ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಿಧ ರಾಷ್ಟ್ರೀಯ ಹೆದ್ದಾರಿ ಮತ್ತು ರಸ್ತೆ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು, ರಾಜ್ಯಪಾಲರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿಯವರು, ಇಂದು ಇಲ್ಲಿ ಶ್ರೀ ಸಂತ ಜ್ಞಾನೇಶ್ವರ ಮಹಾರಾಜ್ ಪಾಲ್ಖಿ ಮಾರ್ಗ ಮತ್ತು ಶ್ರೀ ಸಂತ ತುಕಾರಾಂ ಮಹಾರಾಜ್ ಪಾಲ್ಖಿ ಮಾರ್ಗದ ಶಿಲಾನ್ಯಾಸವನ್ನು ಮಾಡಲಾಗಿದೆ. ಶ್ರೀ ಸಂತ ಜ್ಞಾನೇಶ್ವರ ಮಹಾರಾಜ್ ಪಾಲ್ಖಿ ಮಾರ್ಗದ ನಿರ್ಮಾಣವನ್ನು ಐದು ಹಂತಗಳಲ್ಲಿ ಮತ್ತು ಸಂತ ತುಕಾರಾಂ ಮಹಾರಾಜ್ ಪಾಲ್ಖಿ ಮಾರ್ಗದ ನಿರ್ಮಾಣವನ್ನು ಮೂರು ಹಂತಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು. ಈ ಯೋಜನೆಗಳು ಈ ಪ್ರದೇಶದೊಂದಿಗೆ ಉತ್ತಮ ಸಂಪರ್ಕಕ್ಕೆ ಕಾರಣವಾಗುತ್ತವೆ ಎಂದ ಪ್ರಧಾನಿಯವರು ಯೋಜನೆಗಳಿಗೆ ಭಕ್ತರು, ಸಂತರು ಮತ್ತು ಭಗವಾನ್ ವಿಠ್ಠಲರ ಆಶೀರ್ವಾದ ಬೇಡಿದರು. ಭಗವಾನ್ ವಿಠ್ಠಲರ ಮೇಲಿನ ನಂಬಿಕೆಯು ಇತಿಹಾಸದುದ್ದಕ್ಕೂ ಅಚಲವಾಗಿ ಉಳಿದಿದೆ ಎಂದು ಅವರು ಹೇಳಿದರು. “ಇಂದಿಗೂ, ಈ ಯಾತ್ರೆಯು ಪ್ರಪಂಚದ ಅತ್ಯಂತ ಹಳೆಯ ಸಾಮೂಹಿಕ ಯಾತ್ರೆಗಳಲ್ಲಿ ಒಂದಾಗಿದೆ ಮತ್ತು ಇದು ಜನರ ಚಳುವಳಿ ನಾವು ಒಂದೇ ಗುರಿಯನ್ನು ಹೊಂದಿದ್ದೇವೆ ಎಂಬುದನ್ನು ಕಲಿಸುತ್ತದೆ. ಕೊನೆಯಲ್ಲಿ ಎಲ್ಲಾ ಪಂಥಗಳು ‘ಭಗವತ್ ಪಂಥ್’ ವೇ ಆಗಿದೆ. ಇದು ಭಾರತದ ಶಾಶ್ವತ ಜ್ಞಾನದ ಸಂಕೇತವಾಗಿದೆ, ಅದು ನಮ್ಮ ನಂಬಿಕೆಯನ್ನು ಬಂಧಿಸುವುದಿಲ್ಲ, ಬದಲಿಗೆ ವಿಮೋಚನೆ ನೀಡುತ್ತದೆ” ಎಂದು ಪ್ರಧಾನಿ ಹೇಳಿದರು.
