇಂತಹ ಪರಿಸ್ಥಿತಿಯಲ್ಲಿ, ದೇಶಾದ್ಯಂತ ರೈತರು ಕೃಷಿ ಸುಧಾರಣೆಗಳಿಗೆ ಪೂರ್ಣ ಬೆಂಬಲ ನೀಡಿದ್ದಾರೆ. ಅವುಗಳನ್ನು ಸ್ವಾಗತಿಸಿದ್ದಾರೆ. ನಾನು ಎಲ್ಲಾ ರೈತರಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ದೇಶವನ್ನು ಮುಂದಕ್ಕೆ ಕೊಂಡೊಯ್ಯಲು ದೇಶದ ಕೋಟ್ಯಾಂತರ ರೈತರು ಇಂದು ಈ ನಿರ್ಧಾರಕ್ಕೆ ಬೆಂಬಲವಾಗಿ ನಿಂತಿರುವುದಕ್ಕೆ ನಾನು ಶಿರಬಾಗಿ ನಮಿಸುತ್ತೇನೆ. ಮತ್ತು ನನ್ನ ರೈತ ಸಹೋದರರು ಮತ್ತು ಸಹೋದರಿಯರಿಗೆ ಭರವಸೆ ನೀಡುತ್ತೇನೆ, ನಿಮ್ಮ ನಂಬಿಕೆ ಕಳೆದು ಹೋಗಲು ನಾವು ಅವಕಾಶ ನೀಡುವುದಿಲ್ಲ ಎಂಬುದಾಗಿ. ಕಳೆದ ಕೆಲವು ದಿನಗಳಿಂದ ಅಸ್ಸಾಂ, ರಾಜಸ್ಥಾನ ಮತ್ತು ಜಮ್ಮು ಹಾಗು ಕಾಶ್ಮೀರ ಸಹಿತ ಹಲವು ರಾಜ್ಯಗಳಲ್ಲಿ ಪಂಚಾಯತ್ ಚುನಾವಣೆಗಳಿದ್ದವು. ಗ್ರಾಮೀಣ ಪ್ರದೇಶಗಳ ಜನರು ಮತದಾನ ಮಾಡಬೇಕಿತ್ತು ಮತ್ತು ಸಹಜವಾಗಿ ರೈತರೂ ಮತ ಚಲಾಯಿಸುವವರಿದ್ದರು. ಆ ಗ್ರಾಮಗಳ ರೈತರು ಈ ಚಳವಳಿಯ ಹಿಂದೆ ಇರುವ ಜನರನ್ನು ತಿರಸ್ಕರಿಸಿದ್ದಾರೆ. ಮತ್ತು ಇಂತಹ ತಪ್ಪು ದಾರಿಗೆಳೆಯುತ್ತಿರುವ ಆಟ ಆಡುತ್ತಿರುವ , ದೊಡ್ಡ ಸ್ವರದಲ್ಲಿ ಗೊಂದಲಗಳನ್ನು ಎಬ್ಬಿಸುತ್ತಿರುವ ಅವರನ್ನು ಸೋಲಿಸಿದ್ದಾರೆ. ಈ ರೀತಿಯಲ್ಲಿ ಅವರು ಮತಪತ್ರಗಳ ಮೂಲಕ ಹೊಸ ಕಾಯ್ದೆಗಳನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ.
