Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಉದ್ಧೇಶಿತ ರೂ.300 ರಿಯಾಯಿತಿ ಮುಂದುವರಿಕೆಗೆ ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪ್ರಧಾನಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಹಣಕಾಸು ವರ್ಷ 2024-25 ರ ಅವಧಿಯಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿ.ಎಂ.ಯು.ಜೆ)ಯಡಿಯಲ್ಲಿ ವರ್ಷಕ್ಕೆ ಒಟ್ಟು 12  ಸಿಲಿಂಡರ್ ಲಭ್ಯವಿದ್ದು,  ಪ್ರತಿ 14.2 ಕೆಜಿಯ ಸಿಲಿಂಡರ್ ಮರುಪೂರಣ( ರೀಫಿಲ್ಲಿಂಗ್ )ಗಳಿಗೆ ರೂ.300 ರ ಉದ್ಧೇಶಿತ ರಿಯಾಯಿತಿಯನ್ನು (ಮತ್ತು 5 ಕೆಜಿ ಸಿಲಿಂಡರ್ಗೆ ಪ್ರಮಾಣದ ಅನುಪಾತದಲ್ಲಿ) ಮುಂದುವರಿಸಲು ಅನುಮೋದನೆ ನೀಡಿದೆ.  ಮಾರ್ಚ್ 1, 2024 ದಾಖಲೆಯತೆ, ಒಟ್ಟು 10.27 ಕೋಟಿಗೂ ಹೆಚ್ಚು ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿ.ಎಂ.ಯು.ಜೆ)  ಫಲಾನುಭವಿಗಳಿದ್ದಾರೆ. 

2024-25ರ ಆರ್ಥಿಕ ವರ್ಷಕ್ಕೆ ಒಟ್ಟು ವೆಚ್ಚ ರೂ.12,000 ಕೋಟಿಗಳಾಗಿರುತ್ತದೆ.  ಸಹಾಯಧನವನ್ನು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

ಶುದ್ಧ ಅಡುಗೆ ಇಂಧನ ವನ್ನು (ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ – ಎಲ್.ಪಿ.ಜಿ) ಗ್ರಾಮೀಣ ಮತ್ತು ವಂಚಿತ ಬಡ ಕುಟುಂಬಗಳಿಗೆ ಲಭ್ಯವಾಗುವಂತೆ ಮಾಡಲು, ಬಡ ಕುಟುಂಬಗಳ ವಯಸ್ಕ ಮಹಿಳೆಯರಿಗೆ ಉಚಿತ ಠೇವಣಿ ಸಹಿತ ಎಲ್.ಪಿ.ಜಿ ಸಂಪರ್ಕಗಳನ್ನು ಒದಗಿಸಲು ಸರ್ಕಾರವು ಮೇ 2016 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಪ್ರಾರಂಭಿಸಿತು.

ಭಾರತವು ತನ್ನ ಎಲ್.ಪಿ.ಜಿ ಅವಶ್ಯಕತೆಯ ಸುಮಾರು 60% ಅನ್ನು ಆಮದು ಮಾಡಿಕೊಳ್ಳುತ್ತದೆ.  ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿ.ಎಂ.ಯು.ಜೆ) ಫಲಾನುಭವಿಗಳನ್ನು ಎಲ್ಪಿಜಿಯ ಅಂತರರಾಷ್ಟ್ರೀಯ ಬೆಲೆಗಳಲ್ಲಿನ ತೀವ್ರ ಏರಿಳಿತದ ಪ್ರಭಾವದಿಂದ ರಕ್ಷಿಸಲು ಮತ್ತು ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿ.ಎಂ.ಯು.ಜೆ)   ಗ್ರಾಹಕರಿಗೆ ಎಲ್ಪಿಜಿಯನ್ನು ಇನ್ನೂ ಕೈಗೆಟುಕುವಂತೆ ಮಾಡಲು ಹಾಗೂ ಎಲ್ಪಿಜಿಯ ನಿರಂತರ ಬಳಕೆಯನ್ನು ಖಚಿತಪಡಿಸಿಕೊಳ್ಳಲು, ಸರ್ಕಾರವು ಪ್ರತಿ 14.2 ಕೆ.ಜಿ ಸಿಲಿಂಡರ್ಗೆ ರೂ.200/- ರಷ್ಟು ಉದ್ದೇಶಿತ ಸಬ್ಸಿಡಿಯನ್ನು ಪ್ರಾರಂಭಿಸಿತು.  ಮೇ 2022 ರಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿ.ಎಂ.ಯು.ಜೆ) ಫಲಾನುಭವಿಗಳಿಗೆ ವಾರ್ಷಿಕವಾಗಿ 12 ಮರುಪೂರಣ( ರೀಫಿಲ್ಲಿಂಗ್ )ಗಳಿಗೆ (ಮತ್ತು ಪ್ರಮಾಣಾನುಗುಣವಾಗಿ ಅನುಪಾತದಲ್ಲಿ 5 ಕೆಜಿ ಸಂಪರ್ಕಗಳಿಗೆ ಪ್ರೊ-ರೇಟ್ ಮಾಡಲಾಗಿದೆ).  01.02.2024 ರಂತೆ, ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿ.ಎಂ.ಯು.ಜೆ) ಫಲಾನುಭವಿಗಳಿಗೆ ದೇಶೀಯ 14.2 ಕೆಜಿ ಎಲ್.ಪಿ.ಜಿ ಸಿಲಿಂಡರ್  (ದೆಹಲಿ) ಗಾಗಿ ತಗಲುವ ಬೆಲೆ ರೂ.603 ಆಗಿದೆ.

ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿ.ಎಂ.ಯು.ಜೆ)   ಫಲಾನುಭವಿಗಳ ಸರಾಸರಿ ಎಲ್.ಪಿ.ಜಿ ಬಳಕೆಯು 2019-20 ರಲ್ಲಿ 3.01 ರೀಫಿಲ್ಗಳಿಂದ (ಜನವರಿ 2024 ರವರೆಗೆ) 29 ಪ್ರತಿಶತದಷ್ಟು ಹೆಚ್ಚಾಗಿ, 2023-24 ಕ್ಕೆ ಅನುಪಾತದಲ್ಲಿ 3.87 ಮರುಪೂರಣ( ರೀಫಿಲ್ಲಿಂಗ್ ) ಆಗಿದೆ.  ಪ್ರಧಾನಮಂತ್ರಿ ಉಜ್ವಲ ಯೋಜನೆಯ (ಪಿ.ಎಂ.ಯು.ಜೆ) ಎಲ್ಲಾ  ಫಲಾನುಭವಿಗಳು ಕೂಡಾ ಈ ಉದ್ದೇಶಿತ ರಿಯಾಯಿತಿಗೆ ಅರ್ಹರಾಗಿದ್ದಾರೆ.

*****