Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಯವರು ಪ್ರವಾಸಿ ಭಾರತೀಯ ದಿವಸದ ಸಂದರ್ಭದಲ್ಲಿ ಶುಭಾಶಯ ಕೋರಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರವಾಸಿ ಭಾರತೀಯ ದಿವಸದ ಸಂದರ್ಭದಲ್ಲಿ ಶುಭಾಶಯಗಳನ್ನು ಕೋರಿದರು. ಅವರು ವಿಶ್ವಾದ್ಯಂತ ಇರುವ ಭಾರತೀಯ  ಮೂಲದವರ ಕೊಡುಗೆಗಳು ಮತ್ತು ಸಾಧನೆಗಳನ್ನು ಶ್ಲಾಘಿಸಿದರು.

ಪ್ರಧಾನಮಂತ್ರಿಯವರು ಸಾಮಾಜಿಕ ಜಾಲತಾಣ  ಎಕ್ಸ್ ನಲ್ಲಿ ಹೀಗೆ ಹೇಳಿದ್ದಾರೆ ;

“ಪ್ರವಾಸಿ ಭಾರತೀಯ ದಿವಸದ ಶುಭಾಶಯಗಳು. ವಿಶ್ವಾದ್ಯಂತ ಭಾರತೀಯ ಮೂಲದವರ ಕೊಡುಗೆಗಳು ಮತ್ತು ಸಾಧನೆಗಳನ್ನು ಆಚರಿಸುವ ದಿನವಿದು. ನಮ್ಮ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ಮತ್ತು ಜಾಗತಿಕ ಸಂಬಂಧಗಳನ್ನು ಬಲಪಡಿಸುವ ಅವರ ಬದ್ಧತೆ ಶ್ಲಾಘನೀಯ. ಅವರು ಪ್ರಪಂಚದಾದ್ಯಂತ ಭಾರತದ ಚೈತನ್ಯವನ್ನು ಸಾಕಾರಗೊಳಿಸುತ್ತಾರೆ, ಏಕತೆ ಮತ್ತು ವೈವಿಧ್ಯತೆಯ ಭಾವವನ್ನು ಬೆಳೆಸುತ್ತಾರೆ.

*********