ಸ್ನೇಹಿತರೇ,
ತರ್ಕ ಮತ್ತು ವಸ್ತು ಸ್ಥಿತಿಯ ಆಧಾರದ ಮೇಲೆ, ನಮ್ಮ ನಿರ್ಧಾರಗಳನ್ನು ಪ್ರತೀ ಗುಣಮಾನಕಗಳೊಂದಿಗೆ ನೀವು ಪರೀಕ್ಷೆ ಮಾಡಬಹುದು. ಅಲ್ಲಿ ಏನಾದರೂ ಕೊರತೆಗಳಿದ್ದರೆ, ಅದನ್ನು ತೋರಿಸಿ ಕೊಡಬೇಕು. ಅಲ್ಲಿ ಪ್ರಜಾಪ್ರಭುತ್ವವಿದೆ ಮತ್ತು ನಾವು ದೇವರು ನಮಗೆ ಎಲ್ಲಾ ಜ್ಞಾನವನ್ನು ಕೊಟ್ಟಿದ್ದಾನೆ ಎಂದು ಹೇಳಿಕೊಳ್ಳುವುದಿಲ್ಲ. ಆದರೆ ಅಲ್ಲಿ ಚರ್ಚೆ ನಡೆಯಬೇಕು. ಈ ಎಲ್ಲಾ ಸಂಗತಿಗಳ ಹೊರತಾಗಿಯೂ ಸರಕಾರ ರೈತರಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು ಸಿದ್ದವಿದೆ, ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ನಮ್ಮ ಅಚಲ ನಂಬಿಕೆ ಮತ್ತು ಗೌರವ ಹಾಗು ರೈತರಿಗೆ ಸಂಬಂಧಿಸಿ ನಾವು ಹೊಂದಿರುವ ಬದ್ಧತೆಯಿಂದಾಗಿ. ನಾವು ಪರಿಹಾರಕ್ಕಾಗಿ ಮುಕ್ತ ಮನಸ್ಸು ಹೊಂದಿದ್ದೇವೆ. ಅಲ್ಲಿ ಈ ಕೃಷಿ ಸುಧಾರಣೆಗಳ ಪರವಾಗಿರುವ ಹಲವು ಪಕ್ಷಗಳಿವೆ. ನಾವು ಅವರ ಲಿಖಿತ ಹೇಳಿಕೆಗಳನ್ನು ನೋಡಿದ್ದೇವೆ. ಅವರು ಈಗ ತಮ್ಮ ಮಾತು ತಪ್ಪಿ ನಡೆಯುತ್ತಿದ್ದಾರೆ. ಅವರ ಭಾಷೆ ಬದಲಾಗಿದೆ. ರೈತರ ದಾರಿ ತಪ್ಪಿಸುತ್ತಿರುವ ರಾಜಕೀಯ ನಾಯಕರು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಹೊಂದಿಲ್ಲ ಮತ್ತು ಅದಕ್ಕೆ ಗೌರವವನ್ನೂ ಕೊಡುತ್ತಿಲ್ಲ. ಜಗತ್ತಿನ ಹಲವಾರು ವ್ಯಕ್ತಿಗಳಿಗೆ ಅವರ ಬಗ್ಗೆ ಗೊತ್ತಿದೆ. ಇತ್ತೀಚಿನ ದಿನಗಳಲ್ಲಿ ಇವರು ಏನು ಹೇಳಿದ್ದಾರೆ ಎಂಬುದರ ಬಗ್ಗೆ ನಾನು ಮಾತನಾಡಲಾರೆ. ಅವರು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ,. ನಾನು ಆ ಜನರಿಗೆ ನಮ್ಯತೆಯಿಂದ ಹೇಳುತ್ತೇನೆ, ನಮ್ಮ ಸರಕಾರ ರೈತರ ಹಿತಾಸಕ್ತಿಗಾಗಿ ಅವರ ಜೊತೆ ಮಾತುಕತೆ ನಡೆಸಲು ಸಿದ್ದವಿದೆ ಆದರೆ ಚರ್ಚೆ ವಿಷಯಗಳನ್ನು ಆಧರಿಸಿ ಮತ್ತು ವಸ್ತು ಸ್ಥಿತಿಯನ್ನು ಆಧರಿಸಿ ಇರಬೇಕು.
