ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 26 2023 ರಂದು ನಡೆಯುವ ಮನ್ ಕಿ ಬಾತ್ ಕಾರ್ಯಕ್ರಮಕ್ಕಾಗಿ ನಾಗರಿಕರಿಂದ ಸಲಹೆ ಮತ್ತು ಮಾಹಿತಿಯನ್ನು ಆಹ್ವಾನಿಸಿದ್ದಾರೆ.
ಈ ತಿಂಗಳ ಮನ್ ಕಿ ಬಾತ್ʼಗೆ ಹೆಚ್ಚಿನ ಸಂಖ್ಯೆಯ ಮಾಹಿತಿಯು ಬರುತ್ತಿರುವುದರ ಬಗ್ಗೆ ಅವರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
MyGov ಅಥವಾ NaMo ಅಪ್ಲಿಕೇಶನ್ನಲ್ಲಿ ಇನ್ನೂ ಹಂಚಿಕೊಳ್ಳದ ಸಲಹೆ ಮತ್ತು ಮಾಹಿತಿಯನ್ನು ಹಂಚಿಕೊಳ್ಳಲು ಅವರು ಒತ್ತಾಯಿಸಿದ್ದಾರೆ.
ಎಕ್ಸ್ ಪೋಸ್ಟಿನಲ್ಲಿ, ಪ್ರಧಾನಮಂತ್ರಿಯವರು ಹೀಗೆ ಹೇಳಿರುವರು;
“26 ರಂದು ನಡೆಯಲಿರುವ ಈ ತಿಂಗಳ #MannKiBaat ಗೆ ಹೆಚ್ಚಿನ ಸಂಖ್ಯೆಯ ಸಲಹೆ ಮತ್ತು ಮಾಹಿತಿ ಬರುವುದನ್ನು ನೋಡಲು ಸಂತೋಷವಾಗಿದೆ.
ಹಂಚಿಕೊಳ್ಳಲಾದ ಸ್ಪೂರ್ತಿದಾಯಕ ಜೀವನಗಾಥೆಗಳು ಈ ಕಾರ್ಯಕ್ರಮದ ತಿರುಳಾಗಿದ್ದು, ಪ್ರತಿ ಸಂಚಿಕೆಯನ್ನು ಉತ್ಕೃಷ್ಟ ಮತ್ತು ಒಳನೋಟವುಳ್ಳವಾಗಿಸುತ್ತದೆ.
ಇನ್ನೂ ತಮ್ಮ ಸಲಹೆ ಮತ್ತು ಮಾಹಿತಿಯನ್ನು ಹಂಚಿಕೊಳ್ಳದಿರುವವರು MyGov ಅಥವಾ NaMo ಆಪ್ನಲ್ಲಿ ಹಂಚಿಕೊಳ್ಳಬಹುದು.
***
Glad to see a large number of inputs coming for this month’s #MannKiBaat, which will take place on the 26th. https://t.co/PcIokRWclj
— Narendra Modi (@narendramodi) November 17, 2023
The inspiring life journeys shared are the essence of this programme, making every episode more enriching and insightful.
Those who have not…