Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಅವರಿಂದ ಬಿಮ್‌ಸ್ಟೆಕ್ ಶೃಂಗಸಭೆಯ ಸಂದರ್ಭದಲ್ಲಿ ನೇಪಾಳ ಪ್ರಧಾನಮಂತ್ರಿಯವರ ಭೇಟಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೇಪಾಳದ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ಕೆ.ಪಿ.ಶರ್ಮಾ ಓಲಿ ಅವರನ್ನು ಬ್ಯಾಂಕಾಕ್‌ ನಲ್ಲಿ ಇಂದು 6ನೇ ಬಿಮ್‌ಸ್ಟೆಕ್ ಶೃಂಗಸಭೆಯ ನೇಪಥ್ಯದಲ್ಲಿ ಭೇಟಿ ಮಾಡಿದರು.

ಭಾರತ ಮತ್ತು ನೇಪಾಳ ನಡುವಿನ ಅನನ್ಯ ಮತ್ತು ನಿಕಟ ಬಾಂಧವ್ಯವನ್ನು ಉಭಯ ನಾಯಕರು ಪರಾಮರ್ಶಿಸಿದರು. ಭೌತಿಕ ಮತ್ತು ಡಿಜಿಟಲ್ ಸಂಪರ್ಕ ವೃದ್ಧಿ, ಜನರ ನಡುವಿನ ಸಂಪರ್ಕ ಮತ್ತು ಇಂಧನ ವಲಯದಲ್ಲಿ ಪ್ರಗತಿಯ ಬಗ್ಗೆ ಅವರು ತೃಪ್ತಿ ವ್ಯಕ್ತಪಡಿಸಿದರು.  ಉಭಯ ದೇಶಗಳು ಮತ್ತು ಜನರ ನಡುವಿನ ಬಹುಮುಖಿ ಸಹಭಾಗಿತ್ವವನ್ನು ಇನ್ನಷ್ಟು ಗಾಢಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮುಂದುವರಿಸಲು ಅವರು ಸಮ್ಮತಿಸಿದರು.

ನೆರೆಹೊರೆಯವರು ಮೊದಲು ನೀತಿಯ ಅಡಿಯಲ್ಲಿ ನೇಪಾಳವು ಭಾರತದ ಆದ್ಯತಾ ಪಾಲುದಾರ.  ಈ ಸಭೆಯು ಎರಡೂ ದೇಶಗಳ ನಡುವೆ ನಿಯಮಿತ ಉನ್ನತ ಮಟ್ಟದ ವಿನಿಮಯದ ಸಂಪ್ರದಾಯವನ್ನು ಮುಂದುವರಿಸಿದೆ.

 

*****