ಸ್ನೇಹಿತರೇ,
ನಾವು ದೇಶದ ರೈತರ ಬದುಕನ್ನು ಸುಧಾರಿಸಲು ಸಾಧ್ಯ ಇರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ನೀವು ಅಭಿವೃದ್ಧಿ ಹೊಂದಿದರೆ, ಇಡೀ ದೇಶ ಪ್ರಗತಿಯನ್ನು ಸಾಧಿಸತೊಡಗುತ್ತದೆ. ಸ್ವಾವಲಂಬಿ ರೈತ ಮಾತ್ರ ಸ್ವಾವಲಂಬಿ ಭಾರತಕ್ಕೆ ಶಿಲಾನ್ಯಾಸ ಮಾಡಬಲ್ಲ. ನಾನು ದೇಶದ ರೈತರಿಗೆ ಮನವಿ ಮಾಡುತ್ತೇನೆ ಏನೆಂದರೆ ವಂಚನೆಗೆ ಒಳಗಾಗಬೇಡಿ. ಯಾರೊಬ್ಬರ ಸುಳ್ಳಿಗೂ ಕಿವಿಕೊಡಬೇಡಿ ಮತ್ತು ತರ್ಕದ ಆಧಾರದ ಮೇಲೆ ಮತ್ತು ವಸ್ತು ಸ್ಥಿತಿಯನ್ನು ಆಧರಿಸಿ ಚಿಂತನೆ ಮಾಡಿ. ಮತ್ತು ಮತ್ತೊಮ್ಮೆ ಹೇಳುವುದಾದರೆ ದೇಶದ ರೈತರು ನೀಡಿರುವ ಬಹಿರಂಗ ಬೆಂಬಲ ನನಗೆ ಬಹಳ ತೃಪ್ತಿಯನ್ನು ನೀಡಿದೆ ಮತ್ತು ನನಗೆ ಹೆಮ್ಮೆಯ ಸಂಗತಿಯಾಗಿದೆ. ನಾನು ನಿಮ್ಮೆಲ್ಲರಿಗೂ ಋಣಿಯಾಗಿದ್ದೇನೆ. ಮತ್ತೊಮ್ಮೆ, ನಾನು ಪಿ.ಎಂ.ಕಿಸಾನ್ ನಿಧಿಗಾಗಿ ಮಿಲಿಯಾಂತರ ರೈತ ಕುಟುಂಬಗಳನ್ನು ಅಭಿನಂದಿಸುತ್ತೇನೆ. ನಾನು ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ ಮತ್ತು ಈ ಆಶಯದೊಂದಿಗೆ ನಾನು ನಿಮಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಧನ್ಯವಾದಗಳು!
***
Working for the welfare of our hardworking farmers. #PMKisan https://t.co/sqBuBM1png
— Narendra Modi (@narendramodi) December 25, 2020
आज देश के 9 करोड़ से ज्यादा किसान परिवारों के बैंक खाते में सीधे, एक क्लिक पर 18 हज़ार करोड़ रुपए जमा हुए हैं।
— PMO India (@PMOIndia) December 25, 2020
जब से ये योजना शुरू हुई है, तब से 1 लाख 10 हजार करोड़ रुपए से ज्यादा किसानों के खाते में पहुंच चुके हैं: PM#PMKisan
मुझे आज इस बात का अफसोस है कि मेरे पश्चिम बंगाल के 70 लाख से अधिक किसान भाई-बहनों को इसका लाभ नहीं मिल पाया है।
— PMO India (@PMOIndia) December 25, 2020
बंगाल के 23 लाख से अधिक किसान इस योजना का लाभ लेने के लिए ऑनलाइन आवेदन कर चुके हैं।
लेकिन राज्य सरकार ने वेरिफिकेशन की प्रक्रिया को इतने लंबे समय से रोक रखा है: PM
जो दल पश्चिम बंगाल में किसानों के अहित पर कुछ नहीं बोलते, वो यहां दिल्ली में आकर किसान की बात करते हैं।
— PMO India (@PMOIndia) December 25, 2020
इन दलों को आजकल APMC- मंडियों की बहुत याद आ रही है।
लेकिन ये दल बार-बार भूल जाते हैं कि केरला में APMC- मंडियां हैं ही नहीं।
केरला में ये लोग कभी आंदोलन नहीं करते: PM
हमने लक्ष्य बनाकर काम किया कि देश के किसानों का Input Cost कम हो।
— PMO India (@PMOIndia) December 25, 2020
सॉयल हेल्थ कार्ड, यूरिया की नीम कोटिंग, लाखों सोलर पंप की योजना, इसीलिए शुरू हुई।
सरकार ने प्रयास किया कि किसान के पास एक बेहतर फसल बीमा कवच हो।
आज करोड़ों किसानों को पीएम फसल बीमा योजना का लाभ हो रहा है: PM
हमारी सरकार ने प्रयास किया कि देश के किसान को फसल की उचित कीमत मिले
— PMO India (@PMOIndia) December 25, 2020
हमने लंबे समय से लटकी स्वामीनाथन कमेटी की रिपोर्ट के अनुसार, लागत का डेढ़ गुना MSP किसानों को दिया।
पहले कुछ ही फसलों पर MSP मिलती थी, हमने उनकी भी संख्या बढ़ाई: PM
हम इस दिशा में भी बढ़े कि फसल बेचने के लिए किसान के पास सिर्फ एक मंडी नहीं बल्कि नए बाजार हो।
