Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಯವರ ಮುಂದಿನ ಚೈನಾ ಮತ್ತು ಮ್ಯಾನ್ಮಾರ್ ಭೇಟಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚೈನಾದ ಕ್ಸಿಮೆನ್ ನಲ್ಲಿ 2017ರ ಸೆಪ್ಟೆಂಬರ್ 3-5ರವರೆಗೆ ನಡೆಯಲಿರುವ 9ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನಮಂತ್ರಿಯವರು 2017ರ ಸೆಪ್ಟೆಂಬರ್ 5-7ರವರೆಗೆ ಮ್ಯಾನ್ಮಾರ್ ಗೆ ಅಧಿಕೃತ ಭೇಟಿ ನೀಡಲಿದ್ದಾರೆ.

ತಮ್ಮ ಫೆಸ್ಬುಕ್ ಖಾತೆಯಲ್ಲಿ ಸರಣಿ ಪೋರ್ಟ್ ಹಾಕಿರುವ ಪ್ರಧಾನಮಂತ್ರಿಯವರು ಈ ಕೆಳಕಂಡಂತೆ ತಿಳಿಸಿದ್ದಾರೆ:

“ನಾನು 9ನೇ ಬ್ರಿಕ್ಸ್ ಶೃಂಗಸಭೆಗಾಗಿ 2017ರ ಸೆಪ್ಟೆಂಬರ್ 3-5ರವರೆಗೆ ಚೈನಾದ ಕ್ಸಿಮೆನ್ ಗೆ ಭೇಟಿ ನೀಡುತ್ತಿದ್ದೇನೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಗೋವಾದಲ್ಲಿ ಶೃಂಗಸಭೆಯ ಆತಿಥ್ಯವಹಿಸುವ ಗೌರವವನ್ನು ಭಾರತ ಪಡೆದಿತ್ತು. ಗೋವಾ ಶೃಂಗಸಭೆಯ ಫಲಶ್ರುತಿ ಮತ್ತು ಫಲಿತಾಂಶದ ಮೇಲೆ ನಿರ್ಮಾಣ ಮಾಡಲು ನಾನು ಎದಿರು ನೋಡುತ್ತಿದ್ದೇನೆ. ಚೈನಾದ ಅಧ್ಯಕ್ಷತೆಯಡಿಯಲ್ಲಿ ಬಲವಾದ ಬ್ರಿಕ್ಸ್ ಪಾಲುದಾರಿಕೆಯ ಕಾರ್ಯಕ್ರಮಪಟ್ಟಿಗೆ ಬೆಂಬಲ ನೀಡುವಂಥ ಧನಾತ್ಮಕ ಫಲಶ್ರುತಿ ಮತ್ತು ಫಲಪ್ರದ ಚರ್ಚೆಯನ್ನು ನಾನು ಎದಿರು ನೋಡುತ್ತಿದ್ದೇನೆ.

ನಾವು ಎಲ್ಲ ಐದು ರಾಷ್ಟ್ರಗಳ ಕೈಗಾರಿಕೆಗಳ ಮುಖ್ಯಸ್ಥರು ಪ್ರತಿನಿಧಿಸುವ ಬ್ರಿಕ್ಸ್ ವಾಣಿಜ್ಯ ಮಂಡಳಿಯೊಂದಿಗೆ ಸಂವಾದ ನಡೆಸಲಿದ್ದೇವೆ.
ಜೊತೆಗೆ, ಸೆಪ್ಟೆಂಬರ್ 5ರಂದು ಅಧ್ಯಕ್ಷ ಕ್ಸಿ ಜಿಪಿಂಗ್ ಅವರು ಆಯೋಜಿಸಿರುವ ಹೊರಹೊಮ್ಮುತ್ತಿರುವ ಮಾರುಕಟ್ಟೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಮಾತುಕತೆಯಲ್ಲಿ ಬ್ರಿಕ್ಸ್ ಪಾಲುದಾರರು ಸೇರಿದಂತೆ ಇತರ ಒಂಬತ್ತು ರಾಷ್ಟ್ರಗಳ ನಾಯಕರೊಂದಿಗೆ ಮಾತುಕತೆಯನ್ನೂ ನಾನು ಎದಿರು ನೋಡುತ್ತಿದ್ದೇನೆ.

