Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿಯವರಿಂದ ರಾಂಚಿಯಲ್ಲಿ ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆ ಮತ್ತು ಸಿಕ್ಕಿಂ ನ ಪಕ್ಯೋನಗ್ ವಿಮಾನನಿಲ್ದಾಣಗಳ ಉದ್ಘಾಟನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆ (ಪಿ.ಎಮ್.ಜೆ.ಎ.ವೈ.) ಯನ್ನು ಸೆಪ್ಟೆಂಬರ್ 23 2018ರಂದು ಝಾರ್ಖಂಡ್ ನ ರಾಂಚಿಯಲ್ಲಿ ಉದ್ಘಾಟಿಸಲಿದ್ದಾರೆ. ಈ ಯೋಜನೆಯಡಿ 10 ಕೋಟಿಗೂ ಅಧಿಕ ಕುಟುಂಬಗಳಿಗೆ ಪ್ರತಿವರ್ಷವೂ ರೂ 5 ಲಕ್ಷ ಮೌಲ್ಯದ ಆರೋಗ್ಯ ಭರವಸೆಯನ್ನು ಪೂರೈಸಲಾಗುವುದು.

ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆ (ಪಿ.ಎಮ್.ಜೆ.ಎ.ವೈ.) ಕುರಿತಾದ ವಸ್ತುಪ್ರದರ್ಶನಕ್ಕೂ ಪ್ರಧಾನಮಂತ್ರಿ ಅವರು ಭೇಟಿನೀಡಲಿದ್ದಾರೆ. ಫಲಾನುಭವಿಗಳ ಗುರುತಿಸಿವಿಕೆ ಮತ್ತು ಇ-ಕಾರ್ಡ್ ತಯಾರಿಕಾ ಕಾರ್ಯಗಳ ಪ್ರಾತ್ಯಕ್ಷಿಕೆಗೆ
ಸಾಕ್ಷಿಯಾಗಲಿದ್ದಾರೆ.

ಅದೇ ಕಾರ್ಯಕ್ರಮದಲ್ಲಿ, ಪ್ರಧಾನಮಂತ್ರಿ ಅವರು ಛಾಯಿಬಾಸಾ ಮತ್ತು ಕೊಡೆರ್ಮಾ ಗಳ ವೈದ್ಯಕೀಯ ಕಾಲೇಜುಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಅವರು 10 ಆರೋಗ್ಯ ಮತ್ತು ಸ್ವಾಸ್ಥ ಕೇಂದ್ರಗಳನ್ನೂ ಪ್ರಧಾನಮಂತ್ರಿ ಅವರು ಉದ್ಘಾಟಿಸಲಿದ್ದಾರೆ. ಅಲ್ಲಿಂದ ಸಿಕ್ಕಿಂನ ಗಾಂಗ್ಟೊಕ್ ಗೆ ತೆರಳುವ ಮುನ್ನಾ ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಸೆಪ್ಟೆಂಬರ್ 24 ರಂದು, ಪ್ರಧಾನಮಂತ್ರಿ ಅವರು ಪಕ್ಯೋನಗ್ ವಿಮಾನನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ, ಈ ಮೂಲಕ ದೇಶದ ವಾಯುಯಾನ ಭೂಪಟದಲ್ಲಿ ಸಿಕ್ಕಿಂ ರಾಜ್ಯವು ಸೇರಿಕೊಳ್ಳಲಿದೆ. ಈ ವಿಮಾನನಿಲ್ದಾಣವು ಹಿಮಾಲಯ ತಪ್ಪಲ ರಾಜ್ಯದ ಸಂಪರ್ಕಕ್ಕೆ ಬಹಳ ದೊಡ್ಡ ಕಾಯಕಲ್ಪವಾಗಿಲಿದೆ ಮತ್ತು ಪ್ರವಾಸೋದ್ಯಮಕ್ಕೆ ಪೂರಕ ಪ್ರೋತ್ಸಾಹ ಕೂಡಾ ಆಗಲಿದೆ.

ಪ್ರಧಾನಮಂತ್ರಿ ಅವರು ಪಕ್ಯೋನಗ್ ವಿಮಾನನಿಲ್ದಾಣಕ್ಕೆ ಆಗಮಿಸುವರು, ಅಲ್ಲಿ ವಿಮಾನನಿಲ್ದಾಣ ಹಾಗೂ ಟರ್ಮಿನಲ್ ಕಟ್ಟಡಗಳ ಕುರಿತಾದ ಮಾಹಿತಿಗಳನ್ನು ಅವರಿಗೆ ವಿವರಿಸಲಾಗುವುದು. ಪಕ್ಯೋನಗ್ ವಿಮಾನನಿಲ್ದಾಣದ ಉದ್ಘಾಟನೆಯ ಸಂಕೇತವಾಗಿ ಫಲಕವನ್ನು ಪ್ರಧಾನಮಂತ್ರಿ ಅವರು ಅನಾವರಣಮಾಡುವರು. ಆನಂತರ ಸಭಿಕರನ್ನುದ್ದೇಶಿಸಿ ಪ್ರಧಾನಮಂತ್ರಿ ಅವರು ಭಾಷಣ ಮಾಡಲಿದ್ದಾರೆ