Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಯವರು ಜನೌಷಧಿ ಯೋಜನೆಯ ಫಲಾನುಭವಿಗಳೊಂದಿಗೆ ಮಾತುಕತೆ ನಡೆಸಿದರು

ಪ್ರಧಾನಮಂತ್ರಿಯವರು ಜನೌಷಧಿ ಯೋಜನೆಯ ಫಲಾನುಭವಿಗಳೊಂದಿಗೆ ಮಾತುಕತೆ ನಡೆಸಿದರು


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್  ಮೂಲಕ ಜನೌಷಧಿ ಕೇಂದ್ರದ ಮಾಲೀಕರು ಮತ್ತು ಯೋಜನೆಯ ಫಲಾನುಭವಿಗಳೊಂದಿಗೆ ಮಾತುಕತೆ ನಡೆಸಿದರು. ಜನರಿಕ್ ಔಷಧಿಗಳ ಬಳಕೆ ಮತ್ತು ಜನೌಷಧಿ ಪರಿಯೋಜನಾ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಮಾರ್ಚ್ 1 ರಿಂದ ದೇಶಾದ್ಯಂತ ಜನೌಷಧಿ ಸಪ್ತಾಹವನ್ನು ಆಚರಿಸಲಾಗುತ್ತದೆ. ಈ ಕಾರ್ಯಕ್ರಮದ ವಿಷಯ “ಜನ ಔಷಧಿ -ಜನ ಉಪಯೋಗಿ”. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಡಾ.ಮನ್ಸುಖ್ ಮಾಂಡವಿಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪಾಟ್ನಾದ ಫಲಾನುಭವಿ ಶ್ರೀಮತಿ ಹಿಲ್ಡಾ ಆಂಟನಿ ಅವರೊಂದಿಗೆ ಮಾತನಾಡಿದ ಪ್ರಧಾನಮಂತ್ರಿಯವರು, ಜನೌಷಧಿ ಔಷಧಿಗಳ ಬಗ್ಗೆ ಅವರಿಗೆ ಹೇಗೆ ತಿಳಿಯಿತು ಎಂದು ಕೇಳಿದರು. ಔಷಧಗಳ ಗುಣಮಟ್ಟದ ಬಗ್ಗೆಯೂ ವಿಚಾರಿಸಿದರು. ಈ ಹಿಂದೆ 1200- 1500 ರೂಪಾಯಿಗಳಿಗೆ ಸಿಗುತ್ತಿದ್ದ ತನ್ನ ಮಾಸಿಕ ಔಷಧಿಗಳು  ಈಗ 250 ರೂಪಾಯಿಗಳಿಗೆ ಪಡೆಯಲು ಸಾಧ್ಯವಾಗುವುದರಿಂದ ತನಗೆ ಇದರಿಂದ ಹೆಚ್ಚು ಪ್ರಯೋಜನವಾಗಿದೆ ಎಂದು ಅವರು ಉತ್ತರಿಸಿದರು. ಉಳಿತಾಯದ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುತ್ತೇನೆ ಎಂದರು. ಪ್ರಧಾನಮಂತ್ರಿಯವರು ಆಕೆಯ ಚೈತನ್ಯವನ್ನು ಶ್ಲಾಘಿಸಿದರು ಮತ್ತು ಅವರಂತಹ ಜನರ ಮೂಲಕ ಜನೌಷಧಿಯಲ್ಲಿ ಜನರ ನಂಬಿಕೆಯು ಹೆಚ್ಚಾಗಲಿ ಎಂದು ಹಾರೈಸಿದರು. ಮಧ್ಯಮ ವರ್ಗದವರು ಈ ಯೋಜನೆಗೆ ಉತ್ತಮ ರಾಯಭಾರಿಯಾಗಬಹುದು ಎಂದರು. ಅವರು ಸಮಾಜದ ಮಧ್ಯಮ ಮತ್ತು ಕೆಳಮಧ್ಯಮ ಮತ್ತು ಬಡ ವರ್ಗಗಳ ಆರ್ಥಿಕ ಪರಿಸ್ಥಿತಿಯ ಮೇಲೆ ಕಾಯಿಲೆಗಳ  ಪ್ರಭಾವದ ಬಗ್ಗೆ ಮಾತನಾಡಿದರು. ಜನೌಷಧಿಯ ಪ್ರಯೋಜನಗಳ ಬಗ್ಗೆ ಸಮಾಜದ ಶಿಕ್ಷಿತರು ಮಾತನಾಡಬೇಕು ಎಂದು ಕರೆ ನೀಡಿದರು.

