ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಲ್ಜಿಯಂನ ಎಚ್ ಆರ್ ಎಚ್ ರಾಜಕುಮಾರಿ ಆಸ್ಟ್ರಿಡ್ ಅವರನ್ನು ಭೇಟಿ ಮಾಡಿದರು. ಭಾರತಕ್ಕೆ 300 ಸದಸ್ಯರ ಆರ್ಥಿಕ ನಿಯೋಗವನ್ನು ಮುನ್ನಡೆಸುವ ಅವರ ಉಪಕ್ರಮವನ್ನು ಅವರು ಶ್ಲಾಘಿಸಿದರು.
ಈ ಸಂಬಂಧ ಎಕ್ಸ್ ಖಾತೆಯ ಪೋಸ್ಟ್ ನಲ್ಲಿ, ಅವರು ಹೀಗೆ ಹೇಳಿದ್ದಾರೆ:
“ಬೆಲ್ಜಿಯಂನ ಎಚ್ಆರ್ ಎಚ್ ರಾಜಕುಮಾರಿ ಆಸ್ಟ್ರಿಡ್ ಅವರನ್ನು ಭೇಟಿಯಾಗಲು ಸಂತೋಷವಾಗಿದೆ. ಭಾರತಕ್ಕೆ 300 ಸದಸ್ಯರ ಆರ್ಥಿಕ ಮಿಷನ್ ಅನ್ನು ಮುನ್ನಡೆಸುವ ಅವರ ಉಪಕ್ರಮವನ್ನು ಆಳವಾಗಿ ಪ್ರಶಂಸಿಸುತ್ತೇನೆ. ವ್ಯಾಪಾರ, ತಂತ್ರಜ್ಞಾನ, ರಕ್ಷಣೆ, ಕೃಷಿ, ಜೀವ ವಿಜ್ಞಾನ, ನಾವೀನ್ಯತೆ, ಕೌಶಲ್ಯ ಮತ್ತು ಶೈಕ್ಷಣಿಕ ವಿನಿಮಯದಲ್ಲಿ ಹೊಸ ಪಾಲುದಾರಿಕೆಯ ಮೂಲಕ ನಮ್ಮ ಜನರಿಗೆ ಅಪರಿಮಿತ ಅವಕಾಶಗಳನ್ನು ಮುಕ್ತಗೊಳಿಸಲು ಎದುರು ನೋಡುತ್ತಿದ್ದೇವೆ”ಎಂದು ಹೇಳಿದರು.
@MonarchieBe
*****
Pleased to meet HRH Princess Astrid of Belgium. Deeply appreciate her initiative to lead a 300-member Economic Mission to India. Look forward to unlocking limitless opportunities for our people through new partnerships in trade, technology, defence, agriculture, life sciences,… pic.twitter.com/Fjx0x44Vob
— Narendra Modi (@narendramodi) March 4, 2025