— PMO India (@PMOIndia) December 25, 2020
हमने देश की एक हजार से ज्यादा कृषि मंडियों को ऑनलाइन जोड़ा। इनमें भी एक लाख करोड़ रुपए से ज्यादा का कारोबार हो चुका है: PM
हमने एक और लक्ष्य बनाया कि छोटे किसानों के समूह बनें ताकि वो अपने क्षेत्र में एक सामूहिक ताकत बनकर काम कर सकें।
— PMO India (@PMOIndia) December 25, 2020
आज देश में 10 हजार से ज्यादा किसान उत्पादक संघ- FPO बनाने का अभियान चल रहा है, उन्हें आर्थिक मदद दी जा रही है: PM
आज देश के किसान को अपना पक्का घर मिल रहा है, शौचालय मिल रहा है, साफ पानी का नल मिल रहा है।
— PMO India (@PMOIndia) December 25, 2020
यही किसान है जिसे बिजली के मुफ्त कनेक्शन, गैस के मुफ्त कनेक्शन से बहुत लाभ हुआ है।
आयुष्मान भारत योजना के तहत 5 लाख रुपए तक के मुफ्त इलाज ने उनके जीवन की बड़ी चिंता कम की है: PM
आप अपनी उपज दूसरे राज्य में बेचना चाहते हैं? आप बेच सकते हैं।
— PMO India (@PMOIndia) December 25, 2020
आप एफपीओ के माध्यम से उपज को एक साथ बेचना चाहते हैं? आप बेच सकते हैं।
आप बिस्किट, चिप्स, जैम, दूसरे कंज्यूमर उत्पादों की वैल्यू चेन का हिस्सा बनना चाहते हैं? आप ये भी कर सकते हैं: PM
आप न्यूनतम समर्थन मूल्य यानी एमएसपी पर अपनी उपज बेचना चाहते हैं? आप उसे बेच सकते हैं।
— PMO India (@PMOIndia) December 25, 2020
आप मंडी में अपनी उपज बेचना चाहते हैं? आप बेच सकते हैं।
आप अपनी उपज का निर्यात करना चाहते हैं ? आप निर्यात कर सकते हैं।
आप उसे व्यापारी को बेचना चाहते हैं? आप बेच सकते हैं: PM
इन कृषि सुधार के जरिए हमने किसानों को बेहतर विकल्प दिए हैं।
— PMO India (@PMOIndia) December 25, 2020
इन कानूनों के बाद आप जहां चाहें जिसे चाहें अपनी उपज बेच सकते हैं।
आपको जहां सही दाम मिले आप वहां पर उपज बेच सकते हैं: PM#PMKisan
जब हमने दूसरे सेक्टर में इनवेस्टमेंट और इनोवेशन बढ़ाया तो हमने आय बढ़ाने के साथ ही उस सेक्टर में ब्रांड इंडिया को भी स्थापित किया।
— PMO India (@PMOIndia) December 25, 2020
अब समय आ गया है कि ब्रांड इंडिया दुनिया के कृषि बाजारों में भी खुद को उतनी ही प्रतिष्ठा के साथ स्थापित करे: PM#PMKisan
ऐसी परिस्थिति में भी देशभर के किसानों ने कृषि सुधारों का भरपूर समर्थन किया है, स्वागत किया है।
— PMO India (@PMOIndia) December 25, 2020
मैं सभी किसानों का आभार व्यक्त करता हूं।
मैं भरोसा दिलाता हूं कि आपके विश्वास पर हम कोई आंच नहीं आने देंगे: PM
पिछले दिनों अनेक राज्य़ों, चाहे असम हो, राजस्थान हो, जम्मू-कश्मीर हो, इनमें पंचायतों के चुनाव हुए।
— PMO India (@PMOIndia) December 25, 2020
इनमें प्रमुखत ग्रामीण क्षेत्र के लोगों ने, किसानों ने ही भाग लिया।
उन्होंने एक प्रकार से किसानों को गुमराह करने वाले सभी दलों को नकार दिया है: PM
आज देश के 9 करोड़ से ज्यादा किसान परिवारों के बैंक खातों में सीधे एक क्लिक पर 18 हजार करोड़ रुपये से ज्यादा जमा हुए हैं।