ಭಗವಾನ್ ವಿಠ್ಠಲನ ಮಂದಿರ ಎಲ್ಲರಿಗೂ ಸಮಾನವಾಗಿ ತೆರೆದಿರುತ್ತದೆ. ನಮ್ಮ ಸಬ್ಕಾ ಸಾಥ್-ಸಬ್ಕಾ ವಿಕಾಸ್-ಸಬ್ಕಾ ವಿಶ್ವಾಸ್ ಹಿಂದೆ ಅದೇ ಭಾವನೆ ಇದೆ. ಈ ಚೈತನ್ಯವು ದೇಶದ ಅಭಿವೃದ್ಧಿಗೆ ನಮ್ಮನ್ನು ಪ್ರೇರೇಪಿಸುತ್ತದೆ, ಎಲ್ಲರನ್ನೂ ಜೊತೆಗೆ ಕರೆದೊಯ್ಯುತ್ತದೆ, ಎಲ್ಲರ ಅಭಿವೃದ್ಧಿಗೆ ನಮ್ಮನ್ನು ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಭಾರತದ ಆಧ್ಯಾತ್ಮಿಕ ಶ್ರೀಮಂತಿಕೆಯ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಪಂಢರಪುರಕ್ಕೆ ಸಲ್ಲಿಸುವ ಸೇವೆಯು ತಮಗೆ ಶ್ರೀ ನಾರಾಯಣ ಹರಿ ಸೇವೆಯಾಗಿದೆ ಎಂದು ಹೇಳಿದರು. ಭಕ್ತರಿಗಾಗಿ ಇಂದಿಗೂ ಭಗವಂತ ನೆಲೆಸಿರುವ ಭೂಮಿ ಇದಾಗಿದೆ. ಜಗತ್ತು ಸೃಷ್ಟಿಯಾಗದಿದ್ದ ಕಾಲದಿಂದಲೂ ಪಂಢರಪುರವಿದೆ ಎಂದು ಸಂತ ನಾಮದೇವ್ ಜಿ ಮಹಾರಾಜರು ಹೇಳಿದ ನಾಡು ಇದಾಗಿದೆ ಎಂದರು.
ಕಾಲಕಾಲಕ್ಕೆ, ವಿವಿಧ ಪ್ರದೇಶಗಳಲ್ಲಿ, ಅಂತಹ ಮಹಾನ್ ವ್ಯಕ್ತಿಗಳು ಉದಯಿಸುತ್ತಲೇ ಇರುತ್ತಾರೆ ಮತ್ತು ಅವರು ದೇಶಕ್ಕೆ ಮಾರ್ಗದರ್ಶನ ಮಾಡುತ್ತಿರುವುದು ಭಾರತದ ವಿಶೇಷತೆಯಾಗಿದೆ ಎಂದು ಪ್ರಧಾನಿ ಹೇಳಿದರು. ದಕ್ಷಿಣದಲ್ಲಿ ಮಧ್ವಾಚಾರ್ಯರು, ನಿಂಬಾರ್ಕಾಚಾರ್ಯರು, ವಲ್ಲಭಾಚಾರ್ಯರು, ರಾಮಾನುಜಾಚಾರ್ಯರು ಮತ್ತು ಪಶ್ಚಿಮದಲ್ಲಿ ನರಸಿ ಮೆಹ್ತಾ, ಮೀರಾಬಾಯಿ, ಧೀರೋ ಭಗತ್, ಭೋಜ ಭಗತ್, ಪ್ರೀತಮ್ ಜನಿಸಿದರು. ಉತ್ತರದಲ್ಲಿ ರಮಾನಂದ, ಕಬೀರದಾಸ್, ಗೋಸ್ವಾಮಿ ತುಳಸಿದಾಸ್, ಸೂರದಾಸ್, ಗುರುನಾನಕ್ ದೇವ್, ಸಂತ ರೈದಾಸ್ ಇದ್ದರು. ಪೂರ್ವದಲ್ಲಿ, ಚೈತನ್ಯ ಮಹಾಪ್ರಭು ಮತ್ತು ಶಂಕರ್ ದೇವ್ ಅವರಂತಹ ಸಂತರ ಚಿಂತನೆಗಳು ದೇಶವನ್ನು ಶ್ರೀಮಂತಗೊಳಿಸಿದವು ಎಂದು ಅವರು ಹೇಳಿದರು.