ಶೃಂಗದ ವೇಳೆ ನಾಯಕರುಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುವ ಅವಕಾಶವೂ ನನಗೆ ದೊರೆಯಲಿದೆ.
ಭಾರತವು ಬ್ರಿಕ್ಸ್ ಆರಂಭಕ್ಕೆ ಉನ್ನತ ಮಹತ್ವ ಹೊಂದಿದ್ದು, ಅದು ತನ್ನ ಶಾಂತಿ ಮತ್ತು ಪ್ರಗತಿಯ ಪಾಲುದಾರಿಕೆಯ ಎರಡನೇ ದಶಕ ಆರಂಭಿಸಿದೆ. ಬ್ರಿಕ್ಸ್ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಮತ್ತು ವಿಶ್ವದ ಶಾಂತಿ ಮತ್ತು ಭದ್ರತೆಯನ್ನು ಎತ್ತಿ ಹಿಡಿಯುವಲ್ಲಿ ಮಹತ್ವದ ಕೊಡುಗೆ ನೀಡಿದೆ.

ನಾನು, ಮ್ಯಾನ್ಮಾರ್ ಗಣತಂತ್ರ ಒಕ್ಕೂಟದ ಅಧ್ಯಕ್ಷ ಘನತೆವೆತ್ತ ಯು. ಹಿಟಿನ್ ಕ್ವಾ ಅವರ ಆಹ್ವಾನದ ಮೇರೆಗೆ 2017ರ ಸೆಪ್ಟೆಂಬರ್ 5-7ರವರೆಗೆ ಮ್ಯಾನ್ಮಾರ್ ಗೆ ಭೇಟಿ ನೀಡುತ್ತಿದ್ದೇನೆ. ನಾನು 2014ರಲ್ಲಿ ಆಸಿಯಾನ್-ಭಾರತ ಶೃಂಗಕ್ಕಾಗಿ ಈ ಸುಂದರ ದೇಶಕ್ಕೆ ಭೇಟಿ ನೀಡಿದ್ದೆ, ಆದರೆ ಇದು ಮ್ಯಾನ್ಮಾರ್ ಗೆ ನನ್ನ ಪ್ರಥಮ ದ್ವಿಪಕ್ಷೀಯ ಭೇಟಿಯಾಗಿದೆ.

ನಾನು ಅಧ್ಯಕ್ಷ ಯು. ಹಿಟಿನ್ ಕ್ವಾ ಅವರನ್ನು ಮತ್ತು ವಿದೇಶಾಂಗ ಸಚಿವರು, ಅಧ್ಯಕ್ಷರ ಕಾರ್ಯಾಲಯದ ಸಚಿವರು ಮತ್ತು ಸ್ಟೇಟ್ ಚಾನ್ಸಲರ್ ಘನತೆವೆತ್ತ ಡ್ವಾ ಆಂಗ್ ಸಾನ್ ಸ್ಯೂ ಕಿ ಅವರನ್ನು ಭೇಟಿ ಮಾಡಲು ಉತ್ಸುಕನಾಗಿದ್ದೇನೆ. ನಾನು 2016ರಲ್ಲಿ ಅವರು ಭಾರತ ಭೇಟಿ ಕೈಗೊಂಡಿದ್ದಾಗ ಇಬ್ಬರೂ ನಾಯಕರೊಂದಿಗೆ ಚರ್ಚಿಸುವ ಅವಕಾಶ ಪಡೆದಿದ್ದೆ.

ಭೇಟಿಯ ವೇಳೆ, ನಾವು ನಮ್ಮ ದ್ವಿಪಕ್ಷೀಯ ಬಾಂಧವ್ಯದಲ್ಲಿನ ಅದರಲ್ಲೂ ಮ್ಯಾನ್ಮಾರ್ ನಲ್ಲಿ ಭಾರತ ಕೈಗೊಳ್ಳುತ್ತಿರುವ ಅಭಿವೃದ್ಧಿ ಸಹಕಾರ ಮತ್ತು ಸಾಮಾಜಿಕ-ಆರ್ಥಿಕ ನೆರವಿನ ವಿಸ್ತೃತ ಕಾರ್ಯಕ್ರಮದ ಪ್ರಗತಿಯ ಬಗ್ಗೆ ಪರಾಮರ್ಶಿಸಲಿದ್ದೇವೆ ಮತ್ತು ನಾವು ಒಗ್ಗೂಡಿ ಶ್ರಮಿಸಲು ಹೊಸ ಕ್ಷೇತ್ರಗಳನ್ನು ಅನ್ವೇಷಿಸಲಿದ್ದೇವೆ.