— Narendra Modi (@narendramodi) December 25, 2020
कोई कमीशन नहीं, कोई हेराफेरी नहीं। यह गुड गवर्नेंस की मिसाल है। #PMKisan pic.twitter.com/Qd6gAU5qEt
स्वार्थ की राजनीति का एक भद्दा उदाहरण हम इन दिनों देख रहे हैं।
— Narendra Modi (@narendramodi) December 25, 2020
जो दल पश्चिम बंगाल में किसानों के अहित पर कुछ नहीं बोलते, वे दिल्ली में आकर किसान की बात करते हैं।
इन्हें APMC मंडियों की बहुत याद आ रही है। लेकिन ये केरल में कभी आंदोलन नहीं करते, जहां APMC मंडियां हैं ही नहीं। pic.twitter.com/Q4T0mQdIdn
2014 में हमारी सरकार ने नई अप्रोच के साथ काम करना शुरू किया।
— Narendra Modi (@narendramodi) December 25, 2020
हमने देश के किसान की छोटी-छोटी दिक्कतों, कृषि के आधुनिकीकरण और उसे भविष्य की जरूरतों के लिए तैयार करने पर एक साथ ध्यान दिया।
इस लक्ष्य के साथ काम किया कि किसानों का खेती पर होने वाला खर्च कम हो। #PMKisan pic.twitter.com/hxr37pinwf
हमारी सरकार ने प्रयास किया कि देश के किसान को फसल की उचित कीमत मिले।
— Narendra Modi (@narendramodi) December 25, 2020
हमने लंबे समय से लटकी स्वामीनाथन कमेटी की रिपोर्ट के अनुसार लागत का डेढ़ गुना MSP किसानों को दिया।
हम आज MSP पर रिकॉर्ड सरकारी खरीद कर रहे हैं, किसानों की जेब में MSP का रिकॉर्ड पैसा पहुंच रहा है। #PMKisan pic.twitter.com/PLxm4jTOnn
कृषि सुधार कानूनों के बाद किसान जहां चाहें, जिसे चाहें अपनी उपज बेच सकते हैं।
— Narendra Modi (@narendramodi) December 25, 2020
जहां सही दाम मिले, वहां बेच सकते हैं। मंडी में बेच सकते हैं, व्यापारी को बेच सकते हैं, दूसरे राज्य में बेच सकते हैं और निर्यात भी कर सकते हैं।
किसान को इतने अधिकार मिल रहे हें तो इसमें गलत क्या है? pic.twitter.com/Sl5YLHQAE9
आज नए कृषि सुधारों के बारे में असंख्य झूठ फैलाए जा रहे हैं।
— Narendra Modi (@narendramodi) December 25, 2020
लेकिन खबरें आ रही हैं कि कैसे एक-एक कर के हमारे देश के किसान इन कानूनों का फायदा उठा रहे हैं।
सरकार किसान के साथ हर कदम पर खड़ी है। ऐसी व्यवस्था की गई है कि एक मजबूत कानून और लीगल सिस्टम किसानों के पक्ष में खड़ा रहे। pic.twitter.com/uqrJv0U0es
पहले क्या होता था, याद है?
— Narendra Modi (@narendramodi) December 25, 2020
सारा रिस्क किसान का होता था और रिटर्न किसी और का होता था।
अब नए कृषि कानूनों और सुधार के बाद स्थिति बदल गई है। #PMKisan pic.twitter.com/ZCKPChBlpU
हम देश के अन्नदाता को उन्नत करने के लिए हर संभव प्रयास कर रहे हैं। जब किसानों की उन्नति होगी, तो पूरे राष्ट्र की उन्नति तय है।
— Narendra Modi (@narendramodi) December 25, 2020
मेरा आग्रह है- किसान किसी के बहकावे में न आएं, किसी के झूठ को न स्वीकारें। #PMKisan pic.twitter.com/AoaDjUMIxD