ವರ್ಕರಿ ಆಂದೋಲನದ ಸಾಮಾಜಿಕ ಮಹತ್ವದ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಪುರುಷರಷ್ಟೇ ಉತ್ಸಾಹದಿಂದ ಮಹಿಳೆಯರು ಯಾತ್ರೆಯಲ್ಲಿ ಭಾಗವಹಿಸುವುದು ಈ ಸಂಪ್ರದಾಯದ ಪ್ರಮುಖ ಲಕ್ಷಣವಾಗಿದೆ ಎಂದರು. ಇದು ದೇಶದ ಮಹಿಳಾ ಶಕ್ತಿಯ ಪ್ರತಿಬಿಂಬವಾಗಿದೆ. ‘ಪಂಢರಿ ಕಿ ವಾರಿ’ ಅವಕಾಶದ ಸಮಾನತೆಯನ್ನು ಸಂಕೇತಿಸುತ್ತದೆ. ವರ್ಕರಿ ಚಳವಳಿಯು ತಾರತಮ್ಯವನ್ನು ಅಶುಭವೆಂದು ಪರಿಗಣಿಸುತ್ತದೆ ಮತ್ತು ಇದರ ದೊಡ್ಡ ಧ್ಯೇಯವಾಗಿದೆ ಎಂದು ಪ್ರಧಾನಿ ಹೇಳಿದರು.
ವರ್ಕರಿ ಸಹೋದರರು ಮತ್ತು ಸಹೋದರಿಯರಿಂದ ಮೂರು ವಾಗ್ದಾನಗಳನ್ನು ಪ್ರಧಾನಿ ಬಯಸಿದರು. ಅವರಿಗೆ ತಮ್ಮ ಮೇಲಿರುವ ಅವಿನಾಭಾವ ಪ್ರೀತಿಯ ಬಗ್ಗೆ ಮಾತನಾಡಿದರು. ಭಕ್ತರು ಪಾಲ್ಖಿ ಮಾರ್ಗಗಳಲ್ಲಿ ಗಿಡಗಳನ್ನು ನೆಡುವಂತೆ ಮನವಿ ಮಾಡಿದರು. ಅಲ್ಲದೆ ಈ ಮಾರ್ಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಹಾಗೂ ಈ ಮಾರ್ಗಗಳಲ್ಲಿ ಹೆಚ್ಚಿನ ಮಡಕೆಗಳನ್ನು ಒದಗಿಸುವಂತೆ ಮನವಿ ಮಾಡಿದರು. ಭವಿಷ್ಯದಲ್ಲಿ ಭಾರತದ ಸ್ವಚ್ಛ ಯಾತ್ರಾ ಸ್ಥಳಗಳಲ್ಲಿ ಪಂಢರಪುರವನ್ನು ನೋಡಲು ತಾವು ಬಯಸುವುದಾಗಿ ಹೇಳಿದರು. ಸಾರ್ವಜನಿಕರ ಸಹಭಾಗಿತ್ವದ ಮೂಲಕ ಈ ಕಾರ್ಯ ನಡೆಯಲಿದೆ ಎಂದ ಅವರು, ಸ್ಥಳೀಯರು ತಮ್ಮ ನೇತೃತ್ವದಲ್ಲಿ ಸ್ವಚ್ಛತಾ ಆಂದೋಲನದ ನೇತೃತ್ವ ವಹಿಸಿದಾಗ ಮಾತ್ರ ಈ ಕನಸು ನನಸಾಗಲು ಸಾಧ್ಯವಾಗುತ್ತದೆ ಎಂದರು.
