Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಅವರಿಂದ 16ನೇ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಅಧ್ಯಕ್ಷರಾದ ಶ್ರೀ ಕ್ಸಿ ಜಿನ್ ಪಿಂಗ್ ಅವರ ಭೇಟಿ

ಪ್ರಧಾನಮಂತ್ರಿ ಅವರಿಂದ 16ನೇ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಅಧ್ಯಕ್ಷರಾದ ಶ್ರೀ ಕ್ಸಿ ಜಿನ್ ಪಿಂಗ್ ಅವರ ಭೇಟಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2024 ರ ಅಕ್ಟೋಬರ್ 23 ರಂದು ಕಜಾನ್ನಲ್ಲಿ 16ನೇ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಅಧ್ಯಕ್ಷರಾದ ಶ್ರೀ ಕ್ಸಿ ಜಿನ್ಪಿಂಗ್ ಅವರನ್ನು ಭೇಟಿ ಮಾಡಿದರು.

ಭಾರತ-ಚೀನಾ ಗಡಿ ಪ್ರದೇಶದಲ್ಲಿ 2020ರಲ್ಲಿ ಉದ್ಭವಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಸಂಪೂರ್ಣಾವಾಗಿ ಹಿಂದೆ ಸರಿಯುವ ಇತ್ತೀಚಿನ ಒಪ್ಪಂದವನ್ನು ಸ್ವಾಗತಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳು ಶಾಂತಿ ಮತ್ತು ನೆಮ್ಮದಿಗೆ ಭಂಗ ತರಲು ಅವಕಾಶ ನೀಡದೇ ಅವುಗಳನ್ನು ಸರಿಯಾಗಿ ನಿಭಾಯಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಭಾರತ-ಚೀನಾ ಗಡಿ ಸಮಸ್ಯೆಗಳಿಗೆ ನ್ಯಾಯೋಚಿತ, ಸಮಂಜಸವಾದ ಮತ್ತು ಪರಸ್ಪರ ಸ್ವೀಕಾರಾರ್ಹ ಪರಿಹಾರವನ್ನು ಕಂಡುಕೊಳ್ಳಲು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯ ಮೇಲ್ವಿಚಾರಣೆಗಾಗಿ ಅತಿ ಶೀಘ್ರದಲ್ಲೇ ಭಾರತ-ಚೀನಾ ಗಡಿ ಪ್ರಶ್ನೆ ಕುರಿತಾದ ವಿಶೇಷ ಪ್ರತಿನಿಧಿಗಳು ಸಭೆ ಸೇರಲು ಉಭಯ ನಾಯಕರು ಒಪ್ಪಿಕೊಂಡರು. ದ್ವಿಪಕ್ಷೀಯ ಬಾಂಧವ್ಯ ಮರುಸ್ಥಾಪಿಸಲು ಮತ್ತು ಸ್ಥಿರತೆಗಾಗಿ ವಿದೇಶಾಂಗ ಸಚಿವರು ಮತ್ತು ಇತರ ಅಧಿಕಾರಿಗಳ ಮಟ್ಟದಲ್ಲಿ ಸೂಕ್ತ ಮಾತುಕತೆ ಕಾರ್ಯವಿಧಾನಗಳನ್ನು ಸಹ ಬಳಸಿಕೊಳ್ಳಲಾಗುತ್ತದೆ.

ಭಾರತ ಮತ್ತು ಚೀನಾ, ಎರಡು ನೆರೆಯ ರಾಷ್ಟ್ರಗಳಾಗಿ ಮತ್ತು ಭೂಮಿಯ ಮೇಲಿನ ಎರಡು ದೊಡ್ಡ ರಾಷ್ಟ್ರಗಳಾಗಿದ್ದು ಇವುಗಳ ಸ್ಥಿರ, ಊಹಿಸಬಹುದಾದ ಮತ್ತು ಸೌಹಾರ್ದಯುತ ದ್ವಿಪಕ್ಷೀಯ ಸಂಬಂಧಗಳು ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ ಮತ್ತು ಸಮೃದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಲ್ಲದು ಎಂದು ಉಭಯ ನಾಯಕರು ವಿಶ್ವಾಸ ವ್ಯಕ್ತಪಡಿಸಿದರು. ಇದು ಬಹು ಅಧಿಕಾರ ಶಕ್ತಿಯ ಏಷ್ಯಾ ಮತ್ತು ಬಹು ಅಧಿಕಾರ ಶಕ್ತಿಯ ಜಗತ್ತಿಗೆ ಕೂಡ ಕೊಡುಗೆ ನೀಡಲಿದೆ. ದ್ವಿಪಕ್ಷೀಯ ಸಂಬಂಧಗಳನ್ನು ತಾಂತ್ರಿಕ ಮತ್ತು ದೀರ್ಘಾವಧಿಯ ದೃಷ್ಟಿಕೋನದಿಂದ ಕಾರ್ಯತಂತ್ರದ ಸಂವಹನಕ್ಕೆ ವಿಸ್ತರಿಸಲು ಮತ್ತು ಅಭಿವೃದ್ಧಿಯ ಸವಾಲುಗಳನ್ನು ಎದುರಿಸಲು ಬಾಂಧವ್ಯವನ್ನು ಇನ್ನಷ್ಟು ಆಳಗೊಳಿಸುವ ಅಗತ್ಯವನ್ನು ಉಭಯ ನಾಯಕರು ಒತ್ತಿ ಹೇಳಿದರು.

 

*****