ಕುವೈತ್‌ನ ಅಮೀರ್ ಆಗಿರುವ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಬೇರ್ ಅಲ್-ಸಬಾಹ್ ಅವರು ಕುವೈತ್‌ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ಮುಬಾರಕ್ ಅಲ್-ಕಬೀರ್ ಆರ್ಡರ್ ಅನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಪ್ರದಾನ ಮಾಡಿದರು. ಕುವೈತ್ ಪ್ರಧಾನಿ ಶೇಖ್ ಅಹ್ಮದ್ ಅಲ್-ಅಬ್ದುಲ್ಲಾ ಅಲ್-ಅಹ್ಮದ್ ಅಲ್-ಸಬಾಹ್ ಅವರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಭಾರತ ಮತ್ತು ಕುವೈತ್ ನಡುವಿನ ದೀರ್ಘಕಾಲದ ಮೈತ್ರಿಗೆ ಹಾಗೂ ಕುವೈತ್‌ನಲ್ಲಿರುವ ಭಾರತೀಯ ಸಮುದಾಯ ಮತ್ತು ಭಾರತದ 1.4 ಶತಕೋಟಿ ಜನರಿಗೆ ಪ್ರಧಾನಮಂತ್ರಿಯವರು ಈ ಪ್ರಶಸ್ತಿಯನ್ನು ಅರ್ಪಿಸಿದ್ದಾರೆ.
ಭಾರತದ ಪ್ರಧಾನಿಯೊಬ್ಬರು 43 ವರ್ಷಗಳ ನಂತರ ಕುವೈತ್‌ಗೆ ಐತಿಹಾಸಿಕ ಭೇಟಿ ನೀಡಿದಾಗ ಪ್ರಶಸ್ತಿ ಪ್ರದಾನ ಮಾಡಿರುವುದು ಈ ಸಂದರ್ಭಕ್ಕೆ ವಿಶೇಷ ಮೆರುಗು ನೀಡಿದೆ.
ಪ್ರಶಸ್ತಿಯನ್ನು 1974ರಲ್ಲಿ ಸ್ಥಾಪಿಸಲಾಗಿದ್ದು ಆಯ್ದ ಜಾಗತಿಕ ನಾಯಕರಿಗೆ ನೀಡಲಾಗುತ್ತಿದೆ.
*****
I am honoured to be conferred the Mubarak Al-Kabeer Order by His Highness the Amir of Kuwait, Sheikh Meshal Al-Ahmad Al-Jaber Al Sabah. I dedicate this honour to the people of India and to the strong friendship between India and Kuwait. pic.twitter.com/fRuWIt34Cx
— Narendra Modi (@narendramodi) December 22, 2024
يشرفني أن أحظى بوسام مبارك الكبير من صاحب السمو أمير دولة الكويت الشيخ مشعل الأحمد الجابر الصباح. وأهدي هذا التكريم إلى شعب الهند وإلى الصداقة القوية بين الهند والكويت. pic.twitter.com/jhfmtGn032
— Narendra Modi (@narendramodi) December 22, 2024