ಹೆಚ್ಚಿನ ವರ್ಕರಿಗಳು ರೈತ ಸಮುದಾಯದಿಂದ ಬಂದವರು ಎಂದು ಹೇಳಿದ ಪ್ರಧಾನಿ, ಈ ಮಣ್ಣಿನ ಮಕ್ಕಳು-‘ಧರ್ತಿ ಪುತ್ರರು’ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಜೀವಂತವಾಗಿಟ್ಟಿದ್ದಾರೆ ಎಂದು ಹೇಳಿದರು. “ನಿಜವಾದ” ಅನ್ನದಾತ ಸಮಾಜವನ್ನು ಒಂದುಗೂಡಿಸುತ್ತಾನೆ ಮತ್ತು ಸಮಾಜವನ್ನು ಜೀವಂತವಾಗಿಸುತ್ತಾನೆ ಮತ್ತು ಸಮಾಜಕ್ಕಾಗಿ ಬದುಕುತ್ತಾನೆ. ರೈತರು ಸಮಾಜದ ಪ್ರಗತಿಗೆ ಕಾರಣ ಮತ್ತು ಅದರ ಪ್ರತಿಬಿಂಬ” ಎಂದು ಪ್ರಧಾನಿ ಹೇಳಿದರು.
ದಿವೇಘಾಟ್‌ನಿಂದ ಮೊಹೋಲ್‌ವರೆಗಿನ ಸಂತ ಜ್ಞಾನೇಶ್ವರ್ ಮಹಾರಾಜ್ ಪಾಲ್ಖಿ ಮಾರ್ಗದ ಸುಮಾರು 221 ಕಿ.ಮೀ ಮತ್ತು ಪಟಾಸ್‌ನಿಂದ ತೊಂಡಲೆ – ಬೊಂಡಲೆವರೆಗೆ ಸಂತ ತುಕಾರಾಂ ಮಹಾರಾಜ್ ಪಾಲ್ಖಿ ಮಾರ್ಗದ ಸುಮಾರು 130 ಕಿ.ಮೀ ನ ಎರಡೂ ಬದಿಗಳಲ್ಲಿ ‘ಪಾಲ್ಖಿ’ ಗಾಗಿ ಮೀಸಲಾದ ನಡಿಗೆ ಪಥ (ವಾಕ್‌ವೇ) ಗಳೊಂದಿಗೆ ನಾಲ್ಕು ಪಥಗಳ ರಸ್ತೆಯನ್ನು ಕ್ರಮವಾಗಿ ರೂ. 6690 ಕೋಟಿ ಮತ್ತು ಸುಮಾರು 4400 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುವುದು.
ಈ ಸಂದರ್ಭದಲ್ಲಿ, ಪಂಢರಪುರಕ್ಕೆ ಸಂಪರ್ಕವನ್ನು ಹೆಚ್ಚಿಸಲು ವಿವಿಧ ರಾಷ್ಟ್ರೀಯ ಹೆದ್ದಾರಿಗಳಲ್ಲಿ 1180 ಕೋಟಿ ರೂ.ಗೂ ಹೆಚ್ಚು ಅಂದಾಜು ವೆಚ್ಚದಲ್ಲಿ ನಿರ್ಮಿಸಲಾದ 223 ಕಿ.ಮೀ.ಗೂ ಹೆಚ್ಚು ಪೂರ್ಣಗೊಂಡ ಮತ್ತು ನವೀಕರಿಸಿದ ರಸ್ತೆ ಯೋಜನೆಗಳನ್ನು ಪ್ರಧಾನಮಂತ್ರಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಯೋಜನೆಗಳಲ್ಲಿ ಮ್ಹಾಸ್ವಾಡ್- ಪಿಲಿವ್ – ಪಂಢರಪುರ (ಎನ್ ಹೆಚ್ 548E), ಕುರ್ದುವಾಡಿ – ಪಂಢರಪುರ (ಎನ್ ಹೆಚ್ 965C), ಪಂಢರಪುರ – ಸಂಗೋಲಾ (ಎನ್ ಹೆಚ್ 965C), ಎನ್ ಹೆಚ್ 561A ರ ತೆಂಭೂರ್ನಿ-ಪಂಢರಪುರ ವಿಭಾಗ ಮತ್ತು ಎನ್ ಹೆಚ್ 56 ರ ಪಂಢರಪುರ – ಮಂಗಳವೇಢಾ – ಉಮ್ಮಡಿ ವಿಭಾಗಗಳು ಸೇರಿವೆ.