ಭುವನೇಶ್ವರದ ದಿವ್ಯಾಂಗ್ ಫಲಾನುಭವಿ ಶ್ರೀ ಸುರೇಶ್ ಚಂದ್ರ ಬೆಹೆರಾ ಅವರೊಂದಿಗೆ ಮಾತನಾಡಿದ ಪ್ರಧಾನಮಂತ್ರಿಯವರು, ಜನೌಷಧಿ ಪರಿಯೋಜನಾ ಕುರಿತು ಅವರ ಅನುಭವದ ಬಗ್ಗೆ ವಿಚಾರಿಸಿದರು. ಅವರಿಗೆ ಅಗತ್ಯವಿರುವ ಎಲ್ಲಾ ಔಷಧಗಳು ಜನೌಷಧಿ ಮಳಿಗೆಯಲ್ಲಿ ಲಭ್ಯವಿದೆಯೇ ಎಂದು ಪ್ರಧಾನಮಂತ್ರಿಯವರು ಕೇಳಿದರು. ಶ್ರೀ ಬೆಹೆರಾ ಅವರು ಜನೌಷಧಿ ಅಂಗಡಿಯಿಂದ ಎಲ್ಲಾ ಔಷಧಿಗಳನ್ನು ಪಡೆಯುತ್ತಾರೆ ಮತ್ತು ಅವರ ಪೋಷಕರಿಗೆ ಕೂಡ ಔಷಧಿಗಳ ಅಗತ್ಯವಿರುವುದರಿಂದ ಪ್ರತಿ ತಿಂಗಳು 2000-2500 ರೂಪಾಯಿಗಳನ್ನು ಉಳಿಸುತ್ತಾರೆ ಎಂದು ಹೇಳಿದರು. ಅವರ ಕುಟುಂಬದ ಚೇತರಿಕೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಧಾನಮಂತ್ರಿಯವರು ಸ್ವಾಮಿ ಜಗನ್ನಾಥನಲ್ಲಿ ಪ್ರಾರ್ಥಿಸಿದರು. ದಿವ್ಯಾಂಗರಾಗಿರುವ ಶ್ರೀ ಬೆಹೆರಾ ಅವರ ಹುಮ್ಮಸ್ಸನ್ನು ಮತ್ತು  ಜೀವನದ ಕಷ್ಟಗಳನ್ನು ಧೈರ್ಯದಿಂದ   ಎದುರಿಸುತ್ತಿರುವದನ್ನು  ಪ್ರಧಾನಿಯವರು ಶ್ಲಾಘಿಸಿದರು.

ಮೈಸೂರಿನ  ಶ್ರೀಮತಿ ಬಬಿತಾ ರಾವ್ ಅವರೊಂದಿಗೆ ಮಾತನಾಡಿದ  ಪ್ರಧಾನಮಂತ್ರಿಯವರು, ಹೆಚ್ಚಿನ ಜನರು ಈ ಯೋಜನೆಯ ಲಾಭ ಪಡೆಯುವಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವಂತೆ ಹೇಳಿದರು.

ಸೂರತ್‌ನ ಶ್ರೀಮತಿ ಊರ್ವಶಿ ನೀರವ್ ಪಟೇಲ್ ಅವರು ತಮ್ಮ ಪ್ರದೇಶದಲ್ಲಿ ಜನೌಷಧಿಯನ್ನು ಪ್ರಚಾರ ಮಾಡುವ ಪ್ರಯಾಣ ಮತ್ತು ಜನೌಷದಿ ಕೇಂದ್ರದ ಕಡಿಮೆ ಬೆಲೆಯ ಸ್ಯಾನಿಟರಿ ಪ್ಯಾಡ್‌ಗಳು ತಮ್ಮ ಪ್ರಯತ್ನಗಳ ಮೂಲಕ ಅದನ್ನು ಹೆಚ್ಚು ಜನರಿಗೆ ದಾನ ಮಾಡಲು ಹೇಗೆ ಸಹಾಯ ಮಾಡಿತು ಎಂದು ಪ್ರಧಾನ ಮಂತ್ರಿಯವರಿಗೆ ವಿವರಿಸಿದರು. ರಾಜಕೀಯ ಕಾರ್ಯಕರ್ತೆಯಾಗಿ ಅವರ ಸೇವಾ ಮನೋಭಾವನೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಇದು ಸಾರ್ವಜನಿಕ ಜೀವನದಲ್ಲಿ ಸೇವೆಯ ಪಾತ್ರವನ್ನು ಹೆಚ್ಚಿಸುತ್ತದೆ. ಪಿಎಂ ಆವಾಸ್ ಯೋಜನೆಯ ಫಲಾನುಭವಿಗಳು ಮತ್ತು ಸಾಂಕ್ರಾಮಿಕ ಸಮಯದಲ್ಲಿ ಉಚಿತ ಪಡಿತರ ಫಲಾನುಭವಿಗಳಿಗೆ ನೈರ್ಮಲ್ಯದ ಬಗ್ಗೆ ಅರಿವು ಹೆಚ್ಚಿಸಲು ಸಂಪರ್ಕಿಸಬೇಕು ಎಂದು ಅವರು ಸಲಹೆ ನೀಡಿದರು.

 

ರಾಯಪುರದ ಶ್ರೀ ಶೈಲೇಶ್ ಖಂಡೇಲ್ವಾಲ್ ಅವರು ಜನೌಷದಿ ಪರಿಯೋಜನಾದೊಂದಿಗೆ ತಮ್ಮ ಅನುಭವದ ಬಗ್ಗೆ ಮಾತನಾಡಿದರು. ಕಡಿಮೆ ದರದಲ್ಲಿ ಔಷಧಗಳು ಸಿಗುತ್ತಿರುವುದು ಸಂತಸ ತಂದಿದೆ ಎಂದು ತಮ್ಮೆಲ್ಲ ರೋಗಿಗಳಿಗೆ ತಿಳಿಸಿರುವದಾಗಿ  ಹೇಳಿದರು. ಜನರಲ್ಲಿ ಜನೌಷಧಿಯ ಬಗ್ಗೆ ಪ್ರಚಾರ ಮಾಡುವಂತೆ ಪ್ರಧಾನಮಂತ್ರಿಯವರು ಇತರ ವೈದ್ಯರನ್ನೂ ಕೇಳಿಕೊಂಡರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಜನೌಷಧಿ ಕೇಂದ್ರಗಳು ದೇಹಕ್ಕೆ ಔಷಧಿ ನೀಡುವ ಕೇಂದ್ರಗಳಾಗಿವೆ, ಅವು ಮನಸ್ಸಿನ ಆತಂಕವನ್ನು ಕಡಿಮೆ ಮಾಡುತ್ತವೆ ಮತ್ತು ಜನರು ತಮ್ಮ ಹಣವನ್ನು ಉಳಿಸುವ ಮೂಲಕ ಪರಿಹಾರದ ಕೇಂದ್ರಗಳಾಗಿವೆ. ಇಂತಹ ಪ್ರಯೋಜನಗಳು ಎಲ್ಲಾ ವರ್ಗದ ಜನರಿಗೆ ಮತ್ತು ದೇಶದ ಎಲ್ಲಾ ಭಾಗಗಳಲ್ಲಿ ದೊರೆಯುತ್ತಿದೆ ಎಂದು ಪ್ರಧಾನಮಂತ್ರಿ ಅವರು ಸಂತಸ ವ್ಯಕ್ತಪಡಿಸಿದರು. 1 ರೂಪಾಯಿಯ ಸ್ಯಾನಿಟರಿ ನ್ಯಾಪ್ಕಿನ್‌ನ ಯಶಸ್ಸಿನ ಬಗ್ಗೆ ಅವರು ಹೇಳಿದರು. 21 ಕೋಟಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮಾರಾಟವು ಜನೌಷಧಿ ಕೇಂದ್ರಗಳು ದೇಶದಾದ್ಯಂತ ಮಹಿಳೆಯರ ಜೀವನವನ್ನು ಸುಲಲಿತಗೊಳಿಸಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.