ನಾವು ನಮ್ಮ ಪ್ರಸ್ತುತ ಇರುವ ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹ, ವಾಣಿಜ್ಯ ಮತ್ತು ಹೂಡಿಕೆ, ಕೌಶಲ ಅಭಿವೃದ್ಧಿ, ಮೂಲಸೌಕರ್ಯ ಮತ್ತು ಇಂಧನ ಹಾಗೂ ಸಂಸ್ಕೃತಿಯ ಸಹಕಾರವನ್ನು ಬಲಪಡಿಸಲು ಎದಿರು ನೋಡುತ್ತಿದ್ದೇವೆ.
ಹೆಸರಾಂತ ಪಾರಂಪರಿಕ ನಗರಿ ಭಗಾನ್ ಗೆ ಭೇಟಿ ನೀಡಲೂ ಕಾತರದಿಂದಿದ್ದೇನೆ, ಅಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಲ್ಲಿ ಆನಂದ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದೆ ಮತ್ತು ಅದು ಕಳೆದ ವರ್ಷ ಭೂಕಂಪದಲ್ಲಿ ಹಾನಿಗೀಡಾದ ಭಿತ್ತಿಚಿತ್ರಗಳು ಮತ್ತು ಅಲ್ಲಿನ ಹಲವು ಪಗೋಡಗಳಲ್ಲಿ, ಮತ್ತಷ್ಟು ಪುನರ್ ಸ್ಥಾಪನೆ ಕಾರ್ಯ ಕೈಗೊಂಡಿದೆ.

ನಾನು, ಯಾಂಗನ್ ನಲ್ಲಿ ನನ್ನ ಭೇಟಿ ಪೂರ್ಣಗೊಳಿಸಲಿದ್ದೇನೆ, ಅಲ್ಲಿ ನಾನು ಭಾರತ ಮತ್ತು ಮ್ಯಾನ್ಮಾರ್ ನ ಹಂಚಿಕೆಯ ಪರಂಪರೆಯನ್ನು ಸಂಕೇತಿಸುವ ಹಲವು ಐತಿಹಾಸಿಕ ತಾಣಗಳ ಭೇಟಿಗೆ ಉತ್ಸುಕನಾಗಿದ್ದೇನೆ.

ನಾನು ಶತಮಾನಗಳಿಗೂ ಹಿಂದಿನ ಇತಿಹಾಸಕ್ಕೆ ಹೋಗುವ ಮ್ಯಾನ್ಮಾರ್ ನ ಭಾರತೀಯ ಮೂಲದ ಸಮುದಾಯದೊಂದಿಗೆ ಮಾತುಕತೆ ನಡೆಸಲೂ ಕಾತರನಾಗಿದ್ದೇನೆ.

ಈ ಭೇಟಿಯು ಭಾರತ – ಮ್ಯಾನ್ಮಾರ್ ಬಾಂಧವ್ಯದಲ್ಲಿ ಪ್ರಜ್ವಲ ಹೊಸ ಅಧ್ಯಾಯ ತೆರೆಯಲಿದೆ ಮತ್ತು ನಮ್ಮ ಸರ್ಕಾರಗಳ, ನಮ್ಮ ವಾಣಿಜ್ಯ ಸಮುದಾಯಗಳ ನಡುವೆ ಮತ್ತು ಜನರಿಂದ ಜನರ ಮಟ್ಟದಲ್ಲಿ ಆಪ್ತ ಸಹಕಾರದ ಮಾರ್ಗಸೂಚಿಯನ್ನು ರೂಪಿಸಲು ಸಹಕಾರಿಯಾಗಲಿದೆ ಎಂಬ ವಿಶ್ವಾಸ ನನಗಿದೆ.”

******