***
Watch LIVE https://t.co/xc5PeunXEc
— PMO India (@PMOIndia) November 8, 2021
आज यहां श्रीसंत ज्ञानेश्वर महाराज पालखी मार्ग और संत तुकाराम महाराज पालखी मार्ग का शिलान्यास हुआ है।
— PMO India (@PMOIndia) November 8, 2021
श्रीसंत ज्ञानेश्वर महाराज पालखी मार्ग का निर्माण पांच चरणों में होगा और संत तुकाराम महाराज पालखी मार्ग का निर्माण तीन चरणों में पूरा किया जाएगा: PM @narendramodi
अतीत में हमारे भारत पर कितने ही हमले हुये! सैकड़ों साल की गुलामी में ये देश जकड़ा गया।
— PMO India (@PMOIndia) November 8, 2021
प्राकृतिक आपदाएँ आईं, चुनौतियाँ आईं, कठिनाइयाँ आईं, लेकिन भगवान विट्ठल देव में हमारी आस्था, हमारी दिंडी वैसे ही अनवरत चलती रही: PM @narendramodi
आज भी ये यात्रा दुनिया की सबसे प्राचीन और सबसे बड़ी जन-यात्राओं के रूप में, people मूवमेंट के रूप में देखी जाती है।
— PMO India (@PMOIndia) November 8, 2021
‘आषाढ एकादशी’ पर पंढरपुर यात्रा का विहंगम दृश्य कौन भूल सकता है।
हजारों-लाखों श्रद्धालु, बस खिंचे चले आते हैं: PM @narendramodi
ये यात्राएं अलग अलग पालखी मार्गों से चलती हैं, लेकिन सबका गंतव्य एक ही होता है।
— PMO India (@PMOIndia) November 8, 2021
ये भारत की उस शाश्वत शिक्षा का प्रतीक है जो हमारी आस्था को बांधती नहीं, बल्कि मुक्त करती है: PM @narendramodi
जो हमें सिखाती है कि मार्ग अलग अलग हो सकते हैं, पद्धतियाँ और विचार अलग अलग हो सकते हैं, लेकिन हमारा लक्ष्य एक होता है।
— PMO India (@PMOIndia) November 8, 2021
अंत में सभी पंथ ‘भागवत पंथ’ ही हैं: PM @narendramodi
भगवान विट्ठल का दरबार हर किसी के लिए समान रूप से खुला है।
— PMO India (@PMOIndia) November 8, 2021
और जब मैं सबका साथ-सबका विकास-सबका विश्वास कहता हूं, तो उसके पीछे भी तो यही भावना है।
यही भावना हमें देश के विकास के लिए प्रेरित करती है, सबको साथ लेकर, सबके विकास के लिए प्रेरित करती है: PM @narendramodi
पंढरपुर की सेवा मेरे लिए साक्षात् श्री नारायण हरि की सेवा है।
— PMO India (@PMOIndia) November 8, 2021
ये वो भूमि है, जहां भक्तों के लिए भगवान आज भी प्रत्यक्ष विराजते हैं।
ये वो भूमि है, जिसके बारे में संत नामदेव जी महाराज ने कहा है कि पंढरपुर तबसे है जब संसार की भी सृष्टि नहीं हुई थी: PM @narendramodi
भारत भूमि की ये विशेषता है कि समय-समय पर, अलग-अलग क्षेत्रों में, ऐसी महान विभूतियां अवतरित होती रहीं, देश को दिशा दिखाती रहीं।
— PMO India (@PMOIndia) November 8, 2021
दक्षिण में मध्वाचार्य, निम्बार्काचार्य, वल्लभचार्य, रामानुजाचार्य हुए,
पश्चिम में नरसी मेहता, मीराबाई, धीरो भगत, भोजा भगत, प्रीतम हुए: PM @narendramodi
उत्तर में रामानंद, कबीरदास, गोस्वामी तुलसीदास, सूरदास, गुरु नानकदेव, संत रैदास हुए,
— PMO India (@PMOIndia) November 8, 2021
पूर्व में चैतन्य महाप्रभु, और शंकर देव जैसे संतों के विचारों ने देश को समृद्ध किया: PM @narendramodi
वारकरी आंदोलन की और एक विशेषता रही और वह है पुरुषों के कदम से कदम मिलाकर वारी में चलने वाली हमारी बहनें, देश की स्त्री शक्ति!
— PMO India (@PMOIndia) November 8, 2021
पंढरी की वारी, अवसरों की समानता का प्रतीक हैं।
वारकरी आंदोलन का ध्येय वाक्य हैं, ‘भेदाभेद अमंगळ’: PM @narendramodi
आज जब मैं अपने वारकरी भाई-बहनों से बात कर रहा हूं, तो आपसे आशीर्वाद स्वरूप तीन चीजें मांगना चाहता हूं।
— PMO India (@PMOIndia) November 8, 2021
आपका हमेशा मुझ पर इतना स्नेह रहा है, कि मैं खुद को रोक नहीं पा रहा: PM @narendramodi
पहला आशीर्वाद ये कि जो श्रीसंत ज्ञानेश्वर महाराज पालखी मार्ग का निर्माण होगा, जिस संत तुकाराम महाराज पालखी मार्ग का निर्माण होगा, उसके किनारे जो विशेष पैदल मार्ग बन रहा है, उसके दोनों तरफ हर कुछ मीटर पर छायादार वृक्ष जरूर लगाए जाएं: PM @narendramodi
— PMO India (@PMOIndia) November 8, 2021
दूसरा आशीर्वाद मुझे ये चाहिए कि इस पैदल मार्ग पर हर कुछ दूरी पर पीने के पानी की व्यवस्था भी की जाए, इन मार्गों पर अनेकों प्याऊ बनाए जाएं: PM @narendramodi
— PMO India (@PMOIndia) November 8, 2021
तीसरा आशीर्वाद जो मुझे चाहिए, वो पंढरपुर के लिए है।
— PMO India (@PMOIndia) November 8, 2021
मैं भविष्य में पंढरपुर को भारत के सबसे स्वच्छ तीर्थ स्थलों में देखना चाहता हूं।
ये काम भी जनभागीदारी से ही होगा, जब स्थानीय लोग स्वच्छता के आंदोलन का नेतृत्व अपनी कमान में लेंगे, तभी हम इस सपने को साकार कर पाएंगे: PM
भारत की संस्कृति को, भारत के आदर्शों को सदियों से यहाँ का धरती पुत्र ही जीवित बनाए हुये है।
— PMO India (@PMOIndia) November 8, 2021
एक सच्चा अन्नदाता समाज को जोड़ता है, समाज को जीता है, समाज के लिए जीता है।
आपसे ही समाज की प्रगति है, और आपकी ही प्रगति में समाज की प्रगति है: PM @narendramodi
पंढरपुर यात्रा भारत की उस शाश्वत शिक्षा का प्रतीक है, जो हमारी आस्था को बांधती नहीं, बल्कि मुक्त करती है।
— Narendra Modi (@narendramodi) November 8, 2021
यह हमें सिखाती है कि मार्ग अलग-अलग हो सकते हैं, पद्धतियां और विचार अलग-अलग हो सकते हैं, लेकिन हमारा लक्ष्य एक होता है। pic.twitter.com/LPpX8koxs3
पंढरपुर की आभा, अनुभूति और अभिव्यक्ति सब कुछ अलौकिक है। यहां से मेरे दो और भी बहुत खास रिश्ते हैं… pic.twitter.com/bzdVV62P15
— Narendra Modi (@narendramodi) November 8, 2021
मैं अपने वारकरी भाई-बहनों से आशीर्वाद स्वरूप तीन चीजें मांगना चाहता हूं... pic.twitter.com/Bvn0kytV0B
— Narendra Modi (@narendramodi) November 8, 2021
जब पंढरपुर जैसे तीर्थों का विकास होता है, तो सांस्कृतिक प्रगति ही नहीं होती, पूरे क्षेत्र के विकास को बल मिलता है। pic.twitter.com/wXOrOGDcHT
— Narendra Modi (@narendramodi) November 8, 2021