ದೇಶದಲ್ಲಿ ಈವರೆಗೆ 8,500 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಈ ಕೇಂದ್ರಗಳು ಈಗ ಸಾಮಾನ್ಯ ಜನರ ಪರಿಹಾರ ಕೇಂದ್ರಗಳಾಗುತ್ತಿವೆ ಮತ್ತು ಮತ್ತೊಂದು ಸರ್ಕಾರಿ ಅಂಗಡಿಯಲ್ಲ. ಕ್ಯಾನ್ಸರ್, ಕ್ಷಯ, ಮಧುಮೇಹ, ಹೃದ್ರೋಗದಂತಹ ಕಾಯಿಲೆಗಳ ಚಿಕಿತ್ಸೆಗೆ ಅಗತ್ಯವಿರುವ 800 ಕ್ಕೂ ಹೆಚ್ಚು ಔಷಧಿಗಳ ಬೆಲೆಯನ್ನು ಸಹ ಸರ್ಕಾರ ನಿಯಂತ್ರಿಸಿದೆ ಎಂದು ಹೇಳಿದರು. ಸ್ಟಂಟಿಂಗ್ ಮತ್ತು ಮೊಣಕಾಲು ಕಸಿ ವೆಚ್ಚವನ್ನು ಸಹ ನಿಯಂತ್ರಣದಲ್ಲಿ ಇಡಲಾಗಿದೆ ಎನ್ನುವುದನ್ನು ಸರ್ಕಾರ ಖಚಿತಪಡಿಸಿದೆ. ವೈದ್ಯಕೀಯ ಸೇವೆಯನ್ನು ನಾಗರಿಕರಿಗೆ ಕೈಗೆಟುಕುವಂತೆ ಮಾಡುವ ಬಗ್ಗೆ ಅವರು ಅಂಕಿಅಂಶಗಳನ್ನು ನೀಡಿದರು. 50 ಕೋಟಿಗೂ ಹೆಚ್ಚು ಜನರು ಆಯುಷ್ಮಾನ್ ಭಾರತ್ ಯೋಜನೆಯ ವ್ಯಾಪ್ತಿಯಲ್ಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು. 3 ಕೋಟಿಗೂ ಹೆಚ್ಚು ಜನರು ಯೋಜನೆಯ ಲಾಭ ಪಡೆದಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರ 70 ಸಾವಿರ ಕೋಟಿ ರೂಪಾಯಿ ಉಳಿತಾಯವಾಗಿದೆ. ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮದಿಂದ 550 ಕೋಟಿ ರೂಪಾಯಿ ಉಳಿತಾಯವಾಗಿದೆ. ಮಂಡಿ ಚಿಪ್ಪು ಅಳವಡಿಕೆ ಮತ್ತು ಔಷಧ ಬೆಲೆ ನಿಯಂತ್ರಣದಿಂದ 13 ಸಾವಿರ ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ಹೇಳಿದರು.

ಕೆಲ ದಿನಗಳ ಹಿಂದೆ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಪ್ರಧಾನಮಂತ್ರಿಯವರು ಮಾಹಿತಿ ನೀಡಿದರು.  “ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿನ ಅರ್ಧದಷ್ಟು ಸೀಟುಗಳ ಶುಲ್ಕವನ್ನು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಸಮಾನವಾಗಿ ವಿಧಿಸಲು ನಾವು ನಿರ್ಧರಿಸಿದ್ದೇವೆ” ಎಂದು ಅವರು ಮಾಹಿತಿ ನೀಡಿದರು